logo
ಕನ್ನಡ ಸುದ್ದಿ  /  ಮನರಂಜನೆ  /  ಆಲಿಯಾ ಭಟ್‌ ಅಂದ್ರೆ ನಂಗೆ ತುಂಬಾ ಇಷ್ಟ; ರಣಬೀರ್‌ ಮನದನ್ನೆಯನ್ನ ಮನಸಾರೆ ಹೊಗಳಿದ ಇನ್ಫೋಸಿಸ್‌ ಸುಧಾಮೂರ್ತಿ; ವಿಡಿಯೊ ವೈರಲ್‌

ಆಲಿಯಾ ಭಟ್‌ ಅಂದ್ರೆ ನಂಗೆ ತುಂಬಾ ಇಷ್ಟ; ರಣಬೀರ್‌ ಮನದನ್ನೆಯನ್ನ ಮನಸಾರೆ ಹೊಗಳಿದ ಇನ್ಫೋಸಿಸ್‌ ಸುಧಾಮೂರ್ತಿ; ವಿಡಿಯೊ ವೈರಲ್‌

Reshma HT Kannada

Jan 10, 2024 11:23 AM IST

google News

ಸುಧಾಮೂರ್ತಿ (ಎಡಚಿತ್ರ) ಆಲಿಯಾ ಭಟ್‌ (ಬಲಚಿತ್ರ)

    • ಇತ್ತೀಚಿನ ಸಂದರ್ಶನವೊಂದರಲ್ಲಿ ಇನ್ಫೋಸಿಸ್‌ ಅಧ್ಯಕ್ಷೆ ಸುಧಾ ಮೂರ್ತಿ ಹಿಂದಿ ಸಿನಿಮಾಗಳು ಹಾಗೂ ನಟ-ನಟಿಯರ ಬಗ್ಗೆ ಮಾತನಾಡಿದ್ದಾರೆ. ಹಿಂದಿ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದ ಅವರು ʼಆಲಿಯಾ ಭಟ್‌ ಅಂದ್ರೆ ನಂಗೆ ತುಂಬಾ ಇಷ್ಟʼ ಎಂದಿದ್ದಾರೆ. ಈ ಸಂದರ್ಶನದಲ್ಲಿ ನಾರಾಯಣ ಮೂರ್ತಿ ಕೂಡ ಭಾಗವಹಿಸಿದ್ದರು. 
ಸುಧಾಮೂರ್ತಿ (ಎಡಚಿತ್ರ) ಆಲಿಯಾ ಭಟ್‌ (ಬಲಚಿತ್ರ)
ಸುಧಾಮೂರ್ತಿ (ಎಡಚಿತ್ರ) ಆಲಿಯಾ ಭಟ್‌ (ಬಲಚಿತ್ರ)

ಇನ್ಫೋಸಿಸ್‌ ಅಧ್ಯಕ್ಷೆ ಸುಧಾಮೂರ್ತಿ ಆಗಾಗ ತಮ್ಮಿಷ್ಟದ ವಿಚಾರಗಳ ಬಗ್ಗೆ ಸಂದರ್ಶನಗಳಲ್ಲಿ ಮಾತನಾಡುತ್ತಿರುತ್ತಾರೆ. ಇತ್ತೀಚೆಗೆ ಪತ್ರಕರ್ತೆ ಶೇರಿನ್‌ ಭಾನ್‌ ನಡೆಸಿದ ಸಂದರ್ಶನವೊಂದರಲ್ಲಿ ಸುಧಾಮೂರ್ತಿ ಭಾಗವಹಿಸಿದ್ದರು. ಈ ಸಂದರ್ಶನದಲ್ಲಿ ತಾನು ಹಿಂದಿ ಸಿನಿಮಾಗಳನ್ನು ಹೆಚ್ಚು ನೋಡುತ್ತೇನೆ ಎಂದಿದ್ದ ಅವರು ತಮ್ಮ ನೆಚ್ಚಿನ ನಟ, ನಟಿಯ ಬಗ್ಗೆಯೂ ಮಾತನಾಡಿದ್ದಾರೆ. ಅಲ್ಲದೆ ಇತ್ತೀಚೆಗೆ ಓಟಿಟಿಯಲ್ಲಿ ನೋಡಿದ ವೆಬ್‌ಸರಣಿಗಳ ಬಗ್ಗೆಯೂ ಚರ್ಚಿಸಿದ್ದಾರೆ. ಜೊತೆಗೆ ಇತ್ತೀಚಿನ ಹಿಂದಿ ಚಲನಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ.

ಸಂದರ್ಶನದ ವೇಳೆ ಹಿಂದಿ ಚಿತ್ರರಂಗದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ನಾನು ಇಂಗ್ಲಿಷ್‌ ಸಿನಿಮಾಗಳನ್ನು ನೋಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ʼನಾನು ಥಿಯೇಟರ್‌ಗೆ ಹೋಗುವುದಿಲ್ಲ, ಬದಲಾಗಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಬಿಡುಗಡೆಯ ದಿನಾಂಕದಂದೇ ನೋಡಲು ಬಯಸುತ್ತೇನೆʼ ಎಂದಿದ್ದಾರೆ.

ಸಂದರ್ಶನದಲ್ಲಿ ಭಾನ್‌ ಅವರು ಸುಧಾ ಮೂರ್ತಿ ಅವರ ಬಳಿ ನೀವು ಇತ್ತೀಚೆಗೆ ನೋಡಿದ ಸಿನಿಮಾ ಯಾವುದು ಕೇಳಿದ್ದಾರೆ. ಅದಕ್ಕೆ ಆಕೆ ʼರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿʼ ಎಂದು ಉತ್ತರಿಸಿದ್ದಾರೆ. ಅಲ್ಲದೆ ತಮಗೆ ಆಲಿಯಾ ಭಟ್‌ ಮೇಲಿನ ಆಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ನಂಗೆ ಹಿಂದಿಯಲ್ಲಿ ರಣವೀರ್‌ ಸಿಂಗ್‌, ಆಲಿಯಾ ಭಟ್‌ ನಟನೆ ಇಷ್ಟ. ಆಲಿಯಾ ಎಂದರೆ ನನಗೆ ತುಂಬಾ ಇಷ್ಟ, ನಾನು ಇತ್ತೀಚೆಗೆ ರಾಕಿ ಔರ್‌ ರಾಣಿ ಪ್ರೇಮ್‌ ಕಹಾನಿ ಸಿನಿಮಾ ನೋಡಿದೆʼ ಎಂದು ಸುಧಾ ಮೂರ್ತಿ ಹೇಳಿದ್ದಾರೆ.

ಅಲ್ಲದೆ ನೆಟ್‌ಫ್ಲಿಕ್ಸ್‌ನ ಕ್ರೌನ್‌ ವೆಬ್‌ಸರಣಿಯ ಬಗ್ಗೆಯೂ ಸುಧಾಮೂರ್ತಿ ಮಾತನಾಡಿದ್ದಾರೆ. ʼಇತ್ತೀಚೆಗೆ ನಾನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಿದ ವೆಬ್‌ಸರಣಿ ಕ್ರೌನ್‌ʼ ಎಂದು ಉತ್ತರಿಸಿದ್ದಾರೆ.

ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಅರ್ಥವಾಗಿಲ್ಲ; ನಾರಾಯಣ ಮೂರ್ತಿ

ಈ ಸಂದರ್ಶನ ವೇಳೆ ಶೆರೀನ್‌ ಭಾನ್‌ ನಾರಾಯಣ ಮೂರ್ತಿ ಅವರನ್ನೂ ಮಾತನಾಡಿಸಿದ್ದಾರೆ. ಈ ವೇಳೆ ನಾರಾಯಣ ಮೂರ್ತಿ ಅವರ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂಬ ಹೇಳಿಕೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣ ಮೂರ್ತಿ ʼಯಾರಾದರೂ ಅವರ ಸ್ವಂತ ಕ್ಷೇತ್ರದಲ್ಲಿ ನನಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಅದನ್ನು ನಾನು ಖಂಡಿತ ಗೌರವಿಸುತ್ತೇನೆ. ಅಂತಹವರನ್ನು ನಾನು ಕರೆಯುತ್ತೇನೆ. ಆದರೆ ನನಗೆ ನಾನು ಎಲ್ಲಿ ತಪ್ಪು ಹೇಳಿದೆ ಎಂದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದರೆ ಈ ಬಗ್ಗೆ ನನ್ನ ಹಲವು ವಿದೇಶಿ ಸ್ನೇಹಿತರು, ಎನ್‌ಆರ್‌ಐಗಳು ಹಾಗೂ ಭಾರತದ ಹಲವರು ನನಗೆ ಕರೆ ಮಾಡಿದ್ದರೆ, ಅಲ್ಲದೆ ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: 70 Hour Work: ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು; ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದ ಇನ್ಫೋಸಿಸ್ ನಾರಾಯಣ ಮೂರ್ತಿ ಮಾತು

ʼಇಲ್ಲಿ 70 ಗಂಟೆ ಅಥವಾ 60 ಗಂಟೆ ಕೆಲಸ ಎನ್ನುವುದು ಮುಖ್ಯವಾಗುವುದಿಲ್ಲ. ಸಮಸ್ಯೆ ಏನೆಂದರೆ ಈ ದೇಶದಲ್ಲಿ ನಾವು ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ. ಏಕೆಂದರೆ ಬಡ ರೈತ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾನೆ. ಕಾರ್ಖಾನೆಯಲ್ಲಿ ದುಡಿಯುವ ವ್ಯಕ್ತಿ ಕೂಡ ಕಷ್ಟಪಟ್ಟು ಕೆಲಸ ಮಾಡುತ್ತಾನೆ. ನಮ್ಮಂತಹವರು ಹೆಚ್ಚಿನ ರಿಯಾಯಿತಿಯಲ್ಲಿ ಶಿಕ್ಷಣವನ್ನು ಪಡೆದವರು. ಶೈಕ್ಷಣಿಕ ವಿಚಾರಕ್ಕೆ ಸರ್ಕಾರ ನೀಡುವ ಧನಸಹಾಯಕ್ಕೆ ಧನ್ಯವಾದಗಳು. ನನ್ನ ವೈಯಕ್ತಿಯ ವಿಚಾರಕ್ಕೆ ಬರುವುದಾದರೆ ನಾನು ವಿಶ್ವವಿದ್ಯಾಲಯದಿಂದಲೇ ವಿದ್ಯಾರ್ಥಿವೇತನ ಪಡೆದುಕೊಂಡೆ. ಆದ್ದರಿಂದ ನಾವು ಅತ್ಯಂತ ಕಷ್ಟಪಟ್ಟು ಕೆಲಸ ಮಾಡಿ ಭಾರತಕ್ಕೆ ಋಣಿಯಾಗಿರಬೇಕುʼ ಎಂದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ