logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Temperature: ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ತಾಪಮಾನ; ಬೆಂಗಳೂರಿನಲ್ಲಿ ಹಳೆಯ ದಾಖಲೆಗಳನ್ನು ಮುರಿದ ಉಷ್ಣಾಂಶ

Bangalore Temperature: ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ತಾಪಮಾನ; ಬೆಂಗಳೂರಿನಲ್ಲಿ ಹಳೆಯ ದಾಖಲೆಗಳನ್ನು ಮುರಿದ ಉಷ್ಣಾಂಶ

Raghavendra M Y HT Kannada

Apr 27, 2024 05:34 PM IST

ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಾಗಿದ್ದು, ಹಳೆಯ ದಾಖಲೆಗಳನ್ನು ಹಿಂದಿಕ್ಕಿದೆ.

    • ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಗರಿಷ್ಠ ಉಷ್ಣಾಂಶ ವರ್ಷದಲ್ಲಿ ಒಂದೆರಡು ದಿನಗಳ ಮಟ್ಟಿಗೆ ಮಾತ್ರ ದಾಖಲಾಗುತ್ತಿತ್ತು. ಆದರೆ ಈ ವರ್ಷ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ದಾಖಲಾಗುತ್ತಿದೆ.
ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಾಗಿದ್ದು, ಹಳೆಯ ದಾಖಲೆಗಳನ್ನು ಹಿಂದಿಕ್ಕಿದೆ.
ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಾಗಿದ್ದು, ಹಳೆಯ ದಾಖಲೆಗಳನ್ನು ಹಿಂದಿಕ್ಕಿದೆ.

ಬೆಂಗಳೂರು: ಕಳೆದ ಐದು ದಿನಗಳಿಂದ ಬೆಂಗಳೂರಿನಲ್ಲಿ ಉಷ್ಣಾಂಶ (Bangalore Temperature) 37 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇಲ್ಲವೇ ಇಲ್ಲ. ಈ ತಿಂಗಳ 10 ದಿನಗಳಲ್ಲಿ ಬೆಂಗಳೂರಿನಲ್ಲಿ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿರುವುದು ದಾಖಲಾಗಿದೆ. ಇದು ಉದ್ಯಾನ ನಗರಿಯಲ್ಲಿ ಮತ್ತಷ್ಟು ಉಷ್ಣಾಂಶ ಹೆಚ್ಚುವ ಮುನ್ಸೂಚನೆ ಎಂದು ಹೇಳಲಾಗುತ್ತಿದೆ. ಕಳೆದ 2014 ರಿಂದ ಬೆಂಗಳೂರಿನಲ್ಲಿ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ದಾಟಿರುವುದು 2016, 2017, 2019 ಮತ್ತು 2021 ರಲ್ಲಿ ಮಾತ್ರ. ಹಾಗೆಂದು ಕಳೆದ ವರ್ಷಗಳಲೆಲ್ಲಾ ನಿರಂತರವಾಗಿ ಉಷ್ಣಾಂಶದ ದಿನಗಳು ಹೆಚ್ಚು ಎಂದು ಭಾವಿಸುವಂತಿಲ್ಲ. ಒಂದೆರಡು ದಿನಗಳ ಮಟ್ಟಿಗೆ ಮಾತ್ರ 37.ಡಿಗ್ರಿ ಸೆಲ್ಸಿಯಸ್ ದಾಟುತ್ತಿತ್ತು. ಆದರೆ ಈ ವರ್ಷ ನಿರಂತರವಾಗಿ ಉಷ್ಣಾಂಶ 37.ಡಿಗ್ರಿ ಸೆಲ್ಸಿಯಸ್ ದಾಟಿ 40 ರವರೆಗೂ ಹೋಗಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ವೇಳಾಪಟ್ಟಿ ಪ್ರಕಟ; ಜೂನ್ 7 ರಿಂದ 14ರ ತನಕ ನಡೆಯಲಿದೆ ಪರೀಕ್ಷೆ

Bengaluru Rain: ಬೆಂಗಳೂರಿನಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆಯ ನಿರೀಕ್ಷೆ; ಹವಾಮಾನ ಇಲಾಖೆ ಎಚ್ಚರಿಕೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಪ್ರಕಟ, ಉತ್ತರ ಪತ್ರಿಕೆಯ ಸ್ಕ್ಯಾನ್ಡ್‌ ಪ್ರತಿ ಪಡೆಯಲು ಮೇ 16, ಮರುಮೌಲ್ಯಮಾಪನಕ್ಕೆ ಮೇ 22 ಕೊನೇ ದಿನ

2288 ಶಾಲೆಗಳಿಗೆ ಶೇ 100 ಫಲಿತಾಂಶ, ಶೂನ್ಯ ಫಲಿತಾಂಶ ಪಡೆದ ಶಾಲೆಗಳೆಷ್ಟು? ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಸಮಗ್ರ ವರದಿ

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಗರಿಷ್ಠ ಉಷ್ಣಾಂಶ ವರ್ಷದಲ್ಲಿ ಒಂದೆರಡು ದಿನಗಳ ಮಟ್ಟಿಗೆ ಮಾತ್ರ ದಾಖಲಾಗುತ್ತಿತ್ತು. ಆದರೆ ಈ ವರ್ಷ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತಲೂ ಹೆಚ್ಚಿನ ಉಷ್ಣಾಂಶ ಬಹುದಿನಗಳವರೆಗೆ ದಾಖಲಾಗುತ್ತಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. 2016 ರಲ್ಲಿ ಗರಿಷ್ಠ ತಾಪಮಾನ ದಾಖಲಾಗಿ ನಾಗರೀಕರನ್ನು ಕಂಗೆಡಿಸಿತ್ತು. ಆಗಿನ ಏಪ್ರಿಲ್ ನಲ್ಲಿ 39.2ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿತ್ತು. ಆದರೆ 2024ರ ಏಪ್ರಿಲ್ ಮಾಸ ಈ ಹಿಂದಿನ ಎಲ್ಲ ಸರಾಸರಿಗಳನ್ನು ಹಿಂದಿಕ್ಕಿ ಗರಿಷ್ಠ ತಾಪಮಾನ ಕಂಡಿದೆ.

ಏಪ್ರಿಲ್ 20ರಂದು 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವುದುನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ದಿನಗಳಲ್ಲಿ ಉಷ್ಣಾಂಶ 34ಕ್ಕಿಂತ ಹೆಚ್ಚು ದಾಖಲಾಗಿದೆ. ಈ ಹಿಂದಿನ ವರ್ಷಗಳ ಏಪ್ರಿಲ್ ತಿಂಗಳ ಸರಾಸರಿ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಈ ಗರಿಷ್ಠ ತಾಪಮಾನಕ್ಕೆ ಎಲ್‌ನಿನೊ ಮತ್ತು ಜಾಗತಿಕ ತಾಪಮಾನ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಬೇಸಿಗೆಯಲ್ಲಿ ಎಲ್‌ನಿನೊ ಪರಿಣಾಮ ಹೆಚ್ಚಾಗಿದ್ದು, ಪರಿಣಾಮ ಉಷ್ಣಾಂಶ ಮತ್ತು ಬಿಸಿಲನ ದಿನಗಳು ಹೆಚ್ಚಾಗುತ್ತಿವೆ. ಈ ವಾತಾವರಣಕ್ಕೆ ಜಾಗತಿಕ ತಾಪಮಾನದ ಕೊಡುಗೆಯೂ ಇದೆ. ಮುಂಗಾರಿನ ಕೊರತೆಯೂ ಬಿಸಿಲಿನ ವಾತಾವರಣಕ್ಕೆ ಕಾರಣವಾಗಿದೆ. ಮಳೆಯಾದರೆ ಉಷ್ಣಾಂಶದಿಂದ ಮುಕ್ತಿ ಸಿಗುತ್ತದೆ. ಆದರೆ ಈ ವರ್ಷ ಮಳೆಯೇ ಇಲ್ಲವಾಗಿದ್ದು ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ.

ಮುಂದಿನ ನಾಲ್ಕೈದು ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚುವ ಸಾಧ್ಯತೆಗಳಿವೆ. ಜೊತೆಗೆ ಕೆಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಏರಿಕೆಯಾಗುವ ಲಕ್ಷಣಗಳಿವೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಬಿಸಿಗಾಳಿಯ ಅನುಭವವಾಗುತ್ತಿದೆ. ಗಾಳಿ ಬೀಸುತ್ತಿದೆಯಾದರೂ ಅದು ಬಿಸಿ ಅನುಭವವನ್ನು ನೀಡುತ್ತಿದೆ. ಮೂಲಗಳ ಪ್ರಕಾರ ಮೇ ತಿಂಗಳಲ್ಲಿ ಮಳೆ ಆರಂಭವಾಗಬಹುದು ಎಂದು ತಿಳಿದು ಬಂದಿದೆ.

ಬೆಂಗಳೂರು ನಗರದಲ್ಲಿ ಮುಂದಿನ 48 ಗಂಟೆಗಳಲ್ಲಿ ಬೆಳಿಗ್ಗೆ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಶುಭ್ರ ಆಕಾಶ ಇರಲಿದ್ದು, ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕರ್ನಾಟಕದಲ್ಲಿ ಕೆಲವು ದಿನಗಳವರೆಗೆ ಬಿಸಿಗಾಳಿ ಪರಿಸ್ಥಿತಿ ಮುಂದುವರಿಯುತ್ತವೆ ಎಂದು ಹವಾಮಾನ ಸಂಸ್ಥೆಗಳು ಮುನ್ಸೂಚನೆ ನೀಡಿವೆ. ಏಪ್ರಿಲ್ 27 ರಿಂದ 30 ರವರೆಗೆ ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಬೀದರ್, ವಿಜಯನಗರ, ಗದಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾವೇರಿ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ತಾಪಮಾನ ಮತ್ತು ಸುಡುವ ಶಾಖವನ್ನು ಭಾರತ ಹವಾಮಾನ ಇಲಾಖೆ (ಐಎಂಡಿ) ತನ್ನ ದೈನಂದಿನ ಬುಲೆಟಿನ್ ನಲ್ಲಿ ಮುನ್ಸೂಚನೆ ನೀಡಿದೆ.

ಸಂಬಂಧಿತ ಲೇಖನ

ವಿಭಾಗ

    ಹಂಚಿಕೊಳ್ಳಲು ಲೇಖನಗಳು