Bigg Boss Kannada 11: ‘ನಾವು ಹೊರಗಡೆ ಹೇಗೆ ಕಾಣಿಸ್ತಿದಿವೋ ಹಾಗೇ ಇರೋಣ’; ಅಸಲಿ ಆಟಕ್ಕೆ ಮುನ್ನುಡಿ ಬರೆದ ಉಗ್ರಂ ಮಂಜು- ತ್ರಿವಿಕ್ರಮ್‌
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ‘ನಾವು ಹೊರಗಡೆ ಹೇಗೆ ಕಾಣಿಸ್ತಿದಿವೋ ಹಾಗೇ ಇರೋಣ’; ಅಸಲಿ ಆಟಕ್ಕೆ ಮುನ್ನುಡಿ ಬರೆದ ಉಗ್ರಂ ಮಂಜು- ತ್ರಿವಿಕ್ರಮ್‌

Bigg Boss Kannada 11: ‘ನಾವು ಹೊರಗಡೆ ಹೇಗೆ ಕಾಣಿಸ್ತಿದಿವೋ ಹಾಗೇ ಇರೋಣ’; ಅಸಲಿ ಆಟಕ್ಕೆ ಮುನ್ನುಡಿ ಬರೆದ ಉಗ್ರಂ ಮಂಜು- ತ್ರಿವಿಕ್ರಮ್‌

Bigg Boss Kannada 11: ಇಬ್ಬರು ವೈಲ್ಡ್‌ ಕಾರ್ಡ್‌ಗಳು ಬಿಗ್‌ ಬಾಸ್‌ ಕನ್ನಡ 11 ರ ಮನೆಗೆ ಎಂಟ್ರಿ ಕೊಟ್ಟ ಬಳಿಕ ಇಡೀ ಮನೆಯ ವಾತಾವರಣ ಬದಲಾಗಿದೆ. ಇದನ್ನು ಬದಲು ಮಾಡುವ ನಿಟ್ಟಿನಲ್ಲಿ ಉಗ್ರಂ ಮಂಜು ಮತ್ತು ತ್ರಿವಿಕ್ರಮ್‌ ಪ್ಲಾನ್‌ ಮಾಡಿದ್ದಾರೆ.

ಅಸಲಿ ಆಟಕ್ಕೆ ಮುನ್ನುಡಿ ಬರೆದ ಉಗ್ರಂ ಮಂಜು- ತ್ರಿವಿಕ್ರಮ್‌
ಅಸಲಿ ಆಟಕ್ಕೆ ಮುನ್ನುಡಿ ಬರೆದ ಉಗ್ರಂ ಮಂಜು- ತ್ರಿವಿಕ್ರಮ್‌

Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ರ ಮನೆಯಲ್ಲಿ ಈ ವಾರ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳದ್ದೇ ಕಾರುಬಾರು ಜೋರಾಗಿದೆ. ಶೋಭಾ ಶೆಟ್ಟಿ ಮತ್ತು ರಜತ್‌ ಕಿಶನ್‌ ಆಗಮನದಿಂದ ಉಳಿದ ಸದಸ್ಯರದಲ್ಲಿ ಕೊಂಚ ಅಸಮಾಧಾನ ಭುಗಿಲೆದ್ದಿದೆ. ಎಲ್ಲದರಲ್ಲಿಯೂ ಉಳಿದ ಸ್ಪರ್ಧಿಗಳನ್ನು ಡಾಮಿನೇಟ್‌ ಮಾಡುತ್ತಿದ್ದಾರೆ ಹೊಸ ಸ್ಪರ್ಧಿಗಳು. ಮನೆಗೆ ಎಂಟ್ರಿಯಾಗುತ್ತಿದ್ದಂತೆಯೇ, ಜೋರು ಧ್ವನಿಯಲ್ಲಿಯೇ ರೋಷಾವೇಷ ಹೊರಹಾಕುತ್ತಿದ್ದಾರೆ. ಮತ್ತೊಂದೆಡೆ ಈ ವಿಚಾರ ಮನೆಯ ಇತರ ಸದಸ್ಯರಿಗೂ ಕೊಂಚ ಬೇಸರ ತರಿಸಿದೆ. ಈ ನಡುವೆ ಉಗ್ರಂ ಮಂಜು ಮತ್ತು ತ್ರಿವಿಕ್ರಮ್‌ ಒಂದಾಗಿ ಅಸಲಿ ಆಟಕ್ಕೆ ಮುನ್ನುಡಿ ಬರೆಯುವ ಸುಳಿವು ನೀಡಿದ್ದಾರೆ.

ಗುರುವಾರದ ಸಂಚಿಕೆಯಲ್ಲಿ ತ್ರಿವಿಕ್ರಮ್‌ ಮತ್ತು ಮಂಜು ಬೇರೆ ಬೇರೆ ತಂಡದಲ್ಲಿ ಆಟವಾಡಿದ್ದಾರೆ. ಶೋಭಾ ಶೆಟ್ಟಿ ಜತೆಗೆ ಮಂಜು ಕಾಣಿಸಿಕೊಂಡರೆ, ಇತ್ತ ಭವ್ಯಾ ಗೌಡ ಟೀಮ್‌ನಲ್ಲಿ ತ್ರಿವಿಕ್ರಮ್‌ ಮುಂದುವರಿದಿದ್ದಾರೆ. ಹೀಗಿರುವಾಗ ಆಟದ ಮಧ್ಯ ರಜತ್‌ ಅವರ ಅಗ್ರೆಷನ್‌ ಗೋಲ್ಡ್‌ ಸುರೇಶ್‌ ಅವರ ಕೋಪಕ್ಕೆ ಕಾರಣವಾಗಿದೆ. ಆಟದ ಮಧ್ಯದಲ್ಲಿಯೇ ಕೆಟ್ಟ ಪದಗಳನ್ನು ಬಳಕೆ ಮಾಡಿ, ಮನೆಯ ಇತರ ಸದಸ್ಯರ ಕೋಪಕ್ಕೂ ಕಾರಣವಾಗಿದ್ದಾರೆ. ಒಟ್ಟಾರೆಯಾಗಿ ಇಬ್ಬರು ವೈಲ್ಡ್‌ ಕಾರ್ಡ್‌ಗಳು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಬಳಿಕ ಇಡೀ ಮನೆಯ ವಾತಾವರಣ ಬದಲಾಗಿದೆ. ಇದನ್ನು ಬದಲು ಮಾಡುವ ನಿಟ್ಟಿನಲ್ಲಿ ಉಗ್ರಂ ಮಂಜು ಮತ್ತು ತ್ರಿವಿಕ್ರಮ್‌ ಪ್ಲಾನ್‌ ಮಾಡಿದ್ದಾರೆ.

ಹೊಸ ಮುನ್ನುಡಿ ಬರೆಯುತ್ತಾ ಈ ಕಿಲಾಡಿ ಜೋಡಿ?

ಆಟ ಮುಗಿದ ಬಳಿಕ ಬೆಡ್‌ರೂಮ್‌ ಏರಿಯಾದಲ್ಲಿ ಉಗ್ರಂ ಮಂಜು ಮತ್ತು ತ್ರಿವಿಕ್ರಮ್‌ ಚರ್ಚೆಗಿಳಿದಿದ್ದಾರೆ. ಈ ವೇಳೆ ಇವರ ನಡುವೆ ನಡೆದ ಸಂಭಾಷಣೆ ಹೀಗಿದೆ.

ಉಗ್ರಂ ಮಂಜು: ನಮ್ಮ ಜಿದ್ದಾಜಿದ್ದಿನಲ್ಲಿ ಮೂರು ಜನರನ್ನ ಸೆಂಟ್ರಲ್ಲಿ ಕೂರಿಸೋದನ್ನ ತಪ್ಪಿಸಿಬಿಟ್ವಿ ಅನಿಸ್ತಿದೆ.

ತ್ರಿವಿಕ್ರಮ್: ಹೌದೌದು

ತ್ರಿವಿಕ್ರಮ್: ಓಪನ್‌ ಆಗಿ ಹೇಳ್ತಿದಿನಿ, ಎಲ್ಲೋ ನಾವು ಮಿಸ್‌ ಹೊಡೆದ್ವಾ ಅಂತ?

ಉಗ್ರಂ ಮಂಜು: ಮಿಸ್‌ ಹೊಡೆದಿದ್ದು ಒಳ್ಳೆದಾಯ್ತು ಚಿನ್ನ, ಇನ್ಮೇಲೆ ಮಿಸ್‌ ಹೊಡೆದ್ರೆ ಒಳ್ಳೆದಾಗಲ್ಲ ಚಿನ್ನ

ಉಗ್ರಂ ಮಂಜು: ಏಳು ಎಂಟಾಯ್ತು, ಇನ್ನು ಕೂರೋಕಾಗಲ್ಲ..

ತ್ರಿವಿಕ್ರಮ್:‌ ಅಣ್ಣಾ ಒಂದು ವಿಷ್ಯಾ, ನನ್ನಿಂದ ಏನೇ ಇದ್ರೂನೂ, ನೈಟಲ್ಲಿ ಒಂದು ದಮ್‌ನಲ್ಲಿ ಕರೀರಿ. ಅದೇನು ಕ್ಲಿಯರ್‌ ಮಾಡಿ, ನಾನೂ ಅದೇನು ಅನ್ನೋದನ್ನು ಕ್ಲಿಯರ್‌ ಮಾಡ್ತಿನಿ.

ಉಗ್ರಂ ಮಂಜು: ಇನ್ಯಾರ ಮುಂದೆಯೂ ನಾನು ನಿಮ್ಮನ್ನ ಚಿಕ್ಕವರನ್ನಾಗಿ ಮಾಡಲ್ಲ, ನೀವು ನನ್ನ ಹಾಗೆ ಮಾಡಬೇಡಿ

ಉಗ್ರಂ ಮಂಜು: ಹಂಗಿರೋದ್ರಲ್ಲಿ, ನಾವಿಬ್ರೂ ಒಂದಾದ್ರೆ ಈ ಮನೆ ಪರಿಸ್ಥಿತಿ, ಇವರುಗಳೆಲ್ಲ ಎಲ್ಲೋಗಬಹುದು, ಏನಾಗಬೇಡ ವಿಚಾರಿಸು. ಇವರುಗಳಿಗೆ ಏನಾದ್ರೂ ಒಂದು ಕ್ಲೂ ಇದೆಯಾ?

ಉಗ್ರಂ ಮಂಜು: ಇವತ್ತು ನನ್ನ ಟೀಮ್‌ಅನ್ನ, ನಿನ್ನ ಟೀಮ್‌ಅನ್ನ ಏನು ಮಾಡಬೇಕು ಅನ್ನೋದು ನಮ್ಮಿಬ್ಬರ ಕೈಯಲ್ಲಿ ಇಲ್ವಾ?

ಉಗ್ರಂ ಮಂಜು: ಕ್ಯಾಪ್ಟನ್‌ ಯಾರಾಗಬೇಕು ಎಂಬುದನ್ನು ನಾವು ಡಿಸೈಡ್‌ ಮಾಡೋಕೆ ಆಗಲ್ವಾ?

ತ್ರಿವಿಕ್ರಮ್:‌ ಹೌದೌದು..

ತ್ರಿವಿಕ್ರಮ್: ಈ ವಾರ ಬಿಟ್ಟುಬಿಡೋಣ, ಮುಂದಿನ ವಾರದಿಂದ ಶುರು ಮಾಡೋಣ

ಉಗ್ರಂ ಮಂಜು: ಈಗಲೇ ಶುರು ಮಾಡೋಣ

ತ್ರಿವಿಕ್ರಮ್: ಬಟ್‌ ಪ್ಲಾನ್‌ ಮಾಡಿ ಆಡಬೇಕು..

ಉಗ್ರಂ ಮಂಜು: ಇಲ್ಲಾಂದ್ರೆ..

ತ್ರಿವಿಕ್ರಮ್: ನಾವು ಹೊರಗಡೆ ಹೇಗೆ ಕಾಣಿಸ್ತಿದಿವೋ ಹಾಗೇ ಇರಲಿ

ಉಗ್ರಂ ಮಂಜು: ಗೊತ್ತು ಗೊತ್ತು

ತ್ರಿವಿಕ್ರಮ್: ನನ್ನ ಮೇಲೆ ಏನೇ ಇದ್ರೂನೂ, ಧಮ್‌ ಹೊಡೆಯೋಕೆ ಕರೀರಿ ಬರ್ತಿನಿ..

Whats_app_banner