logo
ಕನ್ನಡ ಸುದ್ದಿ  /  ಕರ್ನಾಟಕ  /  ಸಿಸಿಬಿ ಬೃಹತ್ ಕಾರ್ಯಾಚರಣೆ; ಮೂವರು ವಿದೇಶಿಗರು ಸೇರಿ ನಾಲ್ವರು ಡ್ರಗ್ ಪೆಡ್ಲರ್ ಬಂಧನ; 7.5 ಕೋಟಿ ಮೌಲ್ಯದ ಡ್ರಗ್ಸ್ ವಶ -Bengaluru Crime

ಸಿಸಿಬಿ ಬೃಹತ್ ಕಾರ್ಯಾಚರಣೆ; ಮೂವರು ವಿದೇಶಿಗರು ಸೇರಿ ನಾಲ್ವರು ಡ್ರಗ್ ಪೆಡ್ಲರ್ ಬಂಧನ; 7.5 ಕೋಟಿ ಮೌಲ್ಯದ ಡ್ರಗ್ಸ್ ವಶ -Bengaluru crime

D M Ghanashyam HT Kannada

Jul 26, 2024 06:31 PM IST

google News

ಸಿಸಿಬಿ ಬೃಹತ್ ಕಾರ್ಯಾಚರಣೆ; ಮೂವರು ವಿದೇಶಿಗರು ಸೇರಿ ನಾಲ್ವರು ಡ್ರಗ್ ಪೆಡ್ಲರ್ ಬಂಧನ; 7.5 ಕೋಟಿ ಮೌಲ್ಯದ ಡ್ರಗ್ಸ್ ವಶ

    • ಮೋಜಿನ ಜೀವನ ನಡೆಸಲು ಮತ್ತು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಮುಂಬೈನಲ್ಲಿ ನೆಲೆಸಿದ್ದ ತನ್ನ ಸ್ನೇಹಿತರಿಂದ ಮಾದಕ ವಸ್ತುವಾದ ಎಂಡಿಎಂಎ ಕ್ರಿಸ್ಟಲ್ ಅನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ, ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದ.
ಸಿಸಿಬಿ ಬೃಹತ್ ಕಾರ್ಯಾಚರಣೆ; ಮೂವರು ವಿದೇಶಿಗರು ಸೇರಿ ನಾಲ್ವರು ಡ್ರಗ್ ಪೆಡ್ಲರ್ ಬಂಧನ; 7.5 ಕೋಟಿ ಮೌಲ್ಯದ ಡ್ರಗ್ಸ್ ವಶ
ಸಿಸಿಬಿ ಬೃಹತ್ ಕಾರ್ಯಾಚರಣೆ; ಮೂವರು ವಿದೇಶಿಗರು ಸೇರಿ ನಾಲ್ವರು ಡ್ರಗ್ ಪೆಡ್ಲರ್ ಬಂಧನ; 7.5 ಕೋಟಿ ಮೌಲ್ಯದ ಡ್ರಗ್ಸ್ ವಶ

ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ಡ್ರಗ್ ಪೆಡ್ಲರ್‌ನನ್ನು ಬಂಧಿಸಿ ಆತನಿಂದ 4 ಕೆಜಿ ಎಂಡಿಎಂಎ ಮತ್ತು ಕ್ರಿಸ್ಟಲ್ ವಶಪಡಿಸಿ ಕೊಳ್ಳಲಾಗಿದೆ. ಇದರ ಮೌಲ್ಯ 6 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಸಿಸಿಬಿ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ವಿದೇಶಿ ಪ್ರಜೆಯಾಗಿದ ಆರೋಪಿಯು ವ್ಯಾಪಾರಿ ವೀಸಾದಡಿ ಭಾರತಕ್ಕೆ ಆಗಮಿಸಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ವಾಸವಾಗಿದ್ದ. ಅಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಈತ ನಷ್ಟ ಅನುಭವಿಸಿದ್ದ.

ನಂತರ ಬೆಂಗಳೂರಿಗೆ ಬಂದು, ಇಲ್ಲಿ ನೆಲೆಸಿರುವ ವಿದೇಶಿ ಮೂಲದ ಸ್ನೇಹಿತರುಗಳ ಮೂಲಕ ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನು ಕಲಿತುಕೊಂಡಿದ್ದ. ಮೋಜಿನ ಜೀವನ ನಡೆಸಲು ಮತ್ತು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಮುಂಬೈನಲ್ಲಿ ನೆಲೆಸಿದ್ದ ತನ್ನ ಸ್ನೇಹಿತರಿಂದ ಮಾದಕ ವಸ್ತುವಾದ ಎಂಡಿಎಂಎ ಕ್ರಿಸ್ಟಲ್ ಅನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ, ಬೆಂಗಳೂರಿಗೆ ತಂದು 1 ಗ್ರಾಂಗೆ 12 ಸಾವಿರ ರೂಪಾಯಿಗಳಿಂದ 15,000 ವರೆಗೂ ಮಾರುತ್ತಿದ್ದ. ಕೆಲ್ಲಾಗ್ಸ್, ನೆಸ್ಲೆ ಮೊದಲಾದ ತಿನಿಸುಗಳ ಲೇಬಲ್ ಅಂಟಿಸಿ ಮುಂಬೈನಿಂದ ಬೆಂಗಳೂರಿಗೆ ತರಿಸುತ್ತಿದ್ದ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯ ಮತ್ತೊಬ್ಬ ಸಹಚರನೂ ಅನಧಿಕೃತವಾಗಿ ಭಾರತದಲ್ಲಿ ವಾಸವಾಗಿದ್ದು, ಆತನನ್ನು ಡಿಟೆಂಕ್ಷನ್‌ ಸೆಂಟರ್‌ಗೆ ಕಳುಹಿಸಲಾಗಿದೆ. ವಿದೇಶಿ ಡ್ರಗ್ ಪೆಡ್ಲರ್‌ಗಳಿಂದ ಅಕ್ರಮವಾಗಿ ಗಳಿಸಿದ್ದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಮಾರ್ಚ್ ತಿಂಗಳಲ್ಲಿ ಬೆಂಗಳೂರು ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ವಿದೇಶಿ ಡ್ರಗ್ ಪೆಡ್ಲರ್‌ನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿತ್ತು. ಈತ ಡ್ರಗ್ ಪೆಡ್ಲಿಂಗ್ ಮಾಡುತ್ತಾ ವಿವಿಧ ಬ್ಯಾಂಕ್ ಗಳಲ್ಲಿ ಖಾತೆ ತೆರೆದು ಗೂಗಲ್ ಪೇ, ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ. ಈತನ ಬ್ಯಾಂಕ್‌ನಲ್ಲಿದ್ದ 4.40,000 ರೂ ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಗಳಿಸಿದ ಹಣವಾಗಿದ್ದರಿಂದ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು.

ಬೆಂಗಳೂರಿನಲ್ಲಿ ನಿಷೇಧಿತ ಮಾದಕ ವಸ್ತು ಕೊಕೇನ್‌ ವಶ

ನಿಷೇಧಿತ ಮಾದಕ ವಸ್ತು ಕೊಕೇನ್‌ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈತ ಸಂಗ್ರಹಿಸಿಟ್ಟಿದ್ದ 746 ಗ್ರಾಂ ತೂಕದ ಕೊಕೇನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 1.50 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 19.9 ಗ್ರಾಂ ಎಂಡಿಎಂಎ ಕ್ರಿಸ್ಟೆಲ್ ಅನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಸುದೀರ್ಘ ವಿಚಾರಣೆಗೊಳಪಡಿಸಿದಾಗ ಮನೆಯಲ್ಲಿ ಸಂಗ್ರಹಿಸಿದ್ದ ಮಾದಕ ವಸ್ತು ಕುರಿತು ಬಾಯಿ ಬಿಟ್ಟಿದ್ದ. ಈ ಮೂರೂ ಪ್ರಕರಣಗಳಲ್ಲಿ ಸಿಸಿಬಿ, ಮಾದಕ ದ್ರವ್ಯ ನಿಗ್ರಹ ದಳ ಕಾರ್ಯಾಚರಣೆ ನಡೆಸಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ