logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi Rotti: ಖಡಕ್ ರೊಟ್ಟಿ ಶೇಂಗಾ ಚಟ್ನಿ ತಿನ್‌ಬೇಕು ಅಂತ ಅನ್ನಿಸ್ತಿದೆಯಾ, ಕಲಬುರಗಿ ರೊಟ್ಟಿ ನಿಮ್ಮ ಮನೆಬಾಗಿಲಿಗೆ ಬರುತ್ತೆ ನೋಡಿ

Kalaburagi Rotti: ಖಡಕ್ ರೊಟ್ಟಿ ಶೇಂಗಾ ಚಟ್ನಿ ತಿನ್‌ಬೇಕು ಅಂತ ಅನ್ನಿಸ್ತಿದೆಯಾ, ಕಲಬುರಗಿ ರೊಟ್ಟಿ ನಿಮ್ಮ ಮನೆಬಾಗಿಲಿಗೆ ಬರುತ್ತೆ ನೋಡಿ

Umesh Kumar S HT Kannada

Dec 03, 2024 02:12 PM IST

google News

ಖಡಕ್ ರೊಟ್ಟಿ ಶೇಂಗಾ ಚಟ್ನಿ ತಿನ್‌ಬೇಕು ಅಂತ ಅನ್ನಿಸ್ತಿದೆಯಾ, ಹಾಗಾದ್ರೆ, ಕಲಬುರಗಿ ರೊಟ್ಟಿ ನಿಮ್ಮ ಮನೆಬಾಗಿಲಿಗೆ ಬರುತ್ತೆ ನೋಡಿ. ಕಲಬುರಗಿ ರೊಟ್ಟಿ ಪ್ಯಾಕ್‌ಗಳ ಚಿತ್ರವನ್ನು ಇಲ್ಲಿ ಬಳಸಲಾಗಿದೆ.

  • Kalaburagi Rotti: ಖಡಕ್ ರೊಟ್ಟಿ ಶೇಂಗಾ ಹಿಂಡಿ ರುಚಿ ಬಲ್ಲವನೇ ಬಲ್ಲ, ಕರ್ನಾಟಕದ ದಕ್ಷಿಣ ತುದಿಯ ಮಂಗಳೂರಲ್ಲಿ ಕುಳಿತು ಕರ್ನಾಟಕದ ಉತ್ತರ ತುದಿಯ ಕಲಬುರಗಿಯ ಖಡಕ್ ರೊಟ್ಟಿ ಶೇಂಗಾ ಹಿಂಡಿ ತಿನ್ನಬೇಕು ಅಂತ ಬಯಸಿದರೆ ಹೇಗೆ? ತಪ್ಪೇನಿಲ್ಲ, ಕಲಬುರಗಿಯಿಂದಲೇ ಖಡಕ್ ರೊಟ್ಟಿ ಶೇಂಗಾ ಚಟ್ನಿ ನಿಮ್ಮ ಮನೆಬಾಗಿಲಿಗೆ ಬರುತ್ತೆ ನೋಡಿ.

ಖಡಕ್ ರೊಟ್ಟಿ ಶೇಂಗಾ ಚಟ್ನಿ ತಿನ್‌ಬೇಕು ಅಂತ ಅನ್ನಿಸ್ತಿದೆಯಾ, ಹಾಗಾದ್ರೆ, ಕಲಬುರಗಿ ರೊಟ್ಟಿ ನಿಮ್ಮ ಮನೆಬಾಗಿಲಿಗೆ ಬರುತ್ತೆ ನೋಡಿ. ಕಲಬುರಗಿ ರೊಟ್ಟಿ ಪ್ಯಾಕ್‌ಗಳ ಚಿತ್ರವನ್ನು ಇಲ್ಲಿ ಬಳಸಲಾಗಿದೆ.
ಖಡಕ್ ರೊಟ್ಟಿ ಶೇಂಗಾ ಚಟ್ನಿ ತಿನ್‌ಬೇಕು ಅಂತ ಅನ್ನಿಸ್ತಿದೆಯಾ, ಹಾಗಾದ್ರೆ, ಕಲಬುರಗಿ ರೊಟ್ಟಿ ನಿಮ್ಮ ಮನೆಬಾಗಿಲಿಗೆ ಬರುತ್ತೆ ನೋಡಿ. ಕಲಬುರಗಿ ರೊಟ್ಟಿ ಪ್ಯಾಕ್‌ಗಳ ಚಿತ್ರವನ್ನು ಇಲ್ಲಿ ಬಳಸಲಾಗಿದೆ. (Kalaburagi Rotti)

Kalaburagi Rotti: ಖಡಕ್ ರೊಟ್ಟಿ ಅಂದ ಕೂಡಲೇ ನೆನಪಾಗೋದು ಕಲಬುರಗಿ ರೊಟ್ಟಿ. ಜೋಳದ ರೊಟ್ಟಿ ತಿಂದೋರು ಗಟ್ಟಿ ಎಂಬುದು ಕಲಬುರಗಿಯಲ್ಲಿ ರೂಢಿಯಲ್ಲಿರುವ ಮಾತು. ಜೋಳದ ರೊಟ್ಟಿ, ಅದೇ ಖಡಕ್ ರೊಟ್ಟಿ ಕಲಬುರಗಿ ಜನರ ಆಹಾರ ಪದ್ಧತಿಯ ಭಾಗ. ಈಗ ಕಲಬುರಗಿ ರೊಟ್ಟಿ ಎಂಬುದೇ ಬ್ರಾಂಡ್ ಆಗಿದೆ. ನವೆಂಬರ್ ತಿಂಗಳ ಖುಷಿಯ ಸಂಭ್ರಮದಲ್ಲಿ ಕಲಬುರಗಿ ರೊಟ್ಟಿ ಬ್ರ್ಯಾಂಡ್ ಆನ್‌ಲೈನ್ ಮಾರುಕಟ್ಟೆ ಪ್ರವೇಶಿಸಿದೆ. ವಿಶ್ವದ ದೈತ್ಯ ಆನ್‌ಲೈನ್ ಕಂಪನಿಗಳಾದ ಫ್ಲಿಪ್ ಕಾರ್ಟ್​ ಹಾಗೂ ಅಮೆಜಾನ್​​ನ​ಲ್ಲಿ ಕಲಬುರಗಿ ರೊಟ್ಟಿ ಸೇರ್ಪಡೆಯಾಗಿದೆ. ನವೆಂಬರ್​ 16 ರಿಂದ ಆನ್​ಲೈನ್​ನಲ್ಲಿ ಜೋಳದ ರೊಟ್ಟಿಗಳು ಗ್ರಾಹಕರಿಗೆ ಸಿಗುತ್ತವೆ. ಕೇವಲ ಕರ್ನಾಟಕ ಮಾತ್ರವಲ್ಲ ದೇಶ, ವಿದೇಶಗಳಲ್ಲೂ ಖಡಕ್ ರೊಟ್ಟಿ ಎಲ್ಲರಿಗೂ ಲಭ್ಯವಾಗಲಿವೆ. ಇನ್ನು ಈ ರೊಟ್ಟಿಗಳನ್ನು ಕಲಬುರಗಿಯಲ್ಲೇ ಬೆಳೆಯುವ ಗುಣಮಟ್ಟದ ಮಾಲ್ದಂಡಿ ತಳಿಯ ಬಿಳಿ ಜೋಳದಿಂದ ತಯಾರು ಮಾಡಲಾಗುತ್ತದೆ.

ಚಿತ್ತಾಪುರದ ಮಾಲ್ದಂಡಿ ಜೋಳದ ರೊಟ್ಟಿ ಬೇಕಾದ್ರೆ ಕಲಬುರಗಿ ರೊಟ್ಟಿ ತಾಣಕ್ಕೆ ಭೇಟಿ ಕೊಡಿ ಮನೆಗೇ ತರಿಸಿಕೊಳ್ಳಿ

ಉತ್ತರ ಕರ್ನಾಟಕದ ಪ್ರಮುಖ ಆಹಾರ ಖಡಕ್ ಜೋಳದ ರೊಟ್ಟಿ. ಅದರಲ್ಲೂ ಜಿಲ್ಲೆಯ ಚಿತ್ತಾಪುರದ ಮಾಲ್ದಂಡಿ ಜೋಳದ ರೊಟ್ಟಿ ಅತ್ಯಂತ ಉತ್ಕೃಷ್ಟ. ಇನ್ಮೇಲೆ ಖಡಕ್ ರೊಟ್ಟಿ ಬೇಕು ಎಂದೆನಿಸಿದಾಗೆಲ್ಲ ಕಲಬುರಗಿ ರೊಟ್ಟಿ ನೆನಪಿಸಿಕೊಳ್ಳಿ. ಆನ್‌ಲೈನ್ ತಾಣಕ್ಕೆ ಭೇಟಿ ಕೊಟ್ಟು ಅಲ್ಲೇ ಖರೀದಿಸಿ. ಮನೆಬಾಗಿಲಿಗೆ ರೊಟ್ಟಿ ತಲುಪುತ್ತೆ. ರೊಟ್ಟಿ, ಸಜ್ಜೆ ರೊಟ್ಟಿ, ದಾಟಿ ಸೇರಿದಂತೆ ತರಹೇವಾರಿ ರೊಟ್ಟಿಗಳು ಲಭ್ಯ ಇದ್ದು ಆನ್‌ಲೈನ್‌ನಲ್ಲೇ ಬುಕ್ ಮಾಡಬಹುದು.

10 ರೊಟ್ಟಿಗಳ ಪ್ಯಾಕ್‌ನಲ್ಲಿ ಖಡಕ್ ರೊಟ್ಟಿ ಲಭ್ಯ ಇದೆ. ಪ್ಯಾಕಿಂಗ್ ಕೂಡ ಆಕರ್ಷಕವಾಗಿದೆ. ಮೈಸೂರಿನ ಭಾರತೀಯ ಆಹಾರ ಸಂಶೋಧನ ಕೇಂದ್ರ (ಸಿಎಫ್ ಟಿಆರ್ ಐ)ನಿಂದ ಗುಣಪುಟ್ಟದ ಪ್ರಮಾಣೀಕರಣ ಕೂಡ ಇದಕ್ಕೆ ಸಿಕ್ಕಿದೆ..ಕಲಬುರಗಿ ಜಿಲ್ಲಾಡಳಿತವೂ ಈಗಾಗಲೇ ಸಬ್ಸಿಡಿ ದರದಲ್ಲಿ 100 ರೊಟ್ಟಿ ತಯಾರಿಕಾ ಯಂತ್ರಗಳನ್ನು ವಿತರಣೆ ಮಾಡಿದೆ. ಕಲಬುರಗಿ ರೊಟ್ಟಿ ಉತ್ಪಾದಕರ ಸಹಕಾರ ಸಂಘವನ್ನು ನೋಂದಣಿ ಮಾಡಲಾಗಿದೆ. ಇದಕ್ಕೆ 20 ಜನ ಸಕ್ರಿಯ ಸದಸ್ಯರಿದ್ದಾರೆ. ಖಡಕ್ ರೊಟ್ಟಿ ತಯಾರಿಸಲು ಜಿಲ್ಲಾಡಳಿತದಿಂದ 100 ಯಂತ್ರಗಳನ್ನು ನೀಡಲಾಗಿದ್ದು, ಗಂಟೆಗೆ 200–800 ರೊಟ್ಟಿ ತಯಾರಾಗುತ್ತವೆ.

ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝೀಯಾ ತರುನ್ನುಮ್‌ ಅವರು ಕಲಬುರಗಿ ರೊಟ್ಟಿಗೆ ಆನ್‌ಲೈನ್ ಮಾರುಕಟ್ಟೆ ಕುರಿತು ಟ್ವೀಟ್ ಮಾಡಿದ್ದು, ಕಲಬುರಗಿ ರೊಟ್ಟಿ ಸಿರಿಧಾನ್ಯದ ಶಕ್ತಿ ಎಂದು ಚುಟುಕಾಗಿ ಅದನ್ನು ಪ್ರೊಮೋಟ್ ಮಾಡಿದ್ದಾರೆ.

ಪೌಷ್ಟಿಕಾಂಶ ಹೊಂದಿರುವಂಥ ಖಡಕ್ ರೊಟ್ಟಿ ಆರೋಗ್ಯಕರ ಆಹಾರ

ಹೆಚ್ಚಿನ ಪೌಷ್ಟಿಕಾಂಶ ಜೋಳ ಮತ್ತು ಅದರ ಉತ್ಪನ್ನಗಳು ಮತ್ತಿನ ಪೌಷ್ಟಿಕಾಂಶಗಳನ್ನು ಹೊಂದಿದ್ದು, ಬೊಜ್ಜು, ಮಧುಮೇಹ, ಹೃದಯ ರಕ್ತನಾಳ ಸಮಸ್ಯೆ, ಉರಿಯೂತ, ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಅತ್ಯುತ್ತಮ ಪೌಷ್ಟಿಕಾಂಶ ಎಂಬ ವಿಚಾರ ಬಂದಾಗ ಸಿರಿಧಾನ್ಯಗಳ ಪೈಕಿ ಚೋಳ ಅಗ್ರಸ್ಥಾನದಲ್ಲಿದೆ. ಪ್ರೋಟೀನ್, ಫೈಬರ್, ಅಗತ್ಯ ಬಿಸಿ, ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಜೋಳವು, ಮಧುಮೇಹ, ಸ್ಕೂಲಕಾಯದಿಂದ ಬಳಲುತ್ತಿರುವ ಎಲ್ಲ ವಯಸ್ಸಿನವರಿಗೆ ಸೇವಿಸಬಹುದಾದ ಆರೋಗ್ಯಕರ ಆಹಾರ ಎನ್ನುತ್ತಾರೆ ವೈದ್ಯರು.

ಕಲಬುರಗಿಯಲ್ಲಿ ಮಾರ್ಚ್ 13 ರಂದು ನಡೆದ ಗೃಹಜ್ಯೋತಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ‘ಕಲಬುರಗಿ ರೊಟ್ಟಿ ಬ್ರ್ಯಾಂಡ್’ ಅನ್ನು ಬಿಡುಗಡೆ ಮಾಡಿತ್ತು. ಈಗ ಇದೇ ಹೆಸರನ್ನೇ ಪ್ಯಾಕಿಂಗ್​ನಲ್ಲಿ ಬಳಸಲಾಗುತ್ತದೆ. ಅದರಂತೆ ಈಗ ಕ್ಯೂ‌ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ಆನ್‌ಲೈನ್‌ನಲ್ಲೇ ಗ್ರಾಹಕರು ರೊಟ್ಟಿಗಳನ್ನ ಆರ್ಡರ್ ಮಾಡಬಹದಾಗಿದೆ. ಕಲಬುರಗಿ ಜಿಲ್ಲಾಧಿಕಾರಿ ಕೂಡ ಇದಕ್ಕೆ ಸಂಬಂಧಿಸಿ ಟ್ವೀಟ್ ಮಾಡಿದ್ಧಾರೆ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ