logo
ಕನ್ನಡ ಸುದ್ದಿ  /  ಕರ್ನಾಟಕ  /  ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಗಳ ಡಿಜಿಟಲೀಕರಣ: ಬೆಂಗಳೂರಿನಲ್ಲಿ ಆಸ್ತಿ ನೋದಣಿಗೆ ಅಂತಿಮ ಇ-ಖಾತಾ ಹೀಗೆ ಪಡೆಯಿರಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಗಳ ಡಿಜಿಟಲೀಕರಣ: ಬೆಂಗಳೂರಿನಲ್ಲಿ ಆಸ್ತಿ ನೋದಣಿಗೆ ಅಂತಿಮ ಇ-ಖಾತಾ ಹೀಗೆ ಪಡೆಯಿರಿ

Praveen Chandra B HT Kannada

Oct 19, 2024 04:53 PM IST

google News

ಬೆಂಗಳೂರಿನಲ್ಲಿ ಆಸ್ತಿ ನೋದಣಿಗೆ ಅಂತಿಮ ಇ-ಖಾತಾ ಹೀಗೆ ಪಡೆಯಿರಿ

    • How to get ekatha in bangalore: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಆಸ್ತಿ (ಇ ಖಾತಾ) ತೆರೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ. ಇ ಖಾತೆ ತೆರೆಯಲು ಸಾರ್ವಜನಿಕರಿಗೆ ನೆರವು ನೀಡಲು ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಗಳಲ್ಲಿ ಸಹಾಯವಾಣಿ ಕೂಡ ತೆರೆಯಲಾಗಿದೆ.
ಬೆಂಗಳೂರಿನಲ್ಲಿ ಆಸ್ತಿ ನೋದಣಿಗೆ ಅಂತಿಮ ಇ-ಖಾತಾ ಹೀಗೆ ಪಡೆಯಿರಿ
ಬೆಂಗಳೂರಿನಲ್ಲಿ ಆಸ್ತಿ ನೋದಣಿಗೆ ಅಂತಿಮ ಇ-ಖಾತಾ ಹೀಗೆ ಪಡೆಯಿರಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತುರ್ತಾಗಿ ಇ-ಖಾತಾ ಪಡೆಯಲು ಬರುವ ಆಸ್ತಿ ಮಾಲೀಕರಿಗೆ ಸರಿಯಾಗಿ ಸ್ಪಂದಿಸಬೇಕೆಂದು ಕಂದಾಯ ವಿಭಾಗದ ಜಂಟಿ ಆಯುಕ್ತೆಯಾದ ಲಕ್ಷ್ಮೀದೇವಿ ರವರು ಕಂದಾಯ ಅಧಿಕಾರಿಗಳಿಗೆ ಇತ್ತೀಚೆಗೆ ಸೂಚನೆ ನೀಡಿದ್ದಾರೆ. ಬಿಬಿಎಂಪಿ‌ ವ್ಯಾಪ್ತಿಯಲ್ಲಿ 2024ರ ಅಕ್ಟೋಬರ್ ತಿಂಗಳೊಳಗೆ ಉಪ-ನೋಂದಣಾಧಿಕಾರಿ ಕಛೇರಿಯಲ್ಲಿ ತುರ್ತು ಆಸ್ತಿ ನೋಂದಣಿಗಾಗಿ ಅಂತಿಮ ಇ-ಖಾತಾವನ್ನು ಪಡೆಯುವ ಸಲುವಾಗಿ ಕಂದಾಯ ಅಧಿಕಾರಿಗಳ ಕಛೇರಿಗೆ ಬರುವ ನಾಗರೀಕರು/ಆಸ್ತಿ ಮಾಲೀಕರಿಗೆ ಕೂಡಲೆ ಸ್ಪಂದಿಸಿ ಇ-ಖಾತಾ ನೀಡುವ ವ್ಯವಸ್ಥೆ ಮಾಡಲು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಗಳಲ್ಲಿ ಸಹಾಯವಾಣಿ ಕೂಡ ತೆರೆಯಲಾಗಿದೆ. ಈ ಸಂದರ್ಭದಲ್ಲಿ ಆಸ್ತಿ ನೋಂದಣಿ ಮಾಡಲು ಇ-ಖಾತೆ ತೆರೆಯುವುದು ಹೇಗೆ (How to get ekatha in bangalore) ಎಂದು ತಿಳಿದುಕೊಳ್ಳೋಣ.

ಬೆಂಗಳೂರಿನಲ್ಲಿ ಇ ಖಾತಾ ತೆರೆಯುವುದು ಹೇಗೆ?

  • ಮೊದಲು bbmpeaasthi.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮೊಬೈಲ್‌ ಮತ್ತು ಒಟಿಪಿ ಬಳಸಿ ಲಾಗಿನ್‌ ಆಗಿ
  • ನಿಮ್ಮ ಪ್ರಾಪರ್ಟಿಯ ಕರಡು ಇಖಾತಾವನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.
  • ಅಂತಿಮ ಇಖಾತಾ ಆನ್‌ಲೈನ್‌ನಲ್ಲಿ ನಾಗರಿಕರು ಹೆಚ್ಚುವರಿ ಮಾಹಿತಿಯನ್ನು ಸೇರಿಸಬೇಕು. ರಿಜಿಸ್ಟ್ರಾರ್ಡ್‌ ಡೀಡ್‌, ಆಧಾರ್‌ ಆಧರಿತ ಇಕೆವೈಸಿ, ಎಸ್‌ಎಎಸ್‌ ಪ್ರಾಪರ್ಟಿ ಟ್ಯಾಕ್ಸ್‌ ಅಪ್ಲಿಕೇಷನ್‌ ನಂಬರ್‌, ಪ್ರಾಪರ್ಟಿ ಫೋಟೋ, ಎ ಖಾತಾ ಪಡೆಯು ದಾಖಲೆಗಳು, ಎನ್‌ಕ್ಯುಂಬ್ರೆನ್ಸ್‌ ಸರ್ಟಿಫಿಕೇಟ್‌ (ಏಳು ದಿನಗಳೊಳಗಿನದ್ದು) ಇತ್ಯಾದಿಗಳನ್ನು ಸೇರಿಸಬೇಕು.
  • ಈ ವೆಬ್‌ಸೈಟ್‌ನಲ್ಲಿ ಯಾವುದಾದರೂ ಪ್ರಾಪರ್ಟಿಗೆ ಅಂತಿಮ ಖಾತೆ ನೀಡದಂತೆಯೂ ತಕರಾರು ಕೂಡ ಸಲ್ಲಿಸಬಹುದು.

ಬಿಬಿಎಂಪಿ ಇ ಖಾತೆ ಸಹಾಯವಾಣಿ

ಬಿಬಿಎಂಪಿ ಇಖಾತೆ ಕುರಿತು ಹೆಚ್ಚಿನ ಮಾಹಿತಿಗೆ ಕರೆ ಮಾಡಬಹುದಾದ ಸಂಖ್ಯೆ: 1533, ಇಮೇಲ್‌: bbmpekhata@gmail.com

ಅಂತಿಮ ಇ-ಖಾತಾ ಮಾಹಿತಿ

ನಾಗರೀಕರಿಗೆ ಇ-ಆಸ್ತಿಯ ತ್ವರಿತ ಹಾಗೂ ಸುಗಮ ವಿತರಣೆಗಾಗಿ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿ ಮತ್ತು ನೌಕರರಿಗೆ ಕಾರ್ಯಗಾರ ಇತ್ತೀಚೆಗೆ ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ತುರ್ತಾಗಿ ಇ-ಖಾತಾ ಪಡೆಯಲು ಬರುವ ಆಸ್ತಿ ಮಾಲೀಕರಿಗೆ ಸರಿಯಾಗಿ ಸ್ಪಂದಿಸಬೇಕೆಂದು ಕಂದಾಯ ವಿಭಾಗದ ಜಂಟಿ ಆಯುಕ್ತೆಯಾದ ಲಕ್ಷ್ಮೀದೇವಿ ರವರು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇ-ಖಾತಾ ನೀಡುವ ವಿಚಾರವಾಗಿ ನಗರದ ಎನ್.ಆರ್. ಕಾಲೋನಿಯ ಡಾ.ಸಿ ಅಶ್ವತ್ಥ್ ಕಲಾ ಭವನ ನಡೆದ ಕಾರ್ಯಗಾರವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಬೆಂಗಳೂರಿನ ಆಸ್ತಿ ಮಾಲೀಕರಿಗೆ ಇ-ಆಸ್ತಿ ಸೇವೆಗಳ ಸುಗಮ ವಿತರಣೆ ಹಾಗೂ ತುರ್ತು ಸಂದರ್ಭಗಳಲ್ಲಿ ನೋಂದಣಿ ಪ್ರಕರಣಗಳಿಗೆ ಆದ್ಯತೆಯನ್ನು ನೀಡಲು ತಿಳಿಸಿದ್ದಾರೆ.

ಬಿಬಿಎಂಪಿ‌ ವ್ಯಾಪ್ತಿಯಲ್ಲಿ 2024ರ ಅಕ್ಟೋಬರ್ ತಿಂಗಳೊಳಗೆ ಉಪ-ನೋಂದಣಾಧಿಕಾರಿ ಕಛೇರಿಯಲ್ಲಿ ತುರ್ತು ಆಸ್ತಿ ನೋಂದಣಿಗಾಗಿ ಅಂತಿಮ ಇ-ಖಾತಾವನ್ನು ಪಡೆಯುವ ಸಲುವಾಗಿ ಕಂದಾಯ ಅಧಿಕಾರಿಗಳ ಕಛೇರಿಗೆ ಬರುವ ನಾಗರೀಕರು/ಆಸ್ತಿ ಮಾಲೀಕರಿಗೆ ಕೂಡಲೆ ಸ್ಪಂದಿಸಿ ಇ-ಖಾತಾ ನೀಡುವ ವ್ಯವಸ್ಥೆ ಮಾಡಲು ಹೇಳಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ 21 ಲಕ್ಷಕಿಂತಲೂ ಹೆಚ್ಚು ಆಸ್ತಿಗಳನ್ನು ಡಿಜೀಟಲಿಕರಣಗೊಳಿಸಲಾಗಿದ್ದು, ದಿನಾಂಕ 1ನೇ ಅಕ್ಟೋಬರ್ 2024 ರಿಂದ ಜಾರಿಗೆ ಬರುವಂತೆ ಇ-ಆಸ್ತಿ ವ್ಯವಸ್ಥೆಗೆ ಒಳಪಡಿಸಿ bbmpeaasthi.karnataka.gov.in ನಲ್ಲಿ ರಚಿಸಿ ಇರಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಆಸ್ತಿ ನೊಂದಣಿ ಮಾಡಿಸುವವರಿಗೆ ಶೀಘ್ರವಾಗಿ ಇ-ಖಾತಾ ಪಡೆಯುವ ಸಲುವಾಗಿ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ. ಈ ಮೂಲಕ ಶೀಘ್ರವಾಗಿ ಇ-ಖಾತಾ ಬಗ್ಗೆ ಅಗತ್ಯ ಮಾಹಿತಿ ಪಡದು ಇ-ಖಾತಾ ಪಡೆಯಬಹುದಾಗಿದೆ. ತುರ್ತಾಗಿ ಆಸ್ತಿ ನೋಂದಣಿ ಮಾಡಿಸುವವರಿಗೆ ಹಾಗೂ ಅನಿವಾಸಿ ಭಾರತೀಯರಿಗೆ ಯಾವುದೇ ತೊಂದರೆ ಆಗದಂತೆ ಅತಿ ಶೀಘ್ರದಲ್ಲಿ ಇ-ಖಾತಾ ವಿತರಿಸುವ ಸಲುವಾಗಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿನ ಹೆಲ್ಪ್ ಡೆಸ್ಕ್ ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ನೆರವಾಗುವಂತೆ ಅವರು ಸೂಚಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ