logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾಂಗ್ ಸೈಡ್ ಡ್ರೈವಿಂಗ್; ತಪ್ಪಿದ ಭಾರಿ ಅಪಘಾತ, ಚಾಲಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾಂಗ್ ಸೈಡ್ ಡ್ರೈವಿಂಗ್; ತಪ್ಪಿದ ಭಾರಿ ಅಪಘಾತ, ಚಾಲಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

Umesh Kumar S HT Kannada

Apr 27, 2024 09:11 AM IST

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾಂಗ್ ಸೈಡ್ ಡ್ರೈವಿಂಗ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆದಾಗ್ಯೂ, ಎದುರಿದ್ದ ವಾಹನದ ಚಾಲಕನ ಸಮಯ ಪ್ರಜ್ಞೆಯಿಂದಾಗಿ ತಪ್ಪಿದ ಭಾರಿ ಅಪಘಾತದ ವಿಚಾರವೂ ಗಮನಸೆಳೆದಿದೆ. ಈಗ ಕೆಂಪು ಎಸ್‌ಯುವಿ ಚಾಲಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.

  • ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾಂಗ್ ಸೈಡ್ ಡ್ರೈವಿಂಗ್ ಸರಾಗ ನಡೆಯುತ್ತಿದ್ದು, ಏಪ್ರಿಲ್ 21ರಂದು ವಿರುದ್ಧ ದಿಕ್ಕಿನಲ್ಲಿ ಆಗಮಿಸಿದ ಕಾರು ಚಾಲಕ ಅಪಘಾತದ ಭೀತಿ ಹುಟ್ಟಿಸಿದ್ದ. ಆತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ. ( ವರದಿ- ಎಚ್.ಮಾರುತಿ, ಬೆಂಗಳೂರು) 

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾಂಗ್ ಸೈಡ್ ಡ್ರೈವಿಂಗ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆದಾಗ್ಯೂ, ಎದುರಿದ್ದ ವಾಹನದ ಚಾಲಕನ ಸಮಯ ಪ್ರಜ್ಞೆಯಿಂದಾಗಿ ತಪ್ಪಿದ ಭಾರಿ ಅಪಘಾತದ ವಿಚಾರವೂ ಗಮನಸೆಳೆದಿದೆ. ಈಗ ಕೆಂಪು ಎಸ್‌ಯುವಿ ಚಾಲಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾಂಗ್ ಸೈಡ್ ಡ್ರೈವಿಂಗ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆದಾಗ್ಯೂ, ಎದುರಿದ್ದ ವಾಹನದ ಚಾಲಕನ ಸಮಯ ಪ್ರಜ್ಞೆಯಿಂದಾಗಿ ತಪ್ಪಿದ ಭಾರಿ ಅಪಘಾತದ ವಿಚಾರವೂ ಗಮನಸೆಳೆದಿದೆ. ಈಗ ಕೆಂಪು ಎಸ್‌ಯುವಿ ಚಾಲಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ. (@bidadi_rohith)

ಬೆಂಗಳೂರು: ಅಪಘಾತ ಎಂದ ಕೂಡಲೇ ಈಗ ನೆನಪಾಗುವುದು ಬೆಂಗಳೂರು ಮೈಸೂರು ದಶಪಥ ಹೆದ್ದಾರಿ. ಈ ಹೆದ್ದಾರಿಯಲ್ಲಿ ಅತಿವೇಗ, ಅಜಾಗರೂಕ ಚಾಲನೆ ಮೊದಲಾದ ಕಾರಣಗಳಿಂದಾಗಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇತ್ತೀಚೆಗೆ, ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾಂಗ್ ಸೈಡ್ ಡ್ರೈವಿಂಗ್‌ನ ಮತ್ತೊಂದು ಪ್ರಕರಣ ವರದಿಯಾಗಿದೆ.

ವಿರುದ್ಧ ದಿಕ್ಕಿನಲಿ ಆಗಮಿಸಿದ ಕಾರಿನ ವಿಡಿಯೋ ವೈರಲ್ ಆಗಿದ್ದು ಪೊಲೀಸರು ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ರೋಹಿತ್ ಎಂಬುವವರು ತಮಗಾದ ಕೆಟ್ಟ ಅನುಭವವನ್ನು ಎಕ್ಸ್ ನಲ್ಲಿ ವಿಡಿಯೋ ಸಹಿತ ಹಂಚಿಕೊಂಡಿದ್ದಾರೆ. ಈ ವಿಡಿಯೋ ಅವರ ಕಾರಿನ ಡ್ಯಾಶ್‌ಬೋರ್ಡ್‌ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.

ಈ ಪೋಸ್ಟ್ ಗಮನಿಸಿದ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಪೊಲೀಸರು ಈ ಕಾರನ್ನು ಗುರುತಿಸಿದ್ದಾರೆ. ಕಾರಿನ ಚಾಲಕನ ವಿರುದ್ಧ ಅತಿ ವೇಗ ಮತ್ತು ಅಜಾಗರೂಕ ಚಾಲನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶೀಘ್ರವೇ ಕಾರು ಚಾಲಕನನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ರಾಂಗ್ ಸೈಡ್ ಚಾಲನೆ- ಏನಿದು ಪ್ರಕರಣ

ರೋಹಿತ್ ಅವರು ಮಾಡಿರುವ ಟ್ವೀಟ್ ಪ್ರಕಾರ, ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಏಪ್ರಿಲ್ 21ರಂದು ಬೆಳಗ್ಗೆ 07.21ಕ್ಕೆ ಈ ರಾಂಗ್ ಸೈಡ್ ಚಾಲನೆ ಘಟನೆ ನಡೆದಿದೆ. ಇದು ರೋಹಿತ್ ಅವರ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

“ನಾನು ಪ್ರಯಾಣಿಸುತ್ತಿದ್ದ ಕಾರು ಗಂಟೆಗೆ 95 ಕಿಮೀ ವೇಗದಲ್ಲಿ ಸಾಗುತ್ತಿತ್ತು. ಆದರೆ ಕೆಲವೇ ಸೆಕೆಂಡ್ ಗಳಲ್ಲಿ ನನ್ನ ಚಾಲಕ ತ್ವರಿತವಾಗಿ ಬ್ರೇಕ್ ಹಾಕ ಬೇಕಾಯಿತು. ವಿರುದ್ಧ ದಿಕ್ಕಿನಲ್ಲಿ ಎಸ್ ಯುವಿ ಕಾರು ಬರುತ್ತಿತ್ತು. ಒಂದು ವೆಳೆ ನನ್ನ ಚಾಲಕ ಬ್ರೇಕ್ ಹಾಕದಿದ್ದರೆ ಭೀಕರ ಅಪಘಾತವೇ ನಡೆದುಹೋಗುತ್ತಿತ್ತು. ನಿಜಕ್ಕೂ ಸ್ವಲ್ಪದರಲ್ಲಿ ಅಪಘಾತವನ್ನು ತಪ್ಪಿಸಿಕೊಂಡಿದ್ದೇನೆ” ಎಂದು ರೋಹಿತ್‌ ಹೇಳಿಕೊಂಡಿದ್ದಾರೆ.

ಕಾರು ಚಾಲಕನ ಚಾಲನಾ ಪರವಾನಗಿ ರದ್ದು ಪಡಿಸಲು ಮನವಿ

ರಾಂಗ್ ಸೈಡ್ ಕಾರು ಚಾಲನೆ ಮಾಡಿದ ಚಾಲಕನ ಚಾಲನಾ ಪರವಾನಗಿಯನ್ನು ರದ್ದುಪಡಿಸಲು ಪ್ರಾಂತೀಯ ಸಾರಿಗೆ ಕಚೇರಿಗೆ ಪತ್ರ ಬರೆಯಲಾಗಿದೆ. ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳನ್ನು ನಮ್ಮ ಗಮಕ್ಕೆ ತರಲು ಸೂಚಿಸಲಾಗಿದೆ. ರಾಂಗ್ ಸೈಡ್ ಡ್ರೈವಿಂಗ್ ಅದರಲ್ಲೂ ಬಲ ತುದಿಯಲ್ಲಿ ತುಂಬಾ ಭಯಾನಕವಾದದ್ದು. ಇದರಿಂದ ರಸ್ತೆ ಸವಾರರಿಗೆ ಆತಂಕವನ್ನುಂಟು ಮಾಡುತ್ತದೆ. ಆದರೂ ಆಗೊಮ್ಮೆ ಈಗೊಮ್ಮೆ ಇಂತಹ ಘಟನೆಗಳು ವರದಿಯಾಗುತ್ತಿವೆಯೇ ಹೊರತು ನಿರಂತರವಾಗಿ ನಡೆಯುತ್ತಿಲ್ಲ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

ಇಂತಹ ಪ್ರಕರಣಗಳೂ ಮಂಡ್ಯದ ಗಂಗನೂರು ಟೋಲ್ ಪ್ಲಾಜಾದಲ್ಲಿ ನಡೆಯುತ್ತವೆ. ಟೋಲ್ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ರಾಂಗ್ ಸೈಡ್ ಡ್ರೈವಿಂಗ್ ಮಾಡುತ್ತಾರೆ. ಹೆದ್ದಾರಿಯಲ್ಲಿ ಗಸ್ತುಪಡೆಯನ್ನು ಹೆಚ್ಚಿಸುವಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಜುಲೈ ಆಗಸ್ಟ್ ನಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನೊಬ್ಬ ಟೋಲ್ ಕಟ್ಟದೆ ಯೂ ಟರ್ನ್ ತೆಗೆದುಕೊಂಡು ವಿರುದ್ಧ ದಿಕ್ಕಿನಲ್ಲಿ ಬಸ್ ಚಲಾಯಿಸಿದ್ದ ವಿಡಿಯೋ ವೈರಲ್ ಆಗಿತ್ತು. ತದನಂತರ ಪೊಲೀಸರು ಸಾರಿಗೆ ಇಲಾಖೆಗೆ ಪತ್ರ ಬರೆದು ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಚಾಲಕರಿಗೆ ಸೂಚನೆ ನೀಡುವಂತೆ ತಿಳಿಸಿದ್ದರು.

ಇಂತಹ ಅವಘಡಗಳನ್ನು ನಿಯಂತ್ರಿಸಲು ಗಸ್ತುಪಡೆಯನ್ನು ಹೆಚ್ಚಿಸುವುದು ಮತ್ತು ಕಠಿಣ ಕ್ರಮಗಳನ್ನು ಜರುಗಿಸುವುದನ್ನು ಬಿಟ್ಟರೆ ಅನ್ಯ ಮಾರ್ಗಗಳಿಲ್ಲ. ಸಾರ್ವಜನಿಕರೇ ಸ್ವಯಂ ನಿಯಂತ್ರಣ ಹಾಕಿಕೊಂಡರೆ ಸಮಸ್ಯೆಗಳೇ ಉದ್ಭವಿಸುವುದಿಲ್ಲ ಎನ್ನುವುದು ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯವಾಗಿದೆ.

( ವರದಿ- ಎಚ್.ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು