logo
ಕನ್ನಡ ಸುದ್ದಿ  /  ಮನರಂಜನೆ  /  Bigg Boss: ಬಿಗ್‌ಬಾಸ್‌ ಆರಂಭಿಸಿದ್ದು ಯಾರು, ಬಿಗ್‌ಬ್ರದರ್‌ ಬಿಗ್‌ಬಾಸ್‌ ಆದ ಕಥೆ, ಬಿಗ್‌ಬಾಸ್‌ ಕನ್ನಡ ನೋಡುತ್ತ ಇತಿಹಾಸ ತಿಳಿಯಿರಿ

Bigg Boss: ಬಿಗ್‌ಬಾಸ್‌ ಆರಂಭಿಸಿದ್ದು ಯಾರು, ಬಿಗ್‌ಬ್ರದರ್‌ ಬಿಗ್‌ಬಾಸ್‌ ಆದ ಕಥೆ, ಬಿಗ್‌ಬಾಸ್‌ ಕನ್ನಡ ನೋಡುತ್ತ ಇತಿಹಾಸ ತಿಳಿಯಿರಿ

Praveen Chandra B HT Kannada

Oct 10, 2023 07:52 PM IST

Bigg Boss: ಬಿಗ್‌ಬಾಸ್‌ ಆರಂಭಿಸಿದ್ದು ಯಾರು, ಬಿಗ್‌ಬ್ರದರ್‌ ಬಿಗ್‌ಬಾಸ್‌ ಆದ ಕಥೆ

    • Bigg Boss History: ಬಿಗ್‌ಬ್ರದರ್‌ ಶೋ ಬಿಗ್‌ಬಾಸ್‌ ಆಗಿ ಭಾರತದಲ್ಲಿ ಆರಂಭವಾಯಿತು. ಶಿಲ್ಪಾ ಶೆಟ್ಟಿ ಬಿಗ್‌ಬ್ರದರ್‌ 5ರಲ್ಲಿ ಗೆಲುವು ಪಡೆದ ಬಳಿಕ ಭಾರತದಲ್ಲಿ ಬಿಗ್‌ಬಾಸ್‌ ಹೆಚ್ಚಿನ ಜನಪ್ರಿಯತೆ ಪಡೆಯಿತು. ಕನ್ನಡದ ಬಿಗ್‌ಬಾಸ್‌ ಆರಂಭವಾಗಿ ಈ ವರ್ಷಕ್ಕೆ ಹತ್ತು ವರ್ಷವಾಗಿದೆ.
Bigg Boss: ಬಿಗ್‌ಬಾಸ್‌ ಆರಂಭಿಸಿದ್ದು ಯಾರು, ಬಿಗ್‌ಬ್ರದರ್‌ ಬಿಗ್‌ಬಾಸ್‌ ಆದ ಕಥೆ
Bigg Boss: ಬಿಗ್‌ಬಾಸ್‌ ಆರಂಭಿಸಿದ್ದು ಯಾರು, ಬಿಗ್‌ಬ್ರದರ್‌ ಬಿಗ್‌ಬಾಸ್‌ ಆದ ಕಥೆ

ಬೆಂಗಳೂರು: ಭಾರತದಲ್ಲಿ ಬಿಗ್‌ಬಾಸ್‌ ಜನಪ್ರಿಯ ಟಿವಿ ರಿಯಾಲಿಟಿ ಶೋ. ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಗ್‌ಬಾಸ್‌ ರಿಯಾಲಿಟಿ ಶೋ ಜನಪ್ರಿಯತೆ ಪಡೆದಿದೆ. ಕನ್ನಡದಲ್ಲಿ ಇದೀಗ ಬಿಗ್‌ಬಾಸ್‌ ಆರಂಭವಾಗಿದ್ದು, ಕಿಚ್ಚ ಸುದೀಪ್‌ ನಡೆಸಿಕೊಡುತ್ತಿದ್ದಾರೆ. ಕಳೆದ ಹತ್ತು ಸೀಸನ್‌ನಿಂದಲೂ ಬಿಗ್‌ಬಾಸ್‌ ಕನ್ನಡವನ್ನು ಸುದೀಪ್‌ ಹೋಸ್ಟ್‌ ಮಾಡುತ್ತಿರುವುದು ವಿಶೇಷ. ಅಂದಹಾಗೆ, ಈ ಬಿಗ್‌ಬಾಸ್‌ ಆರಂಭಿಸಿದ್ದು ಯಾರು ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತರವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಟ್ರೆಂಡಿಂಗ್​ ಸುದ್ದಿ

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

Cannes: ಚಿನ್ನದ ಬಣ್ಣದ ಉಡುಗೆಯಲ್ಲಿ ಆಸ್ಕರ್‌ ಟ್ರೋಫಿ ರೀತಿ ಕಾಣಿಸ್ತಾರಂತೆ ಶೋಭಿತಾ ಧೂಳಿಪಾಲ, ನಿಮಗೂ ಹಾಗೇ ಕಾಣಿಸ್ತಾರ ನೋಡಿ

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಬಿಗ್‌ಬ್ರದರ್‌ ಬಿಗ್‌ಬಾಸ್‌ ಆದ ಕಥೆ

ನೆದರ್‌ಲ್ಯಾಂಡ್‌ನಲ್ಲಿ ಜಾನ್‌ ದೆ ಮೊಲ್‌ ಜೂನಿಯರ್‌ ಅವರು ಮೊದಲ ಬಾರಿಗೆ ಬಿಗ್‌ಬ್ರದರ್‌ ಎಂಬ ಶೋ ಆರಂಭಿಸಿದರು. ಎಂಡ್ಮೊಲ್‌ ಶೈನ್‌ ಗ್ರೂಪ್‌ನ ಈ ಬಿಗ್‌ಬ್ರದರ್‌ ತುಂಬಾ ಜನಪ್ರಿಯತೆ ಪಡೆದಿತ್ತು. ಇದೀಗ ಬಿಗ್‌ಬ್ರದರ್‌ ಪರಿಕಲ್ಪನೆಯನ್ನು ಭಾರತದಲ್ಲಿ ಬಿಗ್‌ಬಾಸ್‌ ಹೆಸರಿನಲ್ಲಿ ಮೊದಲ ಬಾರಿಗೆ ಹಿಂದಿ ಭಾಷೆಯಲ್ಲಿ ಆರಂಭಿಸಲಾಯಿತು. ಈ ಬಿಗ್‌ಬಾಸ್‌ ಶೋಗಾಗಿ ಮುಂಬೈನ ಲೊನವಾಲದಲ್ಲಿ ವಿಶೇಷ ಮನೆಯನ್ನು ನಿರ್ಮಿಸಲಾಯಿತು.

ಈ ಹೊಸ ಮನೆಯಲ್ಲಿ ಒಂದಿಷ್ಟು ಜನರನ್ನು ಕೂಡಿಹಾಕಿ ಅವರ ವರ್ತನೆ, ಪ್ರತಿನಿತ್ಯದ ಜಗಳ, ಪ್ರತಿನಿತ್ಯದ ಮಾತುಕತೆಗಳನ್ನು ಟೆಲಿವಿಷನ್‌ನಲ್ಲಿ ತೋರಿಸಲು ಆರಂಭಿಸಲಾಯಿತು. ಮೊದಲ ಬಾರಿಗೆ 2006ರಲ್ಲಿ ಸೋನಿ ಟಿವಿಯಲ್ಲಿ ಬಿಗ್‌ಬಾಸ್‌ ಆರಂಭವಾಯಿತು. ಹರ್ಷದ್‌ ವಾರ್ಸಿ ಈ ಕಾರ್ಯಕ್ರಮದ ನಿರೂಪಕರಾಗಿದ್ದರು. ಆರಂಭದಲ್ಲಿ ಈ ಶೋ ಅಷ್ಟೇನೂ ಜನಪ್ರಿಯವಾಗಿರಲಿಲ್ಲ. ಆಗ ಈಗಿನಷ್ಟು ಜನರು ಟೀವಿ ನೋಡುತ್ತಿರಲಿಲ್ಲ ಅನ್ನೋದು ಬೇರೆ ಮಾತು.

ಬಿಗ್‌ ಬ್ರದರ್‌ 5ನಲ್ಲಿ ಭಾರತದ ಶಿಲ್ಪಾ ಶೆಟ್ಟಿ ಭಾಗವಹಿಸಿ ಗೆಲುವು ಪಡೆದರು. ಆ ಸಮಯದಲ್ಲಿ ಜನಾಂಗೀಯತೆ, ವರ್ಣ ದ್ವೇಷ ವಿಚಾರವೂ ಚರ್ಚೆಗೆ ಬಂದಿತು. ಈ ರೀತಿ ವಿದೇಶಿ ನೆಲದಲ್ಲಿ ಶಿಲ್ಪಾ ಶೆಟ್ಟಿ ಗೆದ್ದು ಬಂದ ಬಳಿಕ ಭಾರತೀಯರಿಗೂ ಈ ಬಿಗ್‌ಬಾಸ್‌ ಶೋ ಕುರಿತು ಕ್ರೇಜ್‌ ಹೆಚ್ಚಾಯಿತು. ಬಿಗ್‌ಬಾಸ್‌ ಸೆಸನ್‌ 2ನಲ್ಲಿ ವಾರ್ಸಿ ಬದಲು ಬೇರೆ ಹೋಸ್ಟ್‌ ಅನ್ನು ಆಯ್ಕೆ ಮಾಡಲಾಯಿತು. ಈ ಶೋ ಸೋನಿ ಟಿವಿಯಿಂದ ವಿಯಾಕನ್‌ 18ನ ಕಲರ್ಸ್‌ ಟೀವಿಗೆ ಶಿಫ್ಟ್‌ ಆಯಿತು.

ಬಿಗ್‌ಬಾಸ್‌ ಮೂರನೇ ಸೀಸನ್‌ಗೆ ಅಮಿತಾಬ್‌ ಬಚ್ಚನ್‌ ನಿರೂಪಕರಾಗಿದ್ದರು. ನಾಲ್ಕನೇ ಸೀಸನ್‌ನಲ್ಲಿ ಸಲ್ಮಾನ್‌ ಖಾನ್‌ ಈ ಶೋ ಹೋಸ್ಟ್‌ ಮಾಡಿದ್ರು. ಐದನೇ ಅವಧಿಯಲ್ಲಿ ಸಂಜಯ್‌ ದತ್‌ ಈ ಶೋ ಮುನ್ನಡೆಸಿದರು. ಸಂಜಯ್‌ ದತ್‌ ಅವರು ಸಲ್ಮಾನ್‌ ಖಾನ್‌ ಜತೆಗೆ ಈ ಶೋ ಹೋಸ್ಟ್‌ ಮಾಡಿದ್ದರು. ಎಂಟನೇ ಸೀಸನ್‌ನ ಸ್ಪಿನ್‌ಆಫ್‌ ಸೀಸನ್‌ ಅನ್ನು ಫರಹ್‌ ಖಾನ್‌ ಹೋಸ್ಟ್‌ ಮಾಡಿದ್ದರು. ಹೀಗೆ, ಹಿಂದಿ ಭಾಷೆಯಲ್ಲಿ ಜನಪ್ರಿಯತೆ ಪಡೆದ ಬಿಗ್‌ಬಾಸ್‌ ಭಾರತದ ಇತರೆ ಭಾಷೆಗಳಲ್ಲಿಯೂ ಆರಂಭವಾಯಿತು.

ಕನ್ನಡ ಬಿಗ್‌ಬಾಸ್‌ ಇತಿಹಾಸ

ಕನ್ನಡದಲ್ಲಿ ಮೊದಲ ಬಾರಿಗೆ 2013ರಲ್ಲಿ ಬಿಗ್‌ಬಾಸ್‌ ಆರಂಭವಾಯಿತು. ಈಟಿವಿಯಲ್ಲಿ ಮೊದಲ ವರ್ಷ, ಎರಡನೇ ವರ್ಷ ಏಷ್ಯಾನೆಟ್‌ ಸುವರ್ಣದಲ್ಲಿ ಪ್ರಸಾರವಾಯಿತು. ಆರಂಭದ ಈ ಎರಡು ಶೋಗಳು ಪುಣೆಯ ಲೊನವಾಲದಲ್ಲಿ ಶೂಟಿಂಗ್‌ ಆಗುತ್ತಿತ್ತು. ಬಿಗ್‌ಬಾಸ್‌ 3ರಿಂದ 4ರವರೆಗೆ ಕಲರ್ಸ್‌ ಕನ್ನಡದಲ್ಲಿ, ಬಳಿಕ ಕಲರ್ಸ್‌ ಸೂಪರ್‌ನಲ್ಲಿ ಬಿಗ್‌ಬಾಸ್‌ ನಡೆಯಿತು. ಅಂದಹಾಗೆ, ಈ ಶೋಗಳು ಬೆಂಗಳೂರಿನ ಇನ್ನೋವೇಟಿವ್‌ ಫಿಲ್ಮ್‌ ಸಿಟಿಯಲ್ಲಿ ಶೂಟ್‌ ಆಗುತ್ತಿತ್ತು. ಈ ಮೂಲಕ ಲೊನವಾಲದ ಬದಲು ಕರ್ನಾಟಕದಲ್ಲಿಯೇ ಶೋ ಆರಂಭವಾಯಿತು. ಬಿಗ್‌ಬಾಸ್‌ 10 ಟಿಬಿಎನಲ್ಲಿ ನಡೆಯುತ್ತಿದೆ. ಈ ಹತ್ತು ಶೋಗೂ ಕಿಚ್ಚ ಸುದೀಪ್‌ ಹೋಸ್ಟ್‌ ಆಗಿದ್ದಾರೆ.

ಬಿಗ್‌ಬಾಸ್‌ ಕನ್ನಡದ ತಾಜಾ ಅಪ್‌ಡೇಟ್‌ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ