logo
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ಮುರಾರಿಗೆ ಕಾಟ ಕೊಟ್ಟ ಹುಡುಗರು; ಮಗಳನ್ನಲ್ಲ ಈಗ ಮಗನನ್ನು ಕಾಪಾಡಲು ಜಾನಕಿಯೇ ಬೇಕು

Ramachari Serial: ಮುರಾರಿಗೆ ಕಾಟ ಕೊಟ್ಟ ಹುಡುಗರು; ಮಗಳನ್ನಲ್ಲ ಈಗ ಮಗನನ್ನು ಕಾಪಾಡಲು ಜಾನಕಿಯೇ ಬೇಕು

Suma Gaonkar HT Kannada

Nov 19, 2024 11:30 AM IST

google News

ಮುರಾರಿಗೆ ಕಾಟ ಕೊಟ್ಟ ಹುಡುಗರು ಪಕ್ಕದಲ್ಲೇ ಇದ್ದರೂ ರಾಮಾಚಾರಿ ಅಸಹಾಯಕ

    • ರಾಮಾಚಾರಿ ಧಾರಾವಾಹಿಯಲ್ಲಿ ಅಣ್ಣಾಜಿ ಮನೆಯಿಂದ ತಪ್ಪಿಸಿಕೊಂಡು ಬರಲಾಗದೇ ಚಾರು ಕುಟುಂಬವೇ ಒದ್ದಾಡುತ್ತಿದೆ. ಹೇಗಾದರೂ ಮಾಡಿ ಎಲ್ಲರನ್ನು ಸರಳವಾಗಿ ವಾಪಸ್ ಕರೆದುಕೊಂಡು ಹೋಗಬೇಕು ಎನ್ನುವುದು ರಾಮಾಚಾರಿ ಆಸೆ. 
ಮುರಾರಿಗೆ ಕಾಟ ಕೊಟ್ಟ ಹುಡುಗರು ಪಕ್ಕದಲ್ಲೇ ಇದ್ದರೂ ರಾಮಾಚಾರಿ ಅಸಹಾಯಕ
ಮುರಾರಿಗೆ ಕಾಟ ಕೊಟ್ಟ ಹುಡುಗರು ಪಕ್ಕದಲ್ಲೇ ಇದ್ದರೂ ರಾಮಾಚಾರಿ ಅಸಹಾಯಕ

ರಾಮಾಚಾರಿ ಆಸೆಯಂತೆ ಎಲ್ಲರೂ ಯಾವುದೇ ಗಲಾಟೆ ಮಾಡಿಕೊಳ್ಳದೆ ಮನೆಗೆ ಹೋಗಬೇಕು ಎಂದರೆ ಒಂದಷ್ಟು ಕಷ್ಟಗಳನ್ನು ಅನುಭವಿಸಲೇಬೇಕು. ಇಲ್ಲವಾದರೆ ಮನೆಯಲ್ಲಿ ತುಂಬಾ ದೊಡ್ಡ ಗಲಾಟೆಯಾಗಿ ಯಾರಿಗಾದರೂ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಆದರೆ ಆ ತೊಂದರೆ ಆಗಬಾರದು ಎನ್ನುವ ಕಾಳಜಿ ರಾಮಾಚಾರಿ ಹಾಗೂ ಮರುರಾರಿಯನ್ನು ತುಂಬಾ ಕಷ್ಟಕ್ಕೆ ತಳ್ಳುತ್ತಿದೆ. ಮನೆಗೆ ಒಂದಷ್ಟು ಜನ ಹುಡುಗರು ಬಂದಿದ್ದಾರೆ. ಆ ಹುಡುಗರ ನಡವಳಿಕೆ ಸರಿ ಇಲ್ಲ.

ಮುರಾರಿಯನ್ನು ನೋಡಿ ಅವನು ಹುಡುಗ ಎಂದು ತಿಳಿಯದೇ ತುಂಬಾ ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಆದರೆ ಮುರಾರಿಗೆ ಈಗ ನಾನು ಹೆಣ್ಣಲ್ಲ ಗಂಡು ಎಂದು ಅರ್ಥ ಮಾಡಿಸಲು ಸಾಧ್ಯವಿಲ್ಲ. ಯಾಕೆಂದರೆ ನಿಜ ಹೇಳಿದರೆ ಅಣ್ಣಾಜಿ ಮನೆಯಲ್ಲಿ ಯುದ್ದವೇ ನಡೆಯುತ್ತದೆ ಎನ್ನುವ ಸತ್ಯ ಅವನಿಗೆ ಗೊತ್ತಿದೆ. ಇನ್ನು ಜಾನಕಿ ಹಾಗೂ ಚಾರು ಕೂಡ ಅಲ್ಲೇ ಪಕ್ಕದಲ್ಲಿ ನಿಂತುಕೊಂಡು ಇವರ ವರ್ತನೆಯನ್ನು ನೋಡುತ್ತಾ ಇರುತ್ತಾರೆ. ಜಾನಕಿಗೆ ತುಂಬಾ ಕೋಪ ಬಂದಿದೆ, ಆದರೆ ತೋರಿಸಿಕೊಳ್ಳಲು ಆಗುತ್ತಿಲ್ಲ.

ನಂತರದಲ್ಲಿ ಜಾನಕಿ ಬೇಕು ಎಂದೆ ಅವರು ಇದ್ದಲ್ಲಿಗೆ ಬಂದು ಮಾತಾಡುತ್ತಾಳೆ. “ನೀವಿಬ್ರೂ ಇಲ್ಲಿ ಏನ್ ಮಾಡ್ತಾ ಇದೀರಾ? ಅಡುಗೆ ಮನೆಯಲ್ಲಿ ಎಷ್ಟೊಂದು ಕೆಲಸ ಇದೆ” ಎಂದು ಹೇಳುತ್ತಾಳೆ. ಅಂತು ಅಮ್ಮ ಬಂದಳು ಎಂದು ರಾಮಾಚಾರಿ ಮತ್ತು ಮರಾರಿ ಅಂದುಕೊಳ್ಳುತ್ತಾರೆ. ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಪಾರಾಗುತ್ತಾರೆ. ಹೆಣ್ಣುಮಕ್ಕಳಿಗೆ ಎಲ್ಲಿ ಹೋದರು ಇಂತವರ ಕಾಟ ಇರುತ್ತದೆ ಎಂಬುದು ಗೊತ್ತು. ಆದರೆ ಹೆಣ್ಣಿನ ವೇಷದಲ್ಲಿ ಇದ್ದಾಗಲೂ ಈ ಗಂಡಸರು ಬಿಡುವುದಿಲ್ಲ ಎಂಬುದನ್ನು ಇಲ್ಲಿ ತೋರಿಸಿದ್ದಾರೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ