logo
ಕನ್ನಡ ಸುದ್ದಿ  /  ಮನರಂಜನೆ  /  ಮಲ್ಲಿ ಎಫೆಕ್ಟ್! ಟಿಆರ್‌ಪಿಯಲ್ಲಿ ಹೊಸ ದಾಖಲೆ ಬರೆದ ಅಮೃತಧಾರೆ; ಈ ವಾರದ ಟಾಪ್‌ 10 ಕನ್ನಡ ಧಾರಾವಾಹಿಗಳು ಇವೇ ನೋಡಿ

ಮಲ್ಲಿ ಎಫೆಕ್ಟ್! ಟಿಆರ್‌ಪಿಯಲ್ಲಿ ಹೊಸ ದಾಖಲೆ ಬರೆದ ಅಮೃತಧಾರೆ; ಈ ವಾರದ ಟಾಪ್‌ 10 ಕನ್ನಡ ಧಾರಾವಾಹಿಗಳು ಇವೇ ನೋಡಿ

Oct 04, 2024 02:35 PM IST

google News

ಈ ವಾರದ ಟಾಪ್‌ 10 ಕನ್ನಡ ಧಾರಾವಾಹಿಗಳು

    • ಕನ್ನಡ ಕಿರುತೆರೆಯಲ್ಲಿ ಈ ವಾರ ಅಚ್ಚರಿಯ ಬದಲಾವಣೆಗಳು ಘಟಿಸಿವೆ. ಟಾಪ್‌ ಐದರಲ್ಲಿ ಇದ್ದರೂ, ಅಗ್ರ ಸ್ಥಾನಕ್ಕೆ ಬಾರದೇ ಅಲ್ಲೇ ಇರುತ್ತಿದ್ದ ಸೀರಿಯಲ್‌ವೊಂದು ಈ ವಾರ ಮೊದಲ ಸ್ಥಾನ ಅಲಂಕರಿಸಿದೆ. ಹಾಗಾದರೆ ಈ ವಾರ ಯಾವೆಲ್ಲ ಸೀರಿಯಲ್‌ಗಳಿಗೆ ಎಷ್ಟೆಷ್ಟು ಟಿಆರ್‌ಪಿ ಸಿಕ್ಕಿದೆ. ಟಾಪ್‌ 10 ಕನ್ನಡ ಧಾರಾವಾಹಿಗಳು ಯಾವವು? ಇಲ್ಲಿದೆ ಮಾಹಿತಿ.
ಈ ವಾರದ ಟಾಪ್‌ 10 ಕನ್ನಡ ಧಾರಾವಾಹಿಗಳು
ಈ ವಾರದ ಟಾಪ್‌ 10 ಕನ್ನಡ ಧಾರಾವಾಹಿಗಳು

Kannada Serial TRP: ಕನ್ನಡ ಕಿರುತೆರೆಯಲ್ಲಿ ನಿತ್ಯ ಏನಿಲ್ಲ ಅಂದರೂ 45ರಿಂದ 50 ಸೀರಿಯಲ್‌ಗಳು ಪ್ರಸಾರ ಕಾಣುತ್ತವೆ. ಆ ಪೈಕಿ ಕೆಲವು ಸೀರಿಯಲ್‌ಗಳು ಮಾತ್ರ ಹೆಚ್ಚು ವೀಕ್ಷಕರನ್ನು ಹೊಂದಿವೆ. ವಾರದಿಂದ ವಾರಕ್ಕೆ ಏರಿಳಿತ ಕಾಣುವ ಟಿಆರ್‌ಪಿಯಲ್ಲಿ ಸೀರಿಯಲ್‌ಗಳ ಸ್ಥಾನದಲ್ಲಿಯೂ ಬದಲಾವಣೆ ಆಗುತ್ತಲಿರುತ್ತದೆ. ಆ ಪೈಕಿ ಈ ವಾರ ಅಚ್ಚರಿಯ ಬದಲಾವಣೆಗಳು ಘಟಿಸಿವೆ. ಟಾಪ್‌ ಐದರಲ್ಲಿ ಇದ್ದರೂ, ಅಗ್ರ ಸ್ಥಾನಕ್ಕೆ ಬಾರದೇ ಅಲ್ಲೇ ಇರುತ್ತಿದ್ದ ಸೀರಿಯಲ್‌ ಈ ವಾರ ಮೊದಲ ಸ್ಥಾನ ಅಲಂಕರಿಸಿದೆ. ಹಾಗಾದರೆ ಈ ವಾರ ಯಾವೆಲ್ಲ ಸೀರಿಯಲ್‌ಗಳಿಗೆ ಎಷ್ಟೆಷ್ಟು ಟಿಆರ್‌ಪಿ ಸಿಕ್ಕಿದೆ. ಟಾಪ್‌ 10 ಕನ್ನಡ ಧಾರಾವಾಹಿಗಳು ಯಾವವು? ಎಂಬುದನ್ನು ಇಲ್ಲಿ ನೋಡೋಣ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡದಲ್ಲಿ ಪ್ರಸಾರ ಕಾಣುವ ಅಮೃತಧಾರೆ ಸೀರಿಯಲ್‌ ಈ ವಾರ ಟಾಪ್‌ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. 8.4 ಟಿಆರ್‌ಪಿ ಪಡೆದುಕೊಳ್ಳುವ ಮೂಲಕ ಮೊದಲ ಸಲ ನಂಬರ್‌ 1 ಪಟ್ಟ ಅಲಂಕರಿಸಿದೆ. ಈ ಮೊದಲು ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಇರುತ್ತಿದ್ದ ಈ ಧಾರಾವಾಹಿ, ಈ ವಾರ ಅಚ್ಚರಿಯ ರೀತಿಯಲ್ಲಿ ಮೊದಲ ಸ್ಥಾನಕ್ಕೆ ನೆಗೆದಿದೆ. ಜೈದೇವ್‌ನ ಕುತಂತ್ರ ಮಲ್ಲೀಗೆ ಗೊತ್ತಾಗಿದ್ದೇ ತಡ, ರೋಚಕ ಘಟ್ಟಕ್ಕೆ ಹೊರಳಿದೆ ಈ ಸೀರಿಯಲ್.

ಲಕ್ಷ್ಮೀ ನಿವಾಸ

ಸದಾ ಮೊದಲ ಸ್ಥಾನದಲ್ಲಿ ಇರುತ್ತಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಪ್ರಸಾರ ಸಮಯ ಬದಲಾಗಿದ್ದೇ ತಡ, ಆ ಮೊದಲ ಸ್ಥಾನ ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಸೇರಿತ್ತು. ಮೊದಲ ಸ್ಥಾನದ ಮೇಲೆ ಹಿಡಿತ ಸಾಧಿಸಿದ್ದ ಲಕ್ಷ್ಮೀ ನಿವಾಸ ಸೀರಿಯಲ್‌ ಈ ವಾರ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 8.1 ಟಿಆರ್‌ಪಿ ಪಡೆದಿದೆ.

ಶ್ರಾವಣಿ ಸುಬ್ರಮಣ್ಯ

ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಈ ಮೊದಲು ಸದಾ ಎರಡನೇ ಸ್ಥಾನವನ್ನು ಉಳಿಸಿಕೊಂಡು ಬರುತ್ತಿತ್ತು. ಈ ವಾರ ಅಮೃತಧಾರೆ ಸೀರಿಯಲ್‌ ಪರಿಣಾಮದಿಂದ ಮೂರನೇ ಸ್ಥಾನದಲ್ಲಿದೆ ಈ ಸೀರಿಯಲ್.‌ 7.9 ಟಿಆರ್‌ಪಿ ಪಡೆದುಕೊಂಡಿದೆ.

ಪುಟ್ಟಕ್ಕನ ಮಕ್ಕಳು

ಜೀ ಕನ್ನಡದಲ್ಲಿ ಪ್ರಸಾರ ಕಾಣುವ, ಒಂದು ಕಾಲದಲ್ಲಿ ಎರಡಂಕಿ ಟಿಆರ್‌ಪಿ ಪಡೆದುಕೊಂಡಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಇದೀಗ ಸುಧಾರಿಸಿಕೊಳ್ಳುವ ಸ್ಥಿತಿಯಲ್ಲಿದೆ. ಸಮಯ ಬದಲಾವಣೆ ಪರಿಣಾಮದಿಂದ ಈ ಧಾರಾವಾಹಿ ಟಿಆರ್‌ಪಿ ಮೇಲೆಯೂ ಬರೆ ಬಿದ್ದಿತ್ತು. ಈಗ ಈ ವಾರ 7.5 ಟಿಆರ್‌ಪಿ ಪಡೆದುಕೊಂಡು, ನಾಲ್ಕನೇ ಸ್ಥಾನಕ್ಕೆ ಬಂದಿದೆ. ಈ ಮೊದಲು ಟಾಪ್‌ ಐದರಲ್ಲಿಯೂ ಈ ಸೀರಿಯಲ್‌ ಕಾಣಿಸುತ್ತಿರಲಿಲ್ಲ.

ಲಕ್ಷ್ಮೀ ಬಾರಮ್ಮ

ಅದೇ ರೀತಿ ಕಳೆದ ವಾರ ಟಾಪ್‌ 7.6 ಟಿಆರ್‌ಪಿ ಪಡೆದು ಮುಂದಡಿ ಇರಿಸಿದ್ದ ಕಲರ್ಸ್‌ ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಈ ವಾರ 7.1 ನಂಬರ್‌ ಪಡೆದು ಕುಸಿತ ಕಂಡಿದೆ. ಕಳೆದ ವಾರ ಟಾಪ್‌ ಮೂರರಲ್ಲಿ ಇದ್ದ ಈ ಸೀರಿಯಲ್‌ ಈ ವಾರ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಅಣ್ಣಯ್ಯ

ಜೀ ಕನ್ನಡದಲ್ಲಿ ಇತ್ತೀಚಿನ ಕೆಲ ವಾರಗಳ ಹಿಂದಷ್ಟೇ ಶುರುವಾಗಿರುವ ಅಣ್ಣಯ್ಯ ಸೀರಿಯಲ್‌ ಸಹ ಮೋಡಿ ಮಾಡುತ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಕಳೆದ ವಾರ 7.0 ಟಿಆರ್‌ಪಿ ಪಡೆದುಕೊಂಡಿದ್ದ ಈ ಸೀರಿಯಲ್‌, ಈ ವಾರವೂ ಅದೇ ನಂಬರ್‌ ಪಡೆದುಕೊಂಡು, ಆರನೇ ಸ್ಥಾನದಲ್ಲಿದೆ.

ಭಾಗ್ಯ ಲಕ್ಷ್ಮೀ

ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್‌ ಟಿಆರ್‌ಪಿಯಲ್ಲಿ ಭಾರೀ ಕುಸಿತ ಕಂಡಿದೆ. ಕಳೆದ ವಾರ 7.7 ಟಿಆರ್‌ಪಿ ಪಡೆದು ಟಾಪ್‌ ಐದರಲ್ಲಿ ಇದ್ದ ಈ ಸೀರಿಯಲ್‌, ಈ ವಾರ 6.7ಕ್ಕೆ ಕುಸಿತ ಕಂಡಿದೆ. ಈ ಮೂಲಕ ಈ ವಾರ ಏಳನೇ ಸ್ಥಾನದಲ್ಲಿದೆ ಭಾಗ್ಯಲಕ್ಷೀ ಧಾರಾವಾಹಿ.

ಸೀತಾ ರಾಮ

ಜೀ ಕನ್ನಡದ ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿ ಜನ್ಮ ರಹಸ್ಯದ ಸುತ್ತ ಇಡೀ ಕಥೆ ಸಾಗುತ್ತಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ, ಟಿಆರ್‌ಪಿಯಲ್ಲಿ ಕೊಂಚ ಇಳಿಕೆ ಕಂಡಿದೆ. ಕಳೆದ ವಾರ 6.8 ಟಿಆರ್‌ಪಿ ಪಡೆದಿದ್ದ ಈ ಸೀರಿಯಲ್‌ ಈ ವಾರ, 6.5 ಪಡೆದು ಎಂಟನೇ ಸ್ಥಾನದಲ್ಲಿದೆ.

ರಾಮಾಚಾರಿ

ಕಲರ್ಸ್‌ ಕನ್ನಡದ ರಾಮಾಚಾರಿ ಧಾರಾವಾಹಿ ಕಳೆದ ವಾರ 7.3 ಟಿಆರ್‌ಪಿ ಪಡೆದುಕೊಂಡು ಟಾಪ್‌ ಐದರಲ್ಲಿ ಕಲರ್ಸ್‌ ಕನ್ನಡದ ಮೂರು ಸೀರಿಯಲ್‌ಗಳು ಮಿಂಚಿದ್ದವು. ಆದರೆ, ಈ ವಾರ ರಾಮಾಚಾರಿ ಸೀರಿಯಲ್‌ 6,1 ಟಿಆರ್‌ಪಿ ಪಡೆದು 9ನೇ ಸ್ಥಾನಕ್ಕೆ ಕುಸಿತ ಕಂಡಿದೆ.

ನಿನಗಾಗಿ

ಕಲರ್ಸ್‌ ಕನ್ನಡದ ಮತ್ತೊಂದು ಸೀರಿಯಲ್‌ ನಿನಗಾಗಿ, ಈ ವಾರ 5.8 ಟಿಆರ್‌ಪಿ ಪಡೆದು ಟಾಪ್‌ 10ರಲ್ಲಿ ಕೊನೇ ಸ್ಥಾನದಲ್ಲಿದೆ. ಕಳೆದ ವಾರ 6.7 ಟಿಆರ್‌ಪಿ ನಿನಗಾಗಿ ಧಾರಾವಾಹಿಗೆ ಸಿಕ್ಕಿತ್ತು. ಇದೀಗ 5.8 ಟಿಆರ್‌ಪಿ ಪಡೆದು 10ಕ್ಕೆ ತೃಪ್ತಿಪಟ್ಟುಕೊಂಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ