logo
ಕನ್ನಡ ಸುದ್ದಿ  /  ಮನರಂಜನೆ  /  Samantha: ನನ್ನ ಕಾಯಿಲೆ ಬಗ್ಗೆ ಸಾರ್ವಜನಿಕವಾಗಿ ಹೇಳುವ ಒತ್ತಡವಿತ್ತು; ನಟಿ ಸಮಂತಾ ರುತ್‌ ಪ್ರಭು ಬೇಸರದ ಮಾತು

Samantha: ನನ್ನ ಕಾಯಿಲೆ ಬಗ್ಗೆ ಸಾರ್ವಜನಿಕವಾಗಿ ಹೇಳುವ ಒತ್ತಡವಿತ್ತು; ನಟಿ ಸಮಂತಾ ರುತ್‌ ಪ್ರಭು ಬೇಸರದ ಮಾತು

Praveen Chandra B HT Kannada

Mar 16, 2024 01:10 PM IST

google News

ಸಮಂತಾ ರುತ್‌ ಪ್ರಭು

    • ನಟಿ ಸಮಂತಾ ಪ್ರಭು ತಮ್ಮ ಆರೋಗ್ಯ ಸ್ಥಿತಿ ಮಯೋಸಿಟಿಸ್‌ ಕುರಿತು ಆಗಾಗ ಪಾಡ್‌ಕಾಸ್ಟ್‌ನಲ್ಲಿ ವಿವರ ನೀಡುತ್ತ ಇರುತ್ತಾರೆ. ಆದರೆ, ತನ್ನ ಆರೋಗ್ಯ ತೊಂದರೆ ಕುರಿತು ಸಾರ್ವಜನಿಕವಾಗಿ ಹೇಳುವಂತಹ ಒತ್ತಡವಿತ್ತು. ಇಲ್ಲವಾದರೆ ಈ ವಿಚಾರ ಬಹಿರಂಗಪಡಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಸಮಂತಾ ರುತ್‌ ಪ್ರಭು
ಸಮಂತಾ ರುತ್‌ ಪ್ರಭು

ನಟಿ ಸಮಂತಾ ರುತ್‌ ಪ್ರಭು ಅವರು ತನ್ನ ಆರೋಗ್ಯ ಸ್ಥಿತಿ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ತನಗಿರುವ ಮಯೋಸಿಟಿಸ್‌ ಎಂಬ ಆಟೋಇಮ್ಯುನ್‌ ತೊಂದರೆ ಕುರಿತು ಸಾರ್ವಜನಿಕವಾಗಿ ಹೇಳುವಂತೆ ಒತ್ತಡವಿತ್ತು ಎಂದು ಅವರು ಹೇಳಿದ್ದಾರೆ. ಯಶೋದಾ ಸಿನಿಮಾ 2022ರಲ್ಲಿ ರಿಲೀಸ್‌ ಆಗಬೇಕಿತ್ತು. ಆ ಸಮಯಕ್ಕಿಂತ ಮೊದಲು ಸಮಂತಾ ಅವರು ತಮಗೆ ಮಯೋಸಿಟಿಸ್‌ ಇರುವ ಕುರಿತು ಬಹಿರಂಗಪಡಿಸಿದ್ದರು. ನನ್ನ ಹದಿನಾಲ್ಕು ವರ್ಷದ ಕರಿಯರ್‌ನಲ್ಲಿ ಕೆಲವೊಂದು "ಸಂತೋಷವಾಗಿರದ ವರ್ಷಗಳು" ಇವೆ ಎಂದು ಇಂಡಿಯಾ ಟುಡೇಗೆ ಸಮಂತಾ ರುತ್‌ ಪ್ರಭು ಹೇಳಿದ್ದಾರೆ.

ಮಯೋಸಿಟಿಸ್‌ ಕುರಿತು ಹೇಳಲು ಬಯಸಿರಲಿಲ್ಲ

"ನನ್ನ ಕಾಯಿಲೆ ಬಗ್ಗೆ ಸಾರ್ವಜನಿಕವಾಗಿ ಹೇಳುವಂತೆ ಒತ್ತಡವಿತ್ತು. ಆ ಸಮಯದಲ್ಲಿ ಮಹಿಳಾ ಪ್ರಧಾನ ಯಶೋಧಾ ಸಿನಿಮಾ ರಿಲೀಸ್‌ ಆಗಬೇಕಿತ್ತು. ಆ ಸಮಯದಲ್ಲಿ ನನಗೆ ಕಾಯಿಲೆ ಹೆಚ್ಚಾಗಿತ್ತು/ ಅದು ಕಠಿಣ ಸಮಯ. ಆ ಸಮಯದಲ್ಲಿ ಕೆಲವೊಂದು ತಪ್ಪು ಮಾಹಿತಿ, ವದಂತಿ ಹರಡಲು ಆರಂಭವಾಗಿದ್ದವು. ನಿರ್ಮಾಪಕರಿಗೆ ಆ ಸಂದರ್ಭದಲ್ಲಿ ಸಿನಿಮಾ ಪ್ರಮೋಷನ್‌ ಮಾಡಲು ನಾನು ಬೇಕಿತ್ತು. ಆ ವಿಷಯ ಪ್ರಮೋಟ್‌ ಮಾಡುವ ಒತ್ತಡವಿತ್ತು. ವಿಷಯ ಹೇಳು ಅಥವಾ ಇಲ್ಲವಾದರೆ ಆ ಸಿನಿಮಾ ಸತ್ತು ಹೋಗುತ್ತದೆ ಎಂಬ ಸ್ಥಿತಿ ಇತ್ತು. ನಾನು ನನ್ನ ಕಾಯಿಲೆ ವಿಷಯ ಹೇಳಬೇಕು ಅಥವಾ ಸಿನಿಮಾ ಸಾಯಿಸಬೇಕಿತ್ತು. ಎರಡರಲ್ಲಿ ಒಂದು ಆಯ್ಕೆ ಮಾಡಬೇಕಿತ್ತು. ಹೀಗಾಗಿ ಸಂದರ್ಶನವೊಂದರಲ್ಲಿ ನನ್ನ ಆರೋಗ್ಯ ಸ್ಥಿತಿ ಕುರಿತು ಸಾರ್ವಜನಿಕವಾಗಿ ಹಂಚಿಕೊಂಡೆ" ಎಂದು ಸಮಂತಾ ಹೇಳಿದ್ದಾರೆ.

ನನ್ನನ್ನು ಸಿಂಪತಿ ಕ್ವೀನ್‌ ಎಂದು ಕರೆದರು

"ಸಾರ್ವಜನಿಕವಾಗಿ ನನ್ನ ಆರೋಗ್ಯ ತೊಂದರೆ ಕುರಿತು ಹೇಳಿದಾಗ ಇವಳು ಸಿಂಪತಿ ಗಿಟ್ಟಿಸಲು ಹೀಗೆ ಮಾಡುತ್ತಾಳೆ ಎಂದು ಹೇಳಲು ಆರಂಭಿಸಿದರು. ನನ್ನನ್ನು ಸಿಂಪತಿ ಕ್ವೀನ್‌ ಎಂದು ಕರೆದರು. ನಟನಾ ಕ್ಷೇತ್ರ ನನಗೆ ಸಾಕಷ್ಟು ಕಲಿಸಿಕೊಟ್ಟಿದ್ದೆ. ಆರಂಭದಲ್ಲಿ ನಾನು ಖಿನ್ನತೆ ಹೊಂದಿದೆ. ಆನ್‌ಲೈನ್‌ನಲ್ಲಿ ಹೋಗಿ ನನ್ನ ಬಗ್ಗೆ ಯಾರಾದರೂ ಕೆಟ್ಟದ್ದಾಗಿ ಬರೆದಿದ್ದಾರ ಎಂದು ಓದುತ್ತಿದೆ. ಜನರು ಸಾಕಷ್ಟು ನೋವು ನೀಡಲು ಆರಂಭಿಸಿದಾಗ ಇಂತಹದ್ದೆಲ್ಲ ಆಗುತ್ತದೆ. ಈಗ ಸೋಷಿಯಲ್‌ ಮೀಡಿಯಾದಲ್ಲಿ ಯಾರನ್ನಾದರೂ ಯಾವುದಾದರೂ ರೀತಿ ಬಿಂಬಿಸುವಂತಹ ಸ್ಥಿತಿ ಇದೆ. ನಿಜಕ್ಕೂ ಇದು ಚಿಂತಿಸಬೇಕಾದ ವಿಚಾರ" ಎಂದು ಸಮಂತಾ ಹೇಳಿದ್ದಾರೆ.

ಇಂಪೋಸ್ಟರ್ ಸಿಂಡ್ರೋಮ್ ಬಗ್ಗೆ ಸಮಂತಾ ಮಾತು

"ನಾನು ಇಂಪೋಸ್ಟರ್‌ ಸಿಂಡ್ರೋಮ್‌ನಿಂದ ಬಳಲುತ್ತಿದ್ದೇನೆ. ಒಂದು ದಿನ ಅದು ದೂರ ಹೋಗುತ್ತದೆ" ಎಂದು ಅವರು ಹೇಳಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಈ ಸಿಂಡ್ರೋಮ್‌ನಿಂದಾಗಿ ಆನಂದಿಸಲು ಸಾಧ್ಯವಾಗುತ್ತಿರಲಿಲ್ಲ. ಜೀವನದಲ್ಲಿ ಉನ್ನತವಾಗಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ತಮ್ಮ ಬುದ್ಧಿವಂತಿಕೆ, ಕೌಶಲಗಳು, ಸಾಧನೆಗಳ ಕುರಿತು ಸ್ವಯಂ ಸಂದೇಹ ಬರುವುದನ್ನು ಇಂಪೋಸ್ಟರ್‌ ಸಿಂಡ್ರೋಮ್‌ ಎನ್ನುತ್ತಾರೆ.

ಸಮಂತಾ ಪ್ರಾಜೆಕ್ಟ್‌ಗಳು

ಸಮಂತಾ ಅವರು ಕೊನೆಯದಾಗಿ ವಿಜಯ ದೇವರಕೊಂಡ ಜತೆಗೆ ಖುಷಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದು ಶಿವ ನಿರ್ವಾಣ ನಿರ್ದೇಶನ ಮತ್ತು ರಚನೆಯ ಸಿನಿಮಾ. ಮೈತ್ರಿ ಮೂವಿ ಮೇಕರ್ಸ್‌ ಈ ಸಿನಿಮಾ ನಿರ್ಮಾಣ ಮಾಡಿದೆ. ಸೆಪ್ಟೆಂಬರ್‌ 1, 2023ರಲ್ಲಿ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಬಿಡುಗಡೆಯಾಗಿತ್ತು. ಸಿತ್ರಾಡೆಲ್‌ ಎಂಬ ಆಕ್ಷನ್‌ ಸೀರಿಸ್‌ನಲ್ಲೂ ಸಮಂತಾ ನಟಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ