logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಳೆಸೋಕೆ ವರುಷ ಮಳೆಗೆ ನಿಮಿಷ; ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ ಧರೆಗುರುಳಿದ 1000 ಮರಗಳು

Bengaluru News: ಬೆಳೆಸೋಕೆ ವರುಷ ಮಳೆಗೆ ನಿಮಿಷ; ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ ಧರೆಗುರುಳಿದ 1000 ಮರಗಳು

Raghavendra M Y HT Kannada

May 14, 2024 12:22 PM IST

google News

ಬೆಂಗಳೂರಿನಲ್ಲಿ ಕಳೆದ ಒಂದು ವಾರದಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ 1000 ಮರಗಳು ಧರೆಗುರುಳಿವೆ. ಸ್ಥಳದಲ್ಲೇ ಮರಗಳನ್ನು ಮಾರಾಟ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.

  • ಬೆಂಗಳೂರಿನಲ್ಲಿ 1 ವಾರದಿಂದ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು,  ಈವರೆಗೆ 1 ಸಾವಿರ ಮರಗಳು ಧರೆಗುರುಳಿವೆ. ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿ ಹಿನ್ನೆಲೆ ಸ್ಥಳದಲ್ಲೇ ಬಿದ್ದುಹೋಗಿರುವ ಮರಗಳ ಮಾರಾಟಕ್ಕೆ ಬಿಬಿಎಂಪಿ ಚಿಂತನೆ ನಡೆಸಿದೆ.

ಬೆಂಗಳೂರಿನಲ್ಲಿ ಕಳೆದ ಒಂದು ವಾರದಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ 1000 ಮರಗಳು ಧರೆಗುರುಳಿವೆ. ಸ್ಥಳದಲ್ಲೇ ಮರಗಳನ್ನು ಮಾರಾಟ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ 1000 ಮರಗಳು ಧರೆಗುರುಳಿವೆ. ಸ್ಥಳದಲ್ಲೇ ಮರಗಳನ್ನು ಮಾರಾಟ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ. (PTI)

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ (Bengaluru Rain) ಮೇ 6 ರಿಂದ 12 ರವರೆಗೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ನಗರದಾದ್ಯಂತ 1,000 ಕ್ಕೂ ಹೆಚ್ಚು ಮರಗಳು ಬುಡಮೇಲಾಗಿವೆ (Trees Uprooted). ಪ್ರಮುಖ ರಸ್ತೆಗಳಲ್ಲೇ ಮರಗಳು ಧರೆಗುರುಳಿರುವುದು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸ್ಥಳದಲ್ಲೇ ಧರೆಗುರುಳಿರುವ ಮರಗಳು, ಕೊಂಬೆಗಳನ್ನು ಮಾರಾಟ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಜನರ ಸಂಚಾರಕ್ಕೆ ಅಡ್ಡಿಯ ಸಮಸ್ಯೆಯನ್ನು ನಿಭಾಯಿಸಲು, ಬಿದ್ದ ಕೊಂಬೆಗಳನ್ನು ಅರಣ್ಯ ಡಿಪೋಗೆ ಸಾಗಿಸುವ ಬದಲು ಸ್ಥಳದಲ್ಲೇ ಮಾರಾಟ ಮಾಡುವ ಹೊಸ ವಿಧಾನವನ್ನು ಪರಿಗಣಿಸಲಾಗುತ್ತಿದೆ. ರಸ್ತೆ ತಡೆಗಳನ್ನು ತಡೆಗಟ್ಟುವುದು ಮತ್ತು ವಾಹನಗಳು ಹಾಗೂ ಪಾದಚಾರಿಗಳಿಗೆ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಈ ಉಪಕ್ರಮದ ಪ್ರಾಥಮಿಕ ಉದ್ದೇಶವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರನ್ನು ಸಂಪರ್ಕಿಸಿ, ಬಿದ್ದ ಮರಗಳ ಕಾಂಡಗಳು, ಕೊಂಬೆಗಳನ್ನು ಅವು ಇರುವ ಸ್ಥಳದಿಂದ ನೇರವಾಗಿ ಹರಾಜು ಮಾಡಲು ಅನುಮತಿ ನೀಡುವಂತೆ ಕೋರಿದ್ದಾರೆ. ಮೇ ಮೊದಲ ಹದಿನೈದು ದಿನಗಳಲ್ಲಿ ಮರ ಬೀಳುವ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಬಿಬಿಎಂಪಿ 39 ತಂಡಗಳನ್ನು ನಿಯೋಜಿಸಿದೆ. ಸಂಚಾರ ಮತ್ತು ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕಾಂಡಗಳು ಮತ್ತು ಕೊಂಬೆಗಳನ್ನು ತ್ವರಿತವಾಗಿ ಕತ್ತರಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಮಾನ್ಯವಾಗಿ, ಅರಣ್ಯ ಅಧಿಕಾರಿಗಳು ಬಿದ್ದ ಕೊಂಬೆಗಳು ಮತ್ತು ಕಾಂಡಗಳನ್ನು ರಸ್ತೆ ಬದಿಯಲ್ಲಿ ಸಂಗ್ರಹಿಸಿ ಅಂತಿಮವಾಗಿ ಗೊತ್ತುಪಡಿಸಿದ ಡಿಪೋಗಳು ಅಥವಾ ಡಂಪಿಂಗ್ ಯಾರ್ಡ್‌ಗಳಿಗೆ ಸಾಗಿಸುತ್ತಾರೆ. ಆದರೆ, ವ್ಯವಸ್ಥಾಪನಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಇಷ್ಟು ದೊಡ್ಡ ಪ್ರಮಾಣದ ಬಿದ್ದ ಮರಗಳನ್ನು ನಿಭಾಯಿಸುವಾಗ, ಅವುಗಳನ್ನು ಸ್ಥಳದಲ್ಲೇ ಮಾರಾಟ ಮಾಡುವ ಆಯ್ಕೆಯನ್ನು ಬಿಬಿಎಂಪಿ ಅನ್ವೇಷಿಸುತ್ತಿದೆ.

ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಬಿಎಲ್‌ಜಿ ಸ್ವಾಮಿ ಮಾತನಾಡಿ, "ನಗರದಲ್ಲಿ ಇಂತಹ ಎಂಟು ಯಾರ್ಡ್‌ಗಳನ್ನು ಹೊಂದಿರುವ ಡಂಪಿಂಗ್ ಯಾರ್ಡ್‌ಗಳಿಗೆ ಕತ್ತರಿಸಿದ ಮರದ ತುಂಡುಗಳನ್ನು ಸಾಗಿಸುವುದು ಕಷ್ಟವಾಗುತ್ತದೆ, ವಿಶೇಷವಾಗಿ ಒಂದು ವಾರದಲ್ಲಿ 1,000 ಕ್ಕೂ ಹೆಚ್ಚು ಮರಗಳು ಕುಸಿದಾಗ. ಆದ್ದರಿಂದ, ಅವುಗಳನ್ನು ಸ್ಥಳದಿಂದ ಮಾರಾಟ ಮಾಡುವ ಯೋಜನೆ ಇದೆ" ಎಂದು ಹೇಳಿದ್ದಾರೆ. ಟ್ರಂಕ್ ಕ್ಲಿಯರೆನ್ಸ್‌ನ ಕಡಿಮೆ ದರವನ್ನು ಒಪ್ಪಿಕೊಂಡ ಮತ್ತೊಬ್ಬ ಬಿಬಿಎಂಪಿ ಅಧಿಕಾರಿ, ಸಮಸ್ಯೆಯನ್ನು ಪರಿಹರಿಸಲು ಏಜೆನ್ಸಿ ಎಂಟು ಟ್ರ್ಯಾಕ್ಟರುಗಳನ್ನ ನಿಯೋಜಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನದ ಮೂಲಕ ಸುದ್ದಿಯಾಗಿದ್ದ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಮಳೆಯಾಗುತ್ತಿದ್ದು, ಇದರ ಪರಿಣಾಮವಾಗಿ ಸದ್ಯ ಸಿಟಿ ತುಂಬಾ ಕೂಲ್ ಆಗಿದೆ. ಆದರೆ ಬಿರುಗಾಳಿ ಸಹಿತ ಬಿದ್ದ ಮಳೆಯಿಂದ ಒಂದಷ್ಟು ಸಮಸ್ಯೆಗಳು ಉಂಟಾಗಿವೆ. ಕೆಲ ರಸ್ತೆಗಳಲ್ಲಿ ಮಳೆ ನೀರು ಉಕ್ಕಿ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿರುವುದೇ ಇದಕ್ಕೆ ಕಾರಣ ಎಂದು ಕೆಲವು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನ ಕೆಲೆವೂಂದು ಕಡೆ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿರುವ ವರದಿಯಾಗಿದೆ. ಇದರಿಂದ ಮನೆಗಳಲ್ಲಿನ ಜನರು ನೀರನ್ನು ಹೊರಹಾಕಲು ಹರಸಾಹಸ ಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಇಂದು (ಮೇ 14, ಮಂಗಳವಾರ) ಕೂಡ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಮುಂದಿನ ಒಂದು ವಾರದ ನಗರದಲ್ಲಿ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ