logo
ಕನ್ನಡ ಸುದ್ದಿ  /  ಕರ್ನಾಟಕ  /  Indian Railway: 3 ಎಕ್ಸ್‌ಪ್ರೆಸ್ ರೈಲುಗಳ ಸೇವಾ ಅವಧಿ ವಿಸ್ತರಣೆ ಮಾಡಿದ ನೈಋತ್ಯ ರೈಲ್ವೆ, ವಿವರ ಹೀಗಿದೆ

Indian Railway: 3 ಎಕ್ಸ್‌ಪ್ರೆಸ್ ರೈಲುಗಳ ಸೇವಾ ಅವಧಿ ವಿಸ್ತರಣೆ ಮಾಡಿದ ನೈಋತ್ಯ ರೈಲ್ವೆ, ವಿವರ ಹೀಗಿದೆ

HT Kannada Desk HT Kannada

Sep 23, 2023 06:18 AM IST

ಬೆಂಗಳೂರು ಸಂಪರ್ಕಿಸುವ ವಿಶೇಷ ರೈಲುಗಳ ಸೇವೆಯ ಅವಧಿಯನ್ನು ವಿಸ್ತರಿಸಿ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ. (ಸಾಂಕೇತಿಕ ಚಿತ್ರ)

  • ನೈಋತ್ಯ ರೈಲ್ವೆಯು ಹಲವಾರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯ ಅವಧಿಯನ್ನು ವಿಸ್ತರಿಸಿದೆ. ಅವಧಿ ವಿಸ್ತರಣೆಗಳಲ್ಲಿ ಬೆಂಗಳೂರಿಗೆ ಹೋಗುವ ಹುಬ್ಬಳ್ಳಿ ಡೈಲಿ ಸ್ಪೆಷಲ್ ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರಿಂದ ವೇಲಂಕಣಿ ವೀಕ್ಲಿ ಸ್ಪೆಷಲ್ ಎಕ್ಸ್‌ಪ್ರೆಸ್ ಮತ್ತು ಯಶವಂತಪುರದಿಂದ ವಿಜಯಪುರ ಡೈಲಿ ಸ್ಪೆಷಲ್ ಎಕ್ಸ್‌ಪ್ರೆಸ್ ಸೇರಿವೆ.

ಬೆಂಗಳೂರು ಸಂಪರ್ಕಿಸುವ ವಿಶೇಷ ರೈಲುಗಳ ಸೇವೆಯ ಅವಧಿಯನ್ನು ವಿಸ್ತರಿಸಿ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಸಂಪರ್ಕಿಸುವ ವಿಶೇಷ ರೈಲುಗಳ ಸೇವೆಯ ಅವಧಿಯನ್ನು ವಿಸ್ತರಿಸಿ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಹಲವಾರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯ ಅವಧಿ ವಿಸ್ತರಣೆಯನ್ನು ನೈಋತ್ಯ ರೈಲ್ವೆ ಪ್ರಕಟಿಸಿದೆ. ಈ ವಿಸ್ತರಣೆಗಳು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವ ಉದ್ದೇಶದಿಂದ ಕೂಡಿವೆ. ಯಾವ ರೈಲು ಸೇವೆಯ ಅವಧಿ ಎಷ್ಟು ದಿನ ವಿಸ್ತರಣೆಯಾಗಿದೆ ಎಂಬ ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಕೊಡಗು: ಸೋಮವಾರಪೇಟೆ ಸೂರ್ಲಬ್ಬಿಯಲ್ಲಿ 16 ವರ್ಷದ ಬಾಲಕಿಯ ದಾರುಣ ಹತ್ಯೆ, ವಿವಾಹ ಮುಂದೂಡಿದ್ದಕ್ಕೆ 32 ವರ್ಷದ ವ್ಯಕ್ತಿ ಪೈಶಾಚಿಕ ಕೃತ್ಯ

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್‌; ಸಕಲೇಶಪುರದಲ್ಲಿ ಮೂವರನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು, ಇಬ್ಬರು ಆರೋಪಿಗಳು, ಅವರ ಆಶ್ರಯದಾತ ಬಂಧಿತರು

ಬೆಂಗಳೂರು ಸಂಚಾರ ಸಲಹೆ; ನಾಗವಾರ ಮೇಲ್ಸೇತುವೆ ಬಳಿ ಇಂದಿನಿಂದ ಸರ್ವೀಸ್‌ ರಸ್ತೆ ಬಂದ್‌, ಟೈಮಿಂಗ್ಸ್ ಮತ್ತು ಇತರೆ ವಿವರ

ಮಂಗಳೂರು ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನ; ಆರೋಪಿ ಬಂಧನ

ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲು (07339): ವಾಸ್ತವದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಸೆಪ್ಟೆಂಬರ್ 30ಕ್ಕೆ ಅಂದರೆ ಈ ತಿಂಗಳ ಕೊನೆಗೆ ಮುಕ್ತಾಯವಾಗಬೇಕಿತ್ತು. ಆದರೆ, ಈಗ ಇದರ ಅವಧಿಯನ್ನು ಅಕ್ಟೋಬರ್ 31ರ ತನಕ ವಿಸ್ತರಿಸಲಾಗಿದೆ.

ಇದೇ ರೀತಿ, ಅಕ್ಟೋಬರ್ 1 ರಂದು ಮುಕ್ತಾಯಗೊಳ್ಳಬೇಕಿದ್ದ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುವ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲು (07340) ಈಗ ನವೆಂಬರ್ 1 ರವರೆಗೆ ಕಾರ್ಯನಿರ್ವಹಿಸಲಿದೆ.

ಕೆಎಸ್ಆರ್ ಬೆಂಗಳೂರಿಗೆ ಬರುವ ವೇಲಂಕಣಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (06547): ಕೆಎಸ್ಆರ್ ಬೆಂಗಳೂರಿಗೆ ಬರುವ ವೇಲಂಕಣಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯ ಅವಧಿಗೆ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳುವುದಿತ್ತು. ಆದರೆ ಈ ಸೇವೆಯನ್ನು ಅಕ್ಟೋಬರ್ 28ರ ತನಕ ವಿಸ್ತರಿಸಲಾಗಿದೆ.
ಅದೇ ರೀತಿ, ಸೆಪ್ಟೆಂಬರ್ 30 ರಂದು ಕೊನೆಗೊಳ್ಳಬೇಕಿದ್ದ ವೆಲಂಕಣಿಯಿಂದ ಕೆಎಸ್‌ಆರ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (06548) ಹಿಂದಿರುಗುವ ಪ್ರಯಾಣದ ರೈಲು ಸೇವೆಯು ಈಗ ಅಕ್ಟೋಬರ್ 28 ರವರೆಗೆ ಮುಂದುವರಿಯುತ್ತದೆ.

ಯಶವಂತಪುರದಿಂದ ವಿಜಯಪುರ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲು (06545): ಈ ರೈಲು ಆರಂಭದಲ್ಲಿ ಸೆಪ್ಟೆಂಬರ್ 29 ರವರೆಗೆ ಕಾರ್ಯನಿರ್ವಹಿಸಲಿದ್ದು, ಈಗ ಅಕ್ಟೋಬರ್ 31 ರವರೆಗೆ ಲಭ್ಯವಿರುತ್ತದೆ. ಸೆಪ್ಟೆಂಬರ್ 30 ರಂದು ಮುಕ್ತಾಯಗೊಳ್ಳಬೇಕಿದ್ದ ವಿಜಯಪುರದಿಂದ ಯಶವಂತಪುರ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲು (06546) ಹಿಂದಿರುಗುವ ಪ್ರಯಾಣವು ಈಗ ಜನವರಿ 1 ರವರೆಗೆ ಚಲಿಸಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು