Bigg Boss Kannada: ಫಿಟ್‌ನೆಸ್ ಫ್ರೀಕ್ ನೈಜೀರಿಯನ್ ಕನ್ನಡಿಗ ಮೈಕಲ್ ಅಜಯ್ ಕಂಡು ದಂಗಾದ ಬಿಗ್‌ಬಾಸ್ ಇತರೆ ಸ್ಪರ್ಧಿಗಳು
Oct 09, 2023 08:25 AM IST
Bigg Boss Kannada: ಫಿಟ್‌ನೆಸ್ ಫ್ರೀಕ್ ನೈಜೀರಿಯನ್ ಕನ್ನಡಿಗ ಮೈಕಲ್ ಅಜಯ್ ಕಂಡು ದಂಗಾದ ಬಿಗ್‌ಬಾಸ್ ಇತರೆ ಸ್ಪರ್ಧಿಗಳು
- Bigg Boss Kannada 10 Grand Opening: ನೈಜಿರಿಯನ್ ಕನ್ನಡಿಗ ಮೈಕಲ್ ಕನ್ನಡ ಮಾತನಾಡುವ ಮೂಲಕವೇ ಎಲ್ಲರ ಗಮನ ಸೆಳೆದು, ಈ ಸಲದ ಬಿಗ್ ಬಾಸ್ ಸೀಸನ್ 10ರಲ್ಲಿ ಪ್ರವೇಶ ಪಡೆದಿದ್ದಾರೆ.
Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 10 ಮತ್ತಷ್ಟು ವಿಶೇಷ ಎನಿಸಿಕೊಳ್ಳುತ್ತಿದೆ. ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು ಈ ಸಲದ ಶೋನಲ್ಲಿ ಸ್ಪರ್ಧಿಗಳಾಗಿದ್ದಾರೆ. ಒಟ್ಟು 17 ಮಂದಿ ಈ ಸಲದ ಬಿಗ್‌ಬಾಸ್‌ನ ಸ್ಪರ್ಧಿಗಳು. ಆ ಪೈಕಿ ಆರು ಮಂದಿಗೆ ಒಂದು ವಾರದ ಗಡುವು ನೀಡಿ ಕಳುಹಿಸಲಾಗಿದೆ. ಇದೆಲ್ಲದಕ್ಕಿಂತ ಹೆಚ್ಚು ವಿಶೇಷ ಎನಿಸಿದ್ದು ನೈಜಿರಿಯನ್ ಕನ್ನಡಿಗ ಬಿಗ್ ಬಾಸ್ ಪ್ರವೇಶ ಪಡೆದಿದ್ದು. ಮೈಕಲ್ ಅಜಯ್ ತಮ್ಮ ಲುಕ್ ಮಾತ್ರವಲ್ಲದೆ, ಅಚ್ಚ ಕನ್ನಡದಲ್ಲಿ ಮಾತನಾಡುವ ಮೂಲಕವೂ ಎಲ್ಲರ ಗಮನ ಸೆಳೆದು ಬಿಗ್ ಮನೆ ಪ್ರವೇಶಿಸಿದ್ದಾರೆ.
ಮೈಕಲ್ ಅಜಯ್ ತಮ್ಮ ಫಿಟ್‌ನೆಸ್, ಎತ್ತರದ ಮೈಕಟ್ಟಿನ ಮೂಲಕವೇ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ಸಾಬೀತುಪಡಿಸಿದ್ದಾರೆ. ಕಿಚ್ಚ ಸುದೀಪ್ ಮುಂದೆ ನಿಂತು ಯಾಕೆ ಬಿಗ್‌ಬಾಸ್‌ಗೆ ಎಂದು ಅವರನ್ನು ಕೇಳಿದಾಗ ಅಷ್ಟೇ ಚೆನ್ನಾಗಿಯೇ ಕನ್ನಡದಲ್ಲಿ ಉತ್ತರ ನೀಡಿದ್ದಾರೆ. ಕೂಲ್ ಹೇರ್‌ಸ್ಟೈಲ್‌ನಿಂದಲೇ ಗಮನಸೆಳೆದ ಮೈಕಲ್ ಅಜಯ್‌ಗೆ ರಿಯಾಲಿಟಿ ಶೋದಲ್ಲಿ ಪಾಲ್ಗೊಳ್ಳುವ ಆಸೆ. ನಾಲ್ಕು ವರ್ಷಗಳಿಂದ ಹೇರ್ ಸ್ಟೈಲ್ ಬೆಳೆಸುತ್ತಿರುವ ಅಜಯ್, ಸ್ನಾನಕ್ಕೆ ನಿಂತರೆ ತಲೆಕೂದಲು ನೆನೆಯಲಿಕ್ಕೆ ಅರ್ಧಗಂಟೆ ಬೇಕಂತೆ!
‘ನೋಡೊದಕ್ಕೆ ವಿಲನ್ ಥರ ಇದ್ದೀನಿ. ಆದ್ರೆ ನಾನು ಒಳ್ಳೆ ಹುಡುಗ’ ಎಂದು ನಗುವ ಅಜಯ್, ‘ಬರೀ ಪಾಸಿಟಿವ್ ಆಗಿದ್ರೆ ಚೆನ್ನಾಗಿರಲ್ಲ, ಸ್ವಲ್ಪ ನೆಗೆಟಿವ್ ಕೂಡ ಇರಬೇಕು’ ಎನ್ನುತ್ತಾರೆ. ಬಾಸ್ಕೆಟ್ ಬಾಲ್‌ನಿಂದ ಫಿಟ್‌ನೆಸ್ ಹವ್ಯಾಸಕ್ಕೆ, ಅಲ್ಲಿಂದ ಮಾಡಲಿಂಗ್ ಕ್ಷೇತ್ರಕ್ಕೆ ಜಿಗಿದಿರುವ ಅಜಯ್, ಈಗ ಬರ್ಗರ್ ಶಾಪ್ ನಡೆಸುತ್ತಿದ್ದಾರೆ. ‘ಕನ್ನಡ ಇಂಡಸ್ಟ್ರಿಯಲ್ಲಿ ವಿಲನ್ ರೋಲ್ ಸಿಕ್ತು ಅಂದ್ರೆ ಚೆನ್ನಾಗಿರತ್ತೆ’ ಎನ್ನುವ ಅಜಯ್ ಬದುಕನ್ನು ಎಂದಿಗೂ ದೂಷಿಸುವುದಿಲ್ಲ ಎನ್ನುತ್ತಾರೆ.
‘ಹೀರೊ ನೋಡಿದ್ರೆ ಅನ್‌ರಿಯಲಿಸ್ಟಿಕ್ ಫೀಲ್ ಬರುತ್ತದೆ; ವಿಲನ್ ರೋಲ್ ರಿಯಲಿಸ್ಟಿಕ್ ಆಗಿರುತ್ತದೆ’ ಎಂಬುದು ಅಜಯ್ ಮಾತು. ‘ನನ್ನನ್ನು ಮನೆಯೊಳಗೆ ಕಳಿಸಿದರೆ ಜನರಿಗೆ ನನ್ನಿಂದ ಒಂದು ಯೂನಿಕ್ ಕನ್ನಡ ಸಿಗುತ್ತದೆ’ ಎಂಬ ಅಜಯ್ ಮನವಿಗೆ 81% ವೋಟ್ ಮಾಡಿ ಮನೆಯೊಳಗೆ ಕಳಿಸಿದ್ದಾರೆ. ಇತ್ತ ಅಜಯ್ ಮನೆಗೆ ಎಂಟ್ರಿಯಾಗ್ತಿದ್ದಂತೆ, ಅಲ್ಲಿನ ಉಳಿದ ಸ್ಪರ್ಧಿಗಳು ಕೊಂಚ ದಂಗಾಗಿದ್ದಾರೆ. ಯಾರ್ ಗುರು ಇವನು, ಸ್ಪೋರ್ಟ್ಸ್‌ಮನ್ ಇರಬಹುದಾ? ಎಂದು ಹುಬ್ಬೇರಿಸಿದ್ದಾರೆ. ಇನ್ನು ಈ ಸಲದ ವಿಶೇಷ ಏನೆಂದರೆ ಈ ಸಲದ ಬಿಗ್‌ಬಾಸ್ ಅನ್ನು 'JioCinemaದಲ್ಲಿ 24 ಗಂಟೆ ಉಚಿತವಾಗಿ ವೀಕ್ಷಣೆ ಮಾಡಬಹುದು.