logo
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ಬಿಗ್‌ಬಾಸ್‌ ಕನ್ನಡ ಸೀಸನ್‌ 10ಕ್ಕೆ ದಾವಣಗೆರೆ ಎಕ್ಸ್‌ಪ್ರೆಸ್‌ ಎಂಟ್ರಿ; ಕ್ರಿಕೆಟಿಗ ವಿನಯ್‌ ಕುಮಾರ್‌ ಕುರಿತು ವದಂತಿ

Bigg Boss Kannada: ಬಿಗ್‌ಬಾಸ್‌ ಕನ್ನಡ ಸೀಸನ್‌ 10ಕ್ಕೆ ದಾವಣಗೆರೆ ಎಕ್ಸ್‌ಪ್ರೆಸ್‌ ಎಂಟ್ರಿ; ಕ್ರಿಕೆಟಿಗ ವಿನಯ್‌ ಕುಮಾರ್‌ ಕುರಿತು ವದಂತಿ

Praveen Chandra B HT Kannada

Oct 02, 2023 07:23 AM IST

google News

Bigg Boss Kannada: ಬಿಗ್‌ಬಾಸ್‌ ಕನ್ನಡ ಸೀಸನ್‌ 10ಕ್ಕೆ ದಾವಣಗೆರೆ ಎಕ್ಸ್‌ಪ್ರೆಸ್‌ ಎಂಟ್ರಿ ಕುರಿತು ವದಂತಿ

    • Bigg Boss Kannada Season 10 Contestants: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಅಕ್ಟೋಬರ್‌ 8ರಿಂದ ಆರಂಭವಾಗಲಿದೆ.  ಈ ಬಾರಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎಂಬ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ದಾವಣಗೆರೆ ಎಕ್ಸ್‌ಪ್ರೆಸ್‌ ಎಂದೇ ಖ್ಯಾತಿ ಪಡೆದ ಕ್ರಿಕೆಟ್‌ ಆಟಗಾರ ವಿನಯ್‌ ಕುಮಾರ್‌ ಬಿಗ್‌ಬಾಸ್‌ ಕನ್ನಡಕ್ಕೆ ಎಂಟ್ರಿ ನೀಡುವ ಕುರಿತು ವದಂತಿಗಳಿವೆ.
Bigg Boss Kannada: ಬಿಗ್‌ಬಾಸ್‌ ಕನ್ನಡ ಸೀಸನ್‌ 10ಕ್ಕೆ ದಾವಣಗೆರೆ ಎಕ್ಸ್‌ಪ್ರೆಸ್‌ ಎಂಟ್ರಿ ಕುರಿತು ವದಂತಿ
Bigg Boss Kannada: ಬಿಗ್‌ಬಾಸ್‌ ಕನ್ನಡ ಸೀಸನ್‌ 10ಕ್ಕೆ ದಾವಣಗೆರೆ ಎಕ್ಸ್‌ಪ್ರೆಸ್‌ ಎಂಟ್ರಿ ಕುರಿತು ವದಂತಿ

ಬೆಂಗಳೂರು: ಕಲರ್ಸ್‌ ಕನ್ನಡ ವಾಹನಿಯಲ್ಲಿ ಅಕ್ಟೋಬರ್‌ 8ರಿಂದ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಆರಂಭವಾಗಲಿದ್ದು, ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸುವ ಸ್ಪರ್ಧಿಗಳು ಯಾರು ಎಂದು ಚರ್ಚೆಗಳು ಆರಂಭವಾಗಿವೆ. ಆದರೆ, ಈ ಕುರಿತು ಕಲರ್ಸ್‌ ಕನ್ನಡ ರಹಸ್ಯ ಕಾಪಾಡಲು ಪ್ರಯತ್ನಿಸುತ್ತಿದೆ. ಬಿಗ್‌ಬಾಸ್‌ನಲ್ಲಿ ಯಾರು ಸ್ಪರ್ಧಿಸಲಿದ್ದಾರೆ, ಬಿಗ್‌ಬಾಸ್‌ ಮನೆಯೊಳಗೆ ಯಾರು ಪ್ರವೇಶಿಸಲಿದ್ದಾರೆ ಎಂಬ ಮಾಹಿತಿ ಕಾರ್ಯಕ್ರಮ ಆರಂಭವಾದ ಬಳಿಕವೇ ತಿಳಿಯಲಿದೆ. ಆದರೆ, ಕೆಲವೊಮ್ಮೆ ಬಿಗ್‌ಬಾಸ್‌ ಮನೆಯೊಳಗೆ ಹೋಗುವವರ ಕುರಿತು ವದಂತಿಗಳು, ಊಹಾಪೋಹಾಗಳು ಹೆಚ್ಚಾಗುತ್ತವೆ.

ಕೆಲವು ವರದಿಗಳ ಪ್ರಕಾರ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ದಾವಣಗೆರೆ ಎಕ್ಸ್‌ಪ್ರೆಸ್‌ ಖ್ಯಾತಿಯ ಕ್ರಿಕೆಟಿಗ ವಿನಯ್‌ ಕುಮಾರ್‌ ಸ್ಪರ್ಧಿಸಲಿದ್ದಾರಂತೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 9ಕ್ಕೂ ಇವರ ಎಂಟ್ರಿ ಕುರಿತು ಸುದ್ದಿಯಾಗಿತ್ತು. ಆದರೆ, ಅವರು ಬಿಗ್‌ಬಾಸ್‌ ಮನೆ ಪ್ರವೇಶಿಸಿರಲಿಲ್ಲ. ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗಿ ವಿನಯ್‌ ಕುಮಾರ್‌ ಈ ಬಾರಿ ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕುರಿತು ಕಲರ್ಸ್‌ ಕನ್ನಡ ತುಟಿಪಿಟಿಕ್‌ ಎಂದಿಲ್ಲ.

ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಆರಂಭವಾಗಲು ಒಂದು ವಾರವಷ್ಟೇ ಉಳಿದಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಯಾವೆಲ್ಲ ಪ್ರತಿಭೆಗಳು ಈ ರಿಯಾಲಿಟಿ ಶೋಗೆ ಎಂಟ್ರಿ ನೀಡಲಿದ್ದಾರೆ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಸಾಕಷ್ಟು ಹೆಸರುಗಳನ್ನು ಜನರು ಸೂಚಿಸುತ್ತಿದ್ದಾರೆ ಕೂಡ. ಆ ಪೈಕಿ ಖ್ಯಾತ ಯೂಟ್ಯೂಬರ್‌ ಡಾ.ಬ್ರೋ ಗಗನ್‌ ಶ್ರೀನಿವಾಸ್‌ ಈ ಸಲದ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿ ಎಂದು ಆನ್‌ಲೈನ್‌ನಲ್ಲಿ ಬೇಡಿಕೆ ಆರಂಭವಾಗಿದೆ. ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಭೂಮಿಕಾ ಬಸವರಾಜ್‌ ಕೂಡ ಬಿಗ್‌ಬಾಸ್‌ನಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ.

ಬಿಗ್‌ಬಾಸ್‌ ಕನ್ನಡದಲ್ಲಿ ಎಕ್ಸ್‌ಕ್ಯೂಸ್‌ ಮಿ ನಟ ಸುನೀಲ್‌, ಸೋಷಿಯಲ್‌ ಮೀಡಿಯಾದಲ್ಲಿ ಗುಲ್ಲೆಬ್ಬಿಸಿರುವ ವರ್ಷಾ ಕಾವೇರಿ ಮತ್ತು ವರುಣ್‌ ಆರಾಧ್ಯ, ಕನ್ನಡತಿ ಸೀರಿಯಲ್‌ನ ರಂಜನಿ ರಾಘವನ್‌ ಹೆಸರೂ ಕೇಳಿಬರುತ್ತಿದೆ. ಗಟ್ಟಿಮೇಳ ಸೀರಿಯಲ್‌ ಖ್ಯಾತಿಯ ಅಭಿಷೇಕ್‌ ದಾಸ್‌, ಕನ್ನಡ, ತೆಲುಗು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ದಿಯಾ ಸಿನಿಮಾದ ನಟ ದೀಕ್ಷಿತ್‌ ಶೆಟ್ಟಿ, ನಾಗಿಣಿ ಸೀರಿಯಲ್‌ನ ನಮ್ರತಾ ಗೌಡ, ಹಳ್ಳಿ ಹೆಣ್ಣುಮಗಳು ಅಕ್ಕ ಅನು , ನಟಿ ರೇಖಾ ವೇದವ್ಯಾಸ, ಕಿರುತೆರೆ ನಟ ರಾಜೇಶ್‌ ಧ್ರುವ, ಶನಿ ಸೀರಿಯಲ್‌ ನಟ ಸುನೀಲ್‌ ಮುಂತಾದವರ ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕ್ರಿಕೆಟಿಗ ವಿನಯ್ ಕುಮಾರ್ ಬಗ್ಗೆ

ದಾವಣಗೆರೆ ಎಕ್ಸ್‌ಪ್ರೆಸ್‌ ಎಂದೇ ಖ್ಯಾತಿ ಪಡೆದ ವಿನಯ್‌ ಕುಮಾರ್‌ ಅವರು ಭಾರತ ತಂಡದ ಮಾಜಿ ವೇಗದ ಬೌಲರ್‌. ವೇಗದ ಬೌಲಿಂಗ್‌ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದರು. ಭಾರತ ತಂಡಕ್ಕೆ ಹಲವು ಬಾರಿ ಗೆಲುವು ತಂದುಕೊಡಲು ಇವರು ನೆರವಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಮುಖವಾಗಿ ಸಾಧನೆ ಮಾಡಿದ್ದಾರೆ. ವಿನಯ್‌ ಕುಮಾರ್‌ ಅವರು 1984ರಲ್ಲಿ ದಾವಣಗೆರೆಯಲ್ಲಿ ಜನಿಸಿದ್ದರು. ಕರ್ನಾಟಕ ಹಿರಿಯರ ತಂಡಕ್ಕೆ ಪ್ರವೇಶಿಸಿದ ಇವರು ಬಳಿಕ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದರು.

ಬಿಗ್‌ಬಾಸ್‌ ಕನ್ನಡ ಸೀಸನ್‌ 1ರಿಂದ 9ರವರೆಗೆ ಗೆದ್ದವರ ಪಟ್ಟಿ

ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಆರಂಭವಾಗಲು ದಿನಗಣನೆ ಆರಂಭವಾಗಿದೆ. ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್‌ನ ಈ ಹಿಂದಿನ ಸೀಸನ್‌ಗಳಲ್ಲಿ ಗೆದ್ದವರು, ರನ್ನರ್‌ ಆಪ್‌ ಆದವರು ಯಾರು ಎಂದು ಕೆಲವರಿಗೆ ನೆನಪಿರಬಹುದು. ಇನ್ನು ಕೆಲವರು ಯಾರು ಯಾವ ಸೀಸನ್‌ನಲ್ಲಿ ಗೆದ್ದಿದ್ದಾರೆ ಎನ್ನುವ ಕುರಿತು ಗೊಂದಲ ಇರಬಹುದು. ಒಳ್ಳೆ ಹುಡುಗ ಪ್ರಥಮ್‌ ಸೇರಿದಂತೆ ಕೆಲವರ ಹೆಸರು ಮಾತ್ರ ನೆನಪಿಗೆ ಬರಬಹುದು. ಬಿಗ್‌ಬಾಸ್‌ ಕನ್ನಡದಲ್ಲಿ ಈ ಹಿಂದೆ ಗೆದ್ದವರು ಯಾರು ಎಂಬ ವಿವರ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ