ನಾಲ್ಕು ಹಂತದಲ್ಲಿ ಟ್ರೀಟ್‌ಮೆಂಟ್, ಒಂದು ಸರ್ಜರಿ; ಅನಾರೋಗ್ಯದ ಬಗ್ಗೆ ಮಾತನಾಡಿದ ಶಿವರಾಜ್‌ಕುಮಾರ್
Nov 07, 2024 03:14 PM IST
ಅನಾರೋಗ್ಯದ ಬಗ್ಗೆ ಮಾತನಾಡಿದ ಶಿವಣ್ಣ
- Shiva rajkumars health Condition: ನಟ ಶಿವರಾಜ್‌ಕುಮಾರ್ ಅನಾರೋಗ್ಯದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಇದೆ. ಈಗಾಗಲೇ ಟ್ರೀಟ್‌ಮೆಂಟ್ ನಡೀತಿದೆ. ಇನ್ನೇನು ಅಮೆರಿಕಾದಲ್ಲಿಯೂ ಒಂದು ತಿಂಗಳು ಚಿಕಿತ್ಸೆ ನಡೆಯಲಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಭೈರತಿ ರಣಗಲ್ ಸಿನಿಮಾ ಮುಗಿಸಿ, ಬಳಿಕ ಚಿಕಿತ್ಸೆಗೆ ವಿದೇಶಕ್ಕೆ ತೆರಳಲಿದ್ದಾರೆ.
Shiva Rajkumar about Health: ಸ್ಯಾಂಡಲ್‌ವುಡ್ ನಟ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯಲ್ಲಿ ಇನ್ನೂ ಸಕ್ರಿಯರು. ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಎಲ್ಲ ಸಿನಿಮಾ, ಕಿರುತೆರೆ ಕಾರ್ಯಕ್ರಮಗಳಲ್ಲಿ ಅಷ್ಟೇ ಲವಲವಿಕೆಯಿಂದಲೇ ಓಡಾಡುತ್ತಿರುತ್ತಾರೆ. ಆದರೆ, ಇತ್ತೀಚಿನ ಕೆಲ ತಿಂಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಶಿವಣ್ಣನ ಆರೋಗ್ಯದ ಬಗ್ಗೆಯೇ ಚರ್ಚೆ ನಡೆದಿತ್ತು. ಈಗ ಅದೇ ಅನಾರೋಗ್ಯ ವಿಚಾರದ ಬಗ್ಗೆಯೂ ಸ್ವತಃ ಶಿವರಾಜ್‌ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸುದ್ದಿ ಮನೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಿವಣ್ಣ, "ಸುಮ್ಮನೇ ನಾನ್ಯಾಕೆ ಸುಳ್ಳು ಹೇಳಬೇಕು. ಎಲ್ಲ ಸಮಯದಲ್ಲೂ ಅಭಿಮಾನಿಗಳು ಬೇಕು.. ಈ ಸಮಯದಲ್ಲಿ ಯಾಕೆ ನಾಟಕ ಆಡಬೇಕು ಅಲ್ವಾ? ಎಲ್ಲರ ರೀತಿ ನಾನೂ ಮನುಷ್ಯನೇ. ನನಗೂ ಪ್ಲಾಬ್ಲಂ ಆಗಿದೆ. ಬಂದಿದೆ. ಟ್ರೀಟ್‌ಮೆಂಟ್ ತೆಗೊತಿದೀನಿ. ಒಟ್ಟು 4 ಸೆಷನ್ ಮೂಲಕ ಟ್ರೀಟ್‌ಮೆಂಟ್ ನಡಿಯುತ್ತೆ. ಜನ ತುಂಬ ಗಾಬರಿಯಾಗ್ತಿದ್ದಾರೆ. ನನಗೂ ಗಾಬರಿಯಾಯ್ತು. ನನಗೂ ಧೈರ್ಯ ತುಂಬ್ತಿದ್ದಾರೆ. ನಾನೂ ಧೈರ್ಯ ಕಳೆದುಕೊಂಡಿಲ್ಲ. ಹೀಗಿರುವಾಗಲೇ 45 ಸಿನಿಮಾ ಮುಗಿಸಿದೆ. ಸಿನಿಮಾದ ಸಾಹಸ ದೃಶ್ಯಗಳನ್ನು ಮಾಡಿದೆ. ಡಿಕೆಡಿ ನಡೀತಿದೆ. ಭೈರತಿ ರಣಗಲ್ ಪ್ರಮೋಷನ್ ನಡೀತಿದೆ" ಎಂದಿದ್ದಾರೆ.
ಅಮೆರಿಕಾದಲ್ಲಿ ಟ್ರೀಟ್‌ಮೆಂಟ್
ನಾಲ್ಕು ಸೆಷನ್‌ಗಳಾದ ಮೇಲೆ ಸರ್ಜರಿ ಇದೆ. ಅದನು ಅಮೆರಿಕಾದಲ್ಲಿ ಮಾಡೋದಾ ಅಥವಾ ಇಂಡಿಯಾದಲ್ಲಿ ಮಾಡೋದಾ ಅನ್ನೋದು ಕನ್ಫರ್ಮ್ ಆಗಬೇಕು. ಅಮರಿಕಾ ಬಹುತೇಕ ಖಚಿತ. ಒಂದು ತಿಂಗಳ ಕಾಲ ಅಲ್ಲಿಗೆ ಟ್ರೀಟ್‌ಮೆಂಟ್‌ಗೆ ಹೋಗಬೇಕಾಗಬಹುದು. ಜನವರಿಗೆ ಮತ್ತೆ ಶಿವಣ್ಣ ಫಾರ್ಮ್‌ನಲ್ಲಿ ಬರ್ತಾರೆ. ಸುಳ್ಳು ಹೇಳಬಾರದು, ಇದೇ ವಿಚಾರವನ್ನು ಗೀತಾ ಬಳಿಯೂ ಚರ್ಚೆ ಮಾಡಿದೆ. ಯಾಕೆ ಹೈಡ್ ಮಾಡಬೇಕು? ಅಲ್ವಾ. ನಾನಿಷ್ಟು ಖುಷಿಯಾಗಿದ್ದೀವಿ ಅಂದರೆ ಅದು ಜನಗಳು ಕೊಟ್ಟ ಪ್ರೀತಿ. ಸುಸ್ತಾಗುತ್ತೆ. ಅದಕ್ಕಾಗಿ ನಾನು ಎರಡು ತಿಂಗಳು ವೇಟ್ ಮಾಡಬೇಕಾಗುತ್ತೆ" ಎಂದಿದ್ದಾರೆ ಶಿವರಾಜ್‌ಕುಮಾರ್.
ಸುದೀಪ್, ಯಶ್‌ಗೂ ಗೊತ್ತು..
"ಈ ರೀತಿ ವೇಟ್ ಮಾಡುವುದು ನನಗೂ ಆಗಲ್ಲ. ಯಾಕಂದ್ರೆ ಸದಾ ಕೆಲಸ ಮಾಡಿಕೊಂಡು ಇರೋರಿಗೆ ಅದು ಕಷ್ಟ. ಈ ಟ್ರೀಟ್‌ಮೆಂಟ್ ಸಲುವಾಗಿ ಭೈರವನ ಕೊನೇ ಪಾಠ ಸಿನಿಮಾ ಮುಂದಕ್ಕೆ ಹೋಯಿತು. ರಾಮ್‌ಚರಣ್ ಸಿನಿಮಾ ತಂಡಕ್ಕೂ ಹೇಳಿದ್ದೇನೆ. ಜನರು ನಮ್ಮವರು, ಅವರಿಗೂ ಇಂಥ ವಿಚಾರಗಳನ್ನು ನಾವು ತಿಳಿಸಬೇಕು. ಸುದೀಪ್ ತಾಯಿ ತೀರಿಕೊಂಡ ಎರಡು ದಿನ ಹಿಂದೆಯೇ ನನಗೆ ಟ್ರೀಟ್‌ಮೆಂಟ್ ಆಗಿತ್ತು. ಆದರೂ ಬಿಡಬಾರದು ಅನ್ನೋ ಕಾರಣಕ್ಕೆ ಹೋಗಿ ಬಂದೆ. ನನಗೆ ಹುಷಾರಿಲ್ಲ ಅನ್ನೋದು ಸುದೀಪ್‌ಗೂ ಗೊತ್ತು, ಯಶ್‌ಗೂ ಗೊತ್ತಿದೆ" ಎಂದಿದ್ದಾರೆ ಶಿವಣ್ಣ.