Brundavana Serial: ಭಾರ್ಗವಿ ಚಕ್ರವ್ಯೂಹದೊಳಗೆ ಆಕಾಶ್, ಪುಷ್ಪಾ ಮನದಲ್ಲಿ ಅನುಮಾನದ ಬೀಜ ಬಿತ್ತಿದ್ರೂ ಸತ್ಯಮೂರ್ತಿ
May 22, 2024 08:39 AM IST
ಭಾರ್ಗವಿ ಚಕ್ರವ್ಯೂಹದೊಳಗೆ ಆಕಾಶ್, ಪುಷ್ಪಾ ಮನದಲ್ಲಿ ಅನುಮಾನದ ಬೀಜ ಬಿತ್ತಿದ್ರೂ ಸತ್ಯಮೂರ್ತಿ
- Brindavana Kannada Serial Today Episode May 21st: ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಮನೆಯಿಂದ ಹೊರ ಹೊರಟ ಆಕಾಶ್ ಸತ್ಯಮೂರ್ತಿ ಕಣ್ಣಿಗೆ ಬೀಳುತ್ತಾಳೆ. ಆಕಾಶ್ ಸಹನಾ ಮನೆಯಲ್ಲಿ ಡಿನ್ನರ್‌ಗೆ ಹೋಗಿದ್ದರೆ, ಸತ್ಯಮೂರ್ತಿ ಪುಷ್ಪಾ ಎದುರು ಇರುವ ಸತ್ಯವನ್ನೆಲ್ಲಾ ಹೇಳಿ ಅನುಮಾನದ ಬೇರು ಹುಟ್ಟುಹಾಕುತ್ತಾರೆ. ರಹಸ್ಯವಾಗಿದೆ ಭಾರ್ಗವಿ ಷಡ್ಯಂತ್ರ.
ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 21) ಸಂಚಿಕೆಯಲ್ಲಿ ಪುಷ್ಪಾಗೆ ಮುತ್ತು ಕೊಡುವುದನ್ನು ನೋಡಿದ್ದ ಮಕ್ಕಳನ್ನು ಹೇಗೋ ಸಂಭಾಳಿಸುತ್ತಾನೆ, ಆದರೆ ಆ ಹೊತ್ತಿಗೆ ಅಡುಗೆಮನೆಗೆ ಬರುವ ಸತ್ಯಮೂರ್ತಿ ಬಳಿ ಇರುವ ಸತ್ಯವನ್ನು ಹೇಳುತ್ತಾನೆ ಪುಟ್ಟ ಬಾಲಕ. ಆಕಾಶ್-ಪುಷ್ಪಾಗೆ ಬುದ್ಧಿವಾದ ಹೇಳುವ ಸತ್ಯಮೂರ್ತಿ ʼಮನೆಯಲ್ಲಿ ಈ ಥರ ಎಲ್ಲಾ ಮಾಡಬೇಡಿ, ನಿಮಗೆಂದೇ ರೂಮ್ ಇದೆ. ರೂಮ್ ಲಾಕ್ ಮಾಡಿಕೊಂಡು ಏನಾದ್ರೂ ಮಾಡಿʼ ಎಂದು ಗದರುತ್ತಾನೆ. ಆ ಹೊತ್ತಿಗೆ ʼನನಗೆ ಹೊರಗಡೆ ಅರ್ಜೆಂಟ್ ಸ್ವಲ್ಪ ಕೆಲಸ ಇದೆ. ನಾನು ಹೋಗ್ತೇನೆʼ ಎಂದು ಹೇಳಿ ಹೊರಡುತ್ತಾನೆ ಆಕಾಶ್. ಅವನು ಗಡಿಬಿಡಿಯಲ್ಲಿ ಹೊರಟಿದ್ದು ನೋಡಿ ಸತ್ಯಮೂರ್ತಿಗಳ ಅನುಮಾನ ಹೆಚ್ಚಾಗುತ್ತದೆ.
ದ್ವೇಷದ ಕಿಡಿ ಕಾರುತ್ತಿರುವ ಭಾರ್ಗವಿ
ಸಹನಾ ಆಕಾಶ್‌ಗಾಗಿ ಬಗೆ ಬಗೆ ಖಾದ್ಯಗಳನ್ನು ತಯಾರಿಸುತ್ತಿರುತ್ತಾಳೆ. ಅಲ್ಲಿಗೆ ಬರುವ ಭಾಸ್ಕರ ಅವಳ ಅಡುಗೆಕಲೆಯನ್ನು ಕಂಡು ಮೆಚ್ಚಿಕೊಳ್ಳುತ್ತಾನೆ. ಭಾರ್ಗವಿ ಬಳಿ ಬಂದಾಗ ಅಲ್ಲ ಅಕ್ಕಾ, ಬೃಂದಾವನದ ನೆಮ್ಮದಿ ಕಸಿಯಲು ಹೊರಟ ನೀನು ಸಹನಾಳ ಮನಸ್ಸಿಗೆ ನೋವು ಮಾಡಲು ಹೊರಟಿರುವ ಎಂಬುದು ನಿಮಗೆ ಅರಿವಾಗ್ತಾ ಇಲ್ವಾ, ನಾಳೆ ಆಕಾಶ್‌ಗೆ ಮದುವೆಯಾಗಿದೆ ಎಂದು ಅರಿತರೆ ಅವಳು ಎಷ್ಟು ನೋವು ಪಡಬಹುದು. ಇದರಿಂದ ಅವಳ ಭವಿಷ್ಯ ಏನಾಗಬಹುದು ಎಂದು ನೀವು ಯೋಚನೆ ಮಾಡಿದ್ಯಾ? ಎಂದು ಪ್ರಶ್ನಿಸುತ್ತಾನೆ. ಆಗ ಭಾರ್ಗವಿ ಆಕಾಶ್ ಈಗಾಗಲೇ ನನ್ನ ದಾಳದಲ್ಲಿ ಬಿದ್ದಿದ್ದಾನೆ, ನಾನು ಸದ್ಯದಲ್ಲೇ ಸಹನಾ-ಆಕಾಶ್ ಮದುವೆ ಮಾಡ್ತೀನಿ. ಆಕಾಶ್ ಸುಳ್ಳಿನ ಮೇಲೆ ಸುಳ್ಳು ಹೇಳಿ ಹೇಳಿ ಮನೆಯವರನ್ನು ನಂಬಿಸುತ್ತಿದ್ದಾನೆ. ಸುಳ್ಳಿನ ಕೋಟೆಯಲ್ಲಿ ಆತ ಬಿದ್ದು ಒದ್ದಾಡುತ್ತಿದ್ದಾನೆ. ನನಗೆ ಬೇಕಿರುವುದು ಇದೇ. ನಾನು ಆಕಾಶ್‌ನನ್ನು ಬೃಂದಾವನದಿಂದ ಶಾಶ್ವತವಾಗಿ ದೂರ ಮಾಡ್ತೀನಿʼ ಎಂದು ದ್ವೇಷದ ಕಿಡಿ ಕಾರುತ್ತಾಳೆ.
ಸಹನಾ ಮೇಲೆ ಕನಿಕರ ತೋರುವ ಸುನಾಮಿ
ಸಹನಾ ಮನೆಗೆ ಹೊರಟ ಆಕಾಶ್ ಸುನಾಮಿಯನ್ನು ಪಿಕ್ ಮಾಡಲು ಬರುತ್ತಾನೆ. ಮೊದಲು ಸುನಾಮಿಗೆ ಬಯ್ಯುವ ಆಕಾಶ್ ಎಲ್ಲವೂ ನಿನ್ನಂದಲೇ ಆಗಿದ್ದು, ನೀನು ಇಲ್ದೆ ಇರೋದೆಲ್ಲಾ ಹೇಳಿನೇ ಹೀಗಾಗಿದ್ದು ಎಂದು ಬಯ್ಯುತ್ತಾನೆ. ಆಗ ಸುನಾಮಿ ಆಗಿದ್ದರ ಬಗ್ಗೆ ಮಾತನಾಡಿ ಈಗ ಪ್ರಯೋಜನ ಇಲ್ಲ. ನಾವು ಸ್ನೇಹಿತರಾಗಿ ಸಹನಾಗೆ ಸಹಾಯ ಮಾಡ್ತಾ ಇದೀವಿ. ನಾನು ಮಾಡುವ ಸಹಾಯ ಕೇವಲ 6 ತಿಂಗಳಿನದ್ದು. ಅದರಲ್ಲಿ ಈಗಾಗಲೇ 4 ದಿನಗಳು ಕಳೆದು ಹೋಗಿದೆ. ಆಮೇಲೆ ಸಹಾಯ ಮಾಡ್ತೀವಿ ಅಂದ್ರು ಅವಳು ಇರೊಲ್ಲ ಎಂದು ಆಕಾಶ್ ಮನವೊಲಿಸುತ್ತಾನೆ ಸುನಾಮಿ. ಸತ್ಯದ ಗಂಧಗಾಳಿಯು ಗೊತ್ತಿಲ್ಲದ ಸುನಾಮಿ ಕೂಡ ಆಕಾಶ್ ಹೇಳಿದ್ದನ್ನೇ ನಂಬಿಕೊಂಡು ಅದನ್ನೇ ಸತ್ಯ ಎಂದು ಭಾವಿಸಿದ್ದಾನೆ.
ಪುಷ್ಪಾ ಮನದಲ್ಲಿ ಅನುಮಾನದ ಬೀಜ ಬಿತ್ತಿದ ಸತ್ಯಮೂರ್ತಿ
ಆಕಾಶ್ ಹೊರ ಹೋಗಿದ್ದೇ ತಡ ಸತ್ಯಮೂರ್ತಿಗಳ ಮನದಲ್ಲಿ ಅನುಮಾನ ಮೂಡಲು ಆರಂಭವಾಗುತ್ತದೆ. ಅಲ್ಲೇ ಇದ್ದ ಪುಷ್ಪಾಳ ಬಳಿ ನಿನ್ನ ಗಂಡ ಎಲ್ಲಿಗೆ ಹೋಗಿದ್ದಾನೆ ಎಂದು ನಿನ್ನ ಬಳಿ ಹೇಳಿದ್ದಾನಾ ಎಂದು ಪ್ರಶ್ನೆ ಮಾಡುತ್ತಾರೆ. ಪುಷ್ಪಾ ಇಲ್ಲ ಎಂದಾಗ ನೀನು ಅದನ್ನೆಲ್ಲಾ ಕೇಳಬೇಕು ಅಲ್ವಾ? ಆದರೆ ನಿನ್ನ ಗಂಡ ಇತ್ತೀಚೆಗೆ ದಾರಿ ತಪ್ಪಿರುವುದು ನಿಜ. ಬೇರೆ ಹುಡುಗಿಯ ಸಹವಾಸ ಮಾಡಿರುವುದು ನಿಜ. ಆವತ್ತು ನಾನು ಬೈಕ್‌ನಲ್ಲಿ ಯಾವುದೋ ಹುಡುಗಿ ಜೊತೆ ಹೋಗಿದ್ದನ್ನು ಕಂಡಿದ್ದು ನಿಜ. ನೀನು ನನ್ನ ಮಗಳ ಸಮಾನ. ನನ್ನ ಮಗಳ ಜೀವನ ಕಣ್ಣೆದುರೇ ಹಾಳಾಗುತ್ತಿರುವುದನ್ನು ನನಗೆ ನೋಡಲು ಸಾಧ್ಯವಾಗುತ್ತಿಲ್ಲ. ಆದರೆ ಖಂಡಿತ ನಾನು ನಿನ್ನ ಜೀವನ ಸರಿ ಮಾಡೇ ಮಾಡ್ತೀನಿʼ ಎಂದು ಪಠ ತೊಟ್ಟಂತೆ ಹೇಳುತ್ತಾರೆ. ಸತ್ಯಮೂರ್ತಿಗಳು ಹೇಳಿದ ಮಾತಿನಿಂದ ಪುಷ್ಪಾ ಮನದಲ್ಲಿ ಅನುಮಾನದ ಹುತ್ತ ಬೆಳೆಯುವಂತೆ ಮಾಡುತ್ತದೆ. ಕೊನೆಯಲ್ಲಿ ಸತ್ಯಮೂರ್ತಿ ನೀನು ಆಕಾಶ್‌ಗೆ ಊಟಕ್ಕೆ ಕಾಯಬೇಡ ಅವನು ಇವತ್ತು ಊಟಕ್ಕೆ ಬರೋಲ್ಲ ಎಂದು ಹೇಳಿ ಅಲ್ಲಿಂದ ಹೊರಡುತ್ತಾರೆ.
ಆಕಾಶ್ ಭಾರ್ಗವಿಯ ಚಕ್ರವ್ಯೂಹದೊಳಗೆ ತಾನು ಸಿಲುಕಿರುವುದಲ್ಲದೇ ಸುನಾಮಿಯನ್ನೂ ಸಿಲುಕಿಸಿದ್ದಾನೆ. ಸಹನಾಗೆ ಸತ್ಯ ಗೊತ್ತಿಲ್ಲದೇ ಶುದ್ಧ ಮನಸ್ಸಿನಿಂದ ಪ್ರೀತಿ ಮಾಡುತ್ತಿದ್ದಾಳೆ. ಆ ಕಡೆ ಪುಷ್ಪಾ ಮನದಲ್ಲಿ ಅನುಮಾನ ಶುರುವಾಗಿದೆ. ಸತ್ಯಮೂರ್ತಿ ಆಕಾಶ್ ಬಣ್ಣ ಬಯಲು ಮಾಡ್ತೀನಿ ಅಂತಿದಾರೆ. ಮುಂದೆಲ್ಲಿಗೆ ಮುಟ್ಟುವುದು ಈ ಕಥೆ...