logo
ಕನ್ನಡ ಸುದ್ದಿ  /  ಮನರಂಜನೆ  /  ಪುಷ್ಪ 2 'ಪೀಲಿಂಗ್ಸ್' ಹಾಡಿಗೆ ಕುಂತಲ್ಲೇ ಕುಣಿದ ವೀಕ್ಷಕ; ಅಲ್ಲು ಅರ್ಜುನ್-ರಶ್ಮಿಕಾ ಬೊಂಬಾಟ್ ಡಾನ್ಸ್ -Video

ಪುಷ್ಪ 2 'ಪೀಲಿಂಗ್ಸ್' ಹಾಡಿಗೆ ಕುಂತಲ್ಲೇ ಕುಣಿದ ವೀಕ್ಷಕ; ಅಲ್ಲು ಅರ್ಜುನ್-ರಶ್ಮಿಕಾ ಬೊಂಬಾಟ್ ಡಾನ್ಸ್ -Video

Jayaraj HT Kannada

Dec 02, 2024 08:51 AM IST

google News

ಪುಷ್ಪ 2 'ಪೀಲಿಂಗ್ಸ್' ಹಾಡಿಗೆ ಕುಂತಲ್ಲೇ ಕುಣಿದ ವೀಕ್ಷಕ; ಅಲ್ಲು ಅರ್ಜುನ್-ರಶ್ಮಿಕಾ ಡಾನ್ಸ್

    • ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಡಾನ್ಸ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ. ಡಿಎಸ್‌ಪಿ ಸಂಗೀತ ಸಂಯೋಜನೆ ಮತ್ತೊಮ್ಮೆ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಪುಷ್ಪ 2 ಚಿತ್ರ ಪೀಲಿಂಗ್ಸ್‌ ಹಾಡು ಯುವಕರ ಫೀಲಿಂಗ್ಸ್ ಹೆಚ್ಚಿಸಿದೆ. ಜೊತೆಗೆ ಹಾಡಿನಲ್ಲಿರುವುದು ಅಲ್ಲು ಅರ್ಜುನ್‌ ಅಲ್ಲ ಮಲ್ಲು ಅರ್ಜುನ್‌ ಎಂದಿದ್ದಾರೆ..
ಪುಷ್ಪ 2 'ಪೀಲಿಂಗ್ಸ್' ಹಾಡಿಗೆ ಕುಂತಲ್ಲೇ ಕುಣಿದ ವೀಕ್ಷಕ; ಅಲ್ಲು ಅರ್ಜುನ್-ರಶ್ಮಿಕಾ ಡಾನ್ಸ್
ಪುಷ್ಪ 2 'ಪೀಲಿಂಗ್ಸ್' ಹಾಡಿಗೆ ಕುಂತಲ್ಲೇ ಕುಣಿದ ವೀಕ್ಷಕ; ಅಲ್ಲು ಅರ್ಜುನ್-ರಶ್ಮಿಕಾ ಡಾನ್ಸ್

'ಪುಷ್ಪ 2: ದಿ ರೂಲ್' ಚಿತ್ರದ ಪೀಲಿಂಗ್ಸ್ ಎಂಬ ಹೊಸ ಹಾಡು ಭಾನುವಾರ (ಡಿಸೆಂಬರ್‌ 1) ಬಿಡುಗಡೆಯಾಗಿದೆ. ಹಾಡಿಗೆ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಬಿಂದಾಸ್‌ ಡಾನ್ಸ್‌ ಮಾಡಿದ್ದಾರೆ. ಮೂಲ ಹಾಡಿನ ಜೊತೆಗೆ ಮಲಯಾಳಂ ಸಾಹಿತ್ಯ ಮಿಶ್ರಣವಾಗಿರವ ಈ ಹಾಡನ್ನು ದೇವಿ ಶ್ರೀ ಪ್ರಸಾದ್ ಸಂಯೋಜಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಒಂದೇ ದಿನದೊಳಗೆ ಈ ಹಾಡು ಭರ್ಜರಿ ವೀಕ್ಷಣೆಗಳನ್ನು ಪಡೆದಿದೆ. ಅರ್ಜುನ್ ಮತ್ತು ರಶ್ಮಿಕಾ ಡಾನ್ಸ್‌ನಲ್ಲಿ ವಿಭಿನ್ನ ಮಾಸ್ ಚಲನೆಗಳನ್ನು ತೋರಿಸಿದ್ದು, ವೀಕ್ಷಕರಿಗೆ ಮೆಚ್ಚುಗೆಯಾಗಿದೆ.

ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಹಿಂದಿ ಭಾಷೆಗಳಲ್ಲಿಯೂ 'ಪುಷ್ಪ 2: ದಿ ರೂಲ್' ಚಿತ್ರದ ಪೀಲಿಂಗ್ಸ್ ಹಾಡು ಬಿಡುಗಡೆಯಾಗಿದೆ. 4 ನಿಮಿಷ 11 ಸೆಕೆಂಡುಗಳ ವಿಡಿಯೊದಲ್ಲಿ ಆರಂಭದಿಂದ ಕೊನೆಯವರೆಗೂ ರೊಮ್ಯಾಂಟಿಕ್‌ ಮಾಸ್‌ ಡಾನ್ಸ್‌ ಮೂವವ್‌ಗಳನ್ನು ನೋಡಬಹುದು. ಹಾಡು ಮಲಯಾಳಂ ಸಾಹಿತ್ಯದೊಂದಿಗೆ ಆರಂಭವಾಗುತ್ತಿದ್ದು, ಸಿಜು ತುರವೂರ್ ಮಲಯಾಳಂ ಸಾಲುಗಳನ್ನು ಬರೆದಿದ್ದಾರೆ. ತೆಲುಗು ಸಾಹಿತ್ಯವನ್ನು ಚಂದ್ರಬೋಸ್ ಬರೆದಿದ್ದಾರೆ.

ಕನ್ನಡ ಸಾಹಿತ್ಯ ಮತ್ತಷ್ಟು ಆಕರ್ಷಕವಾಗಿದ್ದು, ವರದರಾಜ್‌ ಚಿಕ್ಕಬಳ್ಳಾಪುರ ತಮ್ಮ ಸಾಹಿತ್ಯದೊಂದಿಗೆ ಯುವಕರನ್ನು ಆಕರ್ಷಿಸಿದ್ದಾರೆ. ವಿಡಿಯೋದ ಭಾಗವು ಹಾಡಿನ ಮೇಲೆ ಕೇಂದ್ರೀಕರಿಸಿದರೆ; ನಿರ್ದೇಶಕ ಸುಕುಮಾರ್, ಸಂಗೀತ ಸಂಯೋಜಕ ಡಿಎಸ್‌ಪಿ ಮತ್ತು ಛಾಯಾಗ್ರಾಹಕ ಮಿರೆಸ್ಲೋ ಕುಬಾ ಬ್ರೋಜೆಕ್ ಅವರ ತೆರೆಮರೆಯ ಕೈಚಳಕ ಹಾಡಿನಲ್ಲಿ ವಿಡಿಯೋ ಔಟ್‌ಪುಟ್‌ನಲ್ಲಿ ಗೊತ್ತಾಗುತ್ತಿದೆ.

ಸಂತೋಷ್ ವೆಂಕಿ ಮತ್ತು ಅಮಲಾ ಚೇಬೋಲು ಕನ್ನಡ ಗಾಯಕರು

ತೆಲುಗು ಹಾಡನ್ನು ಶಂಕರ ಬಾಬು ಕಂದುಕೂರಿ ಮತ್ತು ಲಕ್ಷ್ಮೀ ದಾಸ ಹಾಡಿದರೆ, ಕನ್ನಡ ಹಾಡಿಗೆ ಸಂತೋಷ್ ವೆಂಕಿ ಮತ್ತು ಅಮಲಾ ಚೇಬೋಲು ಧ್ವನಿಯಾಗಿದ್ದಾರೆ.

'ಪುಷ್ಪಾ: ದಿ ರೈಸ್' ಚಿತ್ರದಲ್ಲಿ ಪುಷ್ಪ ರಾಜ್ ಪಾತ್ರದ ಅಲ್ಲು ಅರ್ಜುನ್ ಹೆಚ್ಚು ಡಾನ್ಸ್‌ ಮಾಡಿರಲಿಲ್ಲ. ಹೀಗಾಗಿ ದಿ ರೂಲ್‌ ಚಿತ್ರದಲ್ಲಿ ಅರ್ಜುನ್ ಡಾನ್ಸ್‌ ನೋಡಿ ಅಭಿಮಾನಿಗಳು ಪುಳಕಗೊಂಡಿದ್ದಾರೆ. “ವಿಂಟೇಜ್ ಅಲ್ಲು ಅರ್ಜುನ್ ಅಣ್ಣಾ ಡ್ಯಾನ್ಸ್” ಎಂದು ಒಬ್ಬ ಅಭಿಮಾನಿ ಬರೆದರೆ, ಇನ್ನೊಬ್ಬರು ಈ ಹಾಡಿಗೆ ಚಿತ್ರಮಂದಿರದಲ್ಲಿ “ಕಾಳ್ಗಿಚ್ಚು ಹರಡುತ್ತದೆ” ಎಂದು ಹೇಳಿಕೊಂಡಿದ್ದಾರೆ.‌ ಹಾಡಿನಲ್ಲಿ ಮಲಯಾಳಂ ಲಿರಿಕ್ಸ್‌ ಇರುವುದು ಮಲಯಾಳಿ ಅಭಿಮಾನಿಗಳಿಗೆ ಖುಷಿಯಾಗಿದ್ದು,‌ ‘ಅಲ್ಲು ಅರ್ಜುನ್‌ ಅಲ್ಲ ಮಲ್ಲು ಅರ್ಜುನ್’ ಎಂದಿದ್ದಾರೆ. ಇನ್ನೊಂದೆಡೆ ಡ್ಯಾನ್ಸ್ ಮಾಡುವಾಗ ಅರ್ಜುನ್ ಮತ್ತು ರಶ್ಮಿಕಾ ಅವರ ಕೆಮಿಸ್ಟ್ರಿ ನೋಡಿ ಕೆಲವು ಅಭಿಮಾನಿಗಳು ಪ್ರಭಾವಿತರಾಗಿದ್ದಾರೆ.

ತೆಲುಗು ಹಾಡು ಈಗಾಗಲೇ 84 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಕನ್ನಡ ಹಾಡು 7 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಸಂಪಾದಿಸಿದೆ.

'ಪುಷ್ಪ 2' ಚಿತ್ರದಲ್ಲಿಯೂ ಅರ್ಜುನ್ ಮತ್ತು ರಶ್ಮಿಕಾ ಮೊದಲ ಚಿತ್ರದಂತೆ ಪುಷ್ಪ ರಾಜ್ ಮತ್ತು ಶ್ರೀವಲ್ಲಿ ಪಾತ್ರಗಳನ್ನು ಪುನರಾವರ್ತಿಸಿದ್ದಾರೆ. ಇದೇ ವೇಳೆ ಫಹಾದ್ ಫಾಸಿಲ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.

ಚಿತ್ರವು ಡಿಸೆಂಬರ್ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪುಷ್ಪಾ 2: ದಿ ರೂಲ್ ನ ಮುಂಗಡ ಬುಕಿಂಗ್ ಅನ್ನು ವಿಶ್ವಾದ್ಯಂತ ತೆರೆಯಲಾಗಿದೆ. ಹೀಗಾಗಿ ಚಿತ್ರದ ಗಳಿಕೆ ಬಗ್ಗೆ ಭಾರಿ ನಿರೀಕ್ಷೆಗಳಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ