logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Rain: ಬೆಂಗಳೂರು ಮಳೆ ಅನಾಹುತ; ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲದಂತೆ ತಡೆಯಲು ಬಿಬಿಎಂಪಿ ಕ್ರಮ

Bengaluru Rain: ಬೆಂಗಳೂರು ಮಳೆ ಅನಾಹುತ; ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲದಂತೆ ತಡೆಯಲು ಬಿಬಿಎಂಪಿ ಕ್ರಮ

Reshma HT Kannada

May 24, 2023 10:45 AM IST

google News

ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವುದನ್ನು ತಡೆಯಲು ಬಿಬಿಎಂಪಿ ಕ್ರಮ

    • Bengaluru Rain: ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಕೆಆರ್‌ ವೃತ್ತದ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡು,  22 ವರ್ಷ ಯುವತಿಯೊಬ್ಬರು ಸಾವನ್ನಪ್ಪಿದ್ದರು. ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲು ವರದಿ ಸಿದ್ಧಪಡಿಸಿದೆ. 
ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವುದನ್ನು ತಡೆಯಲು ಬಿಬಿಎಂಪಿ ಕ್ರಮ
ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವುದನ್ನು ತಡೆಯಲು ಬಿಬಿಎಂಪಿ ಕ್ರಮ

ಬೆಂಗಳೂರು: ಕಳೆದ ಮೂರು ದಿನಗಳ ಹಿಂದೆ ನಗರದ ಕೆಆರ್‌ ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ 22 ವರ್ಷ ಟೆಕಿಯೊಬ್ಬರು ಸಾವನ್ನಪ್ಪಿದ ಘಟನೆಯ ನಂತರ, ತೀವ್ರ ಟೀಕೆಗೆ ಒಳಗಾದ ಬಹೃತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವುದನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿದೆ.

ಬೂಮ್‌ ತಡೆಗೋಡೆ ಅಳವಡಿಕೆ

ಮಳೆ ಮುನ್ನೆಚ್ಚರಿಕೆ ಬಗ್ಗೆ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಬಿಎಸ್‌ ಪ್ರಹ್ಲಾದ್‌ ಮೂರು ಪುಟಗಳ ವರದಿಯನ್ನು ಸಿದ್ಧಪಡಿಸಿದ್ದು, ಅದರಲ್ಲಿ ಅಂಡರ್‌ಪಾಸ್‌ನಲ್ಲಿ ನೀರು ನಿಲ್ಲುವುದನ್ನು ತಪ್ಪಿಸುವುದು ಭಾಗವಾಗಿದೆ. ಭಾರೀ ಮಳೆ ಅಥವಾ ಪ್ರವಾಹ ಸಂದರ್ಭದಲ್ಲಿ ಕೆಆರ್‌ ಸರ್ಕಲ್‌ ಅಂಡರ್‌ಪಾಸ್‌ಗೆ ವಾಹನಗಳ ಪ್ರವೇಶವನ್ನು ತಡೆಯಲು ಬೂಮ್‌ ತಡೆಗೋಡೆ ಅಳವಡಿಸುವುದು ಈ ಕ್ರಮಗಳಲ್ಲಿ ಒಂದಾಗಿದೆ. ಅಂಡರ್‌ಪಾಸ್‌ನಲ್ಲಿ ನೀರು ನಿಂತ ಸಂದರ್ಭದಲ್ಲಿ ಬೂಮ್‌ ತಡೆಗೋಡೆಗಳನ್ನು ಟ್ರಾಪಿಕ್‌ ಪೊಲೀಸರು ನಿರ್ವಹಿಸುತ್ತಾರೆ.

ಬಿಬಿಎಂಪಿ ಪ್ರಸ್ತಾಪಿಸಿರುವ ಇತರ ಕ್ರಮಗಳೆಂದರೆ ಅಂಡರ್‌ಪಾಸ್‌ನ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಚರಂಡಿಗಳನ್ನು ನಿರ್ಮಿಸುವುದು ಮತ್ತು ನೀರು ನಿಲ್ಲಿಸುವುದನ್ನು ತಪ್ಪಿಸಲು ಅದನ್ನು ನೇರವಾಗಿ ಕಾಲುವೆಗೆ ಸಂಪರ್ಕಿಸುವುದು. ಅಂಡರ್‌ಪಾಸ್‌ ಇರುವ ಕಡೆ ವೇಗದ ಮಿತಿಯನ್ನು ಕಡಿಮೆ ಮಾಡುವ ಸಲುವಾಗಿ ಹಂಪ್ಸ್‌ಗಳನ್ನು ರೂಪಿಸಬೇಕು ಎಂದು ಪ್ರಸ್ತಾಪವೂ ಈ ವರದಿಯಲ್ಲಿದೆ.

ಸಿವಿಟಿವಿ

ಈ ಎಲ್ಲಾ ಕ್ರಮಗಳ ಜೊತೆಗೆ, ಪ್ರವಾಹದ ಸಮಯದಲ್ಲಿ ಅಂಡರ್‌ಪಾಸ್‌ಗಳಿಗೆ ಪ್ರವೇಶಿಸುವ ವಾಹನಗಳ ಮೇಲ್ವಿಚಾರಣೆಗಾಗಿ ಸಿಸಿಟಿವಿ ಮತ್ತು ವರ್ಟಿಕಲ್‌ ಕ್ಲಿಯರೆನ್ಸ್‌ ಗೇಜ್‌ ಬೀಮ್‌ (ವಿಸಿಜಿಬಿ) ಅನ್ನು ಸ್ಥಾಪಿಸಲು ವರದಿ ಸೂಚಿಸಿದೆ. 15 ದಿನಗಳಲ್ಲಿ ಕಾಮಗಾಗಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಆಯಕ್ತರು ಆದೇಶ ನೀಡಿದ್ದಾರೆ.

ಭಾರಿ ಮಳೆಗೆ ಟೆಕಿ ಸಾವು

ಭಾನುವಾರು ಸಂಜೆ ಸುರಿದ ಭಾರಿ ಮಳೆಗೆ ಕೆಆರ್‌ ಸರ್ಕಾಲ್‌ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಭಾನುರೇಖಾ ಎಂಬ 22 ವರ್ಷದ ಟೆಕಿ ಸಾವನ್ನಪ್ಪಿದ್ದರು. ಕಾರಿನಲ್ಲಿದ್ದ ಭಾನುರೇಖಾ ಅವರ 5 ಮಂದಿ ಸಂಬಂಧಿಕರನ್ನು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಸಿಬ್ಬಂದಿ ರಕ್ಷಿಸಿದ್ದರು.

ಆಕೆಯ ಸಹೋದರ ಸಂದೀಪ್ ನೀಡಿದ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಿರ್ಲಕ್ಷ್ಯದ ಕಾರಣಕ್ಕೆ ವಾಹನ ಚಾಲಕನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಚಾಲಕ ಮತ್ತು ಬಿಬಿಎಂಪಿಯಿಂದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಪಾವಧಿಯಲ್ಲಿಯೇ ಭಾರಿ ಮಳೆ ಸುರಿದಿದ್ದು, ಬಿರುಸಿನ ಗಾಳಿ, ಉದುರಿದ ಕೊಂಬೆಗಳು ಹಾಗೂ ಎಲೆಗಳು ಈ ಪ್ರದೇಶದಲ್ಲಿ ಜಲಾವೃತವಾಗಲು ಕಾರಣವಾಗಿತ್ತು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸಮರ್ಥಿಸಿಕೊಂಡಿದ್ದರು.

ಬಿಬಿಎಂಪಿ ಅಧಿಕಾರಿಗಳು ಸೋಮವಾರ ನಗರದ ರೈಲ್ವೆ ಅಂಡರ್‌ಪಾಸ್ ಸೇರಿದಂತೆ ಎಲ್ಲಾ ಅಂಡರ್‌ಪಾಸ್‌ಗಳ ಸಮೀಕ್ಷೆಯನ್ನು ಪ್ರಾರಂಭಿಸಿದರು, ಅಲ್ಲದೆ ಅಗತ್ಯ ಕ್ರಮ ಕೈಗೊಳ್ಳುವ ನಿರ್ಧಾರವನ್ನು ಮಾಡಲಾಗಿತ್ತು. ಆಡಿಟ್ ವರದಿಯ ಆಧಾರದ ಮೇಲೆ, ದುರಸ್ತಿ ಕಾರ್ಯವನ್ನು ಕೈಗೊಳ್ಳಲು ದೋಷಯುಕ್ತ ಅಂಡರ್‌ಪಾಸ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಈ ವೇಳೆ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ

ಬೆಂಗಳೂರಿನಲ್ಲಿ ಇಂದೂ ಸುರಿಯಲಿದೆ ಮಳೆ, ಕರ್ನಾಟಕದ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ

ಒಂದು ವಾರದಿಂದ ಬೆಂಗಳೂರು ಮಹಾನಗರವೂ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಗೆ ಭಾರೀ ಅನಾಹುತಗಳಾಗಿವೆ. ಈ ನಡುವೆ ಪೂರ್ವ ಮುಂಗಾರು ಮೇ ಅಂತ್ಯದವರೆಗೂ ಇರಲಿದ್ದು, ಸಣ್ಣ ಮಳೆ ಜತೆಗೆ ಗುಡುಗು ಸಹಿತ ಮಳೆಯೂ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರು: ಈ ಮಾಸಾಂತ್ಯದವರೆಗೂ ಪೂರ್ವ ಮುಂಗಾರು ಮಳೆಯ ಆರ್ಭಟ ಮುಂದುವರೆಯಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ