logo
ಕನ್ನಡ ಸುದ್ದಿ  /  ಮನರಂಜನೆ  /  Actor Ganesh: ಬಂಡೀಪುರ ಬಳಿ ಕಟ್ಟಡ ನಿರ್ಮಾಣ: ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ನೋಟಿಸ್‌ ಜಾರಿ, ಕಾಮಗಾರಿ ಸ್ಥಗಿತಕ್ಕೆ ಸೂಚನೆ

Actor Ganesh: ಬಂಡೀಪುರ ಬಳಿ ಕಟ್ಟಡ ನಿರ್ಮಾಣ: ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ನೋಟಿಸ್‌ ಜಾರಿ, ಕಾಮಗಾರಿ ಸ್ಥಗಿತಕ್ಕೆ ಸೂಚನೆ

Umesha Bhatta P H HT Kannada

Aug 17, 2023 03:39 PM IST

google News

ನಟ ಗಣೇಶ್‌ ಅವರಿಗೆ ಸೇರಿದ ಜಮೀನಿನಲ್ಲಿ ಬಂಡೀಪುರ ಬಳಿ ಕಟ್ಟಡ ನಿರ್ಮಿಸುತ್ತಿದ್ದು. ಅದನ್ನು ನಿಲ್ಲಿಸುವಂತೆ ಅರಣ್ಯ ಇಲಾಖೆ ನೊಟೀಸ್‌ ಜಾರಿ ಮಾಡಿದೆ

    • Actor Ganesh building near forest ಬಂಡಿಪುರ ಸಮೀಪದ ಪರಿಸರ ಸೂಕ್ಷ್ಮ ಪ್ರದೇಶ( ECZ)ದಲ್ಲಿ ಕಟ್ಟಡ ನಿರ್ಮಿಸುತ್ತಿರುವ ನಟ ಗಣೇಶ್‌ ಅವರಿಗೆ ಕರ್ನಾಟಕ ಅರಣ್ಯ ಇಲಾಖೆ( Karnataka Forest Department) ನೊಟೀಸ್‌ ಜಾರಿ ಮಾಡಿ ಕಟ್ಟಡ ಸ್ಥಗಿತಗೊಳಿಸುವಂತೆ ಸೂಚಿಸಿದೆ. 
ನಟ ಗಣೇಶ್‌ ಅವರಿಗೆ ಸೇರಿದ ಜಮೀನಿನಲ್ಲಿ ಬಂಡೀಪುರ ಬಳಿ ಕಟ್ಟಡ ನಿರ್ಮಿಸುತ್ತಿದ್ದು. ಅದನ್ನು ನಿಲ್ಲಿಸುವಂತೆ ಅರಣ್ಯ ಇಲಾಖೆ ನೊಟೀಸ್‌ ಜಾರಿ ಮಾಡಿದೆ
ನಟ ಗಣೇಶ್‌ ಅವರಿಗೆ ಸೇರಿದ ಜಮೀನಿನಲ್ಲಿ ಬಂಡೀಪುರ ಬಳಿ ಕಟ್ಟಡ ನಿರ್ಮಿಸುತ್ತಿದ್ದು. ಅದನ್ನು ನಿಲ್ಲಿಸುವಂತೆ ಅರಣ್ಯ ಇಲಾಖೆ ನೊಟೀಸ್‌ ಜಾರಿ ಮಾಡಿದೆ

ಮೈಸೂರು‍್ಯ ಇ ಬಂಡೀಪುರ ಹುಲಿ ಯೋಜನೆಯ ಸೂಕ್ಷ್ಮ ಪರಿಸರ ವಲಯದಲ್ಲಿ ಕಟ್ಟಡ ನಿರ್ಮಿಸಲು ಮುಂದಾದ ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಅರಣ್ಯ ಇಲಾಖೆ ನೊಟೀಸ್‌ ಜಾರಿ ಮಾಡಿದೆ. ಅಲ್ಲದೇ ಈಗಾಗಲೇ ನಿರ್ಮಾಣದ ಹಂತದಲ್ಲಿರುವ ಕಟ್ಟಡ ಕಾಮಗಾರಿಯನ್ನೂ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕು ಹಂಗಳ ಹೋಬಳಿಯ ಜಕ್ಕಹಳ್ಳಿಯ ಸರ್ವೆ ನಂಬರ್ 105 ರಲ್ಲಿ 1 ಎಕರೆ 24 ಗುಂಟೆ ಜಮೀನನ್ನು ಗಣೇಶ್ ಹೊಂದಿದ್ದಾರೆ. ಇಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯ ಸೂಕ್ಷ್ಮ ಪರಿಸರ ವಲಯ( Eco Sensitive Zone) ದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಪರಿಸರ ವಾದಿಗಳು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಂಡಿಪುರ ಹುಲಿಧಾಮ( Bandipur Tiger Reserve) ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌ ಅವರು ನೊಟೀಸ್‌ ಜಾರಿಗೊಳಿಸಿದ್ದಾರೆ.

ಕಟ್ಟಡ ನಿರ್ಮಿಸುತ್ತಿರುವ ಸ್ಥಳ ಸೂಕ್ಷ್ಮ ಪರಿಸರ ವಲಯದಲ್ಲಿದೆ. ಇಲ್ಲಿ ಕಟ್ಟಡ ನಿರ್ಮಿಸಲು ಯಾವ ಅನುಮತಿ ಪಡೆದಿದ್ದೀರಿ, ಯಾವ ಉದ್ದೇಶಕ್ಕೆ ಕಟ್ಟಡ ನಿರ್ಮಾಣವಾಗುತ್ತಿದೆ ಎನ್ನುವ ವಿವರಣೆಯನ್ನು ನೀಡುವಂತೆಯೂ ಸೂಚಿಸಲಾಗಿದೆ.

ನೊಟೀಸ್‌ ಜಾರಿ

ಈಗ ನಟ ಗಣೇಶ್‌ ಅವರಿಗೆ ಸೇರಿದ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಅದು ಖಾಸಗಿ ಭೂಮಿ. ಆದರೂ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಬರುವುದರಿಂದ ಕಾರಣ ಕೇಳಿ ನೊಟೀಸ್‌ ಜಾರಿಗೊಳಿಸಿ ಕಟ್ಟಡ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ನೊಟೀಸ್‌ಗೆ ಉತ್ತರ ನೀಡಿದ ನಂತರ ಮುಂದಿನ ಕ್ರಮದ ಕುರಿತು ನಿರ್ಧರಿಸಲಾಗುವುದು ಎಂದು ರಮೇಶ್‌ ಕುಮಾರ್‌ ತಿಳಿಸಿದ್ದಾರೆ.

ಯಾವುದೇ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರ ನೇತೃತ್ವದ ಮೇಲ್ವಿಚಾರಣೆ ಸಮಿತಿ ಅನುಮತಿ ನೀಡಲಾಗಿದೆ. ಮೈಸೂರಿನಲ್ಲಿರುವ ಪ್ರಾದೇಶಿಕ ಆಯುಕ್ತರಿಂದ ಅವರು ಅನುಮತಿ ಪಡೆದಿರಬೇಕು. ಈ ಕುರಿತು ನಮಗೂ ದೂರು ಬಂದಿದ್ದರಿಂದ ಈಗ ವಿವರಣೆ ಕೇಳಲಾಗಿದೆ ಎನ್ನುವುದು ಡಾ.ರಮೇಶ್‌ಕುಮಾರ್‌ ಸ್ಪಷ್ಟನೆ.

2023 ರ ಮಾರ್ಚ್ 15ರಂದು ವಾಸ ಹಾಗೂ ಕೃಷಿ ಉಪಕರಣಗಳನ್ನು ಇರಿಸಲು ಮನೆ ನಿರ್ಮಿಸಲು ಅನುಮತಿ ನೀಡಬೇಕು ಎಂದು ಗಣೇಶ್ ಕೋರಿದ್ದರು. ಜಮೀನಿನಲ್ಲಿ ಸ್ವಂತ ಉಪಯೋಗಕ್ಕೆ ಮನೆ ನಿರ್ಮಿಸಲು ಬಂಡೀಪುರ ನಿರ್ದೇಶಕರು ಅನುಮತಿ ನೀಡಿದ್ದಾರೆ. ಅನುಮತಿಗಿಂತ ಹೆಚ್ಚು ಜಾಗದಲ್ಲಿ ಮನೆ ನಿರ್ಮಿಸುವಂತಿಲ್ಲ. ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಿಸುವಂತಿಲ್ಲ ಎಂಬ ಷರತ್ತನ್ನೂ ಹಾಕಿದ್ದರು. ಆದರೆ ಸ್ಥಳದಲ್ಲಿ ದೊಡ್ಡ ಕಾಂಕ್ರೀಟ್ ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ.

ಹೂವರ್‌ ಆಗ್ರಹ

ಗುಂಡ್ಲುಪೇಟೆ ತಾಲ್ಲೂಕು ಹಂಗಳ ಹೋಬಳಿಯ ಜಕ್ಕಹಳ್ಳಿಯ ಸರ್ವೆ ನಂಬರ್ 105 ರಲ್ಲಿ 1ಎಕರೆ 24 ಗುಂಟೆ ಜಮೀನನ್ನು ಗಣೇಶ್ ಹೊಂದಿದ್ದಾರೆ. ಇದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿದೆ. ಕಣಿಯನಪುರ ಆನೆ ಕಾರಿಡಾರ್ ಕೂಡ ಈ ಪ್ರದೇಶದಲ್ಲಿ ಹಾದು ಹೋಗುತ್ತದೆ. ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾದ ಚಿತ್ರ ನಟರೊಬ್ಬರು ಈ ರೀತಿಯ ಬೃಹತ್ ಕಟ್ಟಡ ನಿರ್ಮಾಣ ಮಾಡುವ ಮೂಲಕ ಪರಿಸರ ಸೂಕ್ಷ್ಮವಲಯದಲ್ಲಿ ಕಟ್ಟಡ ನಿರ್ಮಿಸುತ್ತಿರುವುದು ಸರಿಯಲ್ಲ. ಜಮೀನು ಪರಿಸರ ಸೂಕ್ಷ್ಮ ವಲಯ ಹಾಗೂ ಆನೆ ಕಾರಿಡಾರ್‌ನಲ್ಲಿದೆ ಎಂದು ತಿಳಿದಿದ್ದರೂ ಮಾನಿಟರಿಂಗ್ ಕಮಿಟಿ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಕಟ್ಟಡ ನಿರ್ಮಿಸಲು ಅವಕಾಶ ನೀಡಿರುವುದಕ್ಕೆ ನಮ್ಮ ವಿರೋಧವಿದೆ. ಕೂಡಲೇ ಕ್ರಮ ಕೈಗೊಂಡು ಕಟ್ಟಡ ನಿರ್ಮಾಣ ತೆರವುಗೊಳಿಸಬೇಕು ಎನ್ನುವುದು ಪರಿಸರವಾದಿ ಜೋಸೆಫ್ ಹೂವರ್ ಅವರ ಆಗ್ರಹ.

ಇತ್ತಿಚೀನ ದಿನಗಳಲ್ಲಿ ಮಾನವ ವನ್ಯಜೀವಿ ದಾಳಿ ಹೆಚ್ಚುತ್ತಿದೆ. ಪ್ರಭಾವಿ ವ್ಯಕ್ತಿಗಳಿಗೆ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಅನುಮತಿ ನೀಡುವುದೇ ಇದಕ್ಕೆ ಎಲ್ಲಾ ಕಾರಣವಾಗಿದೆ. ಇದರಿಂದ ನಿಜವಾದ ರೈತರಿಗೆ ತೊಂದರೆ ಉಂಟಾಗುತ್ತಿದೆ. ಮುಂದೆ ಯಾವುದೇ ರೀತಿಯಲ್ಲಿ ಅನುಮತಿ ನೀಡಬಾರದು ಮತ್ತು ಸೆಲೆಬ್ರಿಟಿಗಳು, ರೈತರು ಎನ್ನುವ ತಾರತಮ್ಯ ಮಾಡಬಾರದು. ಯಾರಾದರೂ ತಿಳಿಸುವವರೆಗೂ ಅಧಿಕಾರಿಗಳಿಗೆ ಮಾಹಿತಿಯೇ ಇರುವುದಿಲ್ಲ ಎಂದರೆ ಯಾರನ್ನು ದೂಷಿಸುವುದು ಎನ್ನುವುದು ಅವರ ಪ್ರಶ್ನೆ.

ಹೊಸ ತರದ ಮನೆ

ಈಗಾಗಲೇ ಪಿಲ್ಲರ್‌ ಸಹಿತ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಮುಂಬೈನಲ್ಲಿ ತಯಾರಾಗುತ್ತಿರುವ ರೆಡಿಮೇಡ್‌ ಮನೆಯನ್ನು ಇಲ್ಲಿಗೆ ತರಲಾಗುತ್ತದೆ. ಆನಂತರ ಕೂರಿಸಲಾಗುತ್ತದೆ. ಇದು ಸಂಪೂರ್ಣ ಹೈಟೆಕ್‌ ಮನೆ. ಯಾವುದೇ ಕಟ್ಟಡ ವಸ್ತುಗಳನ್ನು ಬಳಸದೇ ಫೈಬರ್‌ ನಲ್ಲಿಯೇ ತಯಾರಿಸಿದ ಮನೆಯನ್ನು ಸಿದ್ದಪಡಿಸಲಾಗುತ್ತಿದೆ. ಇದರ ಹಿಂದೆ ಯಾವುದೇ ವಾಣಿಜ್ಯ ಉದ್ದೇಶವಿಲ್ಲ. ವಾಸಕ್ಕೆಂದು ಗಣೇಶ್‌ ಇದನ್ನು ರೂಪಿಸುತ್ತಿದ್ದು, ಇದಕ್ಕೆ ಬೇಕಾದ ಎಲ್ಲಾ ರೀತಿಯ ಅನುಮತಿ ಪಡೆಯಲಾಗಿದೆ ಎಂದು ಗಣೇಶ್‌ ಆಪ್ತರೊಬ್ಬರು ಖಚಿತಪಡಿಸಿದ್ದಾರೆ.

.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ