logo
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಮಗಳನ್ನು ನೋಡಲು ಖುಷಿಯಿಂದ ಓಡಿ ಬಂದ ತವರು ಮನೆಯವರು; ವೀರಭದ್ರನ ಹೊಸ ಪ್ಲಾನ್‌ ಬಗ್ಗೆ ಪಾರುಗೆ ಶುರುವಾಯ್ತು ಅನುಮಾನ

Annayya Serial: ಮಗಳನ್ನು ನೋಡಲು ಖುಷಿಯಿಂದ ಓಡಿ ಬಂದ ತವರು ಮನೆಯವರು; ವೀರಭದ್ರನ ಹೊಸ ಪ್ಲಾನ್‌ ಬಗ್ಗೆ ಪಾರುಗೆ ಶುರುವಾಯ್ತು ಅನುಮಾನ

Suma Gaonkar HT Kannada

Nov 05, 2024 01:17 PM IST

google News

ವೀರಭದ್ರನ ಹೊಸ ಪ್ಲಾನ್‌ ಬಗ್ಗೆ ಪಾರುಗೆ ಶುರುವಾಯ್ತು ಅನುಮಾನ

    • ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಅನುಮಾನ ಆರಂಭವಾಗಿದೆ. ಹಲವು ವರ್ಷಗಳಿಂದ ಅಪ್ಪನನ್ನು ನೋಡಿಕೊಂಡು ಬಂದ ಅವಳಿಗೆ ಈಗ ಅಪ್ಪನ ನಡವಳಿಕೆ ಸರಿ ಎನಿಸುತ್ತಿಲ್ಲ. 
ವೀರಭದ್ರನ ಹೊಸ ಪ್ಲಾನ್‌ ಬಗ್ಗೆ ಪಾರುಗೆ ಶುರುವಾಯ್ತು ಅನುಮಾನ
ವೀರಭದ್ರನ ಹೊಸ ಪ್ಲಾನ್‌ ಬಗ್ಗೆ ಪಾರುಗೆ ಶುರುವಾಯ್ತು ಅನುಮಾನ (ಜೀ ಕನ್ನಡ)

ಅಣ್ಣಯ್ಯ ಹಾಗೂ ಪಾರು ತಾಯಂದಿರು ಖುಷಿಪಡ್ತಾ ಇದ್ದಾರೆ ಆದ್ರೆ ಪಾರು ಮಾತ್ರ ಯಾಕೋ ಅನುಮಾನದಲ್ಲಿದ್ದಾಳೆ. ಅವಳು ಯಾಕೆ ಅನುಮಾನದಲ್ಲಿದ್ದಾಳೆ. ಅಂತದ್ದೇನಾಗಿದೆ ಎಂದು ನಿಮಗೂ ಅನುಮಾನ ಇರಬಹುದು. ಪಾರು ಬೇಕು ಎಂದೇ ತನ್ನ ತಾಯಿಯರ ನೆನೆಪಾಗಿ ಕಾಲ್ ಮಾಡಿರುತ್ತಾಳೆ. ಆದರೆ ಕಾಲ್ ರಿಸೀವ್ ಮಾಡಿ ಆ ಕಡೆಯಿಂದ ಗುಟ್ಟಾಗಿ ಅವಳ ತಾಯಿ ಮಾತಾಡ್ತಾಳೆ. ಯಾಕೆಂದರೆ ಎಲ್ಲರಿಗೂ ಗೊತ್ತಾಗೋ ರೀತಿ ಮಾತಾಡಿದ್ರೆ ವೀರಭದ್ರೇಗೌಡ ಮಾತ್ರ ಇವರನ್ನು ಸುಮ್ಮನೆ ಬಿಡೋದಿಲ್ಲ ಎನ್ನುವ ವಿಚಾರ ಅವರೆಲ್ಲರಿಗೆ ಗೊತ್ತಿದೆ. ಆದ್ರೆ ಅವರು ಮಾತಾಡ್ತಾ ಇರುವ ಸಂದರ್ಭದಲ್ಲಿ ಪಾರು ಅಣ್ಣ ಅಲ್ಲಿಗೆ ಬರ್ತಾನೆ. “ಆ ಮಾನ್‌ಗೆಟ್ಟವಳ ಜೊತೆ ನೀವೆಲ್ಲ ಮಾತಾಡ್ತಾ ಇದೀರಲ್ಲ. ಇರಿ ಅಪ್ಪನಿಗೆ ಹೇಳ್ತೀನಿ” ಎಂದು ಹೇಳುವಷ್ಟರಲ್ಲಿ ವೀರಭದ್ರೇಗೌಡ ಅಲ್ಲಿಗೆ ಬರ್ತಾನೆ.

ಅವನು ತುಂಬಾ ಬೈತಾನೆ ಎಂದು ಅಂದುಕೊಂಡಿದ್ದ ಪಾರು ತಾಯಿಗೆ ಆಶ್ಚರ್ಯವೇ ಕಾದಿತ್ತು. “ನಿನಗೆ ನಿನ್ನ ಮಗಳನ್ನ ನೋಡಬೇಕು, ಮಾತಾಡ್ಬೇಕು ಎಂತ ಅನಿಸ್ತಾ ಇರಬಹುದು. ಹಾಗೇನಾದ್ರೂ ಇದ್ರೆ ನೀನೇ ಅವಳ ಮನೆಗೆ ಹೋಗಿ ಬರಬಹುದು” ಎಂದು ಹೇಳುತ್ತಾನೆ. ಆ ಮಾತಿಗಿಂತ ಇನ್ಯಾವ ಖುಷಿ ಬೇಕು ಎಂದು ತಾಯಿ ತನ್ನ ಮಗಳನ್ನು ನೋಡಲು ಓಡೋಡಿ ಬರುತ್ತಾಳೆ. ಅತ್ತೆ ಬಂದಿದ್ದಾಳೆ ಎಂದು ಶಿವು ತುಂಬಾ ಖುಷಿಯಾಗ್ತಾನೆ. ಅತ್ತೆ ಬನ್ನಿ ಕೂತ್ಕೊಳಿ ಎಂದು ಸತ್ಕರಿಸುತ್ತಾನೆ.

ಆದರೆ ಪಾರುಗೆ ಅನುಮಾನ ಬಂದು ಅಪ್ಪಂಗೆ ಹೇಳದೆ ನೀವು ಬಂದ್ರಾ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅವಳ ತಾಯಿ ಹೇಳ್ತಾಳೆ “ಇಲ್ಲ ಕಣಮ್ಮ, ನಿಮ್ಮ ಅಪ್ಪಾನೇ ನನ್ನ ಇಲ್ಲಿಗೆ ಕಳ್ಸಿದ್ದು” ಅಂತ. ಆ ಮಾತನ್ನು ಕೇಳಿ ಪಾರುಗೆ ಅನುಮಾನ ಆರಂಭವಾಗುತ್ತದೆ. ನಿಮ್ಮನ್ನ ಕರ್ಕೊಂಡು ಬರೋಕೆ ಹೇಳಿದಾರೆ ಅಂತ ಬೇರೆ ಹೇಳ್ತಾರೆ. ಆಗ ಪಾರು ಅನುಮಾನ ಇನ್ನೂ ಗಟ್ಟಿಯಾಗುತ್ತದೆ. ಅಣ್ಣಯ್ಯ ಖುಷಿಯಾಗಿ ಹಾಗಾದ್ರೆ ಹೋಗೋಣ ಎಂದು ಖುಷಿಯಲ್ಲಿ ತಯಾರಾಗ್ತಾನೆ. ಆದ್ರೆ ಪಾರು ಅವನನ್ನು ತಡೆಯುತ್ತಾಳೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ