logo
ಕನ್ನಡ ಸುದ್ದಿ  /  ಕರ್ನಾಟಕ  /  Cauvery Water: ತಮಿಳುನಾಡಿಗೆ 31ರ ತನಕ 3000 ಕ್ಯೂಸೆಕ್ ನೀರು ಬಿಡಲು ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ

Cauvery Water: ತಮಿಳುನಾಡಿಗೆ 31ರ ತನಕ 3000 ಕ್ಯೂಸೆಕ್ ನೀರು ಬಿಡಲು ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ

HT Kannada Desk HT Kannada

Oct 11, 2023 09:32 PM IST

google News

ತಮಿಳುನಾಡಿಗೆ ಅಕ್ಟೋಬರ್ 31ರ ತನಕ 3000 ಕ್ಯೂಸೆಕ್ ನೀರು ಬಿಡುವುದನ್ನು ಕರ್ನಾಟಕ ಖಚಿತಪಡಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದೆ. (ಸಾಂದರ್ಭಿಕ ಚಿತ್ರ)

  • ತಮಿಳುನಾಡಿಗೆ ಅಕ್ಟೋಬರ್ 31 ರ ತನಕ ಕರ್ನಾಟಕವು 3,000 ಕ್ಯೂಸೆಕ್ ನೀರು ಬಿಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಬುಧವಾರ ಸೂಚಿಸಿದೆ. ಇಂದು ಕಾವೇರಿ ನೀರು ನಿಯಂತ್ರಣ ಸಮಿತಿಯ 88ನೇ ಸಭೆ ನಡೆಯಿತು.  

ತಮಿಳುನಾಡಿಗೆ ಅಕ್ಟೋಬರ್ 31ರ ತನಕ 3000 ಕ್ಯೂಸೆಕ್ ನೀರು ಬಿಡುವುದನ್ನು ಕರ್ನಾಟಕ ಖಚಿತಪಡಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದೆ. (ಸಾಂದರ್ಭಿಕ ಚಿತ್ರ)
ತಮಿಳುನಾಡಿಗೆ ಅಕ್ಟೋಬರ್ 31ರ ತನಕ 3000 ಕ್ಯೂಸೆಕ್ ನೀರು ಬಿಡುವುದನ್ನು ಕರ್ನಾಟಕ ಖಚಿತಪಡಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದೆ. (ಸಾಂದರ್ಭಿಕ ಚಿತ್ರ)

ನವದೆಹಲಿ: ತಮಿಳುನಾಡಿಗೆ ಅಕ್ಟೋಬರ್ 31ರ ತನಕ 3000 ಕ್ಯೂಸೆಕ್ ನೀರು ಬಿಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಬುಧವಾರ (ಅ.11) ಕರ್ನಾಟಕಕ್ಕೆ ಸೂಚನೆ ನೀಡಿದೆ.

ಕರ್ನಾಟಕವು ಅಕ್ಟೋಬರ್ 16 ರಿಂದ ಅಕ್ಟೋಬರ್ 31 ರವರೆಗೆ ನಿತ್ಯ 3000 ಕ್ಯೂಸೆಕ್ ನೀರು ಬಿಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಸಭೆ ನಿರ್ಧರಿಸಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ ಇಂದು (ಅ.11) ತನ್ನ 88 ನೇ ಸಭೆಯಲ್ಲಿ ಚಾಲ್ತಿಯಲ್ಲಿರುವ ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ನೀರಿನ ಹಂಚಿಕೆ ಮತ್ತು ಕೊರತೆಗಳ ಬಗ್ಗೆ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಂಡಿತು.

ಚರ್ಚೆಯ ನಂತರ ಕಾವೇರಿ ನೀರು ನಿಯಂತ್ರಣ ಸಮಿತಿ ಈ ನಿರ್ಧಾರಕ್ಕೆ ಬಂತು. ಬಿಳಿಗುಂಡ್ಲುವಿನಲ್ಲಿ 3000 ಕ್ಯೂಸೆಕ್‌ಗಳಷ್ಟು ಹರಿವು ಕಾಯ್ದುಕೊಳ್ಳುವ ರೀತಿಯಲ್ಲಿ ತನ್ನ ಜಲಾಶಯಗಳಿಂದ ನೀರು ಬಿಡುವುದನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕಕ್ಕೆ ಆದೇಶ ನೀಡಲಾಗಿದೆ. ಈ ನಿರ್ದೇಶನವು ಅಕ್ಟೋಬರ್ 8 ರಿಂದ ಜಾರಿಯಲ್ಲಿದೆ. ಅಕ್ಟೋಬರ್ 16 ರಿಂದ ಅಕ್ಟೋಬರ್ 31 ರವರೆಗೆ ಇದೇ ಆದೇಶ ಮುಂದುವರಿಯಲಿದೆ ಎಂದು ಸಮಿತಿ ಹೇಳಿದೆ.

ನೀರು ಬಿಡಲಾಗದ ಕುರಿತು ಸ್ಪಷ್ಟ ನಿಲುವ ವ್ಯಕ್ತಪಡಿಸಿದ ಕರ್ನಾಟಕ

ಕರ್ನಾಟಕವು ತನ್ನ ಪ್ರಸ್ತುತಿಯಲ್ಲಿ ಅನಿಯಂತ್ರಿತ ಜಲಾನಯನದ ಹರಿವು ಹೊರತುಪಡಿಸಿ ಬಿಳಿಗುಂಡ್ಲುವಿಗೆ ನೀರು ಬಿಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿಯನ್ನು ಉಲ್ಲೇಖಿಸಿ ಅಸಮರ್ಥತೆಯನ್ನು ವ್ಯಕ್ತಪಡಿಸಿದೆ.

ಕರ್ನಾಟಕವು ತನ್ನ ಜಲಾಶಯಗಳಿಗೆ ಅಕ್ಟೋಬರ್ 10 ರವರೆಗೆ ಸಂಚಿತ ಒಳಹರಿವಿನಲ್ಲಿ ಗಣನೀಯ ಪ್ರಮಾಣದಲ್ಲಿ 50.891 ರಷ್ಟು ಕೊರತೆಯನ್ನು ಸೂಚಿಸುವ ಸಂಬಂಧಿತ ವರದಿಯನ್ನು ಪ್ರಸ್ತುತಪಡಿಸಿದೆ. ಈ ಕೊರತೆಯು ತೀವ್ರ ಜಲ ಕೊರತೆಯ ಪರಿಸ್ಥಿತಿಗಳಿಗೆ ಕಾರಣವಾಗಿದೆ ಎಂದು ಅದು ಪ್ರತಿಪಾದಿಸಿದೆ.

ಸೆಪ್ಟೆಂಬರ್‌ನಲ್ಲಿ ತೀವ್ರಗೊಂಡ ಕಾವೇರಿ ನೀರು ಹಂಚಿಕೆ ವಿವಾದ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್‌ ಸೆಪ್ಟೆಂಬರ್ 21ರಂದು ಎತ್ತಿಹಿಡಿಯಿತು. ಮುಂದೆ, ಸೆಪ್ಟೆಂಬರ್ 27ರ ತನಕ ನಿತ್ಯವೂ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಿತ್ತು. ಈ ವಿದ್ಯಮಾನವು ಕಾವೇರಿ ಕೊಳ್ಳದ ಜನರಲ್ಲಿ ಆತಂಕಕ್ಕೆ, ಬೆಂಗಳೂರಲ್ಲಿ ಕುಡಿಯುವ ನೀರಿನ ಚಿಂತೆಗೂ ಕಾರಣವಾಯಿತು. ಸರ್ಕಾರವನ್ನು ಎಚ್ಚರಿಸುವುದಕ್ಕಾಗಿ ಪ್ರತಿಭಟನೆಗಳು ಶುರುವಾದವು. ಬೆಂಗಳೂರು ಬಂದ್ ಆಯಿತು. ಕರ್ನಾಟಕ ಬಂದ್‌ ಕೂಡ ಆಯಿತು ಎನ್ನಿ.

ವಿವರ ಓದಿಗೆ| ಕರ್ನಾಟಕ ತಮಿಳುನಾಡು ನಡುವೆ ಕಾವೇರಿ ವಿವಾದ 1700 ರಿಂದ 2023ರ ತನಕ ಏನೇನಾಯಿತು, ಇತಿಹಾಸದ ಕಡೆಗೊಂದು ಇಣುಕುನೋಟ

ಈ ವಿವಾದಕ್ಕೆ ಹೆಚ್ಚು ಕಡಿಮೆ 150 ವರ್ಷಗಳ ಇತಿಹಾಸವಿದೆ. ತಮಿಳುನಾಡು ಮತ್ತು ಕರ್ನಾಟಕದವರು ತಮ್ಮ ವಾದವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಭೌಗೋಳಿಕತೆ ಮತ್ತು ಜಲವಿಜ್ಞಾನದ ನೆಲೆಯಲ್ಲಿ ಹುಟ್ಟಿಕೊಂಡ ವಿವಾದ ಇದು. ಹವಾಮಾನ ಬಿಕ್ಕಟ್ಟು ಉಲ್ಬಣವಾದಂತೆ ಈ ವಿವಾದ ತೀವ್ರವಾಗುತ್ತ ಹೋಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ