logo
ಕನ್ನಡ ಸುದ್ದಿ  /  ಮನರಂಜನೆ  /  Amruthadhare Serial: ಕಣ್ಣೀರ ಕೋಡಿ ಹರಿಸಿದ ಪಾರ್ಥ ಅಪೇಕ್ಷಾ; ಜೈದೇವ್‌ ವಾಚ್‌ ಮೇಲೆ ಬಿತ್ತು ಭೂಮಿಕಾ ಕಣ್ಣು

Amruthadhare Serial: ಕಣ್ಣೀರ ಕೋಡಿ ಹರಿಸಿದ ಪಾರ್ಥ ಅಪೇಕ್ಷಾ; ಜೈದೇವ್‌ ವಾಚ್‌ ಮೇಲೆ ಬಿತ್ತು ಭೂಮಿಕಾ ಕಣ್ಣು

Praveen Chandra B HT Kannada

Feb 15, 2024 07:00 AM IST

google News

Amruthadhare Serial: ಕಣ್ಣೀರ ಕೋಡಿ ಹರಿಸಿದ ಪಾರ್ಥ ಅಪೇಕ್ಷಾ

    • Amruthadhaare TV Serial: ಅಮೃತಧಾರೆಯ ಫೆಬ್ರವರಿ 19ರ ಸಂಚಿಕೆಯಲ್ಲಿ ವ್ಯಾಲೆಂಟಿನ್‌ ದಿನದ ಮಹಾ ಸಂಚಿಕೆ ಪ್ರಸಾರ ಮಾಡಲಾಯಿತು. ಗೌತಮ್‌ಗೆ ಭೂಮಿಕಾ ಮನಬಿಚ್ಚಿ ಪ್ರಪೋಸ್‌ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪಾರ್ಥನಿಗೆ ಮದುವೆ ಹೆಣ್ಣು ಅಪೇಕ್ಷಾ ಎಂಬ ಮಹಾಸತ್ಯ ತಿಳಿಯುತ್ತದೆ.
Amruthadhare Serial: ಕಣ್ಣೀರ ಕೋಡಿ ಹರಿಸಿದ ಪಾರ್ಥ ಅಪೇಕ್ಷಾ
Amruthadhare Serial: ಕಣ್ಣೀರ ಕೋಡಿ ಹರಿಸಿದ ಪಾರ್ಥ ಅಪೇಕ್ಷಾ

ಝೀ ಕನ್ನಡದ ಅಮೃತಧಾರೆ ಧಾರಾವಾಹಿಯ ಬುಧವಾರದ ಸಂಚಿಕೆಯಲ್ಲಿ ಒಂದು ಕಡೆ ಪ್ರೇಮಿಗಳ ದಿನ ಮತ್ತೊಂದು ಕಡೆ ಪ್ರೇಮಿಗಳ ನೋವಿನ ಕಥೆ ಇತ್ತು. ವ್ಯಾಲೆಂಟಿನ್‌ ಡೇ ಮಹಾ ಸಂಚಿಕೆಯ ಆಟದ ನಡುವೆ ಪಾರ್ಥ ಆಗಮಿಸುತ್ತಾನೆ. ಪಾರ್ಥನಿಗೆ ಮದುವೆ ಹೆಣ್ಣು ಎಂದು ಗೆಸ್‌ ಮಾಡಲು ಸಾಧ್ಯವಾಗಿರುವುದಿಲ್ಲ. ಇದಾದ ಬಳಿಕ ಎಂದಿನಂತೆ ಅಮೃತಧಾರೆ ಎಪಿಸೋಡ್‌ ಆರಂಭವಾಗುತ್ತದೆ. ಗೌತಮ್‌, ಆನಂದ್‌ ಮತ್ತು ಇತರರು ಮಾತುಕತೆ ನಡೆಸುತ್ತಿರುವಾಗ ಪಾರ್ಥ ಬರುತ್ತಾನೆ. "ಹೆಣ್ಣು ಯಾರು ಗೆಸ್‌ ಮಾಡಿದ್ದೀಯಾ?" ಎಂದು ಕೇಳಿದಾಗ ಬೇಸರದ ಮುಖದಲ್ಲಿ "ಅಪೇಕ್ಷಾ" ಅನ್ನುತ್ತಾನೆ. ಇದಕ್ಕೂ ಮೊದಲೇ ಈತನಲ್ಲಿ ಗೆಸ್‌ ಮಾಡಲು ಹೇಳಲಾಗಿರುತ್ತದೆ. ಆಗ ಅಲ್ಲಿಗೆ ಜೈದೇವ್‌ ಬಂದು "ಸೂಪರ್‌ ಸೆಲೆಕ್ಷನ್‌ ಅಲ್ವ?" ಎಂದು ಕೇಳುತ್ತಾನೆ. ಬಳಿಕ ಜೈದೇವ್‌ "ನನಗೆ ಅಪೇಕ್ಷಾಳ ಬಗ್ಗೆ ಏನೂ ಫೀಲಿಂಗ್‌ ಇರಲಿಲ್ಲ. ಮಾಮ್‌ ಹೇಳಿದ ಮೇಲೆ ಆಕೆಯ ಮೇಲೆ ಪ್ರೀತಿ ಉಂಟಾಯಿತು" ಎಂದೆಲ್ಲ ಪಾರ್ಥನ ಹೊಟ್ಟೆ ಉರಿಸಲು ಜೈದೇವ್‌ ಮಾತನಾಡುತ್ತಾನೆ.

ಬಳಿಕ ಭೂಮಿಕಾ ಆಗಮಿಸುತ್ತಾಳೆ. "ಈ ಸಂಬಂಧಕ್ಕೆ ನಾವು ಒಪ್ಪಿಕೊಳ್ಳಬಹುದಾ?, ಈ ಮನೆಗೆ ಹೊಂದಿಕೆಯಾಗುತ್ತಾಳ?" ಎಂದೆಲ್ಲ ಕೇಳಿದಾಗ ಭೂಮಿಕಾಳಿಗೆ ಪಾರ್ಥ "ಓಕೆ" ಎಂದು ಹೇಳುತ್ತಾನೆ. ಇನ್ನೊಂದೆಡೆ ಶಕುಂತಲಾದೇವಿ ಮದುವೆಯ ಬ್ಯುಸಿ ಇರುತ್ತಾರೆ. ಮನೆ ಪೂರ್ತಿ ಮದುವೆಯ ವಾತಾವರಣ ಇರುತ್ತದೆ.

ಒಂದೆಡೆ ಬಾತ್‌ರೂಂನಲ್ಲಿ ಕುಳಿತು ಅಪೇಕ್ಷಾ ಅಳುತ್ತಾ ಇರುತ್ತಾಳೆ. ಕೋಣೆಯೊಳಗೆ ಕುಳಿತು ಪಾರ್ಥನೂ ಟೆನ್ಷನ್‌ ಮಾಡಿಕೊಳ್ಳುತ್ತಾ ಇರುತ್ತಾನೆ. ಈ ಸಂದರ್ಭದಲ್ಲಿ ಅಪೇಕ್ಷಾ ಕಾಲ್‌ ಮಾಡುತ್ತಾಳೆ. "ಇವಾಗ ಗೊತ್ತಾಯ್ತ, ಮನೆಯಲ್ಲಿ ಏನು ಆಗ್ತಾ ಇದೆ. ನೀವು ಇಲ್ಲದೆ ಇರುವಾಗ ನನ್ನ ಎಂಗೇಜ್‌ಮೆಂಟ್‌ ಆಯ್ತು. ನಿಮಗೆ ಏನೂ ಅನಿಸ್ತಾ ಇಲ್ವ?" ಎಂದು ಅಪೇಕ್ಷಾ ಕೇಳಿದಾಗ "ನೀವು ಮಾತ್ರ ನನ್ನ ಲವ್‌ ಮಾಡಿದ್ದ? ನಾನು ಲವ್‌ ಮಾಡಿಲ್ವ? ಮೀಟಾಗೋಣ್ವ" ಎಂದು ಕೇಳುತ್ತಾನೆ. ಅಪೇಕ್ಷಾ ಭೇಟಿಯಾಗಲು ಓಕೆ ಎನ್ನುತ್ತಾಳೆ.

ಮದುವೆ ಇನ್ವಿಟೇಷನ್‌ ಡಿಸೈನ್‌ ಬಂದಿರುತ್ತದೆ. ಆಮಂತ್ರಣ ಪತ್ರಿಕೆ ಸೆಲೆಕ್ಟ್‌ ಮಾಡಲು ಜೈದೇವ್‌ನ ಅಭಿಪ್ರಾಯವನ್ನೇ ಕೇಳೋಣ ಎಂದು ಗೌತಮ್‌ ಭೂಮಿಕಾ ಆನಂದ್‌ ಮತ್ತು ಇತರರು ಮಾತನಾಡುತ್ತಾರೆ. ಇದೇ ಸಂದರ್ಭದಲ್ಲಿ ಆನಂದ್‌ ಗೌತಮ್‌ಗೆ "ಗುಡ್‌ ನ್ಯೂಸ್‌ ಯಾವಾಗ?" ಎಂದು ಕೇಳುತ್ತಾನೆ. ಈ ಮಾತುಕತೆ, ಸ್ನೇಹಿತನ ಜತೆ ಜಗಳ ಒಂದಿಷ್ಟು ಹೊತ್ತು ನಡೆಯುತ್ತದೆ. "ಪಕ್ಕದಲ್ಲಿ ಬೆಂಕಿ ಇದ್ದರೂ ಬೆಣ್ಣೆ ಕರಗ್ತಾ ಇಲ್ಲ" ಎಂದು ಭೂಮಿಕಾಳ ಸ್ವಗತವೂ ಇರುತ್ತದೆ.

ಪಾರ್ಥ ಮತ್ತು ಅಪೇಕ್ಷಾ ಭೇಟಿಯಾಗುತ್ತಾರೆ. "ಈಗ ಏನು ಮಾಡುವುದು?" "ನನಗೂ ಗೊತ್ತಾಗ್ತಿಲ್ಲ, ನಾನು ಬ್ಲಾಂಕ್‌ ಆಗಿದ್ದೇನೆ?" "ಹೋಗುವಾಗ ಒಂದು ಮಾತು ಹೇಳಿದ್ದರೆ ಇಂತಹ ತೊಂದರೆಯಾಗುತ್ತಿರಲಿಲ್ಲ" "ಅಷ್ಟೊಂದು ದಡ್ಡೀನ ನೀವು, ಇದಕ್ಕೆಲ್ಲ ಹೇಗೆ ಒಪ್ಪಿಕೊಂಡ್ರಿ?" ಎಂದೆಲ್ಲ ಮಾತುಕತೆ ನಡೆಯುತ್ತದೆ. "ನೀವೇ ಅವ್ರು ಅಂದ್ಕೊಂಡು ಈ ಮದುವೆಗೆ ಒಪ್ಪಿಕೊಂಡೆ" ಎಂದು ಅಪೇಕ್ಷಾ ಹೇಳುತ್ತಾಳೆ. "ನಾನು ಹೆಲ್ಪ್‌ಲೆಸ್‌ ಆಗಿದ್ದೆ. ತೀರಾ ಒಂಟಿಯಾಗಿದ್ದೆ. ಆ ಸಂದರ್ಭದಲ್ಲಿ ನೀವು ಇದ್ದರೆ ಏನಾದರೂ ಮಾಡಬಹುದಿತ್ತು" ಎಂದು ಅಪೇಕ್ಷಾ ಹೇಳುತ್ತಾಳೆ. "ಇದನ್ನು ಹೇಗೆ ಸರಿಮಾಡೋದು, ಇದು ನಮ್ಮ ಲೈಫ್‌ನ ಪ್ರಶ್ನೆ. ಮನೆಯಲ್ಲಿ ಹೋಗಿ ಹೇಳಿ" ಎಂದು ಅಪೇಕ್ಷಾ ಹೇಳುತ್ತಾಳೆ. "ಈಗಲೇ ಅಕ್ಕಾ ಭಾವನ ಬಳಿ ಹೇಳೋಣ" ಎಂದು ಅಪೇಕ್ಷಾ ಹೇಳಿದಾಗ "ಇದನ್ನು ಹೇಗೆ ಹೇಳಲಿ. ಈಗಾಗಲೇ ಮಹಿಮಾನ ಅಬಾರ್ಷನ್‌ನಿಂದ ನೊಂದಿದ್ದಾರೆ. ಈಗ ಎಲ್ಲರೂ ಸಂತೋಷದಿಂದ ಇದ್ದಾರೆ. ಈಗ ನಾವು ಹೋಗಿ ಆ ಸಂತೋಷನ ಹಾಳು ಮಾಡಿಕೊಳ್ಳೋದ?" ಎಂದು ಪಾರ್ಥ ಮಾತನಾಡುತ್ತಾನೆ. "ಈಗ ನಾವಿಬ್ಬರು ನಮ್ಮ ಖುಷಿಗಿಂತ ಮನೆಯವರ ಖುಷಿಯನ್ನೇ ಬಯಸುವವರು ಅಲ್ವ?ʼ" "ನನಗೂ ನಿಮ್ಮನ್ನು ಬಿಟ್ಟು ಇರಲು ಆಗುತ್ತಿಲ್ಲ" "ಈ ಕ್ಷಣಕ್ಕೆ ನನಗೆ ನಮ್ಮ ಮನೆಯವರೇ ತುಂಬಾ ಇಂಪಾರ್ಟೆಂಟ್‌" ಎಂದೆಲ್ಲ ನೋವಿನ ಮಾತುಗಳು ನಡೆಯುತ್ತವೆ.

ಜೈದೇವ್‌ ಇನ್ವಿಟೇನಷ್‌ ಪತ್ರಗಳನ್ನು ನೋಡುತ್ತಾನೆ. ಆಗ ಅವನ ಕೈಯಲ್ಲಿದ್ದ ವಾಚ್‌ ಮೇಲೆ ಭೂಮಿಕಾಳ ಕಣ್ಣು ಹೋಗುತ್ತದೆ. ಇನ್ವಿಟೇಷನ್‌ ಡಿಸೈನ್‌ ಸೆಲೆಕ್ಟ್‌ ಮಾಡಲು ಪಾರ್ಥನ ಒಪಿನಿಯನ್‌ ಪಡೆಯೋಣ ಎಂದು ಜೈದೇವ್‌ ಹೇಳುತ್ತಾನೆ. ಈ ಮೂಲಕ ಪಾರ್ಥನಿಗೆ ಹರ್ಟ್‌ ಮಾಡಲು ಬಯಸುತ್ತಾನೆ. ಈ ಸಂದರ್ಭದಲ್ಲಿ ಆತನ ಕೈ ನೋಡುತ್ತ ಭೂಮಿಕಾಳಿಗೆ ಏನೋ ಅನುಮಾನ ಬರುತ್ತ ಇರುತ್ತದೆ. ಇನ್ನೊಂದಡೆ ಆಮಂತ್ರಣ ಡಿಸೈನ್‌ ಅನ್ನು ಜೈದೇವ್‌ ಪಾರ್ಥನಿಗೆ ಕಳುಹಿಸಿ ಕರೆ ಮಾಡುತ್ತಾನೆ. "ಫಸ್ಟ್‌ ಒನ್‌ ಚೆನ್ನಾಗಿದೆ" ಎಂದು ದುಃಖದಲ್ಲಿಯೇ ಪಾರ್ಥ ಹೇಳುತ್ತಾನೆ. ಬಳಿಕ ಅಪೇಕ್ಷಾಳಿಗೂ ಈ ಡಿಸೈನ್‌ ಕಳುಹಿಸ್ತಿನಿ ಅನ್ತಾನೆ. "ಇನ್ನು ಮುಂದೆ ಅಪೇಕ್ಷಾ ನಿನ್ನ ಅತ್ತಿಗೆ ಕಣೋ, ಅವಳನ್ನು ಹಾಗೆಯೇ ಕರೆಯಬೇಕು" ಎಂದು ಜೈದೇವ್‌ ಹೇಳುತ್ತಾನೆ. ಇದಾದ ಬಳಿಕ ಇನ್ವಿಟೇಷನ್‌ ಸ್ಯಾಂಪಲ್‌ ಅನ್ನು ಅಪೇಕ್ಷಾಳಿಗೆ ಕಳುಹಿಸುತ್ತಾನೆ. ಅವಳೂ ಇಷ್ಟ ಆಯ್ತು ಅನ್ತಾಳೆ. "ನಾವು ಇವಾಗ ಡಿಸಿಷನ್‌ ತೆಗೆದುಕೊಳ್ಳಬೇಕು, ಇಲ್ಲದೆ ಇದ್ದರೆ ಜೀವನಪೂರ್ತಿ ನೋವು ಅನುಭವಿಸ್ತಿವಿ" ಎಂದು ಅಪೇಕ್ಷಾ ಹೇಳುತ್ತಾಳೆ. ನಾವು ಮನೆಯವರನ್ನು ಪ್ರೀತಿಸುತ್ತೇವೆ ಎಂದೆಲ್ಲ ಪಾರ್ಥ ಹೇಳುತ್ತಾನೆ. ಇದೇ ರೀತಿ ನೋವಿನ ಮಾತುಕತೆ ನಡೆದರೂ ಇಬ್ಬರೂ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಇರುತ್ತಾರೆ.

ಅಮೃತಧಾರೆ ಧಾರಾವಾಹಿ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ