logo
ಕನ್ನಡ ಸುದ್ದಿ  /  ಮನರಂಜನೆ  /  4ನೇ ದಿನ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಲೆಕ್ಷನ್‌ ಮಾಡಿದ್ದು ಎಷ್ಟು, ಹಾಕಿದ ಬಂಡವಾಳ ವಾಪಸ್‌ ಸಿಕ್ತಾ?

4ನೇ ದಿನ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಲೆಕ್ಷನ್‌ ಮಾಡಿದ್ದು ಎಷ್ಟು, ಹಾಕಿದ ಬಂಡವಾಳ ವಾಪಸ್‌ ಸಿಕ್ತಾ?

Rakshitha Sowmya HT Kannada

Oct 01, 2024 04:10 PM IST

google News

4ನೇ ದಿನ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಲೆಕ್ಷನ್‌ ಮಾಡಿದ್ದು ಎಷ್ಟು, ಹಾಕಿದ ಬಂಡವಾಳ ವಾಪಸ್‌ ಸಿಕ್ತಾ?

  • ಸೆಪ್ಟೆಂಬರ್‌ 27 ರಂದು ತೆರೆ ಕಂಡ ದೇವರ ಸಿನಿಮಾ ವಿಶ್ವಾದ್ಯಂತ 4 ದಿನಗಳಲ್ಲಿ 304 ಕೋಟಿ ರೂ . ಕಲೆಕ್ಷನ್‌ ಮಾಡಿದೆ. ಈ ವಿಚಾರವನ್ನು ಖುದ್ದು ಚಿತ್ರತಂಡ ಅಧಿಕೃತ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದೆ. ಈ ಮೂಲಕ ಸಿನಿಮಾ ಹಾಕಿದ ಬಂಡವಾಳವನ್ನು ವಾಪಸ್‌ ಗಳಿಸಿದೆ. 

4ನೇ ದಿನ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಲೆಕ್ಷನ್‌ ಮಾಡಿದ್ದು ಎಷ್ಟು, ಹಾಕಿದ ಬಂಡವಾಳ ವಾಪಸ್‌ ಸಿಕ್ತಾ?
4ನೇ ದಿನ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಲೆಕ್ಷನ್‌ ಮಾಡಿದ್ದು ಎಷ್ಟು, ಹಾಕಿದ ಬಂಡವಾಳ ವಾಪಸ್‌ ಸಿಕ್ತಾ?

ಸೆಪ್ಟೆಂಬರ್‌ 27 ರಂದು ತೆರೆ ಕಂಡ ಜ್ಯೂನಿಯರ್‌ ಎನ್‌ಟಿಆರ್‌, ಜಾಹ್ನವಿ ಕಪೂರ್‌ ಅಭಿನಯದ ದೇವರ ಸಿನಿಮಾ ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ವಿದೇಶಗಳಲ್ಲಿ ಕೂಡಾ ದೇವರ ಸದ್ದು ಮಾಡುತ್ತಿದೆ. ವಿದೇಶದಲ್ಲಿ ಎನ್‌ಟಿಆರ್‌ ಫ್ಯಾನ್ಸ್‌ ಸಿನಿಮಾ ನೋಡಿ ಆಕ್ಷನ್‌ ಸೀಕ್ವೆನ್ಸ್‌ಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸಿನಿಮಾ ಹಾಡುಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ.

4 ದಿನಗಳಲ್ಲಿ ಸಿನಿಮಾ ಮಾಡಿದ ಕಲೆಕ್ಷನ್‌ ಎಷ್ಟು?

ಸಿನಿಮಾದಲ್ಲಿ ಚುಟ್ಟಮಲ್ಲೇ ಹಾಡು ಸೂಪರ್‌ ಹಿಟ್‌ ಆಗಿದ್ದು ಯೂಟ್ಯೂಬ್‌ನಲ್ಲಿ ಲಿರಿಕಲ್‌ ವಿಡಿಯೋ ಲಭ್ಯವಿದೆ. ಪೂರ್ತಿ ಹಾಡು ನೋಡಲೆಂದೇ ಕೆಲವರು ಎರಡೆರಡು ಬಾರಿ ಸಿನಿಮಾ ನೋಡುತ್ತಿದ್ದಾರೆ. ಇನ್ನು ಕಲೆಕ್ಷನ್‌ ವಿಚಾರಕ್ಕೆ ಬರುವುದಾದರೆ ಮೊದಲ ದಿನ ವಿಶ್ವಾದ್ಯಂತ 140 ಕೋಟಿ ರೂ. ಗಳಿಸಿತ್ತು. ಸಿನಿಮಾ ಮೊದಲ ದಿನ 100 ಕೋಟಿ ಸಂಗ್ರಹಿಸಿಬಹುದು ಎಂದು ಅಂದಾಜು ಮಾಡಲಾಗಿತ್ತು. ಅದರೆ ಅದಕ್ಕೂ ಮೀರಿ ಸಿನಿಮಾ ಕಲೆಕ್ಷನ್‌ ಮಾಡಿದೆ. ಸಿನಿ ವಿಮರ್ಶಕರ ಪ್ರಕಾರ ಸಿನಿಮಾ ಅಡ್ವಾನ್ಸ್‌ ಬುಕಿಂಗ್‌ನಿಂದಲೇ 30 ಕೋಟಿ ರೂ. ಲಾಭ ಮಾಡಿತ್ತು. ಜೊತೆಗೆ ಒಟಿಟಿ ಹಕ್ಕುಗಳು ಕೂಡಾ ಭಾರೀ ಬೆಲೆಗೆ ಮಾರಾಟವಾಗಿತ್ತು. ಆಂಧ್ರ ಹಾಗೂ ತೆಲಂಗಾಣ ಎರಡೂ ರಾಜ್ಯಗಳು ಸೇರಿ ಮೊದಲ ದಿನ, ಸಿನಿಮಾ 65 ಕೋಟಿ ರೂ ಕಲೆಕ್ಷನ್‌ ಮಾಡಿದೆ. ಕರ್ನಾಟಕದಲ್ಲಿ ದೇವರ 10 ಕೋಟಿ ರೂ. ಗಳಿಸಿತ್ತು. ತೆಲುಗು ರಾಜ್ಯಗಳಲ್ಲಿ ರೂ. ಒಟ್ಟು 82 ಕೋಟಿ, ತಮಿಳುನಾಡಿನಲ್ಲಿ 2.5 ಕೋಟಿ ರೂ, ಕೇರಳದಲ್ಲಿ60 ಲಕ್ಷ ರೂ. ಉತ್ತರ ಭಾರತದ ರಾಜ್ಯಗಳಲ್ಲಿ 10 ಕೋಟಿ ರೂ ವಿದೇಶದಲ್ಲಿ 49 ಕೋಟಿ ರೂ ಕಲೆಕ್ಷನ್ ಮಾಡಿತ್ತು.

2ನೇ ದಿನ ಭಾರತದಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡಿದೆ. ತೆಲುಗು ರಾಜ್ಯಗಳಲ್ಲಿ 29 ಕೋಟಿ ರೂ, ಹಿಂದಿಯಲ್ಲಿ 9 ಕೋಟಿ ರೂ ಸಂಗ್ರಹಿಸಿದೆ. ವ್ಯಾಪಾರ ತಜ್ಞರ ಪ್ರಕಾರ, ವಿಶ್ವಾದ್ಯಂತ ಚಿತ್ರದ ಎರಡನೇ ದಿನದ ಕಲೆಕ್ಷನ್ ರೂ. 100 ಕೋಟಿ. ಇದರೊಂದಿಗೆ 'ದೇವರ' ಎರಡು ದಿನದೊಳಗೆ ರೂ. 200 ಕೋಟಿ ಕ್ಲಬ್ ಸೇರಿತ್ತು. ಹಾಗೆ ಮೂರನೇ ದಿನ ಭಾರತದಲ್ಲಿ 45 ಕೋಟಿ ರೂ. ಸಂಗ್ರಹಿಸಿತ್ತು. ಸೋಮವಾರ, ನಾಲ್ಕನೇ ದಿನ ಭಾರತದಲ್ಲಿ ಸಿನಿಮಾ ಒಟ್ಟು 12.75 ಕೋಟಿ ರೂ. ಗಳಿಸಿದೆ. ಅದರಲ್ಲಿ ತೆಲುಗು 8.2 ಕೋಟಿ ರೂ. ಹಿಂದಿಯಲ್ಲಿ 4 ಕೋಟಿ ರೂ. ಗಳಿಸಿದೆ. ಇದುವರೆಗೂ ಭಾರತದಲ್ಲಿ ಒಟ್ಟು 175 ಕೋಟಿ ಗಳಿಸಿದ್ದು ವಿಶ್ವಾದ್ಯಂತ ಒಟ್ಟು 304 ಕೋಟಿ ರೂ ಹಣ ಸಂಗ್ರಹಿಸಿದೆ. ಈ ವಿಚಾರವನ್ನು ಚಿತ್ರತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ. ಈ ಮೂಲಕ ಸಿನಿಮಾ ಹಾಕಿದ ಬಂಡವಾಳವನ್ನು ವಾಪಸ್‌ ಪಡೆದಿದೆ.

ಜಾಹ್ನವಿ ಪಾತ್ರಕ್ಕೆ ಪ್ರಾಮುಖ್ಯತೆ ನೀಡುವಂತೆ ಮನವಿ

ಚಿತ್ರವನ್ನು ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ ಜೊತೆ ಸೇರಿ ನಿರ್ಮಿಸಲಾಗಿದೆ. ಎನ್‌ಟಿಆರ್‌ ಸಹೋದರ ಕಲ್ಯಾಣ್‌ ರಾಮ್‌ ಕೂಡಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಕೊರಟಾಲ ಶಿವ ಆಕ್ಷನ್‌ ಕಟ್‌ ಹೇಳಿದ್ದಾರೆ. ಅನಿರುದ್ಧ್‌ ರವಿಚಂದರ್ ಚಿತ್ರದ ಹಾಡುಗಳಿಗೆ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಜ್ಯೂ ಎನ್‌ಟಿಆರ್‌, ದೇವರ ಹಾಗೂ ವರ ಎಂಬ ಡಬಲ್‌ ರೋಲ್‌ನಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಜಾಹ್ನವಿ ಕಪೂರ್‌, ಎನ್‌ಟಿಆರ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಆದರೆ ಜಾಹ್ನವಿ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲದ ಕಾರಣ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಭಾಗ 2ರಲ್ಲಾದರೂ ಜಾಹ್ನವಿ ಪಾತ್ರಕ್ಕೆ ಪ್ರಾಮುಖ್ಯತೆ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಇದು ಜಾಹ್ನವಿ ಅಭಿನಯದ ಮೊದಲ ತೆಲುಗು ಚಿತ್ರ. ಉಳಿದಂತೆ ದೇವರ ಸಿನಿಮಾದಲ್ಲಿ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಭೈರಾ ಹೆಸರಿನ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ, ನರೇನ್, ಕಲೈಯರಸನ್, ಮುರಳಿ ಶರ್ಮಾ ಮತ್ತು ಅಭಿಮನ್ಯು ಸಿಂಗ್ ನಟಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ