logo
ಕನ್ನಡ ಸುದ್ದಿ  /  ಕರ್ನಾಟಕ  /  ಯುವಕರ ಮೋಜು ಮಸ್ತಿಗೆ ಜೀವ ಕಳೆದುಕೊಂಡ ಮಹಿಳೆ: ಬೆಂಗಳೂರು ಯುವಕನ ಬೆಂಜ್‌ ಕ್ರೇಜ್‌ ತಂದೊಡ್ಡಿದ ಅನಾಹುತ

ಯುವಕರ ಮೋಜು ಮಸ್ತಿಗೆ ಜೀವ ಕಳೆದುಕೊಂಡ ಮಹಿಳೆ: ಬೆಂಗಳೂರು ಯುವಕನ ಬೆಂಜ್‌ ಕ್ರೇಜ್‌ ತಂದೊಡ್ಡಿದ ಅನಾಹುತ

Umesha Bhatta P H HT Kannada

Nov 05, 2024 04:33 PM IST

google News

ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಸಂಧ್ಯಾ, ಅಪಘಾತಕ್ಕೆ ಕಾರಣ ಎನ್ನಲಾದ ಧನುಷ್‌.

    • ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೋಜು ಮಸ್ತಿಯೊಡನೆ  ಬೆಂಜ್‌ ಕಾರಿನಲ್ಲಿ ಹೊರಟವರ ಅವಾಂತರದಿಂದ ದುರ್ಘಟನೆ ನಡೆದಿದ್ದು ಕಾರು ಚಲಾಯಿಸುತ್ತಿದ್ದ ಧನುಷ್‌ ಎಂಬಾತನನ್ನು ಬಂಧಿಸಲಾಗಿದೆ.
ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಸಂಧ್ಯಾ, ಅಪಘಾತಕ್ಕೆ ಕಾರಣ ಎನ್ನಲಾದ ಧನುಷ್‌.
ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಸಂಧ್ಯಾ, ಅಪಘಾತಕ್ಕೆ ಕಾರಣ ಎನ್ನಲಾದ ಧನುಷ್‌.

ಬೆಂಗಳೂರು: ಟ್ರಾವೆಲ್ಸ್‌ ಏಜೆನ್ಸಿ ನಡೆಸುವ ಅಪ್ಪ ಪರಿಶ್ರಮದಿಂದ ದುಡಿದು ಮರ್ಸಿಡೆಸ್‌ ಬೆಂಜ್‌ ಕಾರು ಖರೀದಿಸಿದ್ದರು. ಅದೇ ಕಾರನ್ನು ಮಗ ಮೋಜು ಮಸ್ತಿ ನೆಪದಲ್ಲಿ ಬಳಸಿ ಅಮಾಯಕ ಮಹಿಳೆಯೊಬ್ಬರ ಸಾವಿಗೆ ಕಾರಣನಾಗಿದ್ದಾನೆ. ಇದು ನಡೆದಿರುವುದು ಬೆಂಗಳೂರಿನಲ್ಲಿ. ಪದವಿ ಓದುತ್ತಿದ್ದ ಯುವಕ ಕಾರು ಕೈಸಿಕ್ಕ ಖುಷಿಯಲ್ಲಿ ಸ್ನೇಹಿತನೊಂದಿಗೆ ಸೇರಿ ಮದ್ಯ ಸೇವಿಸಿ ಮತ್ತಿನಲ್ಲಿ ಓಡಿಸುವಾಗ ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣವಾದ ಆರೋಪ ಎದುರಿಸುತ್ತಿದ್ದಾನೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಡ್ರೈವ್‌ ಮಾಡುವ ಉತ್ಸಾಹದಲ್ಲಿಯೇ ದುರಂತದ ಕಾರಣನಾಗಿದ್ಧಾನೆ.

ಈ ಘಟನೆ ನಡೆದಿರುವುದು ಕೆಂಗೇರಿ ಮೆಟ್ರೋ ನಿಲ್ದಾಣದ ಸಮೀಪದಲ್ಲಿಯೇ. ಕುಡಿದ ಮತ್ತಿನಲ್ಲಿ 30 ವರ್ಷದ ಮಹಿಳೆಗೆ ಐಷಾರಾಮಿ ಕಾರಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದಾನೆ. ಕಾರಿನಲ್ಲಿದ್ದ ಯುವಕ ಮತ್ತು ಆತನ ಸ್ನೇಹಿತನ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.

ಆಗಿದ್ದಾದರೂ ಏನು

ಬೆಂಗಳೂರಿನ ನಾಗರಬಾವಿ ನಿವಾಸಿ ಉದ್ಯಮಿ ಪರಮೇಶ್ ಅವರ ಪುತ್ರ ಧನುಷ್ ಪರಮೇಶ್‌ ಆರೋಪಿ ಯಾಗಿದ್ದು, ಆತನ ವಿರುದ್ದ ತನಿಖೆ ನಡೆಯುತ್ತಿದೆ.

ಬೆಂಗಳೂರಿನಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿರುವ ಪರಮೇಶ್ ಇತ್ತೀಚೆಗೆ ಮರ್ಸಿಡಿಸ್ ಬೆಂಝ್ ಕಾರನ್ನು ಖರೀದಿಸಿದ್ದಾರೆ. ಸಂಜೆ ಅವರ ಮಗ ಧನುಷ್ ತನ್ನ ಸ್ನೇಹಿತನೊಂದಿಗೆ ಯಶವಂತಪುರ ಬಳಿಯ ಮಾಲ್ ಗೆ ತೆರಳಿದ್ದರು. ಇಬ್ಬರೂ ಮಾಲ್ ನಲ್ಲಿ ಕುಡಿದು ಹೊಸ ಐಷಾರಾಮಿ ವಾಹನದಲ್ಲಿ ಮೈಸೂರು ರಸ್ತೆಗೆ ಲಾಂಗ್ ಡ್ರೈವ್ ಮಾಡಲು ನಿರ್ಧರಿಸಿದರು.

ಇದನ್ನೂ ಓದಿರಿ: ಕಾಸರಗೋಡು ಪಟಾಕಿ ದುರಂತ, 150ಕ್ಕೂ ಹೆಚ್ಚು ಜನರಿಗೆ ಗಾಯ, 10 ಮಂದಿ ಸ್ಥಿತಿ ಗಂಭೀರ; ನಿಯಮ ಉಲ್ಲಂಘನೆಯೇ ಅವಘಡಕ್ಕೆ ಕಾರಣ

ಡಿಕ್ಕಿ ಹೊಡೆದ ಕಾರು

ಕಾರನ್ನು ಚಲಾಯಿಸುತ್ತಿದ್ದ ಧನುಷ್ ಅತಿ ವೇಗದಲ್ಲಿ ಕೆಂಗೇರಿ ನಿಲ್ದಾಣವನ್ನು ತಲುಪಿದಾಗ, ಸ್ಪೀಡ್ ಬ್ರೇಕರ್ ಅನ್ನು ಗಮನಿಸಲು ವಿಫಲನಾಗಿದ್ದ. ಈ ವೇಳೆ ವಾಹನದ ನಿಯಂತ್ರಣ ಕಳೆದುಕೊಂಡ ಧನುಷ್‌ ರಸ್ತೆ ದಾಟುತ್ತಿದ್ದ ಮಹಿಳೆಗೆ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಗಾಯಗೊಂಡಿದ್ದಾರೆ,. ಕಾರು ಡಿಕ್ಕಿ ಹೊಡೆದ ದುರ್ಘಟನೆಗೆ ಕಾರಣನಾದ ಧನುಷ್ ಕಾರು ನಿಲ್ಲಿಸದೇ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸಮೀಪವೇ ಇದ್ದಸಿಗ್ನಲ್ ನಲ್ಲಿ ನಿಲ್ಲಿಸಿದಾಗ, ಅಲ್ಲಿ ಸಾರ್ವಜನಿಕರು ಅವನನ್ನು ಗಮನಿಸಿದರು. ಅಲ್ಲದೇ ಅವನನ್ನು ಮತ್ತು ಅವನ ಸ್ನೇಹಿತನನ್ನು ಕಾರಿನಿಂದ ಹೊರಗೆಳೆದು ಅತಿವೇಗದ ಚಾಲನೆಗಾಗಿ ಥಳಿಸಿದ್ದಾರೆ. ಕೊನೆಗೆ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಗಾಯಗೊಂಡಿದ್ದವರನ್ನು ಸಂಧ್ಯಾ ಎಂದು ಗುರುತಿಸಲಾಗಿದ್ದು, ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ತನಿಖೆಯ ಭಾಗವಾಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಧನುಷ್ ಕಾರನ್ನು ಚಾಲನೆ ಮಾಡುವಾಗ ಮದ್ಯದ ಅಮಲಿನಲ್ಲಿದ್ದದಾಗಿ ಒಪ್ಪಿಕೊಂಡಿದ್ದಾನೆ. ಬಿಎನ್ಎಸ್ ಸೆಕ್ಷನ್ 105 ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಧನುಷ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಸದ್ಯ ಅವರು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ತನಿಖೆ ಬಗ್ಗೆ ಪತಿ ಬೇಸರ

ಈ ನಡುವೆ ಪ್ರಕರಣದ ತನಿಖೆಯನ್ನು ಪೊಲೀಸರು ಸರಿಯಾಗಿ ಮಾಡುತ್ತಿಲ್ಲ. ಸಿಸಿ ಫ್ಯೂಟೆಜ್‌ಗಳನ್ನು ಪಡೆದು ಸಾಕ್ಷ್ಯಗಳನ್ನು ಪಡೆಯಬೇಕಿತ್ತು.ಎಲ್ಲವೂ ನಿಧಾನವಾಗುತ್ತಿದೆ ಎಂದು ಮೃತಪಟ್ಟ ಸಂಧ್ಯಾ ಪತಿ ಶಿವಕುಮಾರ್‌ ಬೇಸರ ಹೊರ ಹಾಕಿದ್ದಾರೆ.

ಈ ತಿಂಗಳಾಂತ್ಯಕ್ಕೆ ಕಾಶಿ ಯಾತ್ರೆಗೆ ಹೋಗಬೇಕಿತ್ತು. ಆದರೆ ಈ ರೀತಿ ಆಗುತ್ತದೆ ಎಂದುಕೊಂಡಿರಲಿಲ್ಲ. ಪತ್ನಿ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎನ್ನುವುದು ಅವರ ಮನವಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ