logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಮಹಾನಗರಪಾಲಿಕೆಯಿಂದ ಹವಾಮಾನ ಬಜೆಟ್‌ಗೆ ಸಿದ್ದತೆ, ವಿಶಿಷ್ಟ ಯತ್ನಕ್ಕೆ ಮುಂದಾದ ಬಿಬಿಎಂಪಿ; ಪ್ರತ್ಯೇಕ ಅನುದಾನ, ಪ್ರಶಸ್ತಿಗಳ ಘೋಷಣೆ

ಬೆಂಗಳೂರು ಮಹಾನಗರಪಾಲಿಕೆಯಿಂದ ಹವಾಮಾನ ಬಜೆಟ್‌ಗೆ ಸಿದ್ದತೆ, ವಿಶಿಷ್ಟ ಯತ್ನಕ್ಕೆ ಮುಂದಾದ ಬಿಬಿಎಂಪಿ; ಪ್ರತ್ಯೇಕ ಅನುದಾನ, ಪ್ರಶಸ್ತಿಗಳ ಘೋಷಣೆ

Umesha Bhatta P H HT Kannada

Dec 23, 2024 12:41 PM IST

google News

ಬೆಂಗಳೂರು ಮಹಾನಗರ ಪಾಲಿಕೆಯು ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್‌ ನೇತೃತ್ವದಲ್ಲಿ ಹವಾಮಾನ ಬಜೆಟ್‌ ಮಂಡಿಸಲು ಅಣಿಯಾಗುತ್ತಿದೆ

    • BBMP Climate Budget: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಮೊದಲ ಬಾರಿಗೆ ಹವಾಮಾನ ವೈಪರಿತ್ಯಗಳ ತಡೆಗೆ ಬಜೆಟ್‌ ಅಣಿಗೊಳಿಸುತ್ತಿದೆ. ಇದರ ವಿಶೇಷ ಇಲ್ಲಿದೆ.
ಬೆಂಗಳೂರು ಮಹಾನಗರ ಪಾಲಿಕೆಯು ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್‌ ನೇತೃತ್ವದಲ್ಲಿ ಹವಾಮಾನ ಬಜೆಟ್‌ ಮಂಡಿಸಲು ಅಣಿಯಾಗುತ್ತಿದೆ
ಬೆಂಗಳೂರು ಮಹಾನಗರ ಪಾಲಿಕೆಯು ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್‌ ನೇತೃತ್ವದಲ್ಲಿ ಹವಾಮಾನ ಬಜೆಟ್‌ ಮಂಡಿಸಲು ಅಣಿಯಾಗುತ್ತಿದೆ

ಬೆಂಗಳೂರು: ಭಾರತದಲ್ಲಿ ಹವಾಮಾನ ವೈಪರಿತ್ಯಗಳಿಂದ ಆಗುತ್ತಿರುವ ಅನಾಹುತ, ಮುಂದೆ ಆಗಬಹುದಾದ ಇನ್ನಷ್ಟು ಅವಾಂತರಗಳಿಂದ ತಪ್ಪಿಸಿಕೊಂಡು ನಮ್ಮ ನೆಲೆಯಲ್ಲಿ ಕಂಡುಕೊಳ್ಳಬಹುದಾದ ಪರಿಹಾರೋಪಾಯಗಳ ಕುರಿತು ಸಾಕಷ್ಟು ಪ್ರಯತ್ನಗಳು ನಡೆದಿವೆ. ಭಾರತದಲ್ಲಿನ ಹಲವಾರು ಸ್ಥಳೀಯ ಸಂಸ್ಥೆಗಳು ತಮ್ಮದೇ ನೆಲೆಯಲ್ಲಿ ಯೋಜನೆ ರೂಪಿಸುತ್ತಿವೆ. ಬೃಹತ್‌ ಮುಂಬೈ ಮಹಾನಗರ ಪಾಲಿಕೆ ನಂತರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕೂಡ ಹವಾಮಾನಕ್ಕೆ ಪೂರಕವಾಗಿ ಬಜೆಟ್‌ ಅನ್ನು ನೀಡಲು ತಯಾರಿ ಮಾಡಿಕೊಂಡಿದೆ. 2025-26ನೇ ಹಣಕಾಸು ವರ್ಷದಲ್ಲಿ ಹೊರತರಲಿರುವ ಬಜೆಟ್‌ನಲ್ಲಿಯೇ ಹವಾಮಾನ ಬಜೆಟ್ ಅನ್ನು ಪರಿಚಯಿಸಲು ಮುಂಬೈ ನಂತರ ಬೆಂಗಳೂರು ಭಾರತದ ಎರಡನೇ ನಗರವಾಗಲು ಸಿದ್ಧವಾಗಿದೆ.

ಫ್ರೆಂಡ್ಸ್ ಆಫ್ ಕ್ಲೈಮೇಟ್ ಆಕ್ಷನ್ ಸೆಲ್ (ಸಿಎಸಿ) ಸಭೆಯಲ್ಲಿ ಮಾತನಾಡಿದ ಬಿಬಿಎಂಪಿ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆಯ ವಿಶೇಷ ಆಯುಕ್ತ ಮತ್ತು ಹವಾಮಾನ ಆಕ್ಷನ್ ಸೆಲ್ (ಸಿಎಸಿ) ಮುಖ್ಯಸ್ಥೆ ಪ್ರೀತಿ ಗೆಹ್ಲೋಟ್, ತಂಡವು ಪ್ರಸ್ತುತ ಪಾಲಿಕೆಯ ಬಜೆಟ್ ಅನ್ನು ಸಿದ್ದಪಡಿಸುತ್ತಿದ್ದು. ಇದರಲ್ಲಿ ಹವಾಮಾನ ವೈಪರಿತ್ಯಗಳ ಕುರಿತಾದ ಬಜೆಟ್‌ ಕೂಡ ಇರಲಿದೆ. ಇದಕ್ಕಾಗಿ ವಿಶ್ಲೇಷಣೆಗಳು, ತಯಾರಿಗಳ ನಡೆದಿವೆ ಎಂದು ವಿವರಿಸುತ್ತಾರೆ.

ಇದು ಈಗಿನ್ನೂ ಮೊದಲ ಹೆಜ್ಜೆ. ಹವಾಮಾನ ವೈಪರಿತ್ಯಗಳನ್ನು ಎದುರಿಸಲು ಕ್ರಿಯಾ ಯೋಜನೆ ಹಾಗೂ ಆರ್ಥಿಕ ಬೆಂಬಲ ಬೇಕಾಗುತ್ತದೆ. ಇದ್ಕಾಗಿಯೇ ಎಷ್ಟು ಹಣ ಹಂಚಿಕೆ ಮಾಡಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಎರಡು ವರ್ಷಗಳು ಬೇಕಾಗಬಹುದು. ಈ ವರ್ಷದ ತಯಾರಿಯಂತೂ ನಡೆದಿದೆ ಎನ್ನುವುದು ಪ್ರೀತಿ ಹೇಳುತ್ತಾರೆ.

ಇದಕ್ಕಾಗಿ ಇರುವ ತಂಡವು ಬಿಬಿಎಂಪಿಯಲ್ಲಿ ಈ ಹಿಂದೆ ಕೈಗೊಳ್ಳಲಾಗಿರುವ ಇಂತಹ ಕಾರ್ಯಕ್ರಮ. ಚಟುವಟಿಕೆಗಳು, ಅದರ ಪರಿಣಾಮಗಳ ಮ್ಯಾಪಿಂಗ್ ಮಾಡುತ್ತಿದೆ. ಹವಾಮಾನ ಬದಲಾವಣೆಯನ್ನು ಎದುರಿಸಲು ಹಣಕಾಸಿನ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸುತ್ತಿದೆ ಎಂದು ಗೆಹ್ಲೋಟ್ ವಿವರಿಸಿದರು.

"ಬೆಂಗಳೂರಿನಂತಹ ನಗರಕ್ಕೆ ಈ ಬಜೆಟ್ ಹೊಸದು, ಆದರೆ ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಇದು ಅವಶ್ಯಕವಾಗಿದೆ. ಹಲವಾರು ನಿರ್ಮಾಣ ಚಟುವಟಿಕೆಗಳು, ಮೂಲಸೌಕರ್ಯ ಕಾರ್ಯಗಳು ಮತ್ತು ನಗರದಲ್ಲಿ ವಾಹನ ಮಾಲಿನ್ಯದ ಹೆಚ್ಚಳದೊಂದಿಗೆ, ಮೀಸಲಾದ ಬಜೆಟ್ ಹೆಚ್ಚು ಅವಶ್ಯಕವಾಗಿದೆ. ವ್ಯವಸ್ಥಿತ ವಿಧಾನವು ಈ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಭೆಯಲ್ಲಿ ಹಾಜರಿದ್ದ ಹವಾಮಾನ ತಜ್ಞರು ಹೇಳಿದರು.

ನಾಗರಿಕರಿಗೆ ಹವಾಮಾನ ಮತ್ತು ಪರಿಸರ ಸಮಸ್ಯೆಗಳಿಗೆ ತ್ವರಿತ ಪರಿಹಾರಗಳನ್ನು ಒದಗಿಸಲು ಸಿಜಿಐ ಮತ್ತು ಬಿ ಪ್ಯಾಕ್‌ ಅಭಿವೃದ್ಧಿಪಡಿಸಿದ ನಿಸರ್ಗಾ ಚಾಟ್‌ಬಾಟ್ ಅನ್ನು ಸಹ ಅನಾವರಣಗೊಳಿಸಿತು. ಸೌರ ಮೇಲ್ಛಾವಣಿ ಪರಿಶೋಧಕ ಡೆಮೊವನ್ನು ಪ್ರಸ್ತುತಪಡಿಸಲಾಯಿತು, ನಾಗರಿಕರು ಸೌರ ವಿದ್ಯುತ್ ಉತ್ಪಾದನೆ ಮತ್ತು ಆರ್ಥಿಕ ಮಾದರಿಗಳನ್ನು ಹೇಗೆ ಲೆಕ್ಕ ಹಾಕಬಹುದು ಎಂಬುದನ್ನು ಇದು ತೋರಿಸಲಿದೆ. ಹೆಚ್ಚುವರಿಯಾಗಿ, ಸಂಭಾವ್ಯ ಸಸಿ ನೆಡುವ ಸ್ಥಳಗಳನ್ನು ವಾಸ್ತವಿಕವಾಗಿ ಗುರುತಿಸಲು ಡಬ್ಲು ಆರ್‌ ಐ ಇಂಡಿಯಾದಿಂದ ಮ್ಯಾಪಥಾನ್ ಮಾರ್ಗದರ್ಶಿ ಪುಸ್ತಕದ ಬಿಡುಗಡೆಯೊಂದಿಗೆ ನಾಗರಿಕರು ಮತ್ತು ಸಂಸ್ಥೆಗಳಿಗೆ ಬ್ಲುಗ್ರೀನೂರು ಪ್ರಶಸ್ತಿಗಳನ್ನು ಘೋಷಿಸಲಾಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ