‘ಸೆಡೆ’ ಪದ ಪ್ರಯೋಗಿಸಿದ ರಜತ್‌ಗೆ ಬಿಗ್ ಬಾಸ್‌ನಿಂದ ಸಿಗದ ಶಿಕ್ಷೆ, ಸ್ಪರ್ಧಿಗಳಿಂದಲೇ ಆಯ್ತು ತಕ್ಕ ಶಾಸ್ತಿ; ಶೋ ವಿರುದ್ಧ ವೀಕ್ಷಕರು ಗರಂ
Nov 22, 2024 10:11 AM IST
ಸ್ಪರ್ಧಿಗಳಿಂದಲೇ ರಜತ್‌ಗೆ ಆಯ್ತು ತಕ್ಕ ಶಾಸ್ತಿ
- Bigg Boss Kannada 11: ಆಡಿದ ಕಟು ಮಾತುಗಳಿಂದಲೇ ಇದೀಗ ಜೈಲು ಸೇರಿದ್ದಾರೆ ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿ ರಜತ್ ಕಿಶನ್. ಜೈಲು ಸೇರಿದರೂ, ನಾನು ಮಾತನಾಡೋದೇ ಹೀಗೆ ಎಂದು ಅದೇ ಉದ್ಧಟತನ ಮುಂದುವರಿಸಿದ್ದಾರೆ. ಈ ನಡುವೆ ಬಿಗ್ ಬಾಸ್ ವಿರುದ್ಧ ವೀಕ್ಷಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಕಿಶನ್ ವರ್ತನೆ ಮನೆ ಮಂದಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಕಾರಣ; ಅವರು ಬಳಸುತ್ತಿರುವ ಭಾಷೆ. ಮೊನ್ನೆ ಟಾಸ್ಕ್ ವೇಳೆ ಗೋಲ್ಡ್ ಸುರೇಶ್‌ಗೆ ಸೆಡೆ ಪದ ಪ್ರಯೋಗಿಸಿದ್ದರು ರಜತ್. ಈ ಭಾಷೆಗೆ ಕೊಂಚ ಕಟುವಾಗಿದ್ದ ಸುರೇಶ್, ರಜತ್ ವಿರುದ್ಧ ಮುಗಿಬಿದ್ದು, ಇನ್ನು ನಾನು ಈ ಮನೆಯಲ್ಲಿ ಇರಲ್ಲ, ಬಾಗಿಲು ತೆಗೆಯಿರಿ ನಾನು ಹೊರಡುತ್ತೇನೆ ಎಂದಿದ್ದರು. ಅದಾದ ಬಳಿಕ ಮನೆಯ ಇತರ ಸ್ಪರ್ಧಿಗಳೂ ಈ ರೀತಿಯ ಪದ ಪ್ರಯೋಗಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಈಗ ಇದೇ ರಜತ್ ವಿರುದ್ಧ ಇಡೀ ಮನೆ ಮಂದಿ ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ. ಈ ವಾರದ ಕಳಪೆ ಯಾರು ಎಂಬ ಪ್ರಶ್ನೆಗೆ ಮನೆ ಮಂದಿ ಉತ್ತರ ನೀಡಿದ್ದಾರೆ. ಈ ಮೂಲಕ ಎಲ್ಲರ ಉತ್ತರ ಕೇಳಿ ಒಂದೇ ವಾರದಲ್ಲಿ ರಜತ್ ಕಿಶನ್ ಒಂಟಿಯಾಗಿದ್ದಾರೆ. ಅಂದರೆ, ಗೋಲ್ಡ್ ಸುರೇಶ್, ಶೋಭಾ ಶೆಟ್ಟಿ, ಹನುಮಂತು, ಐಶ್ವರ್ಯಾ ಸಿಂಧೋಗಿ, ಶಿಶಿರ್ ಸೇರಿ ಬಹುತೇಕರು ರಜತ್‌ಗೆ ಕಳಪರ ನೀಡಿದ್ದಾರೆ. ನಿಮ್ಮ ಮಾತುಗಳನ್ನು ನಮಗೆ ಡೈಜೆಸ್ಟ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಐಶ್ವರ್ಯಾ ಹೇಳಿದರೆ, ನಾನು ಮಾತನಾಡೋದೇ ಹಾಗೆ ಎಂದು ಹೇಳಿದ್ರಿ, ಈ ಮನೆಗೆ ಆ ಮಾತು ಸೂಕ್ತ ಅಲ್ಲ ಎಂದು ಶಿಶಿರ್ ಕೂಡ ಗರಂ ಆಗಿದ್ದಾರೆ.
ಮಾಡಿದ್ದುಣ್ಣೋ ಮಾರಾಯ; ಜೈಲು ಹಕ್ಕಿಯಾದ ರಜತ್
ಸೆಡೆ ನನ್ಮಗ ಅಂದರೆ ಯಾರು? ಪರ್ಸನಲ್ ಆಗಿ ಬಂದಂಥ ಮಾತುಗಳನ್ನ ತೆಗೆದುಕೊಳ್ಳೋಕೆ ಆಗಲ್ಲ ಎಂದು ಗೋಲ್ಡ್ ಸುರೇಶ್ ಮತ್ತೆ ತಮ್ಮ ಕೋಪತಾಪ ಹೊರಹಾಕಿದ್ದಾರೆ. ಇವರೆಲ್ಲರ ಮಾತಿಗೆ ಉತ್ತರಿಸಿದ ರಜತ್, "ಹೊರಗಡೆ ಹುಡುಗೀರ ಕೈ ಹಿಡಿದುಕೊಂಡು ಓಡಾಡಿದಷ್ಟು ಸುಲಭ ಅಲ್ಲ ಬಿಗ್‌ಬಾಸ್ ಗೆಲ್ಲೋದು. ಸೆಡೆಗಳನ್ನು ಮನೆಗೆ ಕಳಿಸಿದ ಮೇಲೆಯೇ ನಾನು ಹೋಗೋದು. ಹುಟ್ಟಿದಾಗಿಂದಲೂ ಹಿಂಗೇ ಇದೀನಿ, ಈಗಲೂ ಹೀಗೆ ಇರ್ತಿನಿ. ಇನ್ಮುಂದೆ ಇದಕ್ಕಿಂತ ತ್ರಿಬಲ್ ಮಾತನಾಡ್ತಿನಿ. ತೋರಿಸ್ತಿನಿ. ಇನ್ನು ಮುಂದೆ, ಆಕ್ಚುಲಿ ಆಟ ಶುರು" ಎಂದು ಹೇಳಿ ಜೈಲು ಸೇರಿದ್ದಾರೆ ರಜತ್.
ಟಾಸ್ಕ್ ವೇಳೆ ರಜತ್ Vs ಸುರೇಶ್ ಮಾತು
ಚೆಂಡು ನಾ ನಿನ್ನ ಬಿಡಲಾರೆ ಆಟದ ನಡುವೆಯೇ "ಹೇ... ಬಾರಲೇ, ಆಡಲೇ, ಮಾಡಲೇ, ತಾಕತ್ತಿದ್ದರೆ ಮಾಡಿ ತೋರ್ಸಲೇ, ವೇಸ್ಟ್ ನನ್ ಮಗನೇ" ಎಂದು ಸುರೇಶ್‌ಗೆ ಏಕವಚನದಲ್ಲಿಯೇ ರಜತ್ ಮಾತನಾಡಿದ್ದರು. ಈ ಮಾತುಗಳು ಸುರೇಶ್ ಅವರನ್ನು ಕೆಣಕಿದ್ದವು. "ಮಗನೇ ಗಿಗನೇ ಅನ್ನಬೇಡ, ಏನೋ ಮಾತಾಡ್ತೀಯಾ? ಚೆನ್ನಾಗಿರಲ್ಲ" ಎಂದಿದ್ದಾರೆ. "ಏನ್ ಗುಗ್ಗು ಸೆಡೆ ನನ್ ಮಗನ್ ಥರ ಮಾತಾಡ್ತಿಯಾ..? ಸ್ವಲ್ಪ ಅದುಮಿಕ್ಕೊಂಡಿರು. ಏಯ್ ಹೋಗಲೇ, ಏನೋ ಮಾತಾಡ್ತಿಯಾ? ಈ ಸೆಡೆ ಮಾತುಗಳೆಲ್ಲ ನನ್ನ ಹತ್ರ ಬೇಡ" ಎಂದು ಮತ್ತೆ ರಜತ್ ಮಾತು ಮುಂದುವರಿದಿವೆ. ಮಗನೇ ಗಿಗನೇ ಅನ್ನಬೇಡ ಎಂದು ಪ್ರತಿರೋಧವೊಡ್ಡಿದರೂ, ಹೇ, ಏನೋ ಮಾತಾಡ್ತಿಯಾ? ಸೆಡೆ ನನ್ನ ಮಗನೇ, ಬಳೆ ತೊಟ್ಕೊ ಎನ್ನುತ್ತಲೇ ಕೆಟ್ಟ ಪದಗಳ ಬಳಕೆ ಮಾಡಿದ್ದಾರೆ. ಅದಾದ ಬಳಿಕ ಬಂದ ಮಾತುಗಳಿಗೆ ಬಿಗ್ ಬಾಸ್ ಬೀಪ್ ಹಾಕಿದ್ದರು.
ವೀಕ್ಷಕರ ಅಭಿಪ್ರಾಯ ಏನು?
- ಈ ಬಿಗ್ ಬಾಸ್ ಟೀಮ್ ನವ್ರು ಯಾವುದೋ ರೌಡಿನ ಕರ್ಕೊಂಡು ಬಂದಿದ್ದಾರೆ. ಅಮೇಲೆ ನಾಳೆ ಅವ್ನು ಭವಿಷ್ಯ ಕರ್ನಾಟಕದ ಜನತೆ ಕಣ್ಮುಂದೆ ಇದೆ
- ಅವಾಚ್ಯ ಶಬ್ದವನ್ನು ಬಳಸಿದ ರಜತ್ ಮೇಲೆ ಬಿಗ್ ಬಾಸ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಲ್ಲಿಗೆ ಬಿಗ್ ಬಾಸ್ ಫಿಕ್ಸಿಂಗ್ ಶೋ ಅನ್ನೊದು 100% ಸತ್ಯ
- Gold Suresh ಒಳ್ಳೆ ವ್ಯಕ್ತಿ ಆ ರೀತಿ ಮಾತಾಡಿದ ರಜತ ಮೇಲೆ ಬಿಗ್ ಬಾಸ್ ಕ್ರಮ ಕೈಗೊಳ್ಳಬೇಕು
- ನಿನ್ನಂತ ಸೆಡೆ ನನ್ ಮಕ್ಕಳು ಜಾಸ್ತಿ ದಿನ ಇರಲ್ಲ ಎಲ್ಲರನ್ನು ಕಳುಹಿಸಿ ನೀನು ಇರೋದಕ್ಕೆ ಅದು ನಿನ್ನ ಮಾವನ ಮನೆ ಅಲ್ಲ ಜನ ಡಿಸೈಡ್ ಮಾಡ್ತಾರೆ ದುರಂಕಾರಿ
- ದುರಂಕಾರದ ಮಾತುಗಳು ಬೇಡ ರಜತ್. ನೀವು ಮಾತಾಡಿದ್ರೆ ನಿಮಗೆ ಸರಿ ಅನ್ನಿಸಬಹುದು. ಆದ್ರೆ ಅದೇ ಮಾತು ನಿಮ್ಮ ಮಕ್ಕಳು, ನಿಮ್ಮ ಎದುರಿಗೆ ಮಾತಾಡಿದಾಗ ನಿಮಗೆ ತಪ್ಪು ಅನ್ನಿಸುತ್ತದೆ. ಉತ್ತಮ ಸಮಾಜಕ್ಕೆ ನಿಮ್ಮ ಹೊಲಸು ಮಾತುಗಳು ಬೇಕಾಗಿಲ್ಲ....
- ಸುರೇಶ್ ನಮ್ಮ ಸೈಡ್ ಬೈಗುಳ ಬೈದಿದ್ರೆ ಇಷ್ಟೊತ್ತಿಗೆ ರಜತ್ ಬಿಗ್ಬಾಸ್ ಬಿಟ್ಟು ಹೋಗ್ತಿನಿ ಅಂತಿದ್ದ
- ಹೀಗೆ ಮಾತಾಡಿದ್ರೆ ಡೈರೆಕ್ಟ್ ಮನೆಗೆ ಹೋಗ್ತೀಯಾ ಅಷ್ಟೇ
- ದುರಂಕಾರಿ ರಜತ್
- ದುರಹಂಕಾರಿ ರಜತ್ ನಿನ್ನ ಅಹಂಕಾರ ಇದ್ರೆ ನಿನ್ನ ಮನೆಯಲ್ಲಿ ಇಟ್ಕೋ. ಇದು ಬಿಗ್ ಬಾಸ್ ಮನೆ ಎಲ್ಲರಿಗೂ ಅವರದೇ ಆದ ಗೌರವ ಇದೆ.