logo
ಕನ್ನಡ ಸುದ್ದಿ  /  ಮನರಂಜನೆ  /  Vinod Raj: ‘ಮದುವೆ ಆಗಿದ್ದೀನ್ರಿ ಸ್ವಾಮಿ, ಏನ್‌ ಭಯೋತ್ಪಾದನೆ ಮಾಡಿದೀನಾ?’; ಟೀಕಿಸಿದವರಿಗೆ ವಿನೋದ್‌ ರಾಜ್‌ ಮಾತಿನ ಏಟು..

Vinod Raj: ‘ಮದುವೆ ಆಗಿದ್ದೀನ್ರಿ ಸ್ವಾಮಿ, ಏನ್‌ ಭಯೋತ್ಪಾದನೆ ಮಾಡಿದೀನಾ?’; ಟೀಕಿಸಿದವರಿಗೆ ವಿನೋದ್‌ ರಾಜ್‌ ಮಾತಿನ ಏಟು..

Apr 14, 2023 08:34 AM IST

google News

‘ಮದುವೆ ಆಗಿದ್ದೀನ್ರಿ ಸ್ವಾಮಿ, ಏನ್‌ ಭಯೋತ್ಪಾದನೆ ಮಾಡಿದೀನಾ?’; ಟೀಕಿಸಿದವರಿಗೆ ವಿನೋದ್‌ ರಾಜ್‌ ಮಾತಿನ ಏಟು..

    • ವಿನೋದ್‌ ರಾಜ್‌ ಮತ್ತು ಲೀಲಾವತಿ ಅವರ ಬಗ್ಗೆ ಮಾತನಾಡಿದ್ದ ಡಾ. ರಾಜ್‌ ಕುಟುಂಬದ ಆಪ್ತ ಪ್ರಕಾಶ್‌ ರಾಜ್‌ ಮೇಹಿ ಅವರಿಗೆ ವಿನೋದ್‌ ರಾಜ್‌ ಮಾತಿನ ಛಾಟಿ ಬೀಸಿದ್ದಾರೆ. ಮದುವೆ ಆಗಿದ್ದೇ ತಪ್ಪಾ? ಎಂದಿದ್ದಾರೆ..
‘ಮದುವೆ ಆಗಿದ್ದೀನ್ರಿ ಸ್ವಾಮಿ, ಏನ್‌ ಭಯೋತ್ಪಾದನೆ ಮಾಡಿದೀನಾ?’; ಟೀಕಿಸಿದವರಿಗೆ  ವಿನೋದ್‌ ರಾಜ್‌ ಮಾತಿನ ಏಟು..
‘ಮದುವೆ ಆಗಿದ್ದೀನ್ರಿ ಸ್ವಾಮಿ, ಏನ್‌ ಭಯೋತ್ಪಾದನೆ ಮಾಡಿದೀನಾ?’; ಟೀಕಿಸಿದವರಿಗೆ ವಿನೋದ್‌ ರಾಜ್‌ ಮಾತಿನ ಏಟು..

Vinod Raj: ಡಾ. ರಾಜ್‌ ಕುಟುಂಬದ ಆಪ್ತ ಪ್ರಕಾಶ್‌ ರಾಜ್‌ ಮೇಹು ವಿರುದ್ಧ ಹಿರಿಯ ನಟಿ ಲೀಲಾವತಿ ಮತ್ತು ವಿನೋದ್‌ ರಾಜ್‌ ತಿರುಗಿ ಬಿದ್ದಿದ್ದಾರೆ. ಮಾತಿನ ಮೂಲಕವೇ ತಿರುಗೇಟು ನೀಡಿದ್ದಾರೆ. ವೈಯಕ್ತಿಕ ವಿಚಾರಗಳ ಬಗ್ಗೆ ಸಾವರ್ಜನಿಕವಾಗಿ ಮಾತನಾಡಿದ ಪ್ರಕಾಶ್‌ ರಾಜ್‌ ಮೇಹು ವಿರುದ್ಧ ಸಿನಿವುಡ್‌ (Cinewood) ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿನೋದ್‌ ರಾಜ್‌ ಕಿಡಿಕಾರಿದ್ದಾರೆ.

ಕಳೆದ ಕೆಲ ದಿನಗಳಿಂದ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಅವರ ಹೇಳಿಕೆ. ವಿನೋದ್ ರಾಜ್‌ಗೆ ಮದುವೆಯಾಗಿದೆ. ಸೊಸೆಯೂ ಇದ್ದಾಳೆ, ಎದೆ ಎತ್ತರಕ್ಕೆ ಬೆಳೆದ ಮಗನೂ ಇದ್ದಾನೆ ಎಂದಿದ್ದರು. ಇದಕ್ಕೆ ಪೂರಕ ಎನಿಸುವ ಹಲವು ಸಾಕ್ಷಿಗಳನ್ನೂ ಬಹಿರಂಗಪಡಿಸಿದ್ದರು. ವಿವರವಾದ ಪೋಸ್ಟ್‌ವೊಂದನ್ನೂ ಶೇರ್‌ ಮಾಡಿದ್ದರು. ಇದೀಗ ಇದೆಲ್ಲ ಸುದ್ದಿಗಳಿಗೆ ವಿನೋದ್‌ ರಾಜ್‌ ಮಾತನಾಡಿದ್ದಾರೆ.

ಉಪಕಾರ ಮಾಡಿ.. ಉಪದ್ರವ ಕೊಡಬೇಡಿ..

"ನನಗೂ 55 ವರ್ಷ ಆಗಿದೆ. ನನ್ನ ತಾಯಿ ಕಷ್ಟಪಟ್ಟು ಹೇಗೆ ನಮ್ಮನ್ನು ಸಾಕಿದ್ರು.. ಹೇಗೆ ಬೆಳೆಸಿದ್ರು. ಕುಗ್ರಾಮದಲ್ಲಿ ಹೇಗೆ ಸೇರಿಕೊಂಡು ಬದುಕು ನಡೆಸಿದ್ರು? ಅದು ನನಗೆ ಗೊತ್ತು. 500, ಸಾವಿರ ಅಷ್ಟೋ ಇಷ್ಟೋ ಸಂಪಾದನೆ ಮಾಡಿದ್ದಾರೆ. 60ರ ದಶಕದಲ್ಲಿ ಸಿನಿಮಾಕ್ಕೆ ಬಂದಿದ್ದಾರೆ. ಈಗ ಅವರೊಬ್ಬ ಹಿರಿಯ ಕಲಾವಿದೆ, ಸಿನಿಮಾ ಬಿಟ್ಟು ಎಷ್ಟೋ ವರ್ಷವಾಯ್ತು.. ಹೀಗಿದ್ದರೂ ಇನ್ನೊಬ್ಬರಿಗೆ ಸಹಾಯ ಮಾಡಿದ್ದಾರೆ.. ಆಸ್ಪತ್ರೆ ಕಟ್ಟಿಸಿದ್ದಾರೆ. ಇನ್ನೊಂದು ಪಶು ಆಸ್ಪತ್ರೆ ಕಟ್ಟಿಸ್ತಿದ್ದಾರೆ. ಅಂಥದನ್ನು ಕೇಳೋಕೆ ಬರಲ್ವಾ?

"ಮದುವೆ ಎಲ್ಲರಿಗೂ ನಡೆಯುತ್ತಿದೆ. ಕಲಾವಿದರದ್ದು ಮಾತ್ರ ಏನೇನೋ ಆಗಿದೆ ಅನ್ನೋದು ಏನಕ್ಕೆ? ಭಯೋತ್ಪಾದನೆ ಆಗಿದೆಯೇ? ಇದರಿಂದ.. ಅಲ್ಲೋಲ ಕಲ್ಲೋಲ ಆಗಿದೆಯಾ, ನಿಧಿನಾ ಕಂಡು ಹಿಡಿದಂಗೆ.. ಶ್ರೇಷ್ಠ ಮನಸ್ಸುಗಳನ್ನು ನೋಯಿಸಬೇಡಿ.. ಯಾರೂ ತೊಂದರೆ ಕೊಡಬೇಡಿ.. ಕೆಲಸ ಬಿಟ್ಟರೆ, ಸಹಾಯ ಧನ ಇಲ್ಲ, ಗೌರವ ಧನ ಇಲ್ಲ.. ಅಗೌರವ ಒಂದೆನಾ ಉಳಿಯೋದಾ.. ಒಂದಿಷ್ಟು ಜನರಿಗೆ ಸಹಾಯ ಮಾಡು ನೋಡೋಣ. ಉದ್ದಾರ ಮಾಡಿ, ಉಪದ್ರವ ಕೊಡಬೇಡಿ.. ಇದರಿಂದ ನಿಮಗೆ ಹಿಂಸೆ ಆಗಿದೆಯಾ?"

"ಇಷ್ಟು ವರ್ಷಗಳ ಸರ್ವಿಸ್‌ನಲ್ಲಿ ನನ್ನ ತಾಯಿ ಯಾರನ್ನಾದರೂ ಬೈಯ್ದಿದ್ದು ಇದೆಯಾ? ಯಾರನ್ನಾದ್ರೂ ಕೈ ತೋರಿಸಿದ್ದು ಇದೆಯಾ? ಆವತ್ತೇ ಹೇಳಿದ್ದೇನೆ.. ಈ ಬಗ್ಗೆ ಬೇಡ ಬೇಡ ಮಾತನಾಡಬೇಡಿ ಎಂದಿದ್ದೇನೆ. ಯಾಕೆ? ಇಡೀ ಆರು ಕೋಟಿ ಅಭಿಮಾನಿಗಳಿಗೆ ಅರ್ಥ ಆಗಬೇಕು. ಅಣ್ಣಾವ್ರ ಅಭಿಮಾನಿಗಳಿಗೆ ಇಲ್ಲಿ ಚೆನ್ನಾಗಿ ಅರ್ಥವಾಗಿರುತ್ತದೆ. ಈ ವ್ಯಕ್ತಿ ನನಗೆ ಗೊತ್ತು.. ಭಗವಂತನಿಗೆ ಗೊತ್ತು.. ಇದು ಗೊತ್ತಾಗಿ ನೀನು ಏನು ಮಾಡೋಕೆ ಹೊರಟಿದ್ಯಾ ಇಲ್ಲಿ? ಯಾರ ಮರ್ಯಾದೆ ಕಳೆಯೋಕೆ ಹೋಗ್ತಿದ್ದೀಯಾ? ಯೋಚನೆ ಇದ್ಯಾ?"

"ಹಿಂದೆ ಚಪ್ಪಲೀಲಿ ಹೊಡೆದ್ರು, ಈಗ ಇದನ್ನು ಶುರು ಹಚ್ಚಿಕೊಂಡಿದ್ದಾರೆ. ಇದನ್ನು ಬಿಟ್ಟು ಬೇರೆ ಏನೂ ಜೀವನದಲ್ಲಿ ಬರೋದಿಲ್ವಾ? ನಮ್ಮ ಪ್ರಾಣ ಹೋದರೂ ಸರಿ.. ಕೆಲವು ತಪ್ಪಾದ ಪ್ರಶ್ನೆಗಳಿಗೆ ಉತ್ತರ ಕೊಡೋಕೆ ನಮಗೆ ಇಷ್ಟ ಇಲ್ಲ. ನಾವು 6 ಕೋಟಿ ಜನ ಏನು ಅಭಿಮಾನಿಗಳಿದ್ದಾರೋ.. ಕನ್ನಡದ ಮೇಲೆ ಏನು ಅಭಿಮಾನ ಇಟ್ಟಿದ್ದಾರೋ.. ಅದೇ ಅಭಿಮಾನ ನಾನು, ನನ್ನ ತಾಯಿ ಅಂತರಾಳದಲ್ಲಿ ಇಟ್ಟಿದ್ದೀವಿ. ನನ್ನ ತಾಯಿಯವರಿಗೆ ನಾನು ಮಾತು ಕೊಟ್ಟಿದ್ದೀನಿ. ಅವರು ಏನು ಹೇಳುತ್ತಾರೋ, ಅದರಂತೆ ನಡೆದು ಈ ಮಣ್ಣಿನಲ್ಲಿ ಹೋಗುವವನು ನಾನು’’

"ಸಾಮರ್ಥ್ಯ ಇದ್ದರೆ ಉಲ್ಟಾ ಮಾತನಾಡಿ ನೋಡಲಿ.. ಲೀಲಾವತಿ, ವಿನೋದ್ ರಾಜ್ ಬಗ್ಗೆ ಹೆಚ್ಚು ಕಮ್ಮಿ ಏನಾದರೂ ಮಾತನಾಡಿದರೆ ಅದರ ಪರಿಸ್ಥಿತಿ, ಪರಿಣಾಮ ಏನಾಗಬಹುದು ಅಂತ ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ಯಾಕಂದ್ರೆ, ನಮಗೇನೂ ಬೇಕಾಗಿಲ್ಲ. ನಾವು ಸಿನಿಮಾ ಮಾಡಲ್ಲ. ಮಾಡ್ತಾಯಿಲ್ಲ. ನಾವಿಲ್ಲಿ ಜೀವನ ಮಾಡೋಕೆ ಬಂದಿದ್ದೀವಿ. ಜೀವನ ಮಾಡ್ತಾಯಿದೀವಿ. ಅಷ್ಟೇ.. ಇಷ್ಟ ಇದ್ರೆ ಹೊಗಳ್ರಿ.. ಕಷ್ಟ ಇದ್ರೆ ತೆಗಿಲೇಬೇಡಿ.. ಇದೆಲ್ಲ ಏತಕ್ಕೆ? ಬೇಕಾಗಿದ್ಯಾ ಇದೆಲ್ಲ?" ಎಂದು ಕೊಂಚ ಗರಂ ಆಗಿಯೇ ಮಾತನಾಡಿದ್ದಾರೆ ವಿನೋದ್‌ ರಾಜ್.‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ