logo
ಕನ್ನಡ ಸುದ್ದಿ  /  ಕರ್ನಾಟಕ  /  Congress On Milk Shortage: 'ದಹಿ'ಗಾಗಿ ಪರಿತಪಿಸುವ ಬಿಜೆಪಿ ಹೈನುಗಾರರನ್ನು ದೈನೇಸಿ ಸ್ಥಿತಿಗೆ ದೂಡಿದೆ: ಕಾಂಗ್ರೆಸ್‌ ಕಿಡಿ!

Congress on Milk Shortage: 'ದಹಿ'ಗಾಗಿ ಪರಿತಪಿಸುವ ಬಿಜೆಪಿ ಹೈನುಗಾರರನ್ನು ದೈನೇಸಿ ಸ್ಥಿತಿಗೆ ದೂಡಿದೆ: ಕಾಂಗ್ರೆಸ್‌ ಕಿಡಿ!

HT Kannada Desk HT Kannada

Mar 31, 2023 12:30 PM IST

ಸಾಂದರ್ಭಿಕ ಚಿತ್ರ

  • ರಾಜ್ಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅಭಾವಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಪ್ರತಿಪಕ್ಷ ಕಾಂಗ್ರೆಸ್‌, ಆಡಳಿತಾರೂಢ ಬಿಜೆಪಿ ವಿರುದಧ ಮುಗಿಬಿದ್ದಿದೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಹೈನುಗಾರರ ಬದುಕನ್ನು ಬಿಜೆಪಿ ಆಡಳಿತ ಸರ್ವನಾಶ ಮಾಡುತ್ತಿದೆ ಎಂದು ಗುಡುಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಕೊರತೆ ಎದುರಾಗಿದೆ. ರೈತರಿಂದ ಸರಬರಾಜಾಗುವ ಹಾಲಿನ ಪ್ರಮಾಣ ಕಡಿಮೆಯಾಗಿರುವುದೇ ಡೈರಿಗಳು ಕೊರತೆಯನ್ನು ಎದುರಿಸಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಕೈಮಗ್ಗ ಜವಳಿ ತಂತ್ರಜ್ಞಾನ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಕೋರ್ಸ್ ಪ್ರವೇಶ, ಯಾರಿಗೆ ಉಂಟು ಅವಕಾಶ

ಕರ್ನಾಟಕದ 2ನೇ ಹಂತದ ಮತದಾನ ಮುಕ್ತಾಯ, ಘರ್ಷಣೆ, ಬಿಸಿಲ ನಡುವೆ ಭಾರೀ ಹಕ್ಕು ಚಲಾವಣೆ

Bangalore News: ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಬಂಧನ; ಎಸ್‌ಐಟಿ ವಿಚಾರಣೆಗೆ ತಪ್ಪಿಸಿಕೊಳ್ಳುತ್ತಿದ್ದ ಆರೋಪಿ

Heart Attack: ಕರ್ನಾಟಕದಲ್ಲಿ ಹಠಾತ್ ಹೃದಯಾಘಾತಕ್ಕೆ ಯುವಕರ ಬಲಿ, ಆರೋಗ್ಯ ಸಚಿವರಿಗೆ ರಾಜಾರಾಂ ತಲ್ಲೂರ್‌ ಪತ್ರ

ಕೆಎಂಎಫ್‌ನ ಖರೀದಿ ಬೆಲೆಯಿಂದ ಅತೃಪ್ತರಾಗಿರುವ ರೈತರು, ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ಈ ಹಣಕಾಸು ವರ್ಷದಲ್ಲಿ ಕೆಎಂಎಫ್ ಸರಾಸರಿ ಶೇ. 2ರಷ್ಟು ಹಾಲಿನ ಕೊರತೆಯನ್ನು ಎದುರಿಸಿದೆ. ಈ ಮಧ್ಯೆ ವ್ಯಾಪಾರಸ್ಥರು ತುಪ್ಪದ ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆಗೆ ಕಾರಣರಾಗಿರುವುದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅಭಾವಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಪ್ರತಿಪಕ್ಷ ಕಾಂಗ್ರೆಸ್‌, ಆಡಳಿತಾರೂಢ ಬಿಜೆಪಿ ವಿರುದಧ ಮುಗಿಬಿದ್ದಿದೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಹೈನುಗಾರರ ಬದುಕನ್ನು ಬಿಜೆಪಿ ಆಡಳಿತ ಸರ್ವನಾಶ ಮಾಡುತ್ತಿದೆ ಎಂದು ಗುಡುಗಿದೆ.

''ಸರ್ಕಾರ ಕಳೆದ ಐದಾರು ತಿಂಗಳಿಂದ ಉತ್ಪಾದಕರಿಗೆ ಸಹಾಯಧನ ನೀಡಿಲ್ಲ. ಹಾಲು ಉತ್ಪಾದನೆ ಗಣನೀಯ ಕುಸಿತ ಕಂಡಿದೆ. ಮೊಸರಿಗೆ 'ದಹಿ' ಎಂದು ನಾಮಕರಣ ಮಾಡಲು ಇರುವ ಆಸಕ್ತಿ ಹೈನುಗಾರರ ಕಷ್ಟಕ್ಕೆ ಸ್ಪಂದಿಸುವಲ್ಲಿ ಇಲ್ಲ. ರಾಜ್ಯ ಬಿಜೆಪಿ ಸರ್ಕಾರ, ರೈತರಿಗೆ ಸಹಾಯಧನ ನೀಡಿ ಕ್ರೆಡಿಟ್ ಪಡೆಯುವ ಬದಲು 'ದಹಿ'ಗೆ ಕ್ರೆಡಿಟ್ ಪಡೆಯುವುದು ನಾಚಿಕೆಗೇಡು ಅಲ್ಲವೇ?.. '' ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಪ್ರಶ್ನಿಸಿದೆ.

ಇನ್ನು ಮೊಸರಿಗೆ 'ದಹಿ' ಎಂದು ಕರೆಯುವ ನಿರ್ಧಾರವನ್ನು ಎಫ್‌ಎಸ್‌ಎಸ್‌ಎಐ ಹಿಂಪಡೆದಿರುವುದನ್ನು, ಬಿಜೆಪಿ ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿದೆ.

''ಇನ್ಯಾರದ್ದೋ ಕೂಸಿಗೆ ಕುಲಾವಿ ಹೊಲಿಸುವಂತಹ "ಬಂಡ ಬಾಳು" ಬದುಕಲು ಬಿಜೆಪಿಗೆ ಮಾತ್ರ ಸಾಧ್ಯ! "ದಹಿ" ಹೇರಿಕೆಯ ವಿರುದ್ಧ ಯಾವೊಬ್ಬ ಬಿಜೆಪಿಗರೂ ಬಾಯಿ ಬಿಡಲಿಲ್ಲ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ಒಮ್ಮೆಯೂ ಪ್ರಶ್ನಿಸದೆ, ಗುಲಾಮರಂತೆ ಸಮರ್ಥಿಸುವ ಬಿಜೆಪಿ ಈಗ "ದಹಿ"ಯ ಕ್ರೆಡಿಟ್ ಪಡೆಯಲು ಹವಣಿಸುತ್ತಿರುವುದು ಪರಮಹಾಸ್ಯ..'' ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ರಾಜ್ಯ ಬಿಜೆಪಿ ಸರ್ಕಾರಕ್ಕೆ ರೈತರ, ಹೈನುಗಾರರ ಸಂಕಷ್ಟ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲವಾಗಿದೆ. ಜನಸಾಮಾನ್ಯರಿಗೆ ಸಾಧ್ಯವಾದಷ್ಟೂ ಕಷ್ಟ ಕೊಡಬೇಕು ಎಂದು ತೀರ್ಮಾನಿಸಿರುವ ಬಿಜೆಪಿ, ಬೆಲೆ ಏರಿಕೆಯ ಮೂಲಕ ದಬ್ಬಾಳಿಕೆ ನಡೆಸುತ್ತಿದೆ. ನಂದಿನಿಯನ್ನು ಅಮುಲ್‌ ಜೊತೆ ವಿಲೀನ ಮಾಡುವುದಾಗಿ ಹೇಳಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಪ್ರಶ್ನಿಸುವ ಛಾತಿ ಇರದ ರಾಜ್ಯ ಬಿಜೆಪಿ ನಾಯಕರು, ಈಗ ಮೊಸರಿಗೆ "ದಹಿ" ಹೆಸರಿಡುವುದನ್ನು ನಿಲ್ಲಿಸಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್‌ ಹರಿಹಾಯ್ದಿದೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಎದುರಾಗಿರುವ ಹಾಲು ಮತ್ತು ಹಾಲಿನ ಉತ್ಪನ್ನಗಳ ಕೊರತೆ, ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿರುವುದು ಗಮನ ಸೆಳೆದಿದೆ.

ಇಂದಿನ ಪ್ರಮುಖ ಸುದ್ದಿ:

New York Police: ಡೊನಾಲ್ಡ್‌ ಟ್ರಂಪ್‌ ಬಂಧನ ಸಾಧ್ಯತೆ: ಹೈ ಅಲರ್ಟ್‌ ಮೋಡ್‌ಗೆ ಜಾರಿದ ನ್ಯೂಯಾರ್ಕ್‌ ಪೊಲೀಸ್‌!

ಟ್ರಂಪ್‌ ಅವರು ಮುಂಬರುವ ಲೋವರ್ ಮ್ಯಾನ್‌ಹ್ಯಾಟನ್‌ನ ಕ್ರಿಮಿನಲ್ ಕೋರ್ಟ್‌ ಕಟ್ಟಡದಲ್ಲಿ, ನ್ಯಾಯಾಧೀಶರ ಮುಂದೆ ಶರಣಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಒಂದು ವೇಳೆ ಆದೇಶ ನೀಡಿದರೆ, ಟ್ರಂಪ್‌ ಅವರನ್ನು ಬಂಧಿಸಲು ನ್ಯೂಯಾರ್ಕ್‌ ಪೊಲೀಸ್‌ ಇಲಾಖೆ ಸಜ್ಜಾಗಿದೆ. ಟ್ರಂಪ್‌ ವಿಚಾರಣೆ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ ಪೊಲೀಸ್‌ ಹೈ ಅಲರ್ಟ್‌ಗೆ ಜಾರಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಉಲ್ಲಿ ಕ್ಲಿಕ್ಕಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು