ಕನ್ನಡ ಸುದ್ದಿ  /  ಮನರಂಜನೆ  /  Upendra Ht Interview: ‘ಕಬ್ಜ’ ಚಿತ್ರದಲ್ಲಿ ಕೇವಲ ನಾವು ಮೂವರಷ್ಟೇ ಹೀರೋಗಳಲ್ಲ, ನಮ್ಮ ಜತೆಗೆ ಇನ್ನೂ ಮೂವರಿದ್ದಾರೆ’... ಉಪೇಂದ್ರ ಸಂದರ್ಶನ

Upendra HT Interview: ‘ಕಬ್ಜ’ ಚಿತ್ರದಲ್ಲಿ ಕೇವಲ ನಾವು ಮೂವರಷ್ಟೇ ಹೀರೋಗಳಲ್ಲ, ನಮ್ಮ ಜತೆಗೆ ಇನ್ನೂ ಮೂವರಿದ್ದಾರೆ’... ಉಪೇಂದ್ರ ಸಂದರ್ಶನ

Mar 16, 2023 01:33 PM IST

‘ಕಬ್ಜ’ ಚಿತ್ರದಲ್ಲಿ ಕೇವಲ ನಾವು ಮೂವರಷ್ಟೇ ಹೀರೋಗಳಲ್ಲ, ನಮ್ಮ ಜತೆಗೆ ಇನ್ನೂ ಮೂವರಿದ್ದಾರೆ’... ಉಪೇಂದ್ರ ಸಂದರ್ಶನ

    • ಸೋಷಿಯಲ್‌ ಮೀಡಿಯಾ ತುಂಬ ಸ್ಟ್ರಾಂಗ್‌ ಆಗಿದೆ. ಪ್ರೇಕ್ಷಕ ಕನ್ನಡ ಮಾತ್ರವಲ್ಲ ವಿಶ್ವದ ಸಿನಿಮಾ ನೋಡುತ್ತಿದ್ದಾನೆ. ಹೀಗಿರುವಾಗ ನಾವು ಮತ್ತದೇ ಹಳೇ ಶೈಲಿಯಲ್ಲಿ ಸಿನಿಮಾ ಮಾಡಿದರೆ ಹೇಗೆ ಒಪ್ಪಿಕೊಳ್ಳುತ್ತಾನೆ?
‘ಕಬ್ಜ’ ಚಿತ್ರದಲ್ಲಿ ಕೇವಲ ನಾವು ಮೂವರಷ್ಟೇ ಹೀರೋಗಳಲ್ಲ, ನಮ್ಮ ಜತೆಗೆ ಇನ್ನೂ ಮೂವರಿದ್ದಾರೆ’... ಉಪೇಂದ್ರ ಸಂದರ್ಶನ
‘ಕಬ್ಜ’ ಚಿತ್ರದಲ್ಲಿ ಕೇವಲ ನಾವು ಮೂವರಷ್ಟೇ ಹೀರೋಗಳಲ್ಲ, ನಮ್ಮ ಜತೆಗೆ ಇನ್ನೂ ಮೂವರಿದ್ದಾರೆ’... ಉಪೇಂದ್ರ ಸಂದರ್ಶನ

Upendra Interview: ರಿಯಲ್‌ ಸ್ಟಾರ್‌ ಉಪೇಂದ್ರ ನಾಯಕ ನಟನಾಗಿ ನಟಿಸಿರುವ ಕಬ್ಜ ಸಿನಿಮಾ ಮಾ. 17ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲ ಪರಭಾಷೆ ಸಿನಿಮಾ ಪ್ರೇಕ್ಷಕರನ್ನೂ ಸೆಳೆದಿದೆ. ಇದೀಗ ಈ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ನಟ ಉಪೇಂದ್ರ ಹಿಂದೂಸ್ಥಾನ್‌ ಟೈಮ್ಸ್‌ ಕನ್ನಡದ (Hindustan Times Kannada) ಜತೆಗೆ ಮಾತನಾಡಿದ್ದಾರೆ. ಕಬ್ಜ ಮಾತ್ರವಲ್ಲದೆ, ಬದಲಾದ ಸಿನಿಮಾ ಶೈಲಿಯ ಬಗ್ಗೆಯೂ ಅನಿಸಿಕೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ; ಬಾಯಿಗೆ ಬಾರದೆ ಮಾತು ಹಾಡನ್ನು ಕೇಳೋಣ ಬನ್ನಿ

ಅಪಘಾತದಲ್ಲಿ ಮೃತಪಟ್ಟ ಪವಿತ್ರಾ ಜಯರಾಮ್‌ ನೆನೆದು ಪತಿ ಚಂದ್ರಕಾಂತ್‌ ಭಾವುಕ ಬರಹ; ಚಂದು ಅಣ್ಣನ ಅಳು ನೋಡಲಾಗುತ್ತಿಲ್ಲ ಎದ್ದು ಬಾ ಅಕ್ಕ

ನೈಂಟಿ ಬಿಡಿ ಮನೀಗ್ ನಡಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌; ವೈಜನಾಥ ಬಿರಾದಾರ್ ನಟನೆಯ ಸಿನಿಮಾ ಇಲ್ಲಿದೆ ಉಚಿತವಾಗಿ ನೋಡಿ

ಟರ್ಬೊ ಟ್ರೇಲರ್‌ ಬಿಡುಗಡೆ: ಮಮ್ಮುಟ್ಟಿ ಜತೆ ರಾಜ್‌ ಬಿ ಶೆಟ್ಟಿ ನಟಿಸಿರುವ ಪ್ಯಾನ್‌ ಇಂಡಿಯಾ ಚಿತ್ರ ಮುಂದಿನ ವಾರ ರಿಲೀಸ್‌

ಭೂಗತ ಲೋಕದ ಆಳ ಅಗಲ..

ಕಬ್ಜ ಒಂದು ಪಿರಿಯಡ್‌ ಸಿನಿಮಾ. 1947 ರಿಂದ ಶುರುವಾಗಿ, 70-80ರ ವರೆಗೆ ನಡೆಯುವ ಒಂದು ಕಥೆ. ಇದನ್ನು ಕಾಸ್ಟೂಮ್‌ ಡ್ರಾಮಾ ಅನ್ನಬಹುದು... ಅದ್ದೂರಿ ಸೆಟ್ಸ್‌.. ಮೇಕಿಂಗ್‌ಗೆ ತುಂಬ ಇಂಪಾರ್ಟೆನ್ಸ್‌ ನೀಡಿದ ಸಿನಿಮಾ ಇದು. ಒಂದೊಂದು ದೃಶ್ಯವೂ ಹೀಗೆ ಬರಬೇಕು, ಈ ರೀತಿಯಲ್ಲಿಯೇ ಮೂಡಿಬರಬೇಕು ಎಂದು ಪ್ಲಾನ್‌ ಮಾಡಿ ಕೆತ್ತಿದ ಚಿತ್ರವಿದು. ಒಂದೊಂದು ಸಣ್ಣ ದೃಶ್ಯಕ್ಕೂ ಇಲ್ಲಿ ನಿರ್ದೇಶಕರು ದೊಡ್ಡ ಮಟ್ಟದಲ್ಲಿ ತಲೆ ಕೆಡಿಸಿಕೊಂಡಿದ್ದಾರೆ. ಒಂದು ಇಡೀ ದಿನ ಒಂದೇ ದೃಶ್ಯದ ಚಿತ್ರೀಕರಣ ನಡೆದ ಉದಾಹರಣೆಗಳಿವೆ. ಹಾಗಾಗಿ ನನ್ನ ಸಿನಿಮಾ ಕೆರಿಯರ್‌ನಲ್ಲಿಯೂ ಈ ಸಿನಿಮಾ ತುಂಬ ವಿಶೇಷವಾದದ್ದು..

ಕಂಟೆಂಟ್‌ ಅಂದ್ರೆ ಬರೀ ಕಥೆ ಅಲ್ಲ...

ಇತ್ತೀಚಿನ ದಿನಗಳಲ್ಲಿ ಕಂಟೆಂಟ್‌ ಅಂದ್ರೆ ಬರೀ ಕಥೆ ಎಂದು ಹೇಳುವವರೇ ಹೆಚ್ಚು. ಆದರೆ ಕಂಟೆಂಟ್‌ ಅಂದ್ರೆ ಬರೀ ಕಥೆ ಮಾತ್ರವಲ್ಲ, ಒಂದಿಡಿ ದೃಶ್ಯ‌ ಮೂಡಿ ಬಂದ ರೀತಿ. ಅಲ್ಲಿ ಕಥೆಯಷ್ಟೇ ಪ್ರಾಮುಖ್ಯತೆ ಛಾಯಾಗ್ರಹಣವೂ ಚೆನ್ನಾಗಿರಬೇಕು. ಅಚ್ಚುಕಟ್ಟಾದ ಸೆಟ್ಸ್‌ ಸಹ ಅಲ್ಲಿ ಕಥೆ ಹೇಳುತ್ತಿರುತ್ತದೆ. ಹಾಗೆ ಸೆರೆಯಾದ ದೃಶ್ಯಕ್ಕೆ ಹಿನ್ನೆಲೆ ಸಂಗೀತ ಮತ್ತಷ್ಟು ಮೈಲೇಜ್‌ ಕೊಡುತ್ತದೆ. ತೆರೆಮೇಲೆ ನಟಿಸುವ ಪಾತ್ರವೂ ಕಥೆಯ ಭಾಗವಾಗಿರುತ್ತದೆ. ಇದೆಲ್ಲ ಸೇರಿ ದೃಶ್ಯವಾಗಿ ಹೊರಬಂದಾಗ ಕಂಟೆಂಟ್‌ ಎನಿಸಿಕೊಳ್ಳುತ್ತದೆ. ಹಾಗಾಗಿ ಕೇವಲ ಕಥೆ ಮಾತ್ರವಲ್ಲ. ಅದನ್ನು ಹೇಳುವ ರೀತಿಯೂ ಅಷ್ಟೇ ಮಹತ್ವದ್ದು..

ಕಬ್ಜ ಹೀರೋಗಳು ನಾವು ಮೂವರಲ್ಲ!

ಇದು ಟೆಕ್ನಿಷಿಯನ್‌ಗಳ ಸಿನಿಮಾ. ಪೋಸ್ಟರ್‌ಗಳಲ್ಲಿ ನಾನು ಕಾಣಿಸ್ತಿನಿ, ಸುದೀಪ್‌ ಕಾಣಿಸ್ತಾರೆ, ಶಿವಣ್ಣ ಇದ್ದಾರೆ.. ಇನ್ನೂ ಹಲವು ಕಲಾವಿದರು ಕಾಣಿಸುತ್ತಾರೆ. ಆದರೆ, ಅಸಲಿಗೆ ಹೀಗೆ ಕಾಣಿಸುವ ನಾವು ಮೂವರು ನಿಜವಾದ ಹೀರೋಗಳಲ್ಲ. ಕ್ಯಾಮರಾಮನ್‌ ಎಜೆ ಶೆಟ್ಟಿ, ಕಲಾ ನಿರ್ದೇಶಕ ಶಿವಕುಮಾರ್‌, ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರದ ರಿಯಲ್‌ ಹೀರೋಗಳು. ಒಟ್ಟಾಗಿ ಆರು ಜನರಿದ್ದೇವೆ. ಟ್ರೇಲರ್‌ ನೋಡಿದವರು ಈಗಾಗಲೇ ಅದನ್ನೇ ಮಾತನಾಡುತ್ತಿದ್ದಾರೆ. ಯಾರು ಇದಕ್ಕೆ ಕ್ಯಾಮರಾಮನ್‌, ಯಾರು ಇದಕ್ಕೆ ಸಂಗೀತ.. ಜನ ಸಹ ಚೇಂಜ್‌ ಆಗಿದ್ದಾರೆ. ಉಪೇಂದ್ರ ಇದ್ದಾನೆ, ಸುದೀಪ್‌ ಇದ್ದಾರೆ ಅಂತ ಯಾರೂ ಸಿನಿಮಾಕ್ಕೆ ಬರುತ್ತಿಲ್ಲ. ಈ ತಂಡದ ಜತೆಗೆ ನಿರ್ದೇಶಕ ಯಾರು, ತಾಂತ್ರಿಕ ಬಳಗ ಹೇಗಿದೆ ಇದೆಲ್ಲವನ್ನು ನೋಡಿಕೊಂಡೇ ಪ್ರೇಕ್ಷಕ ಇದೀಗ ಚಿತ್ರಮಂದಿರಕ್ಕೆ ಬರುತ್ತಿದ್ದಾನೆ..

ಪ್ರೇಕ್ಷಕನಿಗೆ ಸುದೀಪ್‌ ತುಂಬ ಅಂದ್ರೆ ತುಂಬ ಇಷ್ಟ ಆಗ್ತಾರೆ..

ಕಬ್ಜ ಚಿತ್ರದ ಮತ್ತೊಂದು ವಿಶೇಷತೆಯೇ ಸುದೀಪ್. ಚಿತ್ರದಲ್ಲಿ ಅವರ ಲುಕ್‌ಗೆ ಈಗಾಗಲೇ ಎಲ್ಲರೂ ಫಿದಾ ಆಗಿದ್ದಾರೆ. ಅದೇ ರೀತಿ ಇಲ್ಲಿ ಗಟ್ಟಿಯಾದ ಪಾತ್ರದ ಮೂಲಕವೇ ಅವರು ಎದುರಾಗುತ್ತಾರೆ. ಇಡೀ ಸಿನಿಮಾದಲ್ಲಿ ಪೂರ್ತಿ ಅವರು ಕಾಣಿಸದಿದ್ದರೂ, ಅಲ್ಲಲ್ಲಿ ಬಂದು ಹೋಗುತ್ತಾರೆ. ತೆರೆಮೇಲೆ ಕಾಣಿಸಿಕೊಂಡಾಗಲೆಲ್ಲ ಅಷ್ಟೇ ಪವರ್‌ಫುಲ್‌ ಆಗಿಯೇ ಕಾಣಿಸುತ್ತಾರೆ. ನಮ್ಮಿಬ್ಬರ ನಡುವೆ ಕೆಲವು ರೋಚಕ ದೃಶ್ಯಗಳೂ ಇವೆ.

ಸ್ಯಾಂಡಲ್‌ವುಡ್‌ ಈಗ ಮೊದಲಿನಂತಿಲ್ಲ..

ಒಂದು ಕಾಲದಲ್ಲಿ ಇಷ್ಟೇ ಮಾರುಕಟ್ಟೆ ಅನ್ನೋ ಮಾತಿತ್ತು. ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ಪ್ರಯತ್ನಗಳೇನು ನಡೆದೇ ಇಲ್ಲ ಅಂತಲ್ಲ. ಆಗಿನ ಕಾಲದಲ್ಲಿಯೇ ಕೆಲವು ಮೊದಲುಗಳು ನಮ್ಮ ಇಂಡಸ್ಟ್ರಿಯಲ್ಲಿ ಘಟಿಸಿವೆ. ರವಿಚಂದ್ರನ್‌ ಆ ಕಾಲದಲ್ಲಿಯೇ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿದ್ದರು. ದ್ವಾರಕೀಶ್‌ ಅವರ ಸಾಹಸ ಸಣ್ಣದೇನಲ್ಲ. ವಿಷ್ಣುವರ್ಧನ್‌ ಅವರು ವಿದೇಶಗಳಲ್ಲಿ ಶೂಟಿಂಗ್‌ ಮಾಡುತ್ತಿದ್ದರು. ಎಸ್‌.ವಿ ರಾಜೇಂದ್ರ ಸಿಂಗ್‌ ಬಾಬು ಅವರ ಬತ್ತಳಿಕೆಯಿಂದಲೂ ಸಾಕಷ್ಟು ಚಿತ್ರಗಳು ಬಂದಿವೆ. ಹಾಗಾಗಿ ಇದು ಬದಲಾವಣೆ ಸಮಯ ಅಷ್ಟೇ. ಕಾಲಕ್ಕೆ ತಕ್ಕಂತೆ ಬದಲಾಗುತ್ತ ಹೋಗಬೇಕು..

ಪ್ರೇಕ್ಷಕ ಬಯಸಿದ್ದನ್ನು ಕೊಡಬೇಕಾಗಿದೆ..

ಸೋಷಿಯಲ್‌ ಮೀಡಿಯಾ ತುಂಬ ಸ್ಟ್ರಾಂಗ್‌ ಆಗಿದೆ. ಪ್ರೇಕ್ಷಕ ಕನ್ನಡ ಮಾತ್ರವಲ್ಲ ವಿಶ್ವದ ಸಿನಿಮಾ ನೋಡುತ್ತಿದ್ದಾನೆ. ಹೀಗಿರುವಾಗ ನಾವು ಮತ್ತದೇ ಹಳೇ ಶೈಲಿಯಲ್ಲಿ ಸಿನಿಮಾ ಮಾಡಿದರೆ ಹೇಗೆ ಒಪ್ಪಿಕೊಳ್ಳುತ್ತಾನೆ? ಅದು ಒತ್ತಟ್ಟಿಗಿರಲಿ, ಈಗೀಗ ಪ್ರೇಕ್ಷಕನೇ ಸಿನಿಮಾವನ್ನು ಜಡ್ಜ್‌ ಮಾಡಿಬಿಡುತ್ತಾನೆ. ಇದು ಹಾಗಿರಬೇಕಿತ್ತು, ಇದು ಅಲ್ಲಿ ಬರಬೇಕಿತ್ತು.. ಹೀಗೆ ಊಹಿಸುತ್ತಾನೆ. ಪ್ರೇಕ್ಷಕ ಕ್ಯಾಮರಾ ವರ್ಕ್‌ ಬಗ್ಗೆ ಮಾತನಾಡುತ್ತಾನೆ. ಸಂಗೀತದ ಬಗ್ಗೆಯೂ ಮಾತನಾಡುತ್ತಾನೆ.

ಈ ಹಿಂದೆ. ನಾನೇ 9 ಲಕ್ಷದಲ್ಲಿ ಸಿನಿಮಾ ಮಾಡಿದ್ದೆ. ಅದಾದ ಮೇಲೆ 90 ಲಕ್ಷ ಬಜೆಟ್‌ ಆಯಿತು, 9 ಕೋಟಿಯ ಸಿನಿಮಾ ಬಂತು.. ಈಗ 90 ಕೋಟಿ ಸಿನಿಮಾ ಆಗಿದೆ. ಅದರಲ್ಲೂ ಕರೊನಾ ನಂತರದ ದಿನಗಳಲ್ಲಿ ಮಾರುಕಟ್ಟೆ ಮತ್ತಷ್ಟು ಹಿರಿದಾಗಿದೆ. ಓಪನ್‌ ಆಗಿದೆ. ಅದಕ್ಕೆ ತಕ್ಕಂತೆ ಸಿನಿಮಾ ಮೇಕಿಂಗ್‌ ಶೈಲಿ ಮತ್ತು ಅದನ್ನು ಪ್ರಸೆಂಟ್‌ ಮಾಡುವ ರೀತಿಯಲ್ಲಿಯೂ ಬದಲಾಗಿದೆ. ಅದಕ್ಕೆ ತಕ್ಕಂತೆ ನಾವೂ ಹೆಜ್ಜೆ ಹಾಕಲೇಬೇಕಾದ ಅನಿವಾರ್ಯತೆ ಇದೆ.

ಕಬ್ಜದಲ್ಲಿ ನಾನು ಕೇವಲ ನಟ ಮಾತ್ರ, ನಿರ್ದೇಶಕನಲ್ಲ...

ಕಬ್ಜ ಚಿತ್ರದಲ್ಲಿ ನಾನು ನಿರ್ದೇಶಕರ ನಟ. ಆರಂಭದಲ್ಲಿ ಚಂದ್ರು ಬಂದು ಕಥೆ ಹೇಳಿದಾಗ, ಇದು ಸಾಧ್ಯಾನಾ ಚಂದ್ರು? ಎಂದು ಕೇಳಿದ್ದೆ. ಅದಕ್ಕವರು ಹೌದು ಎಂದಿದ್ದರು. ಆವತ್ತೇ ನಾನು ನಿರ್ದೇಶಕರು ಹೇಗೆ ಹೇಳುತ್ತಾರೋ ಹಾಗೆ ಮಾಡುವುದಷ್ಟೇ ನನ್ನ ಕೆಲಸ. ದೊಡ್ಡ ದೊಡ್ಡ ಸೆಟ್‌, ಸಿಕ್ಕಾಪಟ್ಟೆ ಕಾರುಗಳು, ದೊಡ್ಡ ಸ್ಟಾರ್‌ ಕಾಸ್ಟ್‌ ಇರುವಾಗ.. ಹಾಗಲ್ಲ ಹೀಗೆ ಎಂದರೆ ನಿರ್ದೇಶಕರಿಗೆ ಹೇಗೆ ಅನಿಸಬೇಡ.. ಹಾಗಾಗಿ ಈ ಸಿನಿಮಾದಲ್ಲಿ ನನ್ನ ಭಾಗವಹಿಸುವಿಕೆ ಎಂಬುದಿದ್ದರೆ ಅದು ನಟನೆಯಲ್ಲಿ ಮಾತ್ರ. ನಿರ್ದೇಶನದಲ್ಲಿ ಚಂದ್ರು ಅವರೇ ಸ್ವತಂತ್ರರು. ನನಗೆ ಬೇಕಾಗಿದ್ದನ್ನು ನನ್ನ ಸಿನಿಮಾದಲ್ಲಿ ನಾನು ತೆರೆಗೆ ತರಬೇಕು, ನಿರ್ದೇಶಕರ ತಲೆಯಲ್ಲಿಯೇ ಬೇರೆಯದಿರುವಾಗ ನಾನು ಮಧ್ಯೆ ಬಾಯಿ ಹಾಕುವುದು ಸರಿಯಲ್ಲ. ಹಾಗಾಗಿ ಇದು ಸಂಪೂರ್ಣ ಚಂದ್ರು ಕಬ್ಜ.

ಇದು ಬೇರೆಯದೇ ಸಿನಿಮಾ.. ಚಂದ್ರು ಅವರ ದೊಡ್ಡ ಕನಸಿದು. ಆ ಕನಸಿಗೆ ನಾನೊಬ್ಬನೇ ಸಾಥ್‌ ನೀಡಿಲ್ಲ. ಚಿತ್ರತಂಡದ ಪ್ರತಿಯೊಬ್ಬರು ಕೈ ಜೋಡಿಸಿದ್ದಾರೆ. ಅದೇ ರೀತಿ ಸುದೀಪ್‌ ನಟಿಸಿದ್ದೇನಕ್ಕೆ, ಶಿವಣ್ಣ ಕಾಣಿಸಿಕೊಂಡಿದ್ದು ಯಾಕೆ.. ಅದೆಲ್ಲದಕ್ಕೂ ಸಿನಿಮಾ ಕಾರಣ. ನಿರ್ದೇಶಕರ ಕನಸಿಗೆ ಸಾಥ್‌ ನೀಡಿದ್ದೇವೆ. ಆ ಕನಸೀಗ ನನಸಾಗಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ