ನವೆಂಬರ್ 13ರಂದು ಬೆಂಗಳೂರಿನ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ; ನೀವಿರುವ ಏರಿಯಾ ಇರಬಹುದೇನೋ ಪರಿಶೀಲಿಸಿ
Nov 11, 2024 09:18 PM IST
ನವೆಂಬರ್ 13ರಂದು ಬೆಂಗಳೂರಿನ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ
- Bengaluru Power Cut: ಬೆಂಗಳೂರು ನಗರದ ಈ ಜಾಗಗಳಲ್ಲಿ ನವೆಂಬರ್ 13ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 03:30ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರು: ನವೆಂಬರ್ 13ರ ಬುಧವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30ರ ತನಕ 66/11 ಕೆವಿ ಹೆಣ್ಣೂರು ರೋಡ್ ಉಪ-ಕೇಂದ್ರದಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಸೂಚಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಹೆಣ್ಣೂರು ಬಂಡೆ, ಸಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ಟ್ ಜಯಂತಿ ಕಾಲೇಜ್, ಕೆ ನಾರಾಯಣಪುರ, ಬಿಳಿಶಿವಾಲೆ, ಆಶಾ ಟೌನ್‌ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‌ಶಿಪ್, ನಗರಗಿರಿ ಟೌನ್‌ಶಿಪ್, ಕೆ.ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತನೂರು, ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿಎಸ್ಐ ಗೇಟ್, ಬೈರತಿ ಕ್ರಾಸ್, ಬೈರತಿ ಹಳ್ಳಿ, ಎವರ್ ಗ್ರೀನ್ ಲೇಔಟ್, ಕನಕ ಶ್ರೀ ಲೇಔಟ್, ಗೆದ್ದಲ ಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್ಮೆಂಟ್, ಹಿರೇಮಠ ಲೇಔಟ್, ಟ್ರಿನಿಟಿ ಫಾರ್ಚೂನ್, ಮೈಕಲ್ ಸ್ಕೂಲ್, ಬಿಹೆಚ್ಕೆ ಇಂಡಸ್ಟ್ರೀಸ್, ಜಾನಕೀ ರಾಮ್ ಲೇಔಟ್, ವಡ್ಡರ ಪಾಳ್ಯ, ಅನುಗ್ರಹ ಲೇಔಟ್, ಕಾವೇರಿ ಲೇಔಟ್, ಆತ್ಮ ವಿದ್ಯಾನಗರ, ಬೈರತಿ ಹಳ್ಳಿ, ಕೆಆರ್ಸಿ, ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಮ್ ಎನ್‌ಕ್ಲೇವ್, ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಆಂದ್ರ ಕಾಲೋನಿ ಮಂಜುನಾಥ್ ನಗರ, ಹೊರಮಾವು ಬಿಬಿಎಂಪಿ, ಅಗರ ಗ್ರಾಮ, ಪಟಾಲಮ್ಮ ಟೆಂಪಲ್, ಎಕೆ ಆರ್ ಸ್ಕೂಲ್, ಹೊಸ ಮಿಲೇನಿಯಮ್ ಸ್ಕೂಲ್, ಲಕ್ಕಮ್ಮ ಲೇಔಟ್, ಪ್ರಕಾಶ್ ಗಾರ್ಡನ್, ಕ್ರಿಸ್ಟಿಯನ್ ಕಾಲೇಜು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನವೆಂಬರ್ 14ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ವೃಷಭಾವತಿ 220 ಕೆವಿ ವಿದ್ಯುತ್ ಸ್ಥಾವರದಿಂದ ತಾತಗುಣಿ ವಿದ್ಯುತ್ ಸ್ಥಾವರಕ್ಕೆ ಹರಿಯುತ್ತಿರುವ 220 ಕೆವಿ ವಿದ್ಯುತ್ ಮಾರ್ಗದಲ್ಲಿರುವ 220 ಕೆವಿ High Level Bus GOS ಮತ್ತು ಇತರೆ ಪರಿಕರಗಳನ್ನು ತುರ್ತಾಗಿ ಬದಲಾಯಿಸುವ ದುರಸ್ಥಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ತಾತಗುಣಿ 220 ಕೆವಿ ವಿದ್ಯುತ್ ಸ್ಥಾವರವನ್ನು ಹಾಗೂ ಕಾವೇರಿ ನೀರು ಸರಬರಾಜು ಯೋಜನೆಯ ಎಲ್ಲಾ ಹಂತಗಳ ಜಲರೇಚಕ ಯಂತ್ರಗಾರಗಳನ್ನು ನವೆಂಬರ್ 14ರ ಮಧ್ಯಾಹ್ನ 10:30 ಗಂಟೆಯಿಂದ ಮಧ್ಯಾಹ್ನ 12:30 ಗಂಟೆಯ ತನಕ 02 ಗಂಟೆಗಳ ಕಾಲ ಸ್ಥಗಿತಗೊಳಿಸುತ್ತಿರುವ ಹಿನ್ನಲೆಯಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಹಾಗೂ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಕೋರಲಾಗಿದೆ.