Amruthadhaare :ಗೌತಮ್‌ ದಿವಾನ್‌ ಮನೆಗೆ ಬಲಗಾಲಿಟ್ಟು ಪ್ರವೇಶಿಸಿದ ಸುಧಾ, ಮನೆಗೆ ಬಾಂಬಿಟ್ಟವರು ಯಾರು? ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare :ಗೌತಮ್‌ ದಿವಾನ್‌ ಮನೆಗೆ ಬಲಗಾಲಿಟ್ಟು ಪ್ರವೇಶಿಸಿದ ಸುಧಾ, ಮನೆಗೆ ಬಾಂಬಿಟ್ಟವರು ಯಾರು? ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

Amruthadhaare :ಗೌತಮ್‌ ದಿವಾನ್‌ ಮನೆಗೆ ಬಲಗಾಲಿಟ್ಟು ಪ್ರವೇಶಿಸಿದ ಸುಧಾ, ಮನೆಗೆ ಬಾಂಬಿಟ್ಟವರು ಯಾರು? ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

Amruthadhaare serial today episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಇಂದು ಒಂದಿಷ್ಟು ಬೆಳವಣಿಗೆ ನಡೆದಿದೆ. ಮನೆಗೆ ಬಾಂಬ್‌ ಇಟ್ಟವರ ಕುರಿತು ತನಿಖೆ ನಡೆಯುತ್ತಿದೆ. ಇದೇ ಸಮಯದಲ್ಲಿ ಗೌತಮ್‌ ಮನೆಗೆ ಸುಧಾಳ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದೆ.

Amruthadhaare: ಗೌತಮ್‌ ದಿವಾನ್‌ ಮನೆಗೆ ಬಲಗಾಲಿಟ್ಟು ಪ್ರವೇಶಿಸಿದ ಸುಧಾ
Amruthadhaare: ಗೌತಮ್‌ ದಿವಾನ್‌ ಮನೆಗೆ ಬಲಗಾಲಿಟ್ಟು ಪ್ರವೇಶಿಸಿದ ಸುಧಾ

Amruthadhaare serial today episode: ಸುಧಾಳಿಗೆ ಕೈ ಕಾಲುಗಳಿಗೆ ಗಾಯವಾಗಿದೆ. ಗೌತಮ್‌ ಅವಳ ಕಾಳಜಿ ನೋಡಿಕೊಳ್ಳುತ್ತಿದ್ದಾನೆ. ಆಫೀಸ್‌ಗೆ ರಜೆ ಹಾಕಿ ಈಕೆಯ ಸೇವೆ ಮಾಡುತ್ತಿದ್ದಾನೆ. ಒಲವೇ ಬೆಳಕಲ್ಲೇ ಒಂದಾಗಿ ಸಾಗುವೆ, ಕಣ್ಣಾ ರೆಪ್ಪೆಯಲಿ... ಎಂಬ ಹಾಡು ಹಿನ್ನೆಲೆಯಲ್ಲಿ ಬರುತ್ತದೆ. "ಐ ಲವ್‌ ಯು" ಎಂದು ಹೇಳುತ್ತಾರೆ. ಇನ್ನೊಂದೆಡೆ ಆನಂದ್‌ ಮತ್ತು ಅಪರ್ಣಾ ಮಾತನಾಡುತ್ತಿದ್ದಾರೆ. "ಮನೆಯ ಲ್ಯಾಂಡ್‌ಲೈನ್‌ಗೆ ಯಾರೋ ಬಾಂಬ್‌ ಇಟ್ಟಿರುವುದು... ಭೂಮಿಕಾ ಫೋನ್‌ನಿಂದ ಕೈ ತೆಗೆದರೆ ಬ್ಲಾಸ್ಟ್‌ ಆಗುತ್ತದೆ... ಜೈದೇವ್‌ ಭೂಮಿಕಾ ಜತೆಯಾಗಿ ಫೋನ್‌ ಅನ್ನು ದೂರಕ್ಕೆ ಬಿಸಾಕಿದ್ದು... ಬಾಂಬ್‌ ಢಮ್‌ ಎಂದು ಸಿಡಿದದ್ದು... ಭೂಮಿಕಾಳ ಕೈಗೆ ಗಾಯವಾಗಿರುವುದು... ಹೀಗೆ ಒಂದಿಷ್ಟು ಘಟನೆಗಳನ್ನು ಅಪರ್ಣಾಳಿಗೆ ಆನಂದ್‌ ಹೇಳುತ್ತಾರೆ.

"ಮನೆಯೊಳಗೆ ಬಾಂಬ್‌ ಹೇಗೆ ಇಟ್ಟಿದ್ದಾರೆ? ಯಾರು ಇಟ್ಟಿದ್ದಾರೆ?" ಎಂದು ಅವರಿಬ್ಬರು ಮಾತನಾಡಿದ್ದಾರೆ. "ಯಾರೋ ತುಂಬಾ ದಿನಗಳಿಂದ ಪ್ಲ್ಯಾನ್‌ ಮಾಡಿದ್ದಾರೆ" "ಅವರು ದೊಡ್ಡ ಸಂಚೇ ಮಾಡಿದ್ದಾರೆ" ಎಂದು ಆನಂದ್‌ ಮತ್ತು ಅಪರ್ಣಾ ಮಾತನಾಡುತ್ತಿದ್ದಾರೆ. "ಮನೆಯೊಳಗಿನ ಕೆಲಸಗಾರರೇ ಇದರಲ್ಲಿ ಶಾಮೀಲಾಗಿರಬಹುದು" ಎಂದು ಮಾತನಾಡುತ್ತಿದ್ದಾರೆ. ಇದು ಆ ಮನೆಗೆ ಸುಧಾಳ ಎಂಟ್ರಿಗೆ ಆಗುಂತಕ ಮಾಡಿರುವ ಸಂಚೇ ಎಂದು ತಿಳಿಯಬೇಕಿದೆ. "ಸುಧಾಳಂತಹ ಕೆಲಸಗಾರರು ಇದ್ರೆ ಯಾವ ಭಯವಿಲ್ಲ" ಎಂದು ಅಪರ್ಣಾ ಹೇಳಿದಾಗ ಆನಂದ್‌ನ ತಲೆಯಲ್ಲಿ ಬೇರೆ ಏನೋ ಓಡುತ್ತದೆ.

ಕ್ಲಬ್‌ಗೆ ಹೋಗಿ ಬಂದ ಅಪೇಕ್ಷಾ

ಹೊರಗೆ ಹೋದ ಅಪೇಕ್ಷಾ ಮನೆಗೆ ಬರುವಾಗ ಪಾರ್ಥ ಚಿಂತೆಯಲ್ಲಿದ್ದಾನೆ. "ಪಾರ್ಥ ಏಕೆ ಹೀಗೆ ಕೂತಿದ್ದೀರ" ಎಂದು ಕೇಳುತ್ತಾಳೆ. "ನಮ್ಮ ಮನೆಯಲ್ಲಿ ಯಾರೋ ಬಾಂಬ್‌ ಇಟ್ಟಿದ್ರು" ಎಂದು ಹೇಳುತ್ತಾನೆ. ಘಟನೆಯ ಕುರಿತು ಆತ ವಿವರಿಸುತ್ತಾನೆ. "ಇದು ತುಂಬಾ ಭಯಾನಕ. ಪುಣ್ಯ ಯಾರಿಗೂ ಅಪಾಯವಾಗಿಲ್ಲ. ಅತ್ತಿಗೆ ಮತ್ತು ಜೈದೇವ್‌ಗೆ ತುಸು ಏಟಾಗಿದೆ" ಎಂದು ವಿವರಿಸುತ್ತಾನೆ. "ಅಕ್ಕಾ ಹೇಗಿದ್ದಾಳೆ" ಎಂದು ಕೇಳುತ್ತಾಳೆ. "ಆಕೆ ಸುಧಾರಿಸುತ್ತಿದ್ದಾಳೆ, ಒಮ್ಮೆ ಹೋಗಿ ನೋಡಿ ಬನ್ನಿ" ಎಂದು ಹೇಳುತ್ತಾಳೆ. "ಅವಳು ರೆಸ್ಟ್‌ ಮಾಡ್ಲಿ" ಎಂದು ಹೇಳುತ್ತಾನೆ. "ನಾನು ಈಗಷ್ಟೇ ಕ್ಲಬ್‌ನಿಂದ ಬರುತ್ತಿದ್ದೇನೆ. ಅದು ಈ ಮನೆಯಲ್ಲಿ ಕಾಮನ್‌ ಅಲ್ವ" ಎಂದು ಹೇಳುತ್ತಾಳೆ. ಅದು ಪಾರ್ಥನಿಗೆ ಇಷ್ಟವಾಗುವುದಿಲ್ಲ. "ನನಗೆ ಅಲ್ಲಿ ಖುಷಿಯಾಗುತ್ತದೆ. ಹೈಫೈ ಜೈಲಿನಂತೆ ಈ ಮನೆ ಇದೆ" ಎಂದು ಹೇಳುತ್ತಾಳೆ. "ಕ್ಲಬ್‌ ಪಬ್‌ ನಿಮಗೆ ಸೂಟ್‌ ಆಗೋದಿಲ್ಲ" ಎಂದು ಹೇಳುತ್ತಾನೆ. "ನಾನು ಖುಷಿಯಾಗಿರಬೇಕಂದ್ರೆ ಅಲ್ಲಿಗೆ ಹೋಗುವೆ" ಎಂದು ಹೇಳುತ್ತಾಳೆ. ಎಂದಿನಂತೆ ಒಂದಿಷ್ಟು ಜಗಳ ಇರುತ್ತದೆ.

ಜೈದೇವ್‌- ಗೌತಮ್‌ ಮಾತುಕತೆ

ಜೈದೇವ್‌ ಆರೋಗ್ಯದ ಕುರಿತು ಗೌತಮ್‌ ಕೇಳುತ್ತಿದ್ದಾನೆ. "ಈ ಘಟನೆ ಹಿಂದೆ ನನ್ನ ಪಾತ್ರ ಇಲ್ಲ. ಅಂತಹದ್ದೂ ಇದ್ದರೆ ತಲೆಯಿಂದ ತೆಗೆದುಹಾಕಿ" ಎಂದು ಜೈದೇವ್‌ ಹೇಳುತ್ತಾನೆ. "ನಮಗೆ ನಿನ್ನ ಬಗ್ಗೆ ಯಾವುದೇ ಅಪನಂಬಿಕೆ ಇಲ್ಲ. ಅತ್ತಿಗೆಯನ್ನು ಕಾಪಾಡಿದೆ. ಹೆಮ್ಮೆಯಾಗುತ್ತದೆ" ಎಂದು ಗೌತಮ್‌ ಹೇಳುತ್ತಾರೆ. ಇದಾದ ಬಳಿಕ ಪಾರ್ಥನ ಕಾರಿನ ಬ್ರೇಕ್‌ ಫೈಲ್ಯೂರ್‌ ಆದ ಘಟನೆಯನ್ನೂ ಗೌತಮ್‌ಗೆ ಹೇಳುತ್ತಾನೆ. "ಯಾರೋ ಆತನ ಕಾರಿನ ಕೇಬಲ್‌ ಕಟ್‌ ಮಾಡಿದ್ದಾರೆ" ಎಂದು ಜೈದೇವ್‌ ಹೇಳುತ್ತಾನೆ. ಆ ಕಾರಿನ ಘಟನೆಗೂ, ಈ ಬಾಂಬ್‌ ಘಟನೆಗೂ ಎಲ್ಲೋ ಸಾಮ್ಯತೆ ಇದೆ ಅನಿಸುತ್ತಿದೆ ಎಂದು ಹೇಳುತ್ತಾನೆ. "ನನಗೆ ಅಷ್ಟೊಂದು ಶತ್ರುಗಳು ಇಲ್ಲ. ಈ ರೀತಿಯ ಶತ್ರುಗಳು ಇಲ್ಲ" ಎಂದು ಗೌತಮ್‌ ಹೇಳುತ್ತಾನೆ. ಈ ಕುರಿತು ಒಂದಿಷ್ಟು ಚರ್ಚಿಸುತ್ತಾರೆ. "ಕೆಲಸದವನು ತಪ್ಪಿಸಿಕೊಂಡಿದ್ದ. ಆತ ಸಿಕ್ಕಿಹಾಕಿಕೊಂಡಿದ್ದಾನೆ. ಇದರ ಹಿಂದೆ ಇರುವ ಮಾಸ್ಟರ್‌ಮೈಂಡ್‌ ಯಾರು ಎಂದು ಕಂಡು ಹಿಡಿಯಬೇಕು" ಎಂದು ಗೌತಮ್‌ ಹೇಳುತ್ತಾರೆ.

ಗೌತಮ್‌ ಮನೆಗೆ ಸುಧಾ

ಆನಂದ್‌ ಮತ್ತು ಗೌತಮ್‌ ಮಾತನಾಡುತ್ತಿದ್ದಾರೆ. "ಆಫೀಸ್‌ ಬಗ್ಗೆ ನಾನು ಯೋಚಿಸುವೆ, ನೀನು ಮನೆ ಕಡೆ ಗಮನ ನೀಡು" ಎಂದು ಆನಂದ್‌ ಹೇಳುತ್ತಾನೆ. ಇದೇ ಸಮಯದಲ್ಲಿ ಜೈದೇವ್‌ನ ಬಗ್ಗೆ, ಬಾಂಬ್‌ ಬಗ್ಗೆ ಮಾತನಾಡುತ್ತಾರೆ. "ನಮ್ಮನೆಗೆ ಕೆಲಸಕ್ಕೆ ಬರುತ್ತಾಳೆ, ಅದೇ ಸಜ್ಜಪ್ಪ ಮಾಡಿದವಳು, ಸುಧಾಳನ್ನು ನಿಮ್ಮ ಮನೆಗೆ ಕೆಲಸಕ್ಕೆ ಕರೆದುಕೊಂಡು ಬಂದರೆ ಹೇಗೆ, ಭೂಮಿಕಾಳಿಗ ಸಹಾಯವಾಗುತ್ತದೆ" ಎಂದು ಆನಂದ್‌ ಹೇಳುತ್ತಾನೆ. "ತುಂಬಾ ಒಳ್ಳೆಯ ಹುಡುಗಿ, ನಂಬಿಕೆಗೆ ಇನ್ನೊಂದು ಹೆಸರು" ಎಂದು ಹೇಳಿದಾಗ ಗೌತಮ್‌ ಒಪ್ಪುತ್ತಾನೆ. ಇನ್ನೊಂದೆಡೆ ಸುಧಾಳ ಮನೆಗೆ ಸಾಲ ವಸೂಲಿಗೆ ವ್ಯಕ್ತಿಯೊಬ್ಬರು ಬರುತ್ತಾರೆ. ಒಂದಿಷ್ಟು ಹಣ ನೀಡುತ್ತಾಳೆ. ಅಸಲು ಬಡ್ಡಿ ತುಂಬಾ ಇದೆ. ಎರಡು ತಿಂಗಳಲ್ಲಿ ಕೊಟ್ಟು ಬಿಡಬೇಕು ಎಂದು ಆತ ಹೆದರಿಸುತ್ತಾನೆ. ಇದನ್ನು ಸುಧಾಳ ಮಗಳು ನೋಡುತ್ತಾಳೆ. ಇವಿಷ್ಟು ಘಟನೆಗಳು ಅಮೃತಧಾರೆ ಧಾರಾವಾಹಿಯ ನವೆಂಬರ್‌ 17ರ ಸಂಚಿಕೆಯಲ್ಲಿ ನಡೆಯಲಿದೆ.

ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಗೌತಮ್‌ ಮನೆಗೆ ಸುಧಾ ಬಲಗಾಲಿಟ್ಟು ಪ್ರವೇಶಿಸುವ ದೃಶ್ಯವೂ ಇದೆ.

Whats_app_banner