logo
ಕನ್ನಡ ಸುದ್ದಿ  /  ಕರ್ನಾಟಕ  /  ಅತಿ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ; ಬಂಟ್ವಾಳ ಕಾಮಾಜೆ ಸರ್ಕಾರಿ ಕಾಲೇಜು ಉಪನ್ಯಾಸಕಿ ವೇದಶ್ರೀ ಅವರ ವಿಭಿನ್ನ ಪ್ರಚಾರ ಅಭಿಯಾನ

ಅತಿ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ; ಬಂಟ್ವಾಳ ಕಾಮಾಜೆ ಸರ್ಕಾರಿ ಕಾಲೇಜು ಉಪನ್ಯಾಸಕಿ ವೇದಶ್ರೀ ಅವರ ವಿಭಿನ್ನ ಪ್ರಚಾರ ಅಭಿಯಾನ

Umesh Kumar S HT Kannada

May 15, 2024 11:35 AM IST

google News

ಅತಿ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ ಎಂಬ ಬಂಟ್ವಾಳ ಕಾಮಾಜೆ ಸರ್ಕಾರಿ ಕಾಲೇಜು ಉಪನ್ಯಾಸಕಿ ವೇದಶ್ರೀ ಅವರ ವಿಭಿನ್ನ ಪ್ರಚಾರ ಅಭಿಯಾನ ಗಮನಸೆಳೆದಿದೆ.

  • ಸರಕಾರಿ, ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಆಕರ್ಷಿಸಲು ಸೋಶಿಯಲ್ ಮೀಡಿಯಾವಷ್ಟೇ ಅಲ್ಲ, ವಾಹನಗಳಲ್ಲೂ ಪ್ರಚಾರ ಶುರುವಾಗಿದೆ. ಅತಿ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ ಎಂಬ ಬಂಟ್ವಾಳ ಕಾಮಾಜೆ ಸರ್ಕಾರಿ ಕಾಲೇಜು ಉಪನ್ಯಾಸಕಿ ವೇದಶ್ರೀ ಅವರ ವಿಭಿನ್ನ ಪ್ರಚಾರ ಅಭಿಯಾನ ಗಮನಸೆಳೆದಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಅತಿ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ ಎಂಬ ಬಂಟ್ವಾಳ ಕಾಮಾಜೆ ಸರ್ಕಾರಿ ಕಾಲೇಜು ಉಪನ್ಯಾಸಕಿ ವೇದಶ್ರೀ ಅವರ ವಿಭಿನ್ನ ಪ್ರಚಾರ ಅಭಿಯಾನ ಗಮನಸೆಳೆದಿದೆ.
ಅತಿ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ ಎಂಬ ಬಂಟ್ವಾಳ ಕಾಮಾಜೆ ಸರ್ಕಾರಿ ಕಾಲೇಜು ಉಪನ್ಯಾಸಕಿ ವೇದಶ್ರೀ ಅವರ ವಿಭಿನ್ನ ಪ್ರಚಾರ ಅಭಿಯಾನ ಗಮನಸೆಳೆದಿದೆ.

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಕಷ್ಟು ಸರಕಾರಿ ಶಾಲೆಗಳು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ನೀಡುವ ಮೂಲಕ ಗಮನ ಸೆಳೆದಿವೆ. ಅದರಲ್ಲೂ ಶೇ.100 ಫಲಿತಾಂಶ ಬಂದ ಶಾಲೆಗಳು ಖಾಸಗಿ ಶಾಲೆಗಳಿಗೆ ಯಾವುದೇ ಹಂತದಲ್ಲೂ ತಾವು ಕಡಿಮೆ ಇಲ್ಲ ಎಂಬುದನ್ನು ಸಾರಿ ತೋರಿಸಿವೆ.

ಆದರೂ ಪ್ರಾಥಮಿಕ ಹಂತದಲ್ಲೇ ಸರಕಾರಿ ಶಾಲೆಗಳಿಗೆ ಕಲಿಯಲು ಮಕ್ಕಳನ್ನು ಪೋಷಕರು ಸೇರಿಸಲು ಹಿಂದೇಟು ಹಾಕುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟರ್ ಗಳನ್ನು ಹಾಕುವ ಮೂಲಕ ಶಾಲೆ ಸನಿಹ ಕಟೌಟ್, ಬ್ಯಾನರ್ ಹಾಕುವ ಮೂಲಕ ಶಾಲೆಯ ವೈವಿಧ್ಯ, ವೈಶಿಷ್ಟ್ಯಗಳು ಹಾಗೂ ಹಿರಿಮೆಯನ್ನು ತಿಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇಷ್ಟೆಲ್ಲಾ ಮಾಡಿದರೂ ಶಾಲಾರಂಭದ ಸಂದರ್ಭ ಬೆರಳೆಣಿಕೆಯಷ್ಟು ಮಕ್ಕಳು ಶಾಲೆ ಪ್ರವೇಶಿಸುತ್ತಾರೆ.

ಇದು ಶಾಲೆಯ ಕತೆಯಾದರೆ, ಕಾಲೇಜುಗಳೂ ಅಷ್ಟೇ. ಪಿಯುಸಿ ಸೇರ್ಪಡೆಗೂ ಕಟ್ಟಡವೇ ಸರಿ ಇಲ್ಲದಿದ್ದರೂ ಟ್ಯೂಶನ್ ಫೀಸ್ ಗಳು ಅಧಿಕವಿದ್ದರೂ ಖಾಸಗಿ ಶಾಲೆಗೆ ಕಳುಹಿಸುವ ಪೋಷಕರು ಹೇರಳವಾಗಿದ್ದಾರೆ. ಆದರೆ ಸರಕಾರಿ ಪದವಿಪೂರ್ವ ಕಾಲೇಜುಗಳೆಂದರೆ ಅದೇನೋ ಅಸಡ್ಡೆ. ಹೀಗಾಗಿ ಪದವಿಪೂರ್ವ ಕಾಲೇಜುಗಳು ತಾವು ಉತ್ತಮ ಫಲಿತಾಂಶ ನೀಡುತ್ತಿದ್ದೇವೆ ಎಂಬುದನ್ನು ಆಗಾಗ್ಗೆ ಪ್ರೂವ್ ಮಾಡುತ್ತಲಿರಬೇಕು. ಸರಕಾರಿ ಪದವಿಪೂರ್ವ ಕಾಲೇಜುಗಳ ಸ್ಥಿತಿ ಹೀಗಾದರೆ, ಪದವಿ ಕಾಲೇಜು ಮನೆ ಪಕ್ಕವೇ ಇದ್ದರೂ ದೂರದೂರಿಗೆ ಖಾಸಗಿ ಕಾಲೇಜುಗಳಿಗೆ ಬಿಎ, ಬಿಎಸ್ಸಿ, ಬಿಕಾಂ ಕಲಿಯಲು ತೆರಳುವ ಮಕ್ಕಳಿದ್ದಾರೆ. ಹೀಗಾಗಿ ಪದವಿ ಕಾಲೇಜುಗಳಿಗೂ ಈಗ ಪ್ರಚಾರದ ಅವಶ್ಯಕತೆ ಇದೆ.

ಸಾಮಾನ್ಯವಾಗಿ ಪ್ರಚಾರ ಸಾಮಗ್ರಿಗಳೆಂದರೆ, ಬ್ಯಾನರ್ ಕಟ್ಟುವುದು, ಸೋಶಿಯಲ್ ಮೀಡಿಯಾಗಳಾದ ವಾಟ್ಸಾಪ್ ನಲ್ಲಿ ಪ್ರಸಾರ ಮಾಡುವುದು. ತಮ್ಮ ಶಾಲೆ, ಕಾಲೇಜಿನಲ್ಲಿ ಏನೇನಿದೆ ಎಂಬುದನ್ನು ತಿಳಿಸಿ ಹೇಳುವುದಾಗಿದೆ. ಆದರೆ ಇಲ್ಲೊಬ್ಬರು ಉಪನ್ಯಾಸಕಿ ತನ್ನ ಸ್ವಂತ ಕಾರಿನಲ್ಲೇ ಕಾಲೇಜಿಗೆ ಸೇರುವುದಿದ್ದರೆ ಸರಕಾರಿ ಕಾಲೇಜು ಸೇರಿ ಎಂದು ಸಾರಿ ಹೇಳುತ್ತಿದ್ದಾರೆ. ಇವರು ಬಂಟ್ವಾಳ ಕಾಮಾಜೆಯಲ್ಲಿರುವ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕಿ. ತನ್ನ ಸ್ವಂತ ಕಾರಿನಲ್ಲಿ ಸ್ಟಿಕ್ಕರ್ ಅಂಟಿಸಿ ಗಮನ ಸೆಳೆದಿದ್ದಾರೆ. ಇವರು ವೇದಶ್ರೀ ನಿಡ್ಯ.

ತನ್ನ ಕಾರಿನಲ್ಲಿ ಏನು ಬರೆಸಿದ್ದಾರೆ ವೇದಶ್ರೀ

‘’ಸರಕಾರಿ ಪದವಿ ಕಾಲೇಜು ಬಂಟ್ವಾಳ, ಕಾಮಾಜೆ.. ಅತೀ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ..’’ ಈ ಸ್ಟಿಕ್ಕರ್ ಅನ್ನು ಉಪನ್ಯಾಸಕಿ ವೇದಶ್ರೀ ನಿಡ್ಯ ಹಾಕಿಸಿದ್ದಾರೆ. ತಮ್ಮ ಸ್ವಂತ ವಾಹನಗಳಲ್ಲಿ ದೇವರ ಹೆಸರು, ಮಕ್ಕಳ ಹೆಸರು ಅಥವಾ ಇಷ್ಟದ ವಾಕ್ಯಗಳನ್ನು ಸ್ಟಿಕರ್ ಮೂಲಕ ಬರೆಸುವುದು ಸಾಮಾನ್ಯ. ಆದರೆ ಉಪನ್ಯಾಸಕಿ ವೇದಶ್ರೀ ಅವರು ತನ್ನ ವೇಗನ್ ಆರ್ ಕಾರಿನ ಹಿಂಭಾಗ ಹಾಗೂ ಮುಂಭಾಗದಲ್ಲಿ ತಾನು ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ವಿದ್ಯಾಸಂಸೆಯ ಹೆಸರು ಬರೆದು ಪ್ರಚಾರ ನೀಡಿ ಕಾಲೇಜಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಯತ್ನ ನಡೆಸಿದ್ದಾರೆ.

2015ರಿಂದ ವೇದಶ್ರೀ ನಿಡ್ಯ ಅವರು ಬಂಟ್ವಾಳದ ಕಾಮಾಜೆಯಲ್ಲಿರುವ ಸರಕಾರಿ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿ. ನಗರಭಾಗದಿಂದ ಸ್ವಲ್ವ ದೂರದಲ್ಲಿರುವ ಕಾಲೇಜು ಕುರಿತು 2017ರಲ್ಲಿ ಕಾಲೇಜಿನ ಬಗ್ಗೆ ತನ್ನ ಕಾರಿನಲ್ಲಿ ಸ್ಟಿಕ್ಕರ್ ಬರಹವನ್ನು ಹಾಕಿಸಿಕೊಂಡಿದ್ದರು. ಕಾರು ರಸ್ತೆಯಲ್ಲಿ ಹೋಗುವಾಗ, ಎಲ್ಲಾದರೂ ಪಾರ್ಕಿಂಗ್ ಮಾಡುವಾಗ ಜನರ ಗಮನ ಸೆಳೆಯುತ್ತದೆ. ಆ ಮೂಲಕ ತನ್ನ ವಿದ್ಯಾಸಂಸ್ಥೆಯನ್ನು ಜನರಿಗೆ ಹಾಗೂ ನೂತನ ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಣ್ಣ ಪ್ರಯತ್ನ ಅವರದ್ದಾಗಿತ್ತು. ಆ ಬಳಿಕ ಹೊಸ ಕಾರು ಕೊಂಡಾಗಲೂ ತಕ್ಷಣ ಅದರಲ್ಲೂ ವಿದ್ಯಾಸಂಸ್ಥೆಯ ಹೆಸರನ್ನು ಬರೆಸಿಕೊಂಡಿದ್ದಾರೆ.

ಕಾಲೇಜಿನಲ್ಲಿ ಯಾವೆಲ್ಲ ಕೋರ್ಸ್‌ಗಳಿವೆ

ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಬಿ ಪ್ಲಸ್ ಗ್ರೇಡ್ ನೀಡಿದೆ. ಇಲ್ಲಿ ಬಿ.ಎ., ಬಿ.ಕಾಂ., ಎಂ.ಕಾಂ ತರಗತಿಗಳು ಇದ್ದು ಸುಸಜ್ಜಿತವಾದ ಕಟ್ಟಡವಿದೆ, ವಿದ್ಯಾರ್ಥಿನಿಯರಿಗೆ ಶುಲ್ಕ ಮರುಪಾವತಿ ಸೌಲಭ್ಯವಿದೆ, ಎನ್‌ಇಪಿ ೨೦೨೦ರಂತೆ ೩ ವರ್ಷಗಳ ಪದವಿ ಕೋರ್ಸ್ ಇದ್ದು ನುರಿತ ಪ್ರಾಧ್ಯಪಕರಿಂದ ಭೋದನೆ, ಗ್ರಂಥಾಲಯ ಸೌಲಭ್ಯ, ಕ್ರೀಡೆಗಳಿಗೆ ಪ್ರೋತ್ಸಾಹ, ತರಬೇತಿ, ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ, ಬಿಸಿ ಊಟದ ವ್ಯವಸ್ಥೆ ಇದೆ. ಈ ಬಗ್ಗೆ ಕರಪತ್ರ, ಬ್ಯಾನರ್‌ಗಳನ್ನು ಹಾಕಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಗೆ ಸೆಳೆಯುವ ಪ್ರಯತ್ನ ಪ್ರಿನ್ಸಿಪಾಲ್ ಹಾಗೂ ಉಪನ್ಯಾಸಕ ವರ್ಗದಿಂದ ಒಂದೆಡೆ ನಡೆಯುತ್ತಿದ್ದರೆ ತಮ್ಮ ಸ್ವಂತ ಕಾರಿನಲ್ಲೂ ಬರಹಗಳನ್ನು ಅಚ್ಚುಹಾಕಿಸಿ ಸರಕಾರಿ ಕಾಲೇಜಿನತ್ತ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ.

(ವರದಿ- ಹರೀಶ ಮಾಂಬಾಡಿ, ಮಂಗಳೂರು)

ಬ್ರೂಸ್ಲಿ ಕೊನೆಗೂ ಪಾಸಾದ! ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೊಳಗಾದ ಮಂಗಳೂರಿನ ಬ್ಯಾನರ್

ಮಂಗಳೂರು: ’ಅಪ್ಪ ಅಮ್ಮನ ಆಶೀರ್ವಾದದಿಂದ, ಊರವರ ಬೈಗುಳದಿಂದ, ಊರವರ ಪ್ರೋತ್ಸಾಹದಿಂದ, ಟ್ಯೂಶನ್ ಮಹಾತ್ಮೆಯಿಂದ, ಶಾಲೆಯ ಕಿರಿಕಿರಿಯಿಂದ, ಶಿಕ್ಷಕರ ಬೋಧನೆಯಿಂದ, ಸೈಕಲ್, ಕ್ರಾಕ್ಸ್, ಪಿಯುಸಿ, ಫೀಸ್ ಆಮಿಷದಿಂದ, ಎಲ್ಲರ ಕುತೂಹಲ… ಬ್ರೂಸ್ಲಿ ಪಾಸೋ, ಫೈಲೋ..

ಇಂದು ಆ ಚರ್ಚೆಗೆ ತೆರೆ ಬಿದ್ದಿದೆ. ತೋಚಿದ್ದು ಗೀಚಿ ಫೈಲ್ ಆಗುವವನು, ಹರಕೆಯ ಬಲದಿಂದ, ಪ್ರಯತ್ನದ ಫಲದಿಂದ ಹೇಗೂ ಒಟ್ಟಾರೆ ನಮ್ಮ ಬ್ರೂಸ್ಲಿ ಜಲಸ್ಟ್ ಪಾಸಾಗಿರೋದೇ ನಮಗೆಲ್ಲಾ ಸಂಭ್ರಮ, ಸಂಭ್ರಮ.. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 300 ಅಂಕ ಪಡೆದು, ಉತ್ತೀರ್ಣನಾದ ಹ್ಯಾಸ್ಲಿನ್, ನಿಮಗೆ ಅಭಿನಂದನೆಗಳು..

ಹ್ಯಾಸ್ಲಿನ್ (ಬ್ರೂಸ್ಲಿ) ಹಿತೈಷಿಗಳು, ಯುವ ಫ್ರೆಂಡ್ಸ್, ಮಂಗಳನಗರ.

ಬ್ರೂಸ್ಲಿ ಕೊನೆಗೂ ಪಾಸಾದ! ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೊಳಗಾದ ಮಂಗಳೂರಿನ ಬ್ಯಾನರ್ ಹೀಗಿತ್ತು.

ಈ ರೀತಿಯ ಬರೆಹವುಳ್ಳ ಅಭಿನಂದನೆಯ ಬ್ಯಾನರ್ ಒಂದು ಮಂಗಳೂರಿನ ಪಚ್ಚನಾಡಿಯ ಮಂಗಳನಗರದಲ್ಲಿ ರಾರಾಜಿಸುತ್ತಿದೆ. ನೋಡಲು ತಮಾಷೆಯಂತೆ ಕಂಡರೂ ಹ್ಯಾಸ್ಲಿನ್ ಸಾಧನೆಗೆ ಭೇಷ್ ಎಂದಿರುವ ಆತನ ಸ್ನೇಹಿತರು ಒಂದಷ್ಟು ತಮಾಷೆಯ ಬರೆಹದೊಂದಿಗೆ ಈ ಬ್ಯಾನರ್ ಕಟ್ಟಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಈ ಬ್ಯಾನರ್ ನದ್ದೇ ಚರ್ಚೆ. 625ಕ್ಕೆ ಕೇವಲ 300 ಅಂಕಗಳೊಂದಿಗೆ ಜಸ್ಟ್ ಪಾಸಾಗಿರುವ ಈ ವಿದ್ಯಾರ್ಥಿಯ ಸ್ನೇಹಿತರು ಹಾಕಿರುವ ವಿಭಿನ್ನ ರೀತಿಯ ಬ್ಯಾನರ್ ಕೇವಲ 625ರಲ್ಲಿ 600ಕ್ಕೂ ಅಧಿಕ ಅಂಕಗಳಿಕೆಯೊಂದೇ ಮಾನದಂಡವಲ್ಲ ಎಂಬುದನ್ನು ನಿರೂಪಿಸುವಂತಿದೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ