logo
ಕನ್ನಡ ಸುದ್ದಿ  /  ಕರ್ನಾಟಕ  /  ನಮ್ಮ ಮೆಟ್ರೋ ಕಾಮಗಾರಿ; ಮುಂದಿನ ತಿಂಗಳು ಎಂಜಿ ರಸ್ತೆ- ಕಬ್ಬನ್ ರಸ್ತೆ ಏಕಮುಖ ಸಂಚಾರಕ್ಕೆ ಮುಕ್ತ, ಸಂಚಾರ ದಟ್ಟಣೆ ನಿರ್ವಹಣೆಗೆ ಕ್ರಮ

ನಮ್ಮ ಮೆಟ್ರೋ ಕಾಮಗಾರಿ; ಮುಂದಿನ ತಿಂಗಳು ಎಂಜಿ ರಸ್ತೆ- ಕಬ್ಬನ್ ರಸ್ತೆ ಏಕಮುಖ ಸಂಚಾರಕ್ಕೆ ಮುಕ್ತ, ಸಂಚಾರ ದಟ್ಟಣೆ ನಿರ್ವಹಣೆಗೆ ಕ್ರಮ

Umesh Kumar S HT Kannada

Apr 27, 2024 03:51 PM IST

ಬೆಂಗಳೂರಿನ ನಮ್ಮ ಮೆಟ್ರೋ ಕಾಮಗಾರಿ ಮುಂದುವರಿದಿದ್ದು, ಅದಕ್ಕಾಗಿ ಬಂದ್ ಮಾಡಲಾಗಿದ್ದ ಎಂಜಿ ರಸ್ತೆ- ಕಬ್ಬನ್ ರಸ್ತೆ ಮುಂದಿನ ತಿಂಗಳು ಏಕಮುಖ ಸಂಚಾರಕ್ಕೆ ಮುಕ್ತಗೊಳ್ಳಲಿದೆ. (ಸಾಂಕೇತಿಕ ಚಿತ್ರ)

  • ನಮ್ಮ ಮೆಟ್ರೋ ಕಾಮಗಾರಿ ನಿಮಿತ್ತ 2019ರಲ್ಲಿ ಬಂದ್ ಮಾಡಲಾಗಿದ್ದ ಎಂಜಿ ರಸ್ತೆ- ಕಬ್ಬನ್ ರಸ್ತೆ ಏಕಮುಖ ಸಂಚಾರಕ್ಕೆ ಮುಂದಿನ ತಿಂಗಳು ಮುಕ್ತವಾಗಲಿದೆ. ಸಂಚಾರ ದಟ್ಟಣೆ ನಿರ್ವಹಣೆಗೆ ಕ್ರಮ ತೆಗೆದುಕೊಂಡಿರುವ ಬೆಂಗಳೂರು ಸಂಚಾರ ಪೊಲೀಸರು ಈ ಕುರಿತು ಪರಿಶೀಲನೆ ನಡೆಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಬೆಂಗಳೂರಿನ ನಮ್ಮ ಮೆಟ್ರೋ ಕಾಮಗಾರಿ ಮುಂದುವರಿದಿದ್ದು, ಅದಕ್ಕಾಗಿ ಬಂದ್ ಮಾಡಲಾಗಿದ್ದ  ಎಂಜಿ ರಸ್ತೆ- ಕಬ್ಬನ್ ರಸ್ತೆ ಮುಂದಿನ ತಿಂಗಳು  ಏಕಮುಖ ಸಂಚಾರಕ್ಕೆ ಮುಕ್ತಗೊಳ್ಳಲಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರಿನ ನಮ್ಮ ಮೆಟ್ರೋ ಕಾಮಗಾರಿ ಮುಂದುವರಿದಿದ್ದು, ಅದಕ್ಕಾಗಿ ಬಂದ್ ಮಾಡಲಾಗಿದ್ದ ಎಂಜಿ ರಸ್ತೆ- ಕಬ್ಬನ್ ರಸ್ತೆ ಮುಂದಿನ ತಿಂಗಳು ಏಕಮುಖ ಸಂಚಾರಕ್ಕೆ ಮುಕ್ತಗೊಳ್ಳಲಿದೆ. (ಸಾಂಕೇತಿಕ ಚಿತ್ರ) (HT News )

ಬೆಂಗಳೂರು: ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆ ಕಡೆಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ಕಾಮರಾಜ್ ರಸ್ತೆಯ ಕೆಳಗೆ ಒಂದು ಬದಿಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ. ನೇರಳೆ ಮೆಟ್ರೋ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗಲೇ ಸಂಚಾರ ಪೊಲೀಸರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ, ಒಂದು ಬದಿಯ ಮಾರ್ಗವನ್ನು ಮೇ ತಿಂಗಳ ಮಧ್ಯಬಾಗದಲ್ಲಿ ತೆರೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಪದವಿ ಪ್ರವೇಶಾತಿ ಇಂದು ಶುರು; 4 ವರ್ಷದ ಪದವಿ ಇಲ್ಲ, 3 ವರ್ಷದ ಪದವಿ ಮರುಜಾರಿಗೊಳಿಸಿದ ಸರ್ಕಾರ

ಬೆಂಗಳೂರು: ನಿರ್ಮಾಣ ಹಂತದ ಪಾಟರಿ ಟೌನ್ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಕೆಳಗೆ ಕುಸಿದ ಭೂಮಿ, ಪರ್ಯಾಯ ಮಾರ್ಗ ಬಳಸಲು ಸೂಚನೆ

ಕರ್ನಾಟಕ ಹವಾಮಾನ ಮೇ 9; ಮೈಸೂರು, ಮಂಡ್ಯ, ಕೊಡಗು, ಬೆಂಗಳೂರು ಸೇರಿ 23 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದೇ ಪ್ರಕಟ; 10ನೇ ತರಗತಿ ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಈ ಹಿಂದೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಏಪ್ರಿಲ್ ಅಂತ್ಯದ ವೇಳೆಗೆ ಅರ್ಧದಷ್ಟು ರಸ್ತೆಯನ್ನು ಮತ್ತೆ ತೆರೆಯಲಾಗುವುದು ಎಂದು ಘೋಷಿಸಿತ್ತು. ಆದರೆ, ಇದು ವಿಳಂಬವಾಗಿದ್ದು, ಹೊಸ ಅಂದಾಜು ದಿನಾಂಕವನ್ನು ನೀಡಲಾಗಿದೆ. ಸದ್ಯ ಕಾಮರಾಜ ರಸ್ತೆ ಕಡೆಗೆ ಏಕಮುಖ ರಸ್ತೆಯನ್ನಾಗಿ ಮಾಡುವ ಮೂಲಕ, ವಿಶೇಷವಾಗಿ ಸಂಚಾರ ದಟ್ಟಣೆ ಸಂದರ್ಭದಲ್ಲಿ ಎಂಜಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲು ಪೊಲೀಸರು ಮುಂದಾಗಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

ಬಿಎಂಆರ್‌ಸಿಎಲ್ ಹೇಳುವುದೇನು?

'ನಮ್ಮ ಮೆಟ್ರೋ ನಿರ್ಮಾಣ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸಂಚಾರ ಪೊಲೀಸರಿಂದ ತಪಾಸಣೆಯೂ ಪೂರ್ಣಗೊಂಡಿದೆ. ಇದೀಗ ಮತ್ತೊಂದು ಪರಿಶೀಲನೆಗೆ ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ. ನಾವು ಮೇ ಮಧ್ಯದ ವೇಳೆಗೆ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಪ್ರಯತ್ನಿಸುತ್ತೇವೆ ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚೌಹಾಣ್ ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ರಸ್ತೆಯ ಕಾಮಗಾರಿಯ ಸ್ಥಿತಿಗತಿ ಕುರಿತು ವಿವರ ನೀಡಿದ ಮತ್ತೊಬ್ಬ ಹಿರಿಯ ಅಧಿಕಾರಿ, ಸದ್ಯಕ್ಕೆ 8 ಮೀಟರ್‌ ಅಗಲದ ರಸ್ತೆಯನ್ನು ಮಾತ್ರ ಮರುಸ್ಥಾಪಿಸಲಾಗುತ್ತಿದೆ. 2.5 ಮೀಟರ್ ಉದ್ದದ ಕಾಲುದಾರಿ ಕೂಡ ಹಾಕಲಾಗುತ್ತಿದೆ. ಆದಾಗ್ಯೂ, ಭೂಗತ ನಿಲ್ದಾಣಕ್ಕಾಗಿ ಉಪಕರಣಗಳನ್ನು ಕೆಳಗೆ ಕಳುಹಿಸುವ ಕಾರಣ ಉಳಿದ 12 ಮೀಟರ್‌ಗಳು ಆರರಿಂದ ಒಂಬತ್ತು ತಿಂಗಳವರೆಗೆ ಮುಚ್ಚಲ್ಪಡುತ್ತವೆ.” ಎಂದು ತಿಳಿಸಿದ್ದಾಗಿ ವರದಿ ಹೇಳಿದೆ.

ಎಂಜಿ ರಸ್ತೆ- ಕಬ್ಬನ್ ರಸ್ತೆ ಏಕಮುಖ ಸಂಚಾರ

“ಈ ಸಂಪರ್ಕ ರಸ್ತೆಯನ್ನು ಆದಷ್ಟು ಬೇಗ ತೆರೆಯಲು ನಾವು ಸಿದ್ಧರಿದ್ದೇವೆ. ಎಂಜಿ ರಸ್ತೆಯಲ್ಲಿ ಸಂಚಾರ ದಟ್ಟಣೆಯೇ ಇದಕ್ಕೆ ಕಾರಣ. ಕಮರ್ಷಿಯಲ್ ಸ್ಟ್ರೀಟ್‌ಗೆ ಭೇಟಿ ನೀಡಲು ಬಯಸುವವರು ಸುತ್ತು ಹಾಕಬೇಕಾಗಿರುವುದರಿಂದ ಸಾರ್ವಜನಿಕರು ಈ ರಸ್ತೆಯನ್ನು ಸಂಚಾರಕ್ಕೆ ತೆರೆದುಬಿಡಲು ಒತ್ತಾಯಿಸುತ್ತಿದ್ದಾರೆ. ನಾವು ಇದೀಗ ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆ ನಡುವೆ ಏಕಮುಖ ಸಂಚಾರವನ್ನು ಅನುಮತಿಸಲು ಯೋಜಿಸುತ್ತಿದ್ದೇವೆ” ಎಂದು ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಅನಿತಾ ಹದ್ದಣ್ಣವರ್‌ ತಿಳಿದ್ದಾಗಿ ವರದಿ ಹೇಳಿದೆ.

ನಾಗವಾರ ಕಾಳೇನ ಅಗ್ರಹಾರದ ನೇರಳೆ ಮೆಟ್ರೋ ರೈಲು ಮಾರ್ಗ ಕಾಮಗಾರಿ ನಡೆಯುವಲ್ಲಿ 220 ಮೀಟರ್‌ ಅಂತರದ ಕಾಮರಾಜ್ ರಸ್ತೆ ಹಾದು ಹೋಗಿದ್ದು, ಎಂಜಿ ರಸ್ತೆಯ ಭೂಗತ ಮೆಟ್ರೋ ನಿಲ್ದಾಣದ ದೃಷ್ಟಿಯಿಂದ ಮುಚ್ಚಬೇಕಾಯಿತು. ಹೊಸ ಮೆಟ್ರೋ ವಿಸ್ತರಣೆಯು ಕಾರ್ಯಾಚರಣಾ ಪರ್ಪಲ್ ಲೈನ್‌ನೊಂದಿಗೆ ಇಂಟರ್‌ಚೇಂಜ್ ಆಗಿ ಈ ನಿಲ್ದಾಣ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಈ ರಸ್ತೆಯನ್ನು 2019ರಲ್ಲಿ ಬಂದ್ ಮಾಡಲಾಗಿದೆ. ಇದರಿಂದಾಗಿ ಶಿವಾಜಿನಗರ ಅಥವಾ ಕಮರ್ಷಿಯಲ್ ಸ್ಟ್ರೀಟ್‌ಗೆ ತೆರಳಲು ಬಯಸುವವರು ಮೊದಲು ಅನಿಲ್ ಕುಂಬ್ಳೆ ವೃತ್ತ ಅಥವಾ ಟ್ರಿನಿಟಿ ಸರ್ಕಲ್‌ಗೆ ಹೋಗಿ ನಂತರ ತಿರುವು ತೆಗೆದುಕೊಳ್ಳಬೇಕಾಗಿದೆ. ಇದೇ ಕಾರಣಕ್ಕೆ ಎಂಜಿ ರಸ್ತೆಯ ಹಲವು ಕಡೆ ಸಂಚಾರ ದಟ್ಟಣೆ ಉಂಟಾಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು