logo
ಕನ್ನಡ ಸುದ್ದಿ  /  ಮನರಂಜನೆ  /  ಮನೆ ಕೆಲಸಕ್ಕೆ ಬಂದವಳು ತಂಗಿಯೆಂದು ಗೌತಮ್‌ಗೆ ತಿಳಿದಿಲ್ಲ, ಸುಧಾಳಿಗೂ ಅಣ್ಣನ ಮನೆಯೆಂಬ ಅರಿವಿಲ್ಲ- ಅಮೃತಧಾರೆ ಧಾರಾವಾಹಿ ಇಂದಿನ ಕಥೆ

ಮನೆ ಕೆಲಸಕ್ಕೆ ಬಂದವಳು ತಂಗಿಯೆಂದು ಗೌತಮ್‌ಗೆ ತಿಳಿದಿಲ್ಲ, ಸುಧಾಳಿಗೂ ಅಣ್ಣನ ಮನೆಯೆಂಬ ಅರಿವಿಲ್ಲ- ಅಮೃತಧಾರೆ ಧಾರಾವಾಹಿ ಇಂದಿನ ಕಥೆ

Praveen Chandra B HT Kannada

Nov 18, 2024 09:46 AM IST

google News

ಮನೆ ಕೆಲಸಕ್ಕೆ ಬಂದವಳು ತಂಗಿಯೆಂದು ಗೌತಮ್‌ಗೆ ತಿಳಿದಿಲ್ಲ - ಅಮೃತಧಾರೆ ಧಾರಾವಾಹಿ ಇಂದಿನ ಕಥೆ

    • ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ಮನೆಗೆ ತಂಗಿ ಸುಧಾಳ ಪ್ರವೇಶವಾಗಿದೆ. ಆದರೆ, ಗೌತಮ್‌ ಮತ್ತು ಸುಧಾಳಿಗೆ ತಾವು ಸಹೋದರ ಸಹೋದರಿ ಎಂದು ತಿಳಿದಿಲ್ಲ. ಈಕೆಯನ್ನು ಯಾವುದೋ ಕೆಲಸಕ್ಕೆ ಈ ಮನೆಗೆ ಆಗುಂತಕ ಕಳುಹಿಸಿದ್ದಾನೆ.
ಮನೆ ಕೆಲಸಕ್ಕೆ ಬಂದವಳು ತಂಗಿಯೆಂದು ಗೌತಮ್‌ಗೆ ತಿಳಿದಿಲ್ಲ - ಅಮೃತಧಾರೆ ಧಾರಾವಾಹಿ ಇಂದಿನ ಕಥೆ
ಮನೆ ಕೆಲಸಕ್ಕೆ ಬಂದವಳು ತಂಗಿಯೆಂದು ಗೌತಮ್‌ಗೆ ತಿಳಿದಿಲ್ಲ - ಅಮೃತಧಾರೆ ಧಾರಾವಾಹಿ ಇಂದಿನ ಕಥೆ

ಅಮೃತಧಾರೆಯಲ್ಲಿ ಮಲ್ಲಿ ಭೂಮಿಕಾಳಿಗೆ ಕಾಳಜಿಯ ಮಾತುಗಳನ್ನಾಡುತ್ತಾಳೆ. ನೀವು ರೆಸ್ಟ್‌ ಮಾಡಿ, ಇಲ್ಲಿಂದ ಎದ್ದು ಎಲ್ಲಿಗೂ ಹೋಗಬೇಡಿ, ನಾನು ನಿಮಗೆ ಕಾವಲಾಗಿರುವೆ ಎನ್ನುತ್ತಾಳೆ. ಮಲ್ಲಿ ತೋರಿಸುವ ಪ್ರೀತಿಗೆ ಭೂಮಿಕಾ ಖುಷಿಯಾಗಿದ್ದಾಳೆ. ಇನ್ನೊಂದಡೆ ಆನಂದ್‌ ಮತ್ತು ಅಪರ್ಣಾ ಮಾತನಾಡುತ್ತಿದ್ದಾರೆ. ಒಂದು ವಿಷಯ ನಿನ್ನ ಒಪ್ಪಿಗೆ ಪಡೆಯಬೇಕಿತ್ತು ಎಂದು ಆನಂದ್‌ ಹೇಳುತ್ತಾನೆ. ಗೆಳೆಯನ ಮನೆಗೆ ನಂಬಿಕಸ್ಥರಾಗಿರುವವರು ಬೇಕು, ಸುಧಾಳನ್ನು ಕಳುಹಿಸಿದರೆ ಹೇಗೆ ಇರುತ್ತದೆ ಎಂದು ಕೇಳುತ್ತಾನೆ. "ಸುಧಾಳನ್ನು ಕಳುಹಿಸಲು ನಾನು ಒಪ್ಪುವುದಿಲ್ಲ. ಇಂಥವರು ನಮಗೆ ಬೇರೆ ಸಿಗುವುದಿಲ್ಲ" ಎಂದು ಮೊದಲು ಅಪರ್ಣಾ ಒಪ್ಪುವುದಿಲ್ಲ. "ಸುಧಾಳದ್ದು ತಾಯಿ ಕರುಳು, ಅವಳು ಅಲ್ಲಿ ಇದ್ದರೆ ಸರಿ" ಎಂದು ಕಷ್ಟಪಟ್ಟು ಒಪ್ಪಿಸುತ್ತಾನೆ. ಆಗ ಅಲ್ಲಿಗೆ ಸುಧಾಳ ಆಗಮನವಾಗುತ್ತದೆ.

"ಸುಧಾ, ಇನ್ನು ನೀನು ಇಲ್ಲಿ ಕೆಲಸ ಮಾಡಬಾರದು, ಅಲ್ಲಿ ಕೆಲಸ ಮಾಡು" ಎಂದು ಆನಂದ್‌ ಹೇಳುತ್ತಾರೆ. "ನನ್ನಿಂದ ಏನಾದರೂ ತಪ್ಪಾಯ್ತ? ಅದಕ್ಕೆ ಕಳುಹಿಸ್ತೀರ?" ಎಂದು ಸುಧಾ ಕೇಳುತ್ತಾಳೆ. "ನೀನು ಹೋಗಬೇಕಾದದ್ದು, ನಮ್ಮ ಬಾಸ್‌, ನಮ್ಮ ಗೆಳೆಯ ಗೌತಮ್‌ ದಿವಾನ್‌ ಮನೆಗೆ" ಎಂದು ಆನಂದ್‌ ಹೇಳಿದಾಗ ಸುಧಾಳಿಗೆ ಆಗುಂತಕ ಹೇಳಿರುವ ಮಾತುಗಳು ನೆನಪಿಗೆ ಬರುತ್ತವೆ. "ನಾನು ಇಲ್ಲಿಂದ ಅಲ್ಲಿಗೆ ಹೋದ್ರೆ ನಿಮಗೆ ಇಲ್ಲಿ ಕಷ್ಟ ಆಗೋದಿಲ್ವ" ಎಂದು ಸುಧಾ ಕೇಳುತ್ತಾಳೆ. "ನಿನ್ನ ಅವಶ್ಯಕತೆ ಇಲ್ಲಿಂದ ಅಲ್ಲಿ ಹೆಚ್ಚು ಇದೆ" ಎಂದು ಅಪರ್ಣಾ ಹೇಳುತ್ತಾಳೆ. ಕೊನೆಗೆ ಸುಧಾ ಅಲ್ಲಿಗೆ ಹೋಗಲು ಒಪ್ಪುತ್ತಾಳೆ.

ಇನ್ನೊಂದೆಡೆ ಜೈದೇವ್‌ ಯೋಚನೆ ಮಾಡುತ್ತಾ ಇದ್ದಾನೆ. "ನಮ್ಮ ಮನೆಗೆ ಬಾಂಬ್‌ ಇಡ್ತಾರ, ಯಾರಿರಬಹುದು?" ಎಂದು ಯೋಚಿಸುತ್ತಾನೆ. "ಸಂಬಂಧದವರ, ಬಿಸ್ನೆಸ್‌ ವಿರೋಧಿಗಳ, ಸ್ನೇಹಿತರಂತೆ ಇರುವವರ" ಎಂದು ಜೈದೇವ್‌ ಯೋಚಿಸುತ್ತಾನೆ. ಆ ಸಮಯದಲ್ಲಿ ಮಲ್ಲಿ ಬರುತ್ತಾಳೆ. ಇವರಿಬ್ಬರು ಮಾತನಾಡುತ್ತ ಇರುತ್ತಾರೆ. "ಒಂದು ಚೂರು ಯಾಮಾರಿದರೂ ಇಡೀ ಮನೆ ಸ್ಮಶಾನವಾಗುತ್ತಿತ್ತು ಮಲ್ಲಿ. ನಮ್ಮ ಲೈಫ್‌ ಈಗ ಗಾಳಿ ತುಂಬಿದ ಬಲೂನ್‌ ರೀತಿ ಆಗಿದೆ" ಎಂದು ಜೈದೇವ್‌ ಹೇಳುತ್ತಾನೆ. "ಇದು ಇಷ್ಟಕ್ಕೆ ನಿಲ್ಲೋದಿಲ್ಲ. ಇನ್ನೂ ದೊಡ್ಡದಾಗಿ ಎದುರಾಗಬಹುದು" ಎಂದು ಹೇಳುತ್ತಾನೆ.

ಗೌತಮ್‌ ದಿವಾನ್‌ ಮನೆಗೆ ಬಂದ ಸುಧಾ

ಗೌತಮ್‌ ಮನೆಗೆ ಕಾರು ಆಗಮಿಸುತ್ತದೆ. ಕಾರಿನಿಂದ ಸುಧಾ ಇಳಿಯುತ್ತಾಳೆ. ದೊಡ್ಡ ಮನೆಯನ್ನು ಅಚ್ಚರಿಯಿಂದ ನೋಡುತ್ತಾಳೆ. "ಇದು ಮನೆಯಾ? ಅರಮನೆ ರೀತಿ ಇದೆ" ಎನ್ನುತ್ತಾಳೆ. "ಮನೆ ಮಾತ್ರವಲ್ಲ, ಇಲ್ಲಿನವರ ಮನಸ್ಸು ಕೂಡ ದೊಡ್ಡದು" ಎಂದು ಆನಂದ್‌ ಹೇಳುತ್ತಾರೆ. ಅವಳು ಕಾಲಿಡುತ್ತಿದ್ದಂತೆ ಗೌತಮ್‌ನ ಹಳೆಯ ನೆನಪುಗಳ ಫ್ಲ್ಯಾಶ್‌ಬ್ಯಾಕ್‌ ಕೂಡ ಬರುತ್ತದೆ. ಅಣ್ಣನ ಮನೆಗೆ ತಂಗಿ ಬರುತ್ತಾಳೆ. ಆದರೆ, ಈ ಸಂಗತಿ ಇವರಿಬ್ಬರಿಗೆ ಗೊತ್ತಿರುವುದಿಲ್ಲ. ಬಲಗಾಲಿಟ್ಟು ಸುಧಾ ಮನೆಯೊಳಗೆ ಕಾಲಿಡುತ್ತಾಳೆ. "ಇಷ್ಟು ದೊಡ್ಡ ಮನೆ ಎಂದು ಭಯಪಡಬೇಡ. ಇಪ್ಪತ್ತು ಜನ ಕೆಲಸ ಇದ್ದಾರೆ" ಎಂದು ಆನಂದ್‌ ವಿವರಿಸುತ್ತಾರೆ.

ಗೌತಮ್‌ ತನ್ನ ಪತ್ನಿಯನ್ನು ಕೈ ಹಿಡಿದು ನಡೆಸುತ್ತಾ ಇದ್ದಾರೆ. ತಾನೇ ಜ್ಯೂಸ್‌ ಕುಡಿಸುತ್ತಾ ಇದ್ದಾರೆ. ಆಗ ಅಲ್ಲಿಗೆ ಆನಂದ್‌ ಬರುತ್ತಾರೆ. ಒಂದಿಷ್ಟು ಎಂದಿನ ತಮಾಷೆಯ ಮಾತು ನಡೆಯುತ್ತದೆ. ನಿಮ್ಮನ್ನು ನೋಡಿಕೊಳ್ಳಲು ಒಳ್ಳೆ ಹುಡುಗಿ ಬೇಕು ಅಂದಿದ್ದ, ಅದಕ್ಕೆ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುಧಾಳನ್ನು ಕರೆದುಕೊಂಡು ಬಂದೆ ಎನ್ನುತ್ತಾರೆ ಆನಂದ್‌. ಮಲ್ಲಿಗೆ ಬೇಸರವಾಗುತ್ತದೆ. ಗೌತಮ್‌ ಕೆಳಗೆ ಬರುತ್ತಾರೆ. ಅಲ್ಲಿ ಸುಧಾಳನ್ನು ನೋಡಿದಾಗ ಅಚ್ಚರಿಯಾಗುತ್ತದೆ. ತನಗೆ ಸಹಾಯ ಮಾಡಿದ ಸುಧಾ ಇಲ್ಲಿರುವುದನ್ನು ನೋಡಿ ಗೌತಮ್‌ಗೆ ಅಚ್ಚರಿಯಾಗುತ್ತದೆ. "ಅಣ್ಣಾ ನೀವಾ?" ಎಂದು ಅಚ್ಚರಿಯಿಂದ ಕೇಳುತ್ತಾಳೆ. "ನೀನಾ?" ಎಂದು ಗೌತಮ್‌ ಕೇಳುತ್ತಾರೆ. ಇವರಿಬ್ಬರು ಹೀಗೆ ಮಾತನಾಡುವುದನ್ನು ನೋಡಿ ಆನಂದ್‌ಗೆ ಅಚ್ಚರಿಯಾಗುತ್ತದೆ. ಇದಾದ ಬಳಿಕ ಗೌತಮ್‌ ಈಕೆ ಮಾಡಿದ ಸಹಾಯದ ವಿಚಾರ ತಿಳಿಸುತ್ತಾನೆ. "ಅಣ್ಣಾ ನೀವೇನೂ ಇಲ್ಲಿ?" ಎಂದು ಸುಧಾ ಕೇಳುತ್ತಾಳೆ. "ಏನಂದೆ," ಆನಂದ್‌ ಅಚ್ಚರಿಯಿಂದ ಕೇಳುತ್ತಾನೆ. "ಮೋದಿಯತ್ರ ಹೋಗಿ, ಈ ದೇಶದ ಪ್ರಧಾನಿ ಯಾರು ಎಂದು ಕೇಳಿದಾಗೆ ಆಯ್ತು" ಎಂದು ಆನಂದ್‌ ಹೇಳುತ್ತಾರೆ. "ಇವನೇ ಕಣಮ್ಮ, ನನ್ನ ಗೆಳೆಯ, ಈ ಮನೆಯ ಯುಜಮಾನ, ಗೌತಮ್‌ ದಿವಾನ್‌" ಎಂದು ಆನಂದ್‌ ಹೇಳಿದಾಗ ಸುಧಾಳಿಗೆ ಅಚ್ಚರಿಯಾಗುತ್ತದೆ. "ಭೂಮಿಕಾರನ್ನು ನೋಡಲು ಇವಳು ಬೆಸ್ಟ್‌ ಚಾಯ್ಸ್‌" ಎಂದು ಗೌತಮ್‌ ಖುಷಿಯಿಂದ ಹೇಳುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ