logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಸಾರಿಗೆ ಸಚಿವರ ಮನೆ ಸಮೀಪದಲ್ಲೇ ಹನುಮಜಯಂತಿ ವೇಳೆ ರೌಡಿ ಶೀಟರ್ ಅಟ್ಟಾಡಿಸಿ ಹತ್ಯೆ

Bangalore Crime: ಸಾರಿಗೆ ಸಚಿವರ ಮನೆ ಸಮೀಪದಲ್ಲೇ ಹನುಮಜಯಂತಿ ವೇಳೆ ರೌಡಿ ಶೀಟರ್ ಅಟ್ಟಾಡಿಸಿ ಹತ್ಯೆ

HT Kannada Desk HT Kannada

Dec 24, 2023 10:13 PM IST

google News

ಬೆಂಗಳೂರಲ್ಲಿ ರೌಡಿ ಶೀಟರ್‌ನನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿದೆ.

    • Bangalore Crime ಬೆಂಗಳೂರು ನಗರದಲ್ಲಿ ಭಾನುವಾರ ರಾತ್ರಿ ರೌಡಿ ಶೀಟರ್‌ ಒಬ್ಬಾತನನ್ನು ಅಟ್ಟಾಸಿಕೊಂಡು ಹತ್ಯೆ ಮಾಡಲಾಗಿದೆ. ಘಟನೆ ವಿವರ ಇಲ್ಲಿದೆ…
ಬೆಂಗಳೂರಲ್ಲಿ ರೌಡಿ ಶೀಟರ್‌ನನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿದೆ.
ಬೆಂಗಳೂರಲ್ಲಿ ರೌಡಿ ಶೀಟರ್‌ನನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿದೆ.

ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರಿನ ಅವರ ಮನೆಯ ಸಮೀಪವೇ ರೌಡಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಭಾನುವಾರ ಸಂಜೆ ಆಡುಗೋಡಿ ಠಾಣಾ ವ್ಯಾಪ್ತಿಯ ಲಕ್ಕಸಂದ್ರ ಬಳಿ ಸಂಜೆ 7 ಗಂಟೆಗೆ ನಡೆದಿದೆ. ಜಯಪ್ರಕಾಶ್ ಅಲಿಯಾಸ್ ನಾಯಿ ಅಪ್ಪಿ ಹತ್ಯೆಯಾದ ರೌಡಿ ಎಂದು ಗುರುತಿಸಲಾಗಿದೆ.

ಹನುಮಜಯಂತಿ ಹಿನ್ನೆಲೆಯಲ್ಲಿ ಲಕ್ಕಸಂದ್ರ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಜಯಪ್ರಕಾಶ್ ಭಾಗಿಯಾಗಿದ್ದ. ಮೊದಲೇ ಹೊಂಚು ಹಾಕಿ ಕಾದಿದ್ದ ನಾಲ್ಕೈದು ಆರೋಪಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಆತನ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜಯಪ್ರಕಾಶ್ ಸುತ್ತ ಮುತ್ತ ಆತನ ಸ್ನೇಹಿತರಿದ್ದರು. ಆದರೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆಗ ಆತನಿಗೆ ಮಚ್ಚಿನ ಏಟು ಬಿದ್ದಿದೆ.

ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಕೆಲ ದೂರ ಓಡಿದ್ದ ಜಯಪ್ರಕಾಶ್ ಸ್ವಲ್ಪ ದೂರ ಓಡಿದ್ದ. ಆದರೂ ಎದುರಾಳಿ ರೌಡಿಗಳು ಅಟ್ಟಿಸಿಕೊಂಡು ಹೋಗಿದ್ದರು. ಇದರಿಂದ ಬೆದರಿದ ಜಯಪ್ರಕಾಶ್ ಸಮೀಪದಲ್ಲಿದ್ದ ವಿಜಯ ಸಾಗರ ಹೋಟೆಲ್‌ಗೆ ನುಗ್ಗಿದ್ದ. ಆದರೂ ಬಿಡದ ಆರೋಪಿಗಳು ಹೋಟೆಲ್‌ ಗೂ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾರೆ.

ರಕ್ಷಿಸುವಂತೆ ಹೋಟೆಲ್ ಗ್ರಾಹಕರನ್ನು ಬೇಡಿಕೊಂಡರೂ ಯಾರೊಬ್ಬರೂ ಆತನ ಸಹಾಯಕ್ಕೆ ಯಾರೊಬ್ಬರೂ ಆಗಮಿಸಲಿಲ್ಲ ಎನ್ನಲಾಗಿದೆ.

ಜಯಪ್ರಕಾಶ್ ರೌಡಿ ಹಿನ್ನೆಲೆ ಹೊಂದಿದ್ದ. 2006ರಲ್ಲಿ ಹತ್ಯೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದು, ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ