logo
ಕನ್ನಡ ಸುದ್ದಿ  /  ಮನರಂಜನೆ  /  Aase Kannada Serial: ಕರುನಾಡ ಮನೆ ಮಂದಿಗೆ 'ಆಸೆ' ತೋರಿಸಲು ಬಂದ ರಮೇಶ್ ಅರವಿಂದ್; ಸ್ಟಾರ್‌ ಸುವರ್ಣದಲ್ಲಿ ಹೊಸ ಧಾರಾವಾಹಿ

Aase Kannada Serial: ಕರುನಾಡ ಮನೆ ಮಂದಿಗೆ 'ಆಸೆ' ತೋರಿಸಲು ಬಂದ ರಮೇಶ್ ಅರವಿಂದ್; ಸ್ಟಾರ್‌ ಸುವರ್ಣದಲ್ಲಿ ಹೊಸ ಧಾರಾವಾಹಿ

Dec 06, 2023 03:24 PM IST

google News

Aase Serial: ಕರುನಾಡ ಮನೆ ಮಂದಿಗೆ 'ಆಸೆ' ತೋರಿಸಲು ಬಂದ ರಮೇಶ್ ಅರವಿಂದ್; ಸ್ಟಾರ್‌ ಸುವರ್ಣದಲ್ಲಿ ಹೊಸ ಧಾರಾವಾಹಿ

    • ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಇದೇ ಡಿ 11ರಿಂದ ಆಸೆ ಹೆಸರಿನ ಧಾರಾವಾಹಿ ಶುರುವಾಗಲಿದೆ. ನಟ ರಮೇಶ್‌ ಅರವಿಂದ್‌ ಈ ಸೀರಿಯಲ್‌ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 
Aase Serial: ಕರುನಾಡ ಮನೆ ಮಂದಿಗೆ 'ಆಸೆ' ತೋರಿಸಲು ಬಂದ ರಮೇಶ್ ಅರವಿಂದ್; ಸ್ಟಾರ್‌ ಸುವರ್ಣದಲ್ಲಿ ಹೊಸ ಧಾರಾವಾಹಿ
Aase Serial: ಕರುನಾಡ ಮನೆ ಮಂದಿಗೆ 'ಆಸೆ' ತೋರಿಸಲು ಬಂದ ರಮೇಶ್ ಅರವಿಂದ್; ಸ್ಟಾರ್‌ ಸುವರ್ಣದಲ್ಲಿ ಹೊಸ ಧಾರಾವಾಹಿ

Aase Kannada Serial: ನಟ ರಮೇಶ್ ಅರವಿಂದ್ ರವರು ನಿರ್ಮಿಸುತ್ತಿರುವ ಸಾಮಾನ್ಯ ಜನರ ಅಸಾಮಾನ್ಯ ಕಥೆಯೇ ಆಸೆ. ಚಿಕ್ಕವನಿದ್ದಾಗ ಗೊತ್ತಿಲ್ಲದೇ ನಡೆದ ಘಟನೆಯಿಂದಾಗಿ ತಾಯಿಯಿಂದ ಪ್ರತಿದಿನ, ಪ್ರತಿಕ್ಷಣ ದೂಷಿಸಲ್ಪಡುತ್ತಿರುವ ಕಥಾನಾಯಕ ಸೂರ್ಯ, ಈತನ ಮಾತು ಸ್ವಲ್ಪ ಒರಟು ಆದರೆ ಮೃದುವಾದ ಮನಸು. ಜೀವನದಲ್ಲಿ ನೊಂದು- ಬೆಂದು ಆಕಾಂಕ್ಷೆಯನ್ನೇ ಕಳೆದುಕೊಂಡಿರುವ ಸೂರ್ಯ ತಂದೆಯ ಮುದ್ದಿನ ಮಗ.

ಮತ್ತೊಂದು ಕಡೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಮುಖದಲ್ಲಿ ಸದಾ ಮಂದಹಾಸವನ್ನು ಹೊಂದಿರೋ ಮೀನಾ ಈ ಕತೆಯ ನಾಯಕಿ. ಮನೆಯ ಕಷ್ಟಕ್ಕಾಗಿ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಹೆತ್ತವರಿಗೆ ಸಹಕರಿಸುತ್ತಿರೋ ಮುಗ್ದ ಮನಸಿನ ಕಣ್ಮಣಿ. ತಮ್ಮ-ತಂಗಿಯರ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವ ತಾಯಿಯ ಎರಡನೇ ರೂಪ ಈ ಮೀನಾ .

.ಒಂದುಕಡೆ ಜೀವನದಲ್ಲಿ ಗುರಿ, ಆಸೆಯೇ ಇಲ್ಲದಿರೋ ಹುಡುಗ ಸೂರ್ಯ, ಇನ್ನೊಂದ್ಕಡೆ ಮನೆಯವರ ಖುಷಿಗಾಗಿ ತುಂಬಾ ಆಸೆಯನ್ನು ಇಟ್ಟುಕೊಂಡಿರೋ ಮೀನಾ. ತದ್ವಿರುದ್ದವಾಗಿರುವ ಮೀನಾ ಹಾಗೂ ಸೂರ್ಯನ ಬದುಕು ಎದುರು ಬದುರಾದ್ರೆ ಮುಂದೇನಾಗುತ್ತೆ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಈ ಧಾರಾವಾಹಿಯಲ್ಲಿ ನಟ, ರಂಗಭೂಮಿ ಕಲಾವಿದರಾದ ಮಂಡ್ಯ ರಮೇಶ್ ಅವರು ಮುಖ್ಯ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಜೊತೆಗೆ ನಿನಾದ್, ಪ್ರಿಯಾಂಕಾ, ಸ್ನೇಹಾ, ನಾಗೇಂದ್ರ ಶಾ, ಪ್ರಗತಿ, ನಂದೀಶ್, ಲಕ್ಷ್ಮಿ ಚಂದ್ರಶೇಖರ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ಕಲಾವಿದರು ಈ ಅಭಿನಯಿಸುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಶೀರ್ಷಿಕೆ ಗೀತೆ ನೋಡುಗರ ಮನಗೆದ್ದು ಪ್ರಶಂಸೆಗೆ ಪಾತ್ರವಾಗಿದೆ.

ಇದೇ ಸೋಮವಾರದಿಂದ ರಾತ್ರಿ 7.30ಕ್ಕೆ ಸಾಮಾನ್ಯ ಜನರ ಅಸಾಮಾನ್ಯ ಕಥೆ ಆಸೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇತ್ತ 'ಕಾವೇರಿ ಕನ್ನಡ ಮೀಡಿಯಂ' ಸೀರಿಯಲ್‌ ಬದಲಾದ ಸಮಯದಲ್ಲಿ ಅಂದರೆ, ಸೋಮವಾರದಿಂದ ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ