logo
ಕನ್ನಡ ಸುದ್ದಿ  /  ಕರ್ನಾಟಕ  /  High Court News: ನಮ್ಮ ಬೆಕ್ಕು ಅವರ ಮನೆಯಲ್ಲಿದೆ: ಆನೇಕಲ್ ಮಹಿಳೆ ದಾಖಲಿಸಿದ್ದ ಪ್ರಕರಣಕ್ಕೆ ತಡೆಯಾಜ್ಞೆ ಕೊಟ್ಟ ಹೈಕೋರ್ಟ್

High Court News: ನಮ್ಮ ಬೆಕ್ಕು ಅವರ ಮನೆಯಲ್ಲಿದೆ: ಆನೇಕಲ್ ಮಹಿಳೆ ದಾಖಲಿಸಿದ್ದ ಪ್ರಕರಣಕ್ಕೆ ತಡೆಯಾಜ್ಞೆ ಕೊಟ್ಟ ಹೈಕೋರ್ಟ್

D M Ghanashyam HT Kannada

Jul 27, 2024 02:46 PM IST

google News

ನಮ್ಮ ಬೆಕ್ಕು ಅವರ ಮನೆಯಲ್ಲಿದೆ: ಆನೇಕಲ್ ಮಹಿಳೆ ದಾಖಲಿಸಿದ್ದ ಪ್ರಕರಣಕ್ಕೆ ತಡೆಯಾಜ್ಞೆ ಕೊಟ್ಟ ಹೈಕೋರ್ಟ್

  • ಕಿಟಿಕಿ ಮತ್ತು ಗೋಡೆಗಳನ್ನು ಹಾರಿ ಬೆಕ್ಕುಗಳು ನೆಗೆದು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಇಂತಹ ಪ್ರಕರಣಗಳ ವಿಚಾರಣೆ ನಡೆಸುತ್ತಾ ಹೋದರೆ ನ್ಯಾಯಾಂಗ ವ್ಯವಸ್ಥೆಗೆ ಅಡಚಣೆ ಉಂಟಾಗುತ್ತದೆ ಎಂದು ವಕೀಲರು ಹೇಳಿದ್ದರು. (ವರದಿ: ಮಾರುತಿ ಎಚ್‌.)

ನಮ್ಮ ಬೆಕ್ಕು ಅವರ ಮನೆಯಲ್ಲಿದೆ: ಆನೇಕಲ್ ಮಹಿಳೆ ದಾಖಲಿಸಿದ್ದ ಪ್ರಕರಣಕ್ಕೆ ತಡೆಯಾಜ್ಞೆ ಕೊಟ್ಟ ಹೈಕೋರ್ಟ್
ನಮ್ಮ ಬೆಕ್ಕು ಅವರ ಮನೆಯಲ್ಲಿದೆ: ಆನೇಕಲ್ ಮಹಿಳೆ ದಾಖಲಿಸಿದ್ದ ಪ್ರಕರಣಕ್ಕೆ ತಡೆಯಾಜ್ಞೆ ಕೊಟ್ಟ ಹೈಕೋರ್ಟ್

ಬೆಂಗಳೂರು: ವಿದೇಶಗಳಲ್ಲಿ ಮಾತ್ರ ಇಂತಹ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಈಗ ಇಂತಹ ವಿಚಿತ್ರ ಪ್ರಕರಣ ಬೆಂಗಳೂರಿನ ಹೈಕೋರ್ಟ್‌ನಲ್ಲಿ ದಾಖಲಾಗಿ ಕುತೂಹಲ ಮೂಡಿಸಿದೆ. ಇದೊದು ಬೆಕ್ಕಿನ ಪುರಾಣ. ದೂರು ನೀಡಿರುವ ಬೆಕ್ಕಿನ ಮಾಲೀಕರ ಪ್ರಕಾರ ಅವರ 'ಡೈಸಿ' ಎಂಬ ಬೆಕ್ಕು ಗೋಡೆ ಹಾರಿ ಪಕ್ಕದ ಮನೆ ಸೇರಿಕೊಂಡಿದೆ. ಪಕ್ಕದ ಮನೆಯವರು ಬೆಕ್ಕನ್ನು ಹಿಡಿದಿಟ್ಟುಕೊಂಡಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆನೇಕಲ್ ಮೂಲದ ಮಹಿಳೆ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ಪೀಠವು, ತಡೆಯಾಜ್ಞೆ ನೀಡಿತು. 'ನಮ್ಮ ಸಾಕು ಬೆಕ್ಕು ಡೈಸಿ, ಮನೆಗೆ ಹೊಂದಿಕೊಂಡಿರುವ ಗೋಡೆಗಳನ್ನು ಹಾರಿ ಪಕ್ಕದಮನೆ ಪ್ರವೇಶಿಸಿದೆ. ಅವರು ತಮ್ಮ ಬೆಕ್ಕನ್ನು ಹಿಡಿದಿಟ್ಟುಕೊಂಡಿದ್ದಾರೆ. ಇದು ಇದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ' ದೂರುದಾರರು ಹೇಳಿದ್ದಾರೆ.

ಬೆಕ್ಕಿನ ಮಾಲೀಕರು ಉದ್ದೇಶಪೂರ್ವಕ ಅವಮಾನ, ಕ್ರಿಮಿನಲ್ ಬೆದರಿಕೆ ಮತ್ತು ಮಹಿಳೆಯ ನಮ್ರತೆಗೆ ಅಪಮಾನ ಮಾಡಲಾಗಿದೆ ಎನ್ನುವ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ನೆರೆಮನೆಯವರ ವಕೀಲರು ವಾದ ಮಂಡಿಸಿ ಕಿಟಿಕಿ ಮತ್ತು ಗೋಡೆಗಳನ್ನು ಹಾರಿ ಬೆಕ್ಕುಗಳು ನೆಗೆದು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಇಂತಹ ಪ್ರಕರಣಗಳ ವಿಚಾರಣೆ ನಡೆಸುತ್ತಾ ಹೋದರೆ ನ್ಯಾಯಾಂಗ ವ್ಯವಸ್ಥೆಗೆ ಅಡಚಣೆ ಉಂಟಾಗುತ್ತದೆ ಎಂದು ವಾದಿಸಿದ್ದರು.

ಈ ಪ್ರಕರಣವು ಪೊಲೀಸ್ ಠಾಣೆಯಲ್ಲಿಯೂ ಸದ್ದು ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್‌ಶೀಟ್ ದಾಖಲಿಸಿದ್ದರು. ಪೊಲೀಸರು ಈ ಪ್ರಕರಣವನ್ನು ಇತ್ಯರ್ಥಗೊಳಿಸುವವರೆಗೆ ವಿಚಾರಣೆಗೆ ಮಧ್ಯಂತರ ತಡೆ ನೀಡುವುದಾಗಿ ಹೈಕೋರ್ಟ್ ಹೇಳಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ