ಬೆಂಗಳೂರು ಹವಾಮಾನ: ಮುಂಜಾನೆ ಮಂಜು, ಕೆಲವು ಕಡೆ ಮಾತ್ರ ಮಳೆ, ಕರ್ನಾಟಕ ಹವಾಮಾನ ಇಂದು ಹೀಗಿದೆ ನೋಡಿ
Nov 08, 2024 06:58 AM IST
ಬೆಂಗಳೂರು ಹವಾಮಾನ: ಮುಂಜಾನೆ ಮಂಜು, ಕೆಲವು ಕಡೆ ಮಾತ್ರ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಕರ್ನಾಟಕ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.
Karnataka Weather: ಕರ್ನಾಟಕದಲ್ಲಿ ಹಿಂಗಾರು ಮಳೆಯ ಪ್ರಭಾವ ಕಡಿಮೆಯಾಗಿದ್ದು, ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಕೆಲವು ಕಡೆ ಮಾತ್ರ ಮಳೆಯಾಗಬಹುದು. ಮುಂಜಾನೆ ಮಂಜು ಇರಲಿದ್ದು, ಸ್ವಲ್ಪ ಚಳಿ ಇರಬಹುದು. ಕರ್ನಾಟಕ ಹವಾಮಾನ ಇಂದು ಹೀಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. ಅದರ ವಿವರ ಇಲ್ಲಿದೆ.
ಬೆಂಗಳೂರು: ಹಿಂಗಾರು ಮಳೆಯ ಪ್ರಭಾವ ತಗ್ಗಿದೆ. ಇಂದು (ನವೆಂಬರ್ 8) ಕೆಲವು ಜಿಲ್ಲೆಗಳಲ್ಲಿ ಮಾತ್ರವೇ ಮಳೆಯ ವಾತಾವರಣ ಇದ್ದು, ಉಳಿದೆಡೆ ಒಣಹವೆ ಇದೆ. ಮುಂಜಾನೆ ಮಂಜು ಮತ್ತು ಮೋಡ ಕವಿದ ವಾತಾವರಣ ಕೆಲವು ಕಡೆ ಕಂಡುಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. ಗುರುವಾರ (ನವೆಂಬರ್ 7) ರಾಜ್ಯದಲ್ಲಿ ಈಶಾನ್ಯ ಮುಂಗಾರು ದುರ್ಬಲವಾಗಿತ್ತು. ಬಹುತೇಕ ಒಣಹವೆ ಕಂಡುಬಂದಿತ್ತು. ಕರ್ನಾಟಕದಲ್ಲಿ ನಿನ್ನೆ ಗರಿಷ್ಟ ಉಷ್ಣಾಂಶ 35.4 ಡಿಗ್ರಿ ಸೆಲ್ಶಿಯಸ್ ಕಾರವಾರದಲ್ಲಿ ದಾಖಲಾಗಿದೆ. ಅದೇ ರೀತಿ ಸಮತಟ್ಟು ಪ್ರದೇಶಗಳ ಪೈಕಿ ಕನಿಷ್ಠ ಉಷ್ಣಾಂಶ 14.4 ಡಿಗ್ರಿ ಸೆಲ್ಶಿಯಸ್ ವಿಜಯಪುರದಲ್ಲಿ ದಾಖಲಾಗಿದೆ. ಇನ್ನು ಈ ದಿನಕ್ಕೆ ಸಂಬಂಧಿಸಿದಂತೆ ಸಿನೋಪ್ಟಿಕ್ ಹವಾಮಾನ ಲಕ್ಷಣಗಳನ್ನು ಪ್ರಕಟಿಸಿರುವ ಹವಾಮಾಣ ಇಲಾಖೆ, ಉತ್ತರ-ದಕ್ಷಿಣ ಮಾರುತವು ಈಗ ಮಧ್ಯ ಮತ್ತು ಮೇಲಿನ ಉಷ್ಣವಲಯದ ಪಶ್ಚಿಮ ಭಾಗಗಳಲ್ಲಿ 7.6 ಕಿಮೀ ಎತ್ತರದಲ್ಲಿ ಅದರ ಅಕ್ಷದೊಂದಿಗೆ ಸಮುದ್ರ ಮಟ್ಟವು ಸ್ಕೂಲವಾಗಿ ಉದ್ದದ ಉದ್ದಕ್ಕೂ ಕಂಡುಬರುತ್ತದೆ. ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿ ಚಂಡಮಾರುತದ ಪರಿಚಲನೆಯು ಈಗ ನೈಋತ್ಯ ಬಂಗಾಳ ಕೊಲ್ಲಿಯಲ್ಲಿದೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿಮೀ ವರೆಗೆ ವಿಸ್ತರಿಸಿದೆ. ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತದ ಪರಿಚಲನೆಗೆ ಅಡ್ಡಲಾಗಿ ಮನ್ನಾರ್ ಕೊಲ್ಲಿಯಿಂದ ಪೂರ್ವ ಮಧ್ಯ ಬಂಗಾಳ ಕೊಲ್ಲಿಯವರೆಗೆ ಒಂದು ಮಾರುತ ಸಾಗುತ್ತದೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿಮೀ ವರೆಗೆ ವಿಸ್ತರಿಸಿದೆ.
ಕರ್ನಾಟಕ ಹವಾಮಾನ ಇಂದು; ಇವತ್ತಿನ ಮಳೆ ಮುನ್ಸೂಚನೆ ಹೀಗಿದೆ
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ (ನವೆಂಬರ್ 7) ಅಪರಾಹ್ನ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಇಂದು (ನವೆಂಬರ್ 8) ದಕ್ಷಿಣ ಕನ್ನಡ, ಉಡುಪಿ, ಹಾಸನದ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಒಣ್ಣೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆ ಇದೆ.
ರಾಜ್ಯದ ಯಾವುದೆ ಜಿಲ್ಲೆಯಲ್ಲೂ ಮಳೆಗೆ ಸಂಬಂಧಿಸಿದ ಎಚ್ಚರಿಕೆ, ಮುನ್ನೆಚ್ಚರಿಕೆಗಳು ಇಲ್ಲ. ನಿನ್ನೆ ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಕೋಲಾರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಣ್ಣೆರಡು ಕಡೆಗಳಲ್ಲಿ ಹಗುರ ಮಳೆಯಾಗಿದೆ, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇತ್ತು ಎಂದು ವರದಿ ಹೇಳಿದೆ,
ಬೆಂಗಳೂರು ಹವಾಮಾನ: ಮುಂಜಾನೆ ಮಂಜು, ಕೆಲವು ಕಡೆ ಮಾತ್ರ ಮಳೆ
ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ (ನವೆಂಬರ್ 7) ಅಪರಾಹ್ನ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಇಂದು (ನವೆಂಬರ್ 8) ಮುಂಜಾನೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದ ಕೆಲವು ಕಡೆಗಳಲ್ಲಿ ಮುಂಜಾನೆ ಮಂಜು ಇರಲಿದೆ. ಬಹುತೇಕ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಕಡೆಗಳಲ್ಲಿ ಮಳೆ ಸುರಿಯಬಹುದು. ಈ ಎರಡೂ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಶಿಯಸ್ ಇರಬಹುದು.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಿನ್ನೆ ಬಹುತೇಕ ಮೋಡ ಕವಿದ ವಾತಾವರಣ ಇತ್ತು. ಮುಂಜಾನೆ ಮಂಜು, ರಾತ್ರಿ ಸ್ವಲ್ಪ ಚಳಿ ಅನುಭವಕ್ಕೆ ಬಂದಿತ್ತು. ಕೆಲವು ಕಡೆ ಹಗುರ ಮಳೆಯಾಗಿದೆ ಎಂದು ಹವಾಮಾನ ವರದಿ ಹೇಳಿದೆ.