Lakshmi Baramma: ರಾವಣ ದಹನದಲ್ಲಿ ಕೊನೆಯಾಗುತ್ತಾ ಲಕ್ಷ್ಮೀ ಅಧ್ಯಾಯ; ಕಾವೇರಿ ಮಾತಲ್ಲೇ ಇದೆ ಸುಳಿವು
Nov 14, 2024 02:33 PM IST
ರಾವಣ ದಹನದಲ್ಲಿ ಕೊನೆಯಾಗುತ್ತಾ ಲಕ್ಷ್ಮೀ ಅಧ್ಯಾಯ
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಹೊಸದೊಂದು ಉಪಾಯ ಮಾಡಿದ್ದಾಳೆ. ಆದರೆ ಅವಳ ಉಪಾಯ ಲಕ್ಷ್ಮೀಯ ಸಾವನ್ನು ನಿರ್ಧಾರ ಮಾಡುವಂತಿದೆ. ಲಕ್ಷ್ಮೀ ಈ ಬಾರಿ ನಿಜಕ್ಕೂ ಸಾಯ್ತಾಳಾ ಎಂಬ ಪ್ರಶ್ನೆ ಮೂಡಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಭಾನುಮತಿಯ ಸಹಾಯಕಿ ಚಿಂಗಾರಿ ಸಹಾಯ ಪಡೆದುಕೊಂಡು ಹೇಗಾದರೂ ಮಾಡಿ ಲಕ್ಷ್ಮೀಯನ್ನು ಕೊಲ್ಲಬೇಕು ಎಂದು ಬಯಸುತ್ತಾಳೆ. ಆದರೆ ಲಕ್ಷ್ಮೀಯನ್ನು ಕೊಲ್ಲುವುದು ಅಷ್ಟು ಸುಲಭ ಅಲ್ಲ ಎಂದು ಅವಳಿಗೆ ಗೊತ್ತಿತ್ತು. ಆದರೂ ಹೇಗಾದರೂ ಮಾಡಿ ಏನಾದರೂ ಒಂದು ಹೊಸ ಉಪಾಯ ಮಾಡಬೇಕು ಎಂದು ಅವರಿಬ್ಬರೂ ಒಂದು ಕಡೆ ಸೇರಿದ್ದರು. ಆಗ ನೀವು ಹೇಳಿದಂತೆ, ಅದರಲ್ಲೂ ಯಾರಿಗೂ ಗೊತ್ತಾಗದಂತೆ ಕೊಲ್ಲಲ್ಲು ನಾನು ಹಾಲಿವುಡ್ ಮೂವಿಯನ್ನೇ ನೋಡಿಕೊಂಡು ಬರಬೇಕು ಎಂದು ಚಿಂಗಾರಿ ಹೇಳುತ್ತಿದ್ದಳು. ಹೀಗಿರುವಾಗ ಚಿಂಗಾರಿ ಮಾತಿಗೆ ಕಾವೇರಿ ಇನ್ನಷ್ಟು ಕೋಪ ಮಾಡಿಕೊಂಡಿದ್ದಳು.
ನಾನೇ ಕೊಲ್ಲಬೇಕು ಅಂತೀರಾ ಮತ್ತೆ ನೀವೇ ನಿಮ್ಮ ಕೈಯ್ಯಾರೆ ಅವಳ ಕತ್ತು ಹಿಸುಕಿಸಿ ಸಾಯಿಸಿ ಬಿಡಿ ಎಂದು ಹೇಳುತ್ತಾಳೆ. ನಾನೇ ಕೊಲ್ಲೋದಾಗಿದ್ರೆ ನಿನ್ನ ಯಾಕೆ ಇಲ್ಲಿಗೆ ಕರಿತಾ ಇದ್ದೆ ಎಂದು ಕಾವೇರಿ ಪ್ರಶ್ನೆ ಮಾಡುತ್ತಾಳೆ. ಅವರಿಬ್ಬರ ಮಧ್ಯ ಇದೇ ರೀತಿ ಮಾತುಕತೆ ಆಗುತ್ತ ಇರುವ ಸಂದರ್ಭದಲ್ಲಿ ಕೃಷ್ಣ ಕಾಲ್ ಮಾಡ್ತಾನೆ. ನಾವು ಲಕ್ಷ್ಮೀ ಇದ್ದಲ್ಲಿಗೆ ಹೋಗ್ತಾ ಇದೀವಿ, ಇಂದು ಅಲ್ಲಿ ನಾಟಕ ಇದೆಯಂತೆ. ಅದರಲ್ಲಿ ಲಕ್ಷ್ಮೀ ಕೂಡ ಇದಾಳಂತೆ ಎಂದು ಹೇಳುತ್ತಾನೆ.
"ದಿನಾ ಮನೆಯಲ್ಲಿ ಅವಳ ನಾಟಕ ನೋಡಿ ಸಾಕಾಗಿದೆ ನನಗೆ, ನಾನು ಬರೋದಿಲ್ಲ" ಎಂದು ಕಾವೇರಿ ಹೇಳುತ್ತಾಳೆ. ಅವಳ ಮಾತನ್ನು ಕೇಳಿ ಸುಮ್ಮನಾಗ್ತಾನೆ. ಆದರೂ ವೈಷ್ಣವ್ ಕೂಡ ಅಲ್ಲೇ ಇರುವುದರಿಂದ ನೀನು ಬಂದಿದ್ರೆ ಚೆನ್ನಾಗಿರ್ತಾ ಇತ್ತು. 'ರಾವಣ ದಹನ ' ನಾಟಕ ಮಾಡ್ತಿದ್ದಾರಂತೆ ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿ ಲಕ್ಷ್ಮೀಯನ್ನು ಕೊಲ್ಲಲು ಹೊಸದೊಂದು ಉಪಾಯ ಕಾವೇರಿಗೆ ಹೊಳೆದಂತಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.