logo
ಕನ್ನಡ ಸುದ್ದಿ  /  ಮನರಂಜನೆ  /  Uma Dasgupta Death: ಈ ಸಲ ಅವರ ಸಾವಿನ ಸುದ್ದಿ ಸುಳ್ಳಾಗಲಿಲ್ಲ! ಕ್ಯಾನ್ಸರ್‌ನಿಂದ ಕಣ್ಮುಚ್ಚಿದ ನಟಿ ಉಮಾ ದಾಸ್‌ಗುಪ್ತಾ

Uma Dasgupta Death: ಈ ಸಲ ಅವರ ಸಾವಿನ ಸುದ್ದಿ ಸುಳ್ಳಾಗಲಿಲ್ಲ! ಕ್ಯಾನ್ಸರ್‌ನಿಂದ ಕಣ್ಮುಚ್ಚಿದ ನಟಿ ಉಮಾ ದಾಸ್‌ಗುಪ್ತಾ

Nov 18, 2024 04:42 PM IST

google News

ಬೆಂಗಾಲಿ ನಟಿ ಉಮಾ ದಾಸ್‌ಗುಪ್ತಾ ನಿಧನ

    • Uma Dasgupta Death: 70ರ ಇಳಿವಯಸ್ಸಿನ ಬೆಂಗಾಲಿ ನಟಿ ಉಮಾ ದಾಸ್ ಗುಪ್ತಾ ಕ್ಯಾನ್ಸರ್ ಎದುರು ಶರಣಾಗಿ, ಜೀವ ಕಳೆದುಕೊಂಡಿದ್ದಾರೆ. ಸತ್ಯಜಿತ್ ರೇ ಅವರ ಕಲ್ಟ್ ಕ್ಲಾಸಿಕ್ “ಪಥೇರ್ ಪಾಂಚಾಲಿ” ಸಿನಿಮಾದಲ್ಲಿ ಉಮಾ ಅವರು,  ದುರ್ಗಾ ಹೆಸರಿನ ಪಾತ್ರದಲ್ಲಿ ನಟಿಸಿ ಗಮನಸೆಳೆದಿದ್ದರು. 
ಬೆಂಗಾಲಿ ನಟಿ ಉಮಾ ದಾಸ್‌ಗುಪ್ತಾ ನಿಧನ
ಬೆಂಗಾಲಿ ನಟಿ ಉಮಾ ದಾಸ್‌ಗುಪ್ತಾ ನಿಧನ

Uma Dasgupta Death: 1955ರಲ್ಲಿ ತೆರೆಕಂಡ ಪಥೇರ್‌ ಪಾಂಚಾಲಿ ಸಿನಿಮಾದಲ್ಲಿ ದುರ್ಗಾ ಹೆಸರಿನ ಪಾತ್ರಕ್ಕೆ ಜೀವ ತುಂಬಿದ್ದ ಬೆಂಗಾಲಿ ನಟಿ ಉಮಾ ದಾಸ್‌ಗುಪ್ತಾ ನಿಧನರಾಗಿದ್ದಾರೆ. 70ರ ಇಳಿವಯಸ್ಸಿನ ನಟಿ ಉಮಾ, ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ, ಕ್ಯಾನ್ಸರ್‌ ಎದುರು ಸೋತು, ಸಾವನ್ನಪ್ಪಿದ್ದಾರೆ. ಈ ಸಾವಿನ ವಿಚಾರವನ್ನು ಉಮಾ ಅವರ ಸಂಬಂಧಿ, ನಟ ಮತ್ತು ರಾಜಕಾರಣಿ ಚಿರಂಜೀತ್‌ ಚಕ್ರವರ್ತಿ ಆನಂದಬಜಾರ್ ಪತ್ರಿಕೆಗೆ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಉಮಾ ದಾಸ್‌ಗುಪ್ತ ನಿಧನರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆ ಸಾವಿನ ಸುದ್ದಿಗೆ ಸ್ವತಃ ಪ್ರತಿಕ್ರಿಯಿಸಿದ್ದ ಉಮಾ, ನಾನಿನ್ನು ಬದುಕಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ, ಇದೀಗ ಅವರ ಸಾವು ಅಧಿಕೃತವಾಗಿದೆ. ಉಮಾ ದಾಸ್ ಗುಪ್ತಾ ನವೆಂಬರ್ 18ರ ಸೋಮವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ನಿಧನರಾದರು ಎಂದು ಚಿರಂಜೀತ್ ತಿಳಿಸಿದ್ದಾರೆ.

ಕ್ಯಾನ್ಸರ್‌ನಿಂದ ನಿಧನ

ಕೆಲವು ವರ್ಷಗಳ ಹಿಂದೆ ಉಮಾ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಬಳಿಕ, ಉಮಾ ವೈದ್ಯಕೀಯ ಚಿಕಿತ್ಸೆಯಲ್ಲಿದ್ದರು. ಚಿಕಿತ್ಸೆಗೆ ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದರು. ಇತ್ತೀಚೆಗಷ್ಟೇ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೋಲ್ಕತ್ತಾದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ನಟಿಯ ಸಾವಿಗೆ ಬೆಂಗಾಲಿ ಚಿತ್ರೋದ್ಯಮದ ಹಲವರು ಕಂಬನಿ ಮಿಡಿದಿದ್ದಾರೆ.

ನಟನೆಗೆ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ

ಉಮಾ ದಾಸ್ ಗುಪ್ತಾ ಅವರು ಚಿಕ್ಕ ವಯಸ್ಸಿನಿಂದಲೂ ರಂಗಭೂಮಿಯೊಂದಿಗೆ ಸಂಬಂಧ ಹೊಂದಿದ್ದರು. ಓದುತ್ತಿದ್ದ ಶಾಲೆಯ ಹೆಡ್‌ಮಾಸ್ಟರ್‌ ಮತ್ತು ನಿರ್ದೇಶಕ ಸತ್ಯಜಿತ್‌ ರೇ ಸ್ನೇಹಿತರು. ಇವರ ಮೂಲಕ ಪಥೇರ್ ಪಾಂಚಾಲಿ ಸಿನಿಮಾದಲ್ಲಿ ನಟಿಸಲು ಚಾನ್ಸ್‌ ಗಿಟ್ಟಿಸಿಕೊಂಡರು. ಆರಂಭದಲ್ಲಿ ಉಮಾ ಅವರ ಸಿನಿಮಾರಂಗ ಪ್ರವೇಶ, ಅವರ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಬಳಿಕ ಮನೆಯವರಿಂದಲೂ ಒಪ್ಪಿಗೆ ಸಿಕ್ಕಿತ್ತು. ಅದಾದ ಮೇಲೆ ಹಲವು ಸಿನಿಮಾಗಳಲ್ಲಿ ಉಮಾ ನಟಿಸಿ ಸೈ ಎನಿಸಿಕೊಂಡರು.

ಕಾದಂಬರಿ ಆಧರಿತ ಸಿನಿಮಾ

ವಿಭೂತಿಭೂಷಣ್ ಬಂಡೋಪಾಧ್ಯಾಯ ಅವರ 1929ರಲ್ಲಿ ಬಂದಿದ್ದ ಅದೇ ಪಥೇರ್‌ ಪಾಂಚಾಲಿ ಹೆಸರಿನ ಬಂಗಾಳಿ ಕಾದಂಬರಿಯನ್ನೇ ನಿರ್ದೇಶಕ ಸತ್ಯಜಿತ್ ರೇ ‌ಸಿನಿಮಾ ಮಾಡಿದ್ದರು. ಇದು ಅವರ ಚೊಚ್ಚಲ ಚಿತ್ರವಾಗಿತ್ತು. 1955ರಲ್ಲಿ ಚಿತ್ರ ಬಿಡುಗಡೆಯಾದ ನಂತರ ದೊಡ್ಡ ಮೆಚ್ಚುಗೆಯನ್ನು ಪಡೆಯಿತು. ಅಂದಹಾಗೆ ಈ ಚಿತ್ರವನ್ನು ಆಗಿನ ಪಶ್ಚಿಮ ಬಂಗಾಲ ಸರ್ಕಾರವೇ ನಿರ್ಮಾಣ ಮಾಡಿತ್ತು. ಉಮಾ ಅವರ ಜತೆಗೆ ಸುಬೀರ್‌ ಬ್ಯಾನರ್ಜಿ, ಕನು ಬ್ಯಾನರ್ಜಿ, ಕರುಣಾ ಬ್ಯಾನರ್ಜಿ, ಪಿನಕಿ ಸೇನ್‌ಗುಪ್ತ ಮುಖ್ಯಭೂಮಿಕೆಯಲ್ಲಿದ್ದರು.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ