Chalapathi Rao Passes Away: ಟಾಲಿವುಡ್‌ನಲ್ಲಿ ಸರಣಿ ದುರಂತ...ಹೃದಯಾಘಾತದಿಂದ ಹಿರಿಯ ನಟ ಚಲಪತಿ ರಾವ್ ನಿಧನ
Dec 25, 2022 08:13 AM IST
ಟಾಲಿವುಡ್ ಹಿರಿಯ ನಟ ಚಲಪತಿ ರಾವ್ ನಿಧನ
- ಚಲಪತಿ ರಾವ್ (Chalapathi Rao) ಇಂದು (ಭಾನುವಾರ) ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೆಲವು ದಿನಗಳಿಂದ ಚಲಪತಿ ರಾವ್ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಬ್ಬರು ಪುತ್ರಿಯರು, ಪುತ್ರ ಹಾಗೂ ಪತಿಯನ್ನು ಚಲಪತಿ ರಾವ್ ಅಗಲಿದ್ದಾರೆ. ಪುತ್ರ ರವಿಬಾಬು (Ravi Babu), ತೆಲುಗು ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
ಟಾಲಿವುಡ್‌ನಲ್ಲಿ ಒಂದರ ಹಿಂದೊಂದರಂತೆ ದುರಂತ ನಡೆಯುತ್ತಿದೆ. ಇತ್ತೀಚೆಗೆ ಸೂಪರ್ ಸ್ಟಾರ್ ಕೃಷ್ಣ (Superstar Krishna) ನಿಧನರಾಗಿದ್ದರು. ಆ ನೋವಿನಿಂದ ಹೊರಬರುತ್ತಿದ್ದಂತೆ ಮೊನ್ನೆಯಷ್ಟೇ ಕೈಕಲಾ ಸತ್ಯನಾರಾಯಣ್ (Kaikala Satyanarayana)ಅವರ ಸಾವು ತೆಲುಗು ಮಂದಿಗೆ ಆಘಾತ ನೀಡಿತ್ತು. ನಿನ್ನೆಯಷ್ಟೇ ಸತ್ಯನಾರಾಯಣ್ ಅವರ ಅಂತ್ಯಸಂಸ್ಕಾರ ನೆರವೇರಿತ್ತು. ಇಂದು ಟಾಲಿವುಡ್‌ನ ಮತ್ತೊಬ್ಬ ಹಿರಿಯ ನಟ ಚಲಪತಿ ರಾವ್ (Chalapathi Rao)ನಿಧನರಾಗಿದ್ದಾರೆ.
ತೆಲುಗಿನ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಚಲಪತಿ ರಾವ್ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಪೋಷಕ ನಟನಾಗಿ, ವಿಲನ್ ಆಗಿ, ಹಾಸ್ಯಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದ ಚಲಪತಿ ರಾವ್ ಇಂದು (ಭಾನುವಾರ) ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೆಲವು ದಿನಗಳಿಂದ ಚಲಪತಿ ರಾವ್ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಬ್ಬರು ಪುತ್ರಿಯರು, ಪುತ್ರ ಹಾಗೂ ಪತಿಯನ್ನು ಚಲಪತಿ ರಾವ್ ಅಗಲಿದ್ದಾರೆ. ಪುತ್ರ ರವಿಬಾಬು, ತೆಲುಗು ಚಿತ್ರರಂದಲ್ಲಿ ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಚಲಪತಿ ರಾವ್ 8 ಮೇ 1944 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪರರು ಎಂಬ ಗ್ರಾಮದಲ್ಲಿ ಜನಿಸಿದರು. ಎನ್‌ಟಿಆರ್ ಅವರ ಸ್ಪೂರ್ತಿಯಿಂದ ಚಿತ್ರರಂಗಕ್ಕೆ ಬಂದ ಅವರು ಉತ್ತಮ ನಟನಾಗಿ ಹೆಸರು ಮಾಡಿದ್ದರು.
ಚಲಪತಿ ರಾವ್, ಎನ್‌ಟಿಆರ್ ಅವರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನಾರೋಗ್ಯದ ಕಾರಣದಿಂದ ಇತ್ತೀಚೆಗೆ ನಟನೆಯಿಂದ ದೂರ ಉಳಿದಿದ್ದ ಚಲಪತಿ ರಾವ್, ಈ ಮಧ್ಯೆ ಕೆಲವೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಅವರು ತೆಲುಗು ಚಿತ್ರರಂಗದಿಂದ ಶಾಶ್ವತವಾಗಿ ಅಗಲಿದ್ದಾರೆ. ಚಲಪತಿ ರಾವ್ ನಿಧನರಾದ ಸುದ್ದಿ ತೆಲುಗು ಚಿತ್ರರಂಗಕ್ಕೆ ಆಘಾತ ನೀಡಿದ. ಸಿನಿಮಾಭಿಮಾನಿಗಳು ಕೂಡಾ ಹಿರಿಯ ನಟನ ಅಗಲಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಿಧನರಾದ ಕೈಕಲಾ ಸತ್ಯನಾರಾಯಣ್
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೈಕಲಾ ಸತ್ಯನಾರಾಯಣ್ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಡಿಸ್ಚಾರ್ಜ್ ಆಗಿ ಮನೆಗೆ ಕೂಡಾ ಬಂದಿದ್ದರು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 23ರಂದು ಸತ್ಯನಾರಾಯಣ್ ನಿಧನರಾದರು. ಇವರು ಕೂಡಾ ಟಾಲಿವುಡ್ ದಿಗ್ಗಜ ಎನ್‌ಟಿಆರ್ ಅವರ ಕಾಲದಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಕೈಕಲಾ ಸತ್ಯನಾರಾಯಣ್ ರಾಜಕೀಯದಲ್ಲಿ ಕೂಡಾ ಗುರುತಿಸಿಕೊಂಡಿದ್ದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣ
ಬಹಳ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ, ಮಹೇಶ್ ಬಾಬು ತಂದೆ ಕೃಷ್ಣ ಆಸ್ಪತ್ರೆಯಲ್ಲೇ ನವೆಂಬರ್ 15 ರಂದು ನಿಧನರಾಗಿದ್ದರು. ಕೃಷ್ಣ ಅವರ ಅಗಲಿಕೆ ನೋವಿನಿಂದ ಹೊರ ಬರುವ ಮುನ್ನವೇ ಕೈಕಲಾ ಸತ್ಯನಾರಾಯಣ ಹಾಗೂ ಚಲಪತಿ ರಾವ್ ನಿಧನ ಟಾಲಿವುಡ್ ಮಂದಿಯನ್ನು ಆಘಾತಕ್ಕೆ ದೂಡಿದೆ.