logo
ಕನ್ನಡ ಸುದ್ದಿ  /  ಮನರಂಜನೆ  /  Salaar Box Office: ಕರ್ನಾಟಕದಲ್ಲಿ ಕಾಟೇರ, ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಸಲಾರ್‌ ಅಬ್ಬರ; 650 ಕೋಟಿ ಕ್ಲಬ್‌ ಸೇರಿದ ಪ್ರಭಾಸ್‌ ಸಿನಿಮಾ

Salaar box office: ಕರ್ನಾಟಕದಲ್ಲಿ ಕಾಟೇರ, ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಸಲಾರ್‌ ಅಬ್ಬರ; 650 ಕೋಟಿ ಕ್ಲಬ್‌ ಸೇರಿದ ಪ್ರಭಾಸ್‌ ಸಿನಿಮಾ

Praveen Chandra B HT Kannada

Jan 04, 2024 05:45 PM IST

google News

Salaar box office: ಕರ್ನಾಟಕದಲ್ಲಿ ಕಾಟೇರ, ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಸಲಾರ್‌ ಅಬ್ಬರ

    • Salaar worldwide box office collection: ಕರ್ನಾಟಕದಲ್ಲಿ ಕಾಟೇರ ಸಿನಿಮಾ ಕಳೆದ ಆರು ದಿನದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ರಾಜನಾಗಿ ಮೆರೆಯುತ್ತಿದೆ. ಇದೇ ಸಮಯದಲ್ಲಿ ಹದಿಮೂರು ದಿನಗಳ ಹಿಂದೆ ಬಿಡುಗಡೆಯಾದ ಸಲಾರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಕೂಡ ಭರ್ಜರಿಯಾಗಿದೆ. ಪ್ರಭಾಸ್‌ ಸಿನಿಮಾ 650 ಕೋಟಿ ರೂ. ಕ್ಲಬ್‌ಗೆ ಸೇರಿದೆ.
Salaar box office: ಕರ್ನಾಟಕದಲ್ಲಿ ಕಾಟೇರ, ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಸಲಾರ್‌ ಅಬ್ಬರ
Salaar box office: ಕರ್ನಾಟಕದಲ್ಲಿ ಕಾಟೇರ, ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಸಲಾರ್‌ ಅಬ್ಬರ

ಹೊಸ ವರ್ಷದ ಆರಂಭವು ಸಿನಿಮಾ ಪ್ರೇಮಿಗಳಿಗೆ ಹಬ್ಬದ ವಾತಾವರಣವನ್ನೇ ಉಂಟು ಮಾಡಿದೆ. ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ದರ್ಶನ್‌ ಅಭಿನಯದ ಕಾಟೇರ ಬಾಕ್ಸ್‌ ಆಫೀಸ್‌ ಚಿಂದಿ ಮಾಡುತ್ತಿದೆ. ಇದೇ ಸಮಯದಲ್ಲಿ ಕರ್ನಾಟಕದ ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಕೂಡ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮುಂದುವರೆಸಿದೆ. ದಕ್ಷಿಣ ಭಾರತದ ಸಿನಿಮಾವೊಂದು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮೊತ್ತದ ಗಳಿಕೆ ಮಾಡುವತ್ತ ಮುನ್ನುಗುತ್ತಿದೆ.

ಸಲಾರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

"ಇದು ಸಲಾರ್‌ ಸಿನಿಮಾದ ಜಾಗತಿಕ ಬಾಕ್ಸ್‌ ಆಫೀಸ್‌ ವರದಿ. ಪ್ರಭಾಸ್‌ ಸಲಾರ್‌ ಸಿನಿಮಾ ತನ್ನ 13ನೇ ದಿನ 650 ಕೋಟಿ ಕ್ಲಬ್‌ಗೆ ಸೇರಿದೆ. ಭಾರತದಲ್ಲಿ ಸಲಾರ್‌ ಪಾರ್ಟ್‌ 1 ಸೀಸ್‌ ಫೈರ್‌, ಬಾಹುಬಲಿ, ಜೈಲರ್‌, 2.0, ಕೆಜಿಎಫ್‌ ಚಾಪ್ಟರ್‌, ಆರ್‌ಆರ್‌ಆರ್‌, ಬಾಹುಬಲಿ 2... ದಕ್ಷಿಣ ಭಾರತದ 650 ಕೋಟಿಗೂ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳು" ಎಂದು ಮನೋಬಾಲ ವಿಜಯಬಾಲನ್‌ ಟ್ವೀಟ್‌ ಮಾಡಿದ್ದಾರೆ.

ಸಲಾರ್‌ ಸಿನಿಮಾ ಒಂದನೇ ದಿನ 176.52 ಕೋಟಿ ರೂಪಾಯಿ, ಎರಡನೇ ದಿನ 101.39 ಕೋಟಿ ರೂಪಾಯಿ, ಮೂರನೇ ದಿನ 95.24 ಕೋಟಿ ರೂಪಾಯಿ, ನಾಲ್ಕನೇ ದಿನ 76.91 ಕೋಟಿ ರೂಪಾಯಿ, ಐದನೇ ದಿನ 40.17 ಕೋಟಿ, ಆರನೇ ದಿನ 31.62 ಕೋಟಿ, ಏಳನೇ ದಿನ 20.78 ಕೋಟಿ, ಎಂಟನೇ ದಿನ 14.21 ಕೋಟಿ ರೂಪಾಯಿ, ಒಂಬತ್ತನೇ ದಿನ 21.45 ಕೋಟಿ ರೂಪಾಯಿ, ಹತ್ತನೇ ದಿನ 23.09 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹನ್ನೊಂದನೇ ದಿನ 25.81 ಕೋಟಿ ರೂಪಾಯಿ, ಹನ್ನೆರಡನೇ ದಿನ 12.15 ಕೋಟಿ, ಹದಿಮೂರನೇ ದಿನ 11.07 ಕೋಟಿ ರೂಪಾಯಿ ಸಂಗ್ರಹಿಸಿರುವ ಸಲಾರ್‌ ಸಿನಿಮಾ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 650.41 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ನಿನ್ನೆಯೂ ಮನೋಬಾಲ ಅವರು ಟ್ವೀಟ್‌ ಮಾಡಿ ಹೀಗೆ ಹೇಳಿದ್ದರು. "ಸಲಾರ್‌ ಸಿನಿಮಾವು ತೆಲುಗು ಸಿನಿಮೋದ್ಯಮದ ಮೂರನೇ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿದೆ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 650 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿ ಜೈಲರ್‌ ಮತ್ತು ಬಾಹುಬಲಿಯ ಅಜೀವ ಗಳಿಕೆಯ ಅಂಕಿಅಂಶಗಳನ್ನು ಸಲಾರ್‌ ಹಿಂದಿಕ್ಕಿದೆ" ಎಂದು ಅವರು ಟ್ವೀಟ್‌ ಮಾಡಿದ್ದರು.

ಜೈಲರ್‌ ಸಿನಿಮಾವು ವಿಶ್ವಾದ್ಯಾಂತ 600 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೀಗ ತನ್ನ ಹತ್ತನೇ ದಿನದ ಗಳಿಕೆಯಲ್ಲಿ ಸಲಾರ್‌ ಸಿನಿಮಾವು ರಜನಿಕಾಂತ್‌ ನಟನೆಯ ಜೈಲರ್‌ ಸಿನಿಮಾವನ್ನು ಹಿಂದಿಕ್ಕಿತ್ತು. ಇದೀಗ ಜೈಲರ್‌ ಮತ್ತು ಬಾಹುಬಲಿಯ ಗಳಿಕೆ ಹಿಂದಿಕ್ಕಿದೆ.

ಸಲಾರ್‌ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್‌ನ ವಿಜಯ್‌ ಕಿರಗಂದೂರು ಅವರು ನಿರ್ಮಾಣ ಮಾಡಿದ್ದಾರೆ. ಸಲಾರ್‌ ಸಿನಿಮಾದಲ್ಲಿ ಶೃತಿ ಹಾಸನ್‌, ಈಶ್ವರಿ ರಾವ್‌, ಶ್ರಿಯಾ ರೆಡ್ಡಿ, ಟೀನು ಆನಂದ್‌ ಮತ್ತು ಜಗಪತಿ ಬಾಬು ಕೂಡ ನಟಿಸಿದ್ದಾರೆ.

ಕಾಟೇರ ಬಾಕ್ಸ್‌ ಆಫೀಸ್‌ನಲ್ಲಿ ಕಲೆಕ್ಷನ್‌

ಆರನೇ ದಿನವಾದ ಬುಧವಾರ ಕಾಟೇರ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 9.78 ಕೋಟಿ ಕಲೆಕ್ಷನ್‌ ಮಾಡಿದೆ. ಈ ಮೂಲಕ ಒಟ್ಟಾರೆ 95.36 ಕೋಟಿ ಬಾಕ್ಸ್‌ ಆಫೀಸ್‌ ಗಳಿಕೆ ಮಾಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ