logo
ಕನ್ನಡ ಸುದ್ದಿ  /  ಮನರಂಜನೆ  /  ಜೈದೇವ್‌ ದಿಯಾಳ ಚೆಲ್ಲಾಟ ನೋಡುವಾಗಲೇ ಗರ್ಭಿಣಿ ಮಲ್ಲಿಗೆ ಅಪಘಾತ; ಅಮೃತಧಾರೆ ಧಾರಾವಾಹಿಯಲ್ಲಿ ಮುಗಿಯದ ಆಕ್ಸಿಡೆಂಟ್‌

ಜೈದೇವ್‌ ದಿಯಾಳ ಚೆಲ್ಲಾಟ ನೋಡುವಾಗಲೇ ಗರ್ಭಿಣಿ ಮಲ್ಲಿಗೆ ಅಪಘಾತ; ಅಮೃತಧಾರೆ ಧಾರಾವಾಹಿಯಲ್ಲಿ ಮುಗಿಯದ ಆಕ್ಸಿಡೆಂಟ್‌

Praveen Chandra B HT Kannada

Sep 23, 2024 09:30 AM IST

google News

ಜೈದೇವ್‌ ದಿಯಾಳ ಚೆಲ್ಲಾಟ ನೋಡುವಾಗಲೇ ಗರ್ಭಿಣಿ ಮಲ್ಲಿಗೆ ಅಪಘಾತ; ಅಮೃತಧಾರೆ ಧಾರಾವಾಹಿ

    • Amruthadhaare serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಭಾನುವಾರದ ಸಂಚಿಕೆಯಲ್ಲಿ ಅವಘಡವೊಂದು ನಡೆದಿದೆ. ಜೈದೇವ್‌ ಮತ್ತು ದಿಯಾಳ ಚೆಲ್ಲಾಟ ನೋಡುತ್ತಿರುವಾಗಲೇ ಮಲ್ಲಿಗೆ ಟಿಟಿ ವಾಹನವೊಂದು ಬಂದು ಡಿಕ್ಕಿ ಹೊಡೆದಿದೆ. ಸೀರಿಯಸ್‌ ಆಗಿ ಗಾಯಗೊಂಡ ಮಲ್ಲಿ ಆಸ್ಪತ್ರೆ ಸೇರಿದ್ದಾಳೆ.
ಜೈದೇವ್‌ ದಿಯಾಳ ಚೆಲ್ಲಾಟ ನೋಡುವಾಗಲೇ ಗರ್ಭಿಣಿ ಮಲ್ಲಿಗೆ ಅಪಘಾತ; ಅಮೃತಧಾರೆ ಧಾರಾವಾಹಿ
ಜೈದೇವ್‌ ದಿಯಾಳ ಚೆಲ್ಲಾಟ ನೋಡುವಾಗಲೇ ಗರ್ಭಿಣಿ ಮಲ್ಲಿಗೆ ಅಪಘಾತ; ಅಮೃತಧಾರೆ ಧಾರಾವಾಹಿ

Amruthadhaare serial: ಬಸುರಿ ಸೀಮಂತ ಮುಗಿಸಿದ ಬಳಿಕ ಮಲ್ಲಿಯನ್ನು ಕರೆದುಕೊಂಡು ಜೈದೇವ್‌ ಹಳ್ಳಿಗೆ ಹೊರಟಿದ್ದಾನೆ. ಈ ಸಮಯದಲ್ಲಿ ಮಲ್ಲಿ ನೀವು ಬೇಕಿದ್ರೆ ಇಲ್ಲೇ ಇರಿ. ನಾನೊಬ್ಲೆ ಹೋಗ್ತಿನಿ ಎನ್ನುತ್ತಾಳೆ. ಬೆಂಗಳೂರಲ್ಲಿ ಫ್ರೆಂಡ್ಸ್‌ ಜತೆ ಇರಿ, ಆಗಾಗ ನನ್ನನ್ನು ನೋಡ್ತಾ ಹೋಗಿ. ಅಷ್ಟು ದಿನ ನಾನು ತಾತಾನ ಜತೆ ಇರ್ತಿನಿ ಎನ್ನುತ್ತಾಳೆ. ಜೈದೇವ್‌ಗೆ ಲಡ್ಡು ಬಂದು ಬಾಯಿಗೆ ಬಿದ್ದಂತೆ ಆಗುತ್ತದೆ. ಇದಾದ ಬಳಿಕ ಕ್ಯಾಬ್‌ ಬುಕ್‌ ಮಾಡ್ತಾನೆ. ಮಲ್ಲಿಗೊಂದು ಮುತ್ತು ನೀಡಿ ಕಳುಹಿಸಲು ಪ್ಲ್ಯಾನ್‌ ಮಾಡುತ್ತಾನೆ. "ಅಂತೂ ಇಂತು ತಲೆ ನೋವು ತಪ್ತು, ಇನ್ನು ಕೆಲವು ದಿನ ಚಮಕ್‌ಚಲ್ಲೋ ಜತೆ ಹಾಯಾಗಿ ಇರಬಹುದು" ಎಂದುಕೊಳ್ಳುತ್ತಾನೆ. ಕ್ಯಾಬ್‌ ಬರುತ್ತದೆ. ಮಲ್ಲಿ ಕ್ಯಾಬ್‌ಗೆ ಹೋಗುತ್ತಾಳೆ. ಜೈದೇವ್‌ ಕಾಳಜಿಯಿಂದ ಕಳುಹಿಸಿಕೊಡುತ್ತಾನೆ. ಮಲ್ಲಿ ಇರುವ ಕ್ಯಾಬ್‌ ಹೋಗುತ್ತದೆ. ಜೈದೇವ್‌ ಖುಷಿಯಿಂದ ಕುಪ್ಪಳಿಸುತ್ತಾನೆ.

ಆಸ್ಪತ್ರೆಗೆ ಗೌತಮ್‌ ಮತ್ತು ಭೂಮಿಕಾ ಬಂದು ಟೆಸ್ಟ್‌ ಮಾಡುತ್ತಾರೆ. "ಮೇಲ್ನೊಟಕ್ಕೆ ಏನು ಸಮಸ್ಯೆ ಇಲ್ಲ. ಫಂಡಮೆಂಟಲ್‌ ಆಗಿ ಎಲ್ಲವೂ ಸರಿಯಿದೆ" ಎಂದು ಡಾಕ್ಟರ್‌ ಹೇಳುತ್ತಾರೆ. "ಹೀಗಿದ್ರೂ ಮಗು ಯಾಕೆ ಆಗ್ತಾ ಇಲ್ಲ" ಎಂದು ಕೇಳುತ್ತಾರೆ. "ನೀವಿಬ್ಬರು ಲೇಟ್‌ ಆಗಿ ಮದುವೆಯಾಗಿರುವುದು ಪ್ರಮುಖ ಕಾರಣ" ಎಂದು ಡಾಕ್ಟರ್‌ ಹೇಳುತ್ತಾರೆ. "ಫರ್ಟಿಲಿಟಿ ರೇಟ್‌ ಕಡಿಮೆಯಾಗಿರಬಹುದು. ಯೋಚನೆ ಮಾಡಬೇಡಿ. ನಿಮಗೆ ಮಕ್ಕಳಾಗುತ್ತದೆ" ಎಂದು ಡಾಕ್ಟರ್‌ ಭರವಸೆ ನೀಡುತ್ತಾರೆ.

ಮಲ್ಲಿ ಕ್ಯಾಬ್‌ನಲ್ಲಿ ಹೋಗುತ್ತಾ ಇದ್ದಾಳೆ. ಮೊಬೈಲ್‌ ರಿಂಗ್‌ ಆಗ್ತಾ ಇದೆ. ಈಕೆಯ ಬಳಿ ತಪ್ಪಿ ಜೈದೇವ್‌ ಫೋನ್‌ ಇದೆ. ಅಯ್ಯೋ ಇವರ ಫೋನ್‌ ನನ್ನ ಬಳಿ ಇದೆ ಎಂದು ಟೆನ್ಷನ್‌ ಆಗುತ್ತಾಳೆ. ಅದೇ ಸಮಯದಕ್ಕೆ ದಿಯಾ ಕಾಲ್‌ ಮಾಡುತ್ತಾಳೆ. ದಿಯಾ ಜೈದೇವ್‌ಗೆ ಕಾಯುತ್ತಿದ್ದಾಳೆ. ಆಗ ಅಲ್ಲಿಗೆ ಜೈದೇವ್‌ ಬರುತ್ತಾನೆ. ಇಬ್ಬರ ಪ್ರೀತಿಯ ಮಾತುಗಳು ನಡೆಯುತ್ತವೆ. ಕಾರಿನೊಳಗೆ ಹೋಗುತ್ತಾರೆ. "ಅಣ್ಣಾ ಗಾಡಿ ತಿರುಗಿಸಿ, ಅವರಿಗೆ ಫೋನ್‌ ಕೊಟ್ಟು ಬರೋಣ" ಎಂದು ಮಲ್ಲಿ ಹೇಳುತ್ತಾಳೆ. ಕಾರು ರಿಟರ್ನ್‌ ಬರುತ್ತದೆ.

ಕಾರಿನೊಳಗೆ ದಿಯಾ ಮತ್ತು ಜೈದೇವ್‌ ಮಾತನಾಡುತ್ತಾ ಇದ್ದಾರೆ. ಇನ್ನೊಂದೆಡೆ ಮಲ್ಲಿ ಬರುತ್ತಿದ್ದಾಳೆ. ರಸ್ತೆಯ ಇನ್ನೊಂದು ಪಕ್ಕದಲ್ಲಿ ಜೈದೇವ್‌ ಕಾರು ಕಾಣಿಸುತ್ತದೆ. ಮಲ್ಲಿ ಕಾರು ನಿಲ್ಲಿಸಲು ಹೇಳುತ್ತಾಳೆ. ಕಾರು ಇಳಿದು ಪಕ್ಕದ ಕಾರಿಗೆ ಬಂದಾಗ ಕಾರಲ್ಲಿ ಜೈದೇವ್‌ ಕಾಣಿಸುತ್ತಾನೆ. ಮಲ್ಲಿ ಆತಂಕದಿಂದ ನೋಡುತ್ತಾಳೆ. ದಿಯಾಳ ಜತೆಗೆ ಜೈದೇವ್‌ ಇರುವುದು ಕಾಣಿಸುತ್ತದೆ. ಮಲ್ಲಿಗೆ ಆಘಾತವಾಗುತ್ತದೆ. ಮಲ್ಲಿ ನೋಡುನೋಡುತ್ತಿದ್ದಂತೆ ಜೈದೇವ್‌ ದಿಯಾಳಿಗೆ ಮುತ್ತು ನೀಡುತ್ತಾನೆ. ದಿಯಾ ಕೂಡ ಜೈದೇವ್‌ನ ಕೆನ್ನೆಗೆ ಮುತ್ತು ನೀಡುತ್ತಾಳೆ.

ಆನಂದ್‌ ಮತ್ತು ಅಪರ್ಣಾ ಮಾತನಾಡುತ್ತ ಇರುತ್ತಾರೆ. ಶಕುಂತಲಾದೇವಿಯ ಸ್ನೇಹಿತೆಯರ ಬಗ್ಗೆ ಮಾತನಾಡುತ್ತಾರೆ. "ಎಷ್ಟು ಚೀಪ್‌ ಅಲ್ವ. ಎಷ್ಟು ಕೆಟ್ಟದ್ದಾಗಿ ಮಾತನಾಡುತ್ತಾರೆ" ಎಂದು ಹೇಳುತ್ತಾರೆ. ಸಾಕಷ್ಟು ಮಾತನಾಡಿದ ಬಳಿಕ "ಗೌತಮ್‌ ಮತ್ತು ಭೂಮಿಕಾಗೆ ಮಕ್ಕಳಾಗಬೇಕು" ಎಂದು ಇವರಿಬ್ಬರು ಮಾತನಾಡುತ್ತಾರೆ.

ಜೈದೇವ್‌ ದಿಯಾಳ ಚೆಲ್ಲಾಟ ನೋಡುವಾಗಲೇ ಗರ್ಭಿಣಿ ಮಲ್ಲಿಗೆ ಅಪಘಾತ

ಮಲ್ಲಿಗೆ ಭೂಮಿಕಾ ಹೇಳಿದ ಮಾತುಗಳು ನೆನಪಿಗೆ ಬರುತ್ತವೆ. "ಯಾರನ್ನೂ ಬ್ಲೈಂಡ್‌ ಆಗಿ ನಂಬಲು ಹೋಗಬೇಡ" ಎಂದು ಭೂಮಿಕಾ ಹೇಳಿದ್ದು ನೆನಪಿಗೆ ಬರುತ್ತದೆ. "ಜೈದೇವ್‌ ಅಷ್ಟೆಲ್ಲ ಬದಲಾದ ಬಳಿಕ ನೀವು ಅವರ ಬಗ್ಗೆ ಹಾಗೆಲ್ಲ ಮಾತನಾಡ್ತಿರ ಅಂದ್ರೆ ನಾವು ಗಂಡ ಹೆಂಡಿರು ಚೆನ್ನಾಗಿರುವುದು ನಿಮಗೆ ಇಷ್ಟ ಇಲ್ವ ಅಕ್ಕಾರೆ" ಎಂದು ತಾನು ಭೂಮಿಕಾಗೆ ಎದುರು ಮಾತನಾಡಿದ್ದೂ ನೆನಪಾಗುತ್ತದೆ. ಮಲ್ಲಿ ರಸ್ತೆಯಲ್ಲಿ ನಿಂತು ಯೋಚನೆ ಮಾಡುತ್ತಿದ್ದಾಗ ದೂರದಲ್ಲಿ ಟಿಟಿ ವಾಹನವೊಂದು ಬರುತ್ತದೆ. ಬಂದು ಈಕೆಯ ಹೊಟ್ಟೆಗೆ ಗುದ್ದುತ್ತದೆ. ಮಲ್ಲಿ ನೆಲಕ್ಕೆ ಬೀಳುತ್ತದೆ. ಈ ಮೂಲಕ ಮಲ್ಲಿಗೆ ಸತ್ಯ ಗೊತ್ತಾದ ವೇಳೆ ಆಕ್ಸಿಡೆಂಟ್‌ ನಡೆಯುತ್ತದೆ.

ಕಾರಿನಲ್ಲಿರುವ ಜೈದೇವ್‌ ಮತ್ತು ದಿಯಾಳಿಗೆ ಆಕ್ಸಿಡೆಂಟ್‌ ಕಾಣಿಸುತ್ತದೆ. ಯಾರಿಗೋ ಆಕ್ಸಿಡೆಂಟ್‌ ಆಗಿದೆ ಎಂದು ಬಂದು ನೋಡುವಾಗ ಜೈದೇವ್‌ಗೆ ಮಲ್ಲಿಗೆ ಆಕ್ಸಿಡೆಂಟ್‌ ಆಗಿರೋದು ಕಾಣಿಸುತ್ತದೆ. ದಿಯಾಳನ್ನು ಹೊರಡಲು ಹೇಳುತ್ತಾನೆ. ತಕ್ಷಣ ಮಲ್ಲಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾನೆ. ಯಾಕೋ ಜೈದೇವ್‌ಗೆ ವಿಪರೀತ ಟೆನ್ಷನ್‌ ಆಗುತ್ತದೆ. ಇನ್ನೊಂದೆಡೆ ಭೂಮಿಕಾ ಮತ್ತು ಗೌತಮ್‌ ಮಾತನಾಡುತ್ತ ಇದ್ದಾರೆ. "ನನ್ನ ಬ್ಲಡ್‌ ಟೆಸ್ಟ್‌ ಪಾಸಿಟೀವ್‌ ಬರಬಹುದಾ?" ಎಂದು ಭೂಮಿಕಾ ಹೇಳುತ್ತಾರೆ. ಈ ಸಮಯದಲ್ಲಿ ಜೈದೇವ್‌ನ ಕಾಲ್‌ ಬರುತ್ತದೆ. "ಮಲ್ಲಿಗೆ ಆಕ್ಸಿಡೆಂಟ್‌ ಆಯ್ತು ಬ್ರೋ" ಎಂದು ಹೇಳುತ್ತಾನೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ