logo
ಕನ್ನಡ ಸುದ್ದಿ  /  ಮನರಂಜನೆ  /  Viral: ಬೆಂಗಳೂರಲ್ಲಿ ಫುಡ್‌ ಬ್ಲಾಗರ್‌ ಆದ್ರು ಕಾರ್ತಿಕ್‌ ಆರ್ಯನ್‌; ಕನ್ನಡದಲ್ಲೇ ಕಾಫಿ ಕೇಳಿ ಮೆಚ್ಚುಗೆ ಪಡೆದ್ರು ಬಾಲಿವುಡ್‌ ನಟ

Viral: ಬೆಂಗಳೂರಲ್ಲಿ ಫುಡ್‌ ಬ್ಲಾಗರ್‌ ಆದ್ರು ಕಾರ್ತಿಕ್‌ ಆರ್ಯನ್‌; ಕನ್ನಡದಲ್ಲೇ ಕಾಫಿ ಕೇಳಿ ಮೆಚ್ಚುಗೆ ಪಡೆದ್ರು ಬಾಲಿವುಡ್‌ ನಟ

Reshma HT Kannada

Feb 27, 2024 06:19 PM IST

google News

ಬೆಂಗಳೂರಲ್ಲಿ ಫುಡ್‌ ಬ್ಲಾಗರ್‌ ಆದ ಕಾರ್ತಿಕ್‌ ಆರ್ಯನ್‌; ಕನ್ನಡದಲ್ಲೇ ಕಾಫಿ ಕೇಳಿ ಮೆಚ್ಚುಗೆ ಪಡೆದ್ರು ಬಾಲಿವುಡ್‌ ನಟ

    • ಮೊನ್ನೆ ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಗೆ ಬಾಲಿವುಡ್‌ ಸ್ಟಾರ್‌ ಕಾರ್ತಿಕ್‌ ಆರ್ಯನ್‌ ಭೇಟಿ ನೀಡಿದ್ರು, ಮಾತ್ರವಲ್ಲ ಕನ್ನಡದಲ್ಲೇ ಕಾಫಿ ಕೇಳಿ ಕನ್ನಡಿಗರ ಹಾರ್ಟ್‌ಗೆ ಹತ್ರ ಆಗ್ಬಿಟ್ರು. ಅವರ ವಿಡಿಯೊ ಈಗ ಸಾಮಾಜಿಕ ಜಾಲತಾಣಲದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಬೆಂಗಳೂರಲ್ಲಿ ಫುಡ್‌ ಬ್ಲಾಗರ್‌ ಆದ ಕಾರ್ತಿಕ್‌ ಆರ್ಯನ್‌; ಕನ್ನಡದಲ್ಲೇ ಕಾಫಿ ಕೇಳಿ ಮೆಚ್ಚುಗೆ ಪಡೆದ್ರು ಬಾಲಿವುಡ್‌ ನಟ
ಬೆಂಗಳೂರಲ್ಲಿ ಫುಡ್‌ ಬ್ಲಾಗರ್‌ ಆದ ಕಾರ್ತಿಕ್‌ ಆರ್ಯನ್‌; ಕನ್ನಡದಲ್ಲೇ ಕಾಫಿ ಕೇಳಿ ಮೆಚ್ಚುಗೆ ಪಡೆದ್ರು ಬಾಲಿವುಡ್‌ ನಟ

ಬಾಲಿವುಡ್‌ ನಟರು ಆಗಾಗ ನಮ್ಮ ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಬರ್ತಾ ಇರ್ತಾರೆ, ಮಾತ್ರವಲ್ಲ ಇಲ್ಲಿನ ಆಹಾರ, ಜಾಗಗಳನ್ನು ಮೆಚ್ಚಿಕೊಂಡು ಫೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡ್ತಾರೆ. ಅದರಲ್ಲೂ ಬಾಲಿವುಡ್‌ನ ಬಹುತೇಕ ನಟ-ನಟಿಯರು ಸಿನಿಮಾ ಪ್ರಮೋಷನ್‌ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಬೇರೆ ನಗರಗಳಿಗೆ ಹೋದಾಗ ಅಲ್ಲಿನ ಸ್ಥಳೀಯ ತಿನಿಸುಗಳನ್ನು ಸವಿಯುವ ಮೂಲಕ ಆ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಬಾಲಿವುಡ್‌ನ ಚಾಕೊಲೇಟ್‌ ಹೀರೋ ಕಾರ್ತಿಕ್‌ ಆರ್ಯನ್‌ ಬೆಂಗಳೂರಿಗೆ ಬಂದಿದ್ದು, ಇಲ್ಲಿ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದರು, ಮಾತ್ರವಲ್ಲ ಕನ್ನಡದಲ್ಲೇ ಕಾಫಿ ಕೂಡ ಕೇಳಿದ್ರು. ಇದೀಗ ಈ ವಿಡಿಯೊ ಸಖತ್‌ ವೈರಲ್‌ ಆಗ್ತಿದೆ.

ವುಮನ್ಸ್‌ ಪ್ರೀಮಿಯರ್‌ ಲೀಗ್‌ ಉದ್ಘಾಟನ ಸಮಾರಂಭಕ್ಕಾಗಿ ಕಾರ್ತಿಕ್‌ ಆರ್ಯನ್‌ ಬೆಂಗಳೂರಿಗೆ ಬಂದಿದ್ದರು. ಈ ವೇಳೆಗೆ ಬೆಂಗಳೂರು ಟ್ರಿಪ್‌ ಮಾಡಿದ್ರು, ಮಾತ್ರವಲ್ಲ ಬೆಂಗಳೂರಿನ ಪ್ರಸಿದ್ಧ ಜಾಗಗಳಿಗೆ ಭೇಟಿಗಳಿಗೆ ನೀಡಿದ್ದರು. ಈ ವೇಳೆ ಇಂದಿರಾನಗರದ ರಾಮೇಶ್ವರಂ ಕೆಫೆ ಹಾಗೂ ಅಕೋಶ್‌ ನಗರದ ನಾರ್ಗಾಜುನ ರೆಸ್ಟೋರೆಂಟ್‌ ಸೇರಿದಂತೆ ನಗರದ ಪ್ರಸಿದ್ಧ ಹೋಟೆಲ್‌ಗಳಿಗೆ ಭೇಟಿ ನೀಡಿ ಇಲ್ಲಿನ ತಿನಿಸುಗಳ ರುಚಿ ಸವಿದಿದ್ದರು.

ಅಲ್ಲದೇ ಹೋಟೆಲ್‌ ಹಾಗೂ ತಿನಿಸುಗಳ ಫೋಟೊಗಳನ್ನ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಕಾರ್ತಿಕ್‌ ತಾನು ಫುಡ್‌ ಬ್ಲಾಗರ್‌ ಆಗಿ ವೃತ್ತಿ ಆರಂಭಿಸಬಹುದು ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ʼಬೆಂಗಳೂರಿನ ಈ ಐಕಾನಿಕ್‌ ಹೋಟೆಲ್‌ಗಳಿಗೆ ಭೇಟಿ ನೀಡಿ, ಇಲ್ಲಿನ ಖಾದ್ಯಗಳನ್ನು ಸವಿದ ಬಳಿಕ ನನಗೂ ಫುಡ್‌ ಬ್ಲಾಗರ್‌ ಆಗಬೇಕು ಅನ್ನಿಸುತ್ತಿದೆʼ ಎಂದು ಬರೆದುಕೊಂಡಿದ್ದಾರೆ. ಫೆ. 24 ರಂದು ಕಾರ್ತಿಕ್‌ ಈ ಪೋಸ್ಟ್‌ ಹಂಚಿಕೊಂಡಿದ್ದು, ಸಾಕಷ್ಟು ವೈರಲ್‌ ಆಗಿದೆ. ಈಗಾಗಲೇ 16 ಲಕ್ಷಕ್ಕೂ ಅಧಿಕ ಮಂದಿ ಈ ಪೋಸ್ಟ್‌ ವೀಕ್ಷಿಸಿದ್ದಾರೆ. ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿ, ಮೌನಿ ರಾಯ್‌ ಸೇರಿದಂತೆ ಹಲವರು ಕಾರ್ತಿಕ್‌ ಆರ್ಯನ್‌ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ್ದಾರೆ.

ಮೊದಲ ಫೋಟೊದಲ್ಲಿ ಕಾರ್ತಿಕ ರಾಮೇಶ್ವರಂ ಕೆಫೆಯ ಮುಂದೆ ಘೀ ಇಡ್ಲಿ ಹಿಡಿದು ಪೋಸ್‌ ನೀಡುತ್ತಿರುವುದು ಕಾಣಬಹುದು. ಇನ್ನೊಂದು ಫೋಟೊದಲ್ಲಿ ಬಾಳೆಎಲೆಯಲ್ಲಿ ಊಟ ಮಾಡುತ್ತಿರುವ ದೃಶ್ಯವಿದೆ. ಇನ್ನೊಂದು ವಿಡಿಯೊದಲ್ಲಿ 5 ಫಿಲ್ಟರ್‌ ಕಾಫಿ ಎಂದು ಕಾಫಿ ಆರ್ಡರ್‌ ಮಾಡುತ್ತಿರುವುದು ಕಾಣಿಸುತ್ತದೆ. ಇನ್ನೊಂದು ವಿಡಿಯೊದಲ್ಲಿ ಊಟ ಬಡಿಸುವಾಗ ಹಿಂದಿಯಲ್ಲಿ ಸ್ವಲ್ಪ ಸ್ವಲ್ಪ ಬಡಿಸಿ ಎನ್ನುವ ಕಾರ್ತಿಕ್‌ ಪ್ರತಿಯೊಂದು ಐಟಂ ಅನ್ನು ಇದೇನು, ಇದೇನು ಎಂದು ಕೇಳುತ್ತಿರುವುದು ಕಾಣಬಹುದಾಗಿದೆ.

ಒಟ್ಟಾರೆ ಬೆಂಗಳೂರಿನ ಆಹಾರಗಳ ರುಚಿಗಳ ಸವಿದ ಕಾರ್ತಿಕ್‌ ಆರ್ಯನ್‌ ಫಿದಾ ಆಗಿದ್ದಾರೆ, ಅಲ್ಲದೇ ಆ ಖುಷಿ ತಾವು ಫುಡ್‌ ಬ್ಲಾಗರ್‌ ಆಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ

ಬಾಲಿವುಡ್‌ ಬೆಡಗಿ, ಕುಡ್ಲದ ಕುವರಿ ಶಿಲ್ಪಾ ಶೆಟ್ಟಿ ʼನಾನು ಹೇಳಿದ್ದನ್ನೇ ತಿಂದಿದೀಯಾ ಅಲ್ವಾʼ ಎಂದು ಬಾಯಲ್ಲಿ ನೀರೂರಿಸುವ ಇಮೋಜಿ ಹಾಕಿ ಕಾಮೆಂಟ್‌ ಮಾಡಿದ್ದಾರೆ. ಕೆಜಿಎಫ್‌ ಖ್ಯಾತಿಯ ನಟಿ ಮೌನಿ ರಾಯ್‌ ʼನಾಗಾರ್ಜುನʼ ಎಂದು ಕಾಮೆಂಟ್‌ ಮಾಡಿದ್ದಾರೆ. ಹಲವರು ಬೆಂಗಳೂರಿನ ಸಿಟಿಆರ್‌, ವಿದ್ಯಾರ್ಥಿ ಭವನ್‌ ಬೆಸ್ಟ್‌ ಅಲ್ಲಿಗೂ ಹೋಗಿ ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ

ವಮಿಕಾ ಜತೆ ವಿರಾಟ್‌ ಕೊಹ್ಲಿ ಲಂಚ್‌, ಜೂನಿಯರ್‌ ಅನುಷ್ಕಾಳ ಜುಟ್ಟು ನೋಡಿ ಖುಷಿಪಡಬೇಕಷ್ಟೇ ಅಂದ್ರು ಫ್ಯಾನ್ಸ್‌

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್‌ ಕೊಹ್ಲಿ ಕಳೆದ ವಾರ ತಮಗೆ ಗಂಡುಮಗು ಅಕಾಯ್‌ ಜನಿಸಿರುವ ಕುರಿತು ತಿಳಿಸಿದ್ದರು. ಇದೀಗ ಈ ದಂಪತಿ ತಮ್ಮ ಪುಟ್ಟ ಮಕ್ಕಳ ಜತೆ ಲಂಚ್‌ಗೆ ಹೋಗಿರುವ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ