logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗ ವಿಳಂಬ, 2025 ರ ಜನವರಿಯಲ್ಲಿ ಆರಂಭ ಸಾಧ್ಯತೆ; ಅಧಿಕೃತವಾಗಿ ಪ್ರಕಟಿಸಿದ ಬಿಎಂಆರ್‌ಸಿಎಲ್‌

ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗ ವಿಳಂಬ, 2025 ರ ಜನವರಿಯಲ್ಲಿ ಆರಂಭ ಸಾಧ್ಯತೆ; ಅಧಿಕೃತವಾಗಿ ಪ್ರಕಟಿಸಿದ ಬಿಎಂಆರ್‌ಸಿಎಲ್‌

Umesha Bhatta P H HT Kannada

Oct 07, 2024 12:57 PM IST

google News

ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ ತಡವಾಗಲಿದೆ.

    • Bangalore Namma Metro: ಬೆಂಗಳೂರು ನಮ್ಮ ಮೆಟ್ರೋದ ಬಹು ನಿರೀಕ್ಷಿತ ಹಳದಿ ಮಾರ್ಗ ಆರಂಭ ವಿಳಂಬವಾಗಲಿದೆ. ಎರಡರಿಂದ ಮೂರು ತಿಂಗಳು ತಡವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಿಸಿದೆ.
ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ ತಡವಾಗಲಿದೆ.
ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ ತಡವಾಗಲಿದೆ.

ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದ ಆರಂಭ ವಿಳಂಬವಾಗುವ ಸೂಚನೆ ದೊರೆತಿದೆ. ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಯೆಲ್ಲೋ ಲೈನ್ ಬಳಕೆಗೆ ಸಿಗುವುದು ತಡವಾಗುವುದು ನಿಕ್ಕಿಯಾಗಿದೆ. ಎರಡರಿಂದ ಮೂರು ತಿಂಗಳು ತಡವಾಗಿ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಶುರುವಾಗುವ ಸಾಧ್ಯತೆಯಿದೆ. ಈಗಾಗಲೇ ಮಾರ್ಗ ಅಣಿಯಾಗಿ, ರೈಲು ಸೆಟ್‌ಗಳು ಬಂದಿದ್ದರೂ ತಾಂತ್ರಿಕ ಕಾರಣ ಸೇರಿ ಹಲವಾರು ಅಂಶಗಳನ್ನಾಧರಿಸಿ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ ಆರಂಭದ ದಿನಾಂಕವನ್ನು ಮುಂದೂಡಿದೆ. ನಮ್ಮ ಮೆಟ್ರೋದ ರೀಚ್-5 ವಿಭಾಗವನ್ನು ಮುಂದಿನ ವರ್ಷದ ಜನವರಿಯಲ್ಲಿ ತೆರೆಯಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಅಧಿಕೃತವಾಗಿಯೇ ಪ್ರಕಟಿಸಿದೆ.

ಬಿಎಂಆರ್‌ಸಿಎಲ್ ಇತ್ತೀಚಿನ ನವೀಕರಣವು ಹಳದಿ ಮಾರ್ಗಕ್ಕೆ ಮೊದಲ ಸೆಟ್ ರೈಲುಗಳು 2024 ರ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಬರುವ ನಿರೀಕ್ಷೆಯಿತ್ತಾದರೂ ಹಲವು ಕಾರಣದಿಂದ ಇದು ಮುಂದೆ ಹೋಗಿದೆ. ಇದರಿಂದ ಬೆಂಗಳೂರು ದಕ್ಷಿಣ ಭಾಗದ ಜನ ಮೆಟ್ರೋ ರೈಲಿಗೆ ಇನ್ನಷ್ಟು ದಿನ ಕಾಯಬೇಕಾಗುತ್ತದೆ.

ಆರಂಭಿಕ ಹಂತದ ಕಾರ್ಯಾಚರಣೆಗೆ ಮೂರು ರೈಲು ಸೆಟ್‌ಗಳು ಸಿದ್ಧವಾಗಿವೆ. ಈ ಹಂತವು ಜನವರಿಯಲ್ಲಿ ಪ್ರಾರಂಭವಾಗಲಿದೆ. ಆದರೆ ಈ ಸಮಯದಲ್ಲಿ, ರೈಲುಗಳು 30 ನಿಮಿಷಗಳ ಅಂತರದಲ್ಲಿ ಚಲಿಸುತ್ತವೆ ಎಂದು ದಿ ಹಿಂದೂ ವರದಿ ಮಾಡಿದೆ.

ಆರಂಭದಲ್ಲಿ 2024ರ ಡಿಸೆಂಬರ್‌ನಲ್ಲಿ ವಾಣಿಜ್ಯ ಕಾರ್ಯಾಚರಣೆಗಳು ಪ್ರಾರಂಭವಾಗುವ ಭರವಸೆ ಇತ್ತು. ಆದಾಗ್ಯೂ, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ಸಿಎಂಆರ್ಎಸ್) ಅದೇ ತಿಂಗಳಲ್ಲಿ ನಿರ್ಣಾಯಕ ತಪಾಸಣೆ ನಡೆಸಲಿದ್ದಾರೆ.

ಇದು ಮಾರ್ಗವನ್ನು ಸಾರ್ವಜನಿಕರಿಗೆ ತೆರೆಯುವ ಮೊದಲು ಅಗತ್ಯ ಹೆಜ್ಜೆ. ವರದಿ ನಂತರ ಅಂತಿಮ ದಿನಾಂಕ ಪ್ರಕಟಿಸಲಾಗುವುದು. ಬಹುತೇಕ ಇದು ಹೊಸ ವರ್ಷದಲ್ಲಿಯೇ ಶುರುವಾಗಲಿದೆ ಎಂದು ಮೆಟ್ರೋ ನೀಡಿರುವ ಹೇಳಿಕೆ.

ಮಾರ್ಚ್ 2025 ರಿಂದ ತಿಂಗಳಿಗೆ ಎರಡು ವೇಗದಲ್ಲಿ ಹೆಚ್ಚುವರಿ ರೈಲು ಸೆಟ್‌ಗಳು ಬರುವುದರಿಂದ ಸೇವೆಗಳ ಆವರ್ತನ ಸುಧಾರಿಸುತ್ತದೆ.ಆಗಸ್ಟ್ 2025 ರ ವೇಳೆಗೆ, 15 ರೈಲುಗಳ ಪೂರ್ಣ ಹಳದಿ ಮಾರ್ಗವು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದು ಇನ್ನಷ್ಟು ಮೆಟ್ರೋ ಸೇವೆಗೆ ಅನುವು ಮಾಡಿಕೊಡುತ್ತದೆ ಎಂದು ಬಿಎಂಆರ್‌ಸಿ ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

18.82 ಕಿಲೋಮೀಟರ್ ಉದ್ದದ ಯೆಲ್ಲೋ ಲೈನ್ ನಲ್ಲಿ ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಂತಹ ಪ್ರಮುಖ ನಿಲ್ದಾಣಗಳು ಸೇರಿವೆ.

5,745 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 16 ಎಲಿವೇಟೆಡ್ ನಿಲ್ದಾಣಗಳು ಈ ಮಾರ್ಗದಲ್ಲಿ ಇರಲಿವೆ.

ವಿಶೇಷವಾಗಿ ಇನ್ಫೋಸಿಸ್ ಮತ್ತು ಬಯೋಕಾನ್ ನಂತಹ ಪ್ರಮುಖ ಕಂಪನಿಗಳ ಸುತ್ತಲೂ ಇರುವುದು ವಿಶೇಷ. ಇದು ಆರ್.ವಿ.ರಸ್ತೆ ನಿಲ್ದಾಣದಲ್ಲಿ ಹಸಿರು ಮಾರ್ಗ ಮತ್ತು ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಪಿಂಕ್ ಲೈನ್‌ಗೆ ಸೇರಿಕೊಳ್ಳಲಿದೆ. ಈ ಮಾರ್ಗ ಆರಂಭಗೊಂಡರೆ ಬೆಂಗಳೂರು ದಕ್ಷಿಣ ಭಾಗಕ್ಕೂ ಮೆಟ್ರೋ ಸಂಪರ್ಕ ಸಿಕ್ಕ ಹಾಗಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ