ಕನ್ನಡ ಸುದ್ದಿ  /  Entertainment  /  Kollywood News Actress Samantha Ruth Prabhu Visits Temple In Tiruchanur Clicks Selfies With Fans Pcp

Samantha: ಪದ್ಮಾವತಿ ಅಮ್ಮವಾರಿ ದೇಗುಲಕ್ಕೆ ಭೇಟಿ ನೀಡಿದ ಸಮಂತಾ ರುತ್‌ ಪ್ರಭು; ಅಭಿಮಾನಿಗಳಿಗೆ ಖುಷಿಯೋ ಖುಷಿ

ನಟಿ ಸಮಂತಾ ರುತ್‌ ಪ್ರಭು ಶ್ರೀ ಪದ್ಮಾವತಿ ಅಮ್ಮವಾರಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಮೈಯೋಸಿಟಿಸ್ ಆರೋಗ್ಯ ತೊಂದರೆಯಿಂದ ಸಿನಿಮಾ ಕೆಲಸದಿಂದ ಸಮಂತಾ ಬ್ರೇಕ್‌ ಪಡೆದಿದ್ದರು. ಶೀಘ್ರದಲ್ಲಿ ಇವರು ಸಿನಿಮಾರಂಗಕ್ಕೆ ಹಿಂತುರುಗುವ ನಿರೀಕ್ಷೆಯಿದೆ.

Samantha: ಪದ್ಮಾವತಿ ಅಮ್ಮವಾರಿ ದೇಗುಲಕ್ಕೆ ಭೇಟಿ ನೀಡಿದ ಸಮಂತಾ ರುತ್‌ ಪ್ರಭು
Samantha: ಪದ್ಮಾವತಿ ಅಮ್ಮವಾರಿ ದೇಗುಲಕ್ಕೆ ಭೇಟಿ ನೀಡಿದ ಸಮಂತಾ ರುತ್‌ ಪ್ರಭು (Instagram)

ನಟಿ ಸಮಂತಾ ರುತ್‌ ಪ್ರಭು ಅವರು ಸೋಮವಾರ ಬೆಳಗ್ಗೆ ತಿರುಚಾನೂರ್‌ಗೆ ಭೇಟಿ ನೀಡಿದ್ದಾರೆ. ಶ್ರೀ ಪದ್ಮಾವತಿ ಅಮ್ಮವಾರಿ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ದೇಗುಲ ದರ್ಶನ ಮಾಡಿರುವ ವಿಡಿಯೋವನ್ನು ಸಮಂತಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಅಭಿಮಾನಿಗಳ ಜತೆ ತೆಗೆಸಿಕೊಂಡ ಫೋಟೋವನ್ನೂ ಹಂಚಿಕೊಂಡಿದ್ದಾರೆ.

"ನಟಿ ಸಮಂತಾ ರುತ್‌ ಪ್ರಭು ಅವರು ಇಂದು ಶ್ರೀ ಪದ್ಮಾವತಿ ಅಮ್ಮಾವಾರಿ ದೇಗುಲಕ್ಕೆ ಭೇಟಿ ನೀಡಿದ್ದಾರೆ" ಎಂದು ಸಮಂತಾ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ. ಇದೇ ಪೋಸ್ಟ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕುರ್ತಾ ಪೈಜಾಮ ಧರಿಸಿದ ನಟಿ ದೇಗುಲದೊಳಗೆ ಹೋಗುವ ದೃಶ್ಯ ವಿಡಿಯೋದಲ್ಲಿದೆ. ಇವರು ಸರಳ ಉಡುಗೆಗೆ ತಕ್ಕಂತೆ ಸಿಂಪಲ್‌ ಆದ ಚಿನ್ನದ ಇಯರಿಂಗ್‌ ಧರಿಸಿದ್ದಾರೆ. ಹಣೆಗೆ ಪುಟ್ಟ ಬೊಟ್ಟು ಇಟ್ಟಿದ್ದರು. ತಲೆಕೂದಲನ್ನು ಹಿಂಬದಿಗೆ ಕಟ್ಟಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಸಮಂತಾ ತನ್ನ ಕೆಲವು ಅಭಿಮಾನಿಗಳ ಜತೆ ಸೆಲ್ಫ್‌ ತೆಗೆದಿದ್ದಾರೆ. ಇವರ ಜತೆ ಸೆಲೆಬ್ರಿಟಿ ಸ್ಟೈಲಿಸ್ಟ್‌ ಮತ್ತು ಸ್ನೇಹಿತ ಪ್ರೀತಮ್‌ ಜುಕಲ್ಕರ್‌ ಇದ್ದರು.

ಮತ್ತೆ ಸಿನಿಮಾದತ್ತ ಸಮಂತಾ

ಆರೋಗ್ಯ ತೊಂದರೆಯ ಕಾರಣದಿಂದ ಸಿನಿಮಾ ಕೆಲಸದಿಂದ ಸಮಂತಾ ಬ್ರೇಕ್‌ ಪಡೆದಿದ್ದರು. ಇದೀಗ ಹಿಂದೂಸ್ತಾನ್‌ ಟೈಮ್ಸ್‌ಗೆ ಮೂಲಗಳು ತಿಳಿಸಿದ ಪ್ರಕಾರ ಈ ವರ್ಷ ಸಮಂತಾ ಸಿನಿಮಾರಂಗಕ್ಕೆ ಮರಳುತ್ತಿದ್ದಾರೆ. "ಈಗ ಸಮಂತಾರ ಆರೋಗ್ಯ ಸಾಕಷ್ಟು ಉತ್ತಮವಾಗಿದೆ. ಅವರ ಮನಸ್ಸು ಮತ್ತು ಆರೋಗ್ಯ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಇವರ ಆರೋಗ್ಯ ಇನ್ನಷ್ಟು ಸುಧಾರಿಸಲಿದೆ. ಈಗ ಇವರು ಜಗತ್ತಿನಾದ್ಯಂತ ಪ್ರಯಾಣ ಕೈಗೊಳ್ಳುತ್ತಿದ್ದಾರೆ. ಸಾಕಷ್ಟು ಹೊಸ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಈ ಶಕ್ತಿಯನ್ನು ಕೆಲಸದ ಮೇಲೆ ತೋರಿಸಲು ಸಿದ್ಧರಿದ್ದಾರೆ" ಎಂದು ಮೂಲಗಳು ತಿಳಿಸಿವೆ. "ಇವರು ನಟನೆಯತ್ತ ಮರಳುತ್ತಾರೆ. ಅವರು ಈಗ ಅವಕಾಶಗಳನ್ನು ಅವಲೋಕಿಸುತ್ತ ಇದ್ದಾರೆ. ಸಿತ್ರಾಡೆಲ್‌ ಪ್ರಮೋಷನ್‌ಗೆ ಇವರು ಆಗಮಿಸುವ ಸೂಚನೆ ಇದೆ. ಇದೇ ಸಮಯದಲ್ಲಿ ಇವರು ಹೊಸ ಪ್ರಾಜೆಕ್ಟ್‌ ಕೂಡ ಶೀಘ್ರದಲ್ಲಿ ಆರಂಭಿಸಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ಸಮಂತಾ ವಾರಕ್ಕೊಮ್ಮೆ ಪಾಡ್‌ಕಾಸ್ಟ್‌ ವಿಡಿಯೋ ಬಿಡುಗಡೆ ಮಾಡುತ್ತಾರೆ. ಪ್ರತಿವಾರ ಆರೋಗ್ಯದ ಕುರಿತು ಮಾತನಾಡುತ್ತಾರೆ. ಸಿತ್ರಾಡೆಲ್‌ನ ಭಾರತದ ಆವೃತ್ತಿಯಲ್ಲಿ ಇವರು ಕಾಣಿಸಿಕೊಳ್ಳಲಿದ್ದಾರೆ. ಇವರ ಜತೆ ವರುಣ್‌ ಧವನ್‌ ಸಹ ನಟರಾಗಿ ನಟಿಸುತ್ತಿದ್ದಾರೆ. ಫಿಲಿಪ್‌ ಜಾನ್ಸ್‌ರ ಚೆನ್ನೈ ಸ್ಟೋರೀಸ್‌ನಲ್ಲೂ ನಟಿಸಬೇಕಿತ್ತು. ಆದರೆ, ಇತ್ತೀಚೆಗೆ ಇವರ ಬದಲು ಶೃತಿ ಹಾಸನ್‌ ಅವರನ್ನು ಪ್ರಮುಖ ಪಾತ್ರಕ್ಕೆ ಹಾಕಿಕೊಳ್ಳಲಾಗಿತ್ತು. ಸಮಂತಾ ಸಿನಿಮಾಕ್ಷೇತ್ರಕ್ಕೆ ಆಗಮಿಸಿ ಹದಿನಾಲ್ಕು ವರ್ಷಗಳಾಗಿವೆ.

ಮೈಯೋಸಿಟಿಸ್ ಆರೋಗ್ಯ ತೊಂದರೆಯಿಂದ ಸದ್ಯ ಸಮಂತಾ ಸಿನಿಮಾದಿಂದ ತುಸು ಬ್ರೇಕ್‌ ಪಡೆದುಕೊಂಡಿದ್ದಾರೆ. ಶಕುಂತಲಂ ಮತ್ತು ಖುಷಿ ಇವರ ಇತ್ತೀಚಿನ ಸಿನಿಮಾಗಳು. ಹೇ ಮಾಯಾ ಚೇಸಾವೆ, ಬಾನಾ ಕಾಥಡಿ, ಮಾಸ್ಕೊವಿನ್‌ ಕಾವೇರಿ, ಬೃಂದಾವನಂ ಇವರ ಆರಂಭಿಕ ಸಿನಿಮಾಗಳು, ಬಳಿಕ ನಾಡುನಿಸಿ ನಾಯಾಗಲ್‌, ದೂಕುಡು, ಏಕ್‌ ದಿವಾನ ತಾ, ಈಗ ಸಿನಿಮಾದಲ್ಲಿ ಬಳಿಕ ನಟಿಸಿದರು. ಈಗ ಸಿನಿಮಾದಲ್ಲಿ ಸುದೀಪ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

IPL_Entry_Point