logo
ಕನ್ನಡ ಸುದ್ದಿ  /  ಮನರಂಜನೆ  /  ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಅವರ ಖಾಸಗಿ ಫೋಟೋ ನೋಡಿ ಕಟ್ಟೆಯೊಡೆದ ಅಭಿಮಾನಿಗಳ ಆಕ್ರೋಶ

ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಅವರ ಖಾಸಗಿ ಫೋಟೋ ನೋಡಿ ಕಟ್ಟೆಯೊಡೆದ ಅಭಿಮಾನಿಗಳ ಆಕ್ರೋಶ

Praveen Chandra B HT Kannada

Nov 30, 2023 04:40 PM IST

ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಅವರ ಖಾಸಗಿ ಫೋಟೋ ನೋಡಿ ಕಟ್ಟೆಯೊಡೆದ ಅಭಿಮಾನಿಗಳ ಆಕ್ರೋಶ

    • Vijay Deverakonda-Rashmika Mandanna vacation pics: ಕನ್ನಡದ ಕಿರಿಕ್‌ ಪಾರ್ಟಿಯಿಂದ ಬಾಲಿವುಡ್‌ನ ಅನಿಮಲ್‌ವರೆಗೆ ಜನಪ್ರಿಯತೆ ಪಡೆದ ರಶ್ಮಿಕಾ ಮಂದಣ್ಣರ ಹೊಸ ಫೋಟೋವೊಂದು ಲೀಕ್‌ ಆಗಿದೆ. ಅವರು ವಿಜಯ್‌ ದೇವರಕೊಂಡ ಜತೆಗೆ ಖಾಸಗಿ ಪ್ರವಾಸದಲ್ಲಿದ್ದ ಸಂದರ್ಭದ ತೆಗೆದ ಫೋಟೋ ಇದಾಗಿದೆ.
ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಅವರ ಖಾಸಗಿ ಫೋಟೋ ನೋಡಿ ಕಟ್ಟೆಯೊಡೆದ ಅಭಿಮಾನಿಗಳ ಆಕ್ರೋಶ
ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಅವರ ಖಾಸಗಿ ಫೋಟೋ ನೋಡಿ ಕಟ್ಟೆಯೊಡೆದ ಅಭಿಮಾನಿಗಳ ಆಕ್ರೋಶ

ಬೆಂಗಳೂರು: ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅಭಿಮಾನಿಗಳು ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಛೇ, ಇದೇನಿದು, ಇದೇನಾ ಸಭ್ಯತೆ, ಇಷ್ಟು ಕೀಳುಮಟ್ಟಕ್ಕೆ ಹೋಗಬಾರದಿತ್ತು ಎಂದೆಲ್ಲ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹೇಳುತ್ತ ಇದ್ದಾರೆ. ಅಂದಹಾಗೆ, ಅಭಿಮಾನಿಗಳು ಈ ರೀತಿ ಹೇಳುತ್ತಿರುವುದು ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ವಿರುದ್ಧ ಅಲ್ಲ. ಹಾಯ್‌ ನಾನಾ ಚಿತ್ರತಂಡದ ವಿರುದ್ಧ ಫ್ಯಾನ್ಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಬರಲಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯೋಪಿಕ್‌; ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಬಾಹುಬಲಿಯ ಕಟ್ಟಪ್ಪ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಅಂತಹದ್ದೇನಾಯ್ತು?

ಹಾಯ್‌ ನಾನಾ ಸಿನಿಮಾ ಬಿಡುಗಡೆಗೆ ಮುನ್ನ ಪ್ರಚಾರಕ್ಕಾಗಿ ಆಯೋಜಿಸಿದ ಕಾರ್ಯಕ್ರಮವದು. ವಿಶಾಖಪಟ್ಟಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿಯಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ನಾನಿ ಮತ್ತು ಮೃಣಾಲ್‌ ಠಾಕೂರ್‌ ಅವರ ಸಿನಿಮಾದ ವಿವರಗಳನ್ನು ಕೇಳಲು ರೆಡಿಯಾಗಿದ್ದರು. ಆದರೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳು ಬೇಸರಗೊಂಡರು. ತಮ್ಮ ನೆಚ್ಚಿನ ತಾರೆಯರ ಕುರಿತು ಯಾವುದೇ ಸಂಬಂಧವಿಲ್ಲದ ವಿಷಯಕ್ಕೆ ಎಳೆದ ಕಾರಣಕ್ಕಾಗಿ ನಿರೂಪಕಿ ಸುಮಾ ವಿರುದ್ಧ ಸೋಷಿಯಲ್‌ ಮೀಡಿಯಾದಲಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅನಿಮಲ್‌ ನಟಿ ರಶ್ಮಿಕಾ ಮಂದಣ್ಣರ 10 ಅತ್ಯುತ್ತಮ ಸಿನಿಮಾಗಳು

ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ ಫೋಟೋ

ಆಂಕರ್‌ ಸುಮಾ ಅವರು ಅಭಿಮಾನಿಗಳನ್ನು ಕೆರಳಿಸಿದ ಪ್ರಸಂಗವಿದು. ಇದ್ದಕ್ಕಿದ್ದಂತೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಥ್ರೋಬ್ಯಾಕ್ ಚಿತ್ರಗಳು ತೆರೆಯ ಮೇಲೆ ಕಾಣಿಸಿದವು. ಈ ಚಿತ್ರಗಳನ್ನು ತೋರಿಸಲೇ ಎಂದು ಸಂಘಟಕರನ್ನು ಕೇಳಿದಂತೆ ನಿರೂಪಕಿ ನಾಟಕವಾಡಿದರು. ಈ ಫೋಟೋ ನೀವಾ ತೆಗೆದಿರುವುದಾ? ಬಾಲಿಯಲ್ಲಿ ನೀವೇ ತೆಗೆದದ್ದು ಎಂದು ಫೋಟೋಗ್ರಾಫರ್‌ವೊಬ್ಬರಿಗೆ ಕೇಳಿದರು. ಈ ಫೋಟೋವನ್ನು ಮೃಣಾಲ್‌ ಆಶ್ಚರ್ಯದಿಂದ ನೋಡಿದರು. ಇದನ್ನು ನೋಡಿದ ನಾನಿಗೆ ನಗುಬಂತು. ಇವರಿಬ್ಬರ ಖಾಸಗಿ ಫೋಟೋಗಳನ್ನು ತೆಗೆದಿರುವುದು ತಪ್ಪು ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗಿದೆ. ಅವರ ಗೌಪ್ಯತೆಯನ್ನು ಕಾಪಾಡದೆ ಇಂತಹ ಚಿತ್ರಗಳನ್ನು ಕಾರ್ಯಕ್ರಮವೊಂದರಲ್ಲಿ ತೋರಿಸಿರುವುದಕ್ಕೆ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಸುಮಾಗೆ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಅನಿಮಲ್‌ ಟ್ರೈಲರ್‌ ಬಿಡುಗಡೆ: ರಣಬೀರ್‌ ಕಪೂರ್‌, ಬಾಬಿ ಡಿಯೋಲ್‌ ರಕ್ತಸಿಕ್ತ ಅಧ್ಯಾಯ, ಕೌರ್ಯದ ರಗಡ್‌ ಚಿತ್ರಣ; ರಶ್ಮಿಕಾ ಮಂದಣ್ಣ ಪಾತ್ರವೇನು

ಇದು ಚೀಪ್‌ ಗಿಮಿಕ್‌ ಎಂದ ಫ್ಯಾನ್ಸ್‌

ಹಾಯ್‌ ನಾನಾ ಚಿತ್ರದ ಪ್ರಮೋಷನ್‌ಗೆ ಇಂತಹ ಚೀಪ್‌ ಗಿಮಿಕ್‌ ಮಾಡಬಾರದಿತ್ತು ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳು ಹರಿಹಾಯ್ದಿದ್ದಾರೆ. ಇದು ತಪ್ಪಿ ತೋರಿಸಿದ ಚಿತ್ರವಲ್ಲ. ಬೇಕೆಂದೇ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಮಾಡಿರುವ ಸ್ಟಂಟ್‌ ಎಂದು ರಶ್ಮಿಕಾ-ದೇವರಕೊಂಡ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಚಿತ್ರ ನೋಡಿ ಎಲ್ಲರೂ ನಗುತ್ತಿದ್ದಾರೆ. ಸುಮಾ ಕೆಟ್ಟ ನಿರೂಪಕಿ ಎಂದೆಲ್ಲ ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಇನ್ನೊಬ್ಬರ ವೈಯಕ್ತಿಕ ಬದುಕಿನ ಚಿತ್ರಗಳನ್ನು ಪ್ರಕಟಿಸುವುದು ಸಭ್ಯತೆಯ ಲಕ್ಷಣವಲ್ಲ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಈ ಮೂಲಕ ಸಿನಿಮಾ ಪ್ರಚಾರ ಮಾಡುವ ಕೀಳು ಮಟ್ಟಕ್ಕೆ ಚಿತ್ರತಂಡ ಇಳಿಯಬಾರದಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನಿಯು ತನ್ನ ವೈಯಕ್ತಿಕ ಬದುಕನ್ನು ತೋರಿಸಿ ಸಿನಿಮಾ ಪ್ರಮೋಷನ್‌ ಮಾಡುವ ಅಗತ್ಯವೇನಿದೆ ಎಂದೂ ಕೆಲವರು ಕಾಮೆಂಟ್‌ ಮಾಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ