logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಮಳೆ ನೀರನ್ನು ಒಳಚರಂಡಿಗೆ ಹರಿಸುತ್ತಿದ್ದೀರಾ?, ಬೆಂಗಳೂರು ಜಲಮಂಡಳಿ ಶಿಕ್ಷೆ ವಿಧಿಸಲಿದೆ ಎಚ್ಚರಿಕೆ !

Bangalore News: ಮಳೆ ನೀರನ್ನು ಒಳಚರಂಡಿಗೆ ಹರಿಸುತ್ತಿದ್ದೀರಾ?, ಬೆಂಗಳೂರು ಜಲಮಂಡಳಿ ಶಿಕ್ಷೆ ವಿಧಿಸಲಿದೆ ಎಚ್ಚರಿಕೆ !

Umesha Bhatta P H HT Kannada

Apr 24, 2024 02:51 PM IST

ಮಳೆ ನೀರು ಸದ್ಬಳಕೆಗೆ ಬೆಂಗಳೂರು ಜಲಮಂಡಳಿ ಮನವಿ.

    • ಬೆಂಗಳೂರು ಜಲಮಂಡಳಿಯು ಮಳೆ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಿ ಎಂದು ಬೆಂಗಳೂರು ನಿವಾಸಿಗಳಲ್ಲಿ ಮನವಿ ಮಾಡಿದೆ. 
    • ವರದಿ: ಎಚ್‌. ಮಾರುತಿ, ಬೆಂಗಳೂರು
ಮಳೆ ನೀರು ಸದ್ಬಳಕೆಗೆ ಬೆಂಗಳೂರು ಜಲಮಂಡಳಿ ಮನವಿ.
ಮಳೆ ನೀರು ಸದ್ಬಳಕೆಗೆ ಬೆಂಗಳೂರು ಜಲಮಂಡಳಿ ಮನವಿ.

ಬೆಂಗಳೂರು: ಮಳೆ ನೀರನ್ನು ಒಳಚರಂಡಿ ಕೊಳವೆ ಮಾರ್ಗಗಳಿಗೆ ಹರಿಸುವುದನ್ನು ನಿಯಂತ್ರಿಸಲು ಕಾಮಗಾರಿ ಆರಂಭಿಸುವಂತೆ ಮತ್ತು ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಸೂಚನೆ ನೀಡಿದ್ದಾರೆ. ಮಳೆ ನೀರನ್ನು ರಾಜಕಾಲುವೆಗಳಲ್ಲೇ ಹರಿಯಬಿಡಬೇಕು. ಆದರೆ ಕೆಲವರು ಅನಧಿಕೃತವಾಗಿ ಒಳಚರಂಡಿ ಮಾರ್ಗಗಳಿಗೆ ಸಂಪರ್ಕ ಕಲ್ಪಿಸಿ ಮಳೆ ನೀರು ಹರಿಯುವಂತೆ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಇದನ್ನು ನಿಯಂತ್ರಿಸಿದರೆ ಒಳಚರಂಡಿಗಳಲ್ಲಿ ಸರಾಗವಾಗಿ ನೀರು ಹರಿಯುತ್ತದೆ. ಮಳೆ ನೀರು ನುಗ್ಗಿದರೆ ಒಳಚರಂಡಿ ವ್ಯವಸ್ಥೆ ಹಾಳಾಗುತ್ತದೆ. ಹೂಳು ತುಂಬಿಕೊಂಡು ಮ್ಯಾನ್‌ ಹೋಲ್‌ ಮತ್ತು ಒಳಚರಂಡಿಗಳು ಕಟ್ಟಿಕೊಂಡಿರುತ್ತವೆ. ಆದ್ದರಿಂದ ಈ ಮಾರ್ಗಗಳ ಪರಿಶೀಲನೆ ನಡೆಸಿ ಎಲ್ಲೆಲ್ಲಿ ಹೂಳೆತ್ತಬೇಕೋ ಅಂತಹ ಕಡೆ ಹೂಳೆತ್ತುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಟ್ರೆಂಡಿಂಗ್​ ಸುದ್ದಿ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ; ಬೆಂಗಳೂರು ಮೂಲದ ಇಬ್ಬರು ವೈದ್ಯರು ಕೊಯಮತ್ತೂರಿನಲ್ಲಿ ಎನ್‌ಐಎ ವಶಕ್ಕೆ

ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ; ಕಲಾ, ವಾಣಿಜ್ಯ, ವಿಜ್ಞಾನದಲ್ಲಿ 52,505 ವಿದ್ಯಾರ್ಥಿಗಳು ಉತ್ತೀರ್ಣ

Liquid Nitrogen Paan: ಮದುವೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದು 12 ವರ್ಷದ ಬಾಲಕಿ ಹೊಟ್ಟೆಯಲ್ಲಿ ರಂಧ್ರ

Bangalore News?:ಆಸ್ತಿ ತೆರಿಗೆ ಸಂಗ್ರಹ; ಗುರಿ ತಲುಪದ ಬಿಬಿಎಂಪಿ; ತಲುಪಬೇಕಿದ್ದ ಗುರಿ ಏನು? ಸಂಗ್ರಹವಾಗಿದ್ದು ಎಷ್ಟು?

ಮ್ಯಾನ್‌ ಹೋಲ್‌ಗಳ ಕವರ್‌ ತೆರೆಯಬೇಡಿ, ಮಳೆ ನೀರನ್ನು ಒಳಚರಂಡಿಗೆ ಹರಿಸಬೇಡಿ

ಮಳೆ ನೀರು ಹರಿದು ಹೋಗುವಂತೆ ಮಾಡಲು ಸಾರ್ವಜನಿಕರು ಮ್ಯಾನ್‌ಹೋಲ್‌ಗಳ ಕವರ್‌ಗಳನ್ನು ತಗೆದುಬಿಡುತ್ತಾರೆ. ಇದರಿಂದ ಮಳೆ ನೀರು ಒಳಚರಂಡಿ ಕೊಳವೆ ಮಾರ್ಗಕ್ಕೆ ಪ್ರವೇಶ ಪಡೆದು ಹೆಚ್ಚಿಸುತ್ತದೆ. ಅಲ್ಲದೇ, ಕವರ್‌ ಗಳನ್ನು ತೆಗೆಯುವುದರಿಂದ ಮ್ಯಾನ್‌ಹೋಲ್‌ಗಳಲ್ಲಿ ಪಾದಚಾರಿಗಳು ಮತ್ತು ವಾಹನ ಸವಾರರುಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಳೆ ನೀರು ಆವರಿಸುವದರಿಂದ ಮ್ಯಾನ್‌ಹೋಲ್‌ಗಳು ಕಾಣಿಸದೆ ವಾಹನಗಳು ಸಿಲುಕುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್‌ ಮನೋಹರ್‌.

ಮನೆಗಳಲ್ಲಿ ಮಳೆ ನೀರು ಸಂಗ್ರಹಣಾ ವ್ಯವಸ್ಥೆಯ ಮೂಲಕ ಸಂಗ್ರಹವಾಗುವ ನೀರನ್ನು ಇಂಗು ಗುಂಡಿಗಳ ಮೂಲಕವೇ ಇಂಗುವ ವ್ಯವಸ್ಥೆ ಮಾಡಬೇಕೇ ಹೊರತು ನೇರವಾಗಿ ಒಳಚರಂಡಿ ಕೊಳವೆ ಮಾರ್ಗಕ್ಕೆ ಬಿಡಬಾರದು. ಈ ರೀತಿ ಮಾಡುವುದರಿಂದ ಒಳಚರಂಡಿಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇನ್ನು ಮುಂದಾದರೂ ಸಾರ್ವಜನಿಕರುಎಚ್ಚರ ವಹಿಸಬೇಕು ಎನ್ನುವುದು ಜಲಮಂಡಳಿ ಅಧ್ಯಕ್ಷರ ಮನವಿ.

ಒಂದು ವೇಳೆ ಮೇ 7 ರ ನಂತರವೂ ಒಳಚರಂಡಿ ನೀರನ್ನು ಅನಧಿಕೃತವಾಗಿ ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಅಥವಾ ಮಳೆ ನೀರು ಕಾಲುವೆಗೆ ಹರಿಸುತ್ತಿರುವುದು ಕಂಡುಬಂದಲ್ಲಿ ಅಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಮಳೆನೀರು ಉಕ್ಕುವ ಮ್ಯಾನ್‌ಹೋಲ್‌ಗಳಲ್ಲಿ ಪ್ರೇಶರ್ ಲಾಕಿಂಗ್‌ ಸಿಸ್ಟಮ್‌

ಮಳೆಯು ಹೆಚ್ಚಾದಾಗ ಒತ್ತಡದಿಂದ ಕೆಲವು ಮ್ಯಾನ್‌ ಹೋಲ್‌ ಕವರ್ ಗಳು ತೆರೆದುಕೊಳ್ಳುತ್ತವೆ. ಇದರಿಂದ ಪಾದಚಾರಿಗಳು ಹಾಗೂ ವಾಹನಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಒತ್ತಡ ಹೆಚ್ಚಾಗಬಹುದಾದ ಮ್ಯಾನ್‌ ಹೋಲ್‌ಗಳನ್ನು ಗುರುತಿಸಿ, ಪ್ರೆಶರ್‌ ಮ್ಯಾನ್‌ ಹೋಲ್‌ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಒಳಚರಂಡಿ ಅಧಿಕೃತ ಮಾಡಿಕೊಳ್ಳಿ

ಬೆಂಗಳೂರು ಜಲಮಂಡಳಿ ಕಾಯ್ದೆಯ ಉಲ್ಲಂಘನೆ ಮಾಡಿ ಅನಧಿಕೃತವಾಗಿ ಒಳಚರಂಡಿ ನೀರನ್ನು ಸಂಪರ್ಕ ಪಡೆದಿದ್ದಲ್ಲಿ ಮೇ 7 ರೊಳಗಾಗಿ ಅರ್ಜಿ ಸಲ್ಲಿಸಿ ಅಧಿಕೃತ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್‌ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.

ಇನ್ನು ಬೃಹತ್ ಕಟ್ಟಡ ಮತ್ತು ಅಪಾರ್ಟ್ ಮೆಂಟ್ ಗಳಲ್ಲಿ ನಿಯಮಾನುಸಾರ ಎಸ್.ಟಿ.ಪಿ ಅಳವಡಿಸಿಕೊಂಡು ಸಂಸ್ಕರಿಸಿದ ನೀರನ್ನು ತಮ್ಮದೇ ಕಟ್ಟಡದಲ್ಲಿ ಗೃಹ ಬಳಕೆ ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಬಳಸಬೇಕಾಗಿರುತ್ತದೆ. ಆದರೆ ಕೆಲವರು ಈ ಕ್ರಮವನ್ನು ಉಲ್ಲಂಘಿಸಿ ಅನಧಿಕೃತವಾಗಿ ಒಳಚರಂಡಿ ನೀರನ್ನು ಜಲಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಹಾಗೂ ಮಳೆನೀರು ಕಾಲುವೆಗೆ ಹರಿಸುತ್ತಿರುವ ಬಗ್ಗೆ ಮಾಹಿತಿ ಇದ್ದು ಸಮೀಕ್ಷೆ ನಡೆಸಲಾಗುತ್ತಿದೆ. ಕೂಡಲೇ ಸರಿಪಡಿಸಿಕೊಳ್ಳದಿದ್ದರೆ ಕಾನೂನು ಕ್ರಮ ಮತ್ತು 5 ಸಾವಿರ ರೂ.ವರೆಗೂ ದಂಡ ವಿಧಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ