logo
ಕನ್ನಡ ಸುದ್ದಿ  /  Karnataka  /  Construction Of Sheep Sheds And Houses For Shepherds Says Cm Basavaraj Bommai

CM Bommai on Jana Sankalpa Yatra: ಕುರಿಗಾಹಿಗಳಿಗೆ ಕುರಿದೊಡ್ಡಿ ನಿರ್ಮಾಣದ ಜತೆಗೆ 20 ಕುರಿ, ಒಂದು ಮೇಕೆ ನೀಡಲು ಸರ್ಕಾರದಿಂದ ತೀರ್ಮಾನ

HT Kannada Desk HT Kannada

Nov 10, 2022 06:28 AM IST

ಕುರಿಗಾಹಿಗಳಿಗೆ ಕುರಿದೊಡ್ಡಿ ನಿರ್ಮಾಣದ ಜತೆಗೆ 20 ಕುರಿ, ಒಂದು ಮೇಕೆ ನೀಡಲು ಸರ್ಕಾರದಿಂದ ತೀರ್ಮಾನ

    • ಕುರಿಗಾಹಿಗಳಿಗೆ ಕುರಿದೊಡ್ಡಿ ಜೊತೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಪ್ರತಿ ಮನೆಗೂ ಹಕ್ಕುಪತ್ರ ನೀಡಲು ತೀರ್ಮಾನಿಸಲಾಗಿದೆ.
ಕುರಿಗಾಹಿಗಳಿಗೆ ಕುರಿದೊಡ್ಡಿ ನಿರ್ಮಾಣದ ಜತೆಗೆ 20 ಕುರಿ, ಒಂದು ಮೇಕೆ ನೀಡಲು ಸರ್ಕಾರದಿಂದ ತೀರ್ಮಾನ
ಕುರಿಗಾಹಿಗಳಿಗೆ ಕುರಿದೊಡ್ಡಿ ನಿರ್ಮಾಣದ ಜತೆಗೆ 20 ಕುರಿ, ಒಂದು ಮೇಕೆ ನೀಡಲು ಸರ್ಕಾರದಿಂದ ತೀರ್ಮಾನ

ಬೆಳಗಾವಿ: ಕುರಿಗಾಹಿಗಳಿಗೆ ಕುರಿದೊಡ್ಡಿ ಹಾಗೂ ಮನೆಗಳ ನಿರ್ಮಾಣ ಮಾಡಿಕೊಡಲಾಗುವುದು. ಪ್ರತಿ ಕುರಿಗಾರರ ಸಂಘಗಳಿಗೆ 20 ಕುರಿ ಒಂದು ಮೇಕೆ ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ 354 ಕೋಟಿ ರೂ. ಗಳನ್ನು ಮೀಸಲಿರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

Holiday Declared: ಶ್ರೀನಿವಾಸಪ್ರಸಾದ್‌ ನಿಧನ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ನಾಳೆ ಸರ್ಕಾರಿ ಕಚೇರಿಗಳಿಗೆ ರಜೆ

Bangalore Weather: ಬೆಂಗಳೂರಿನಲ್ಲಿ ದಾಖಲೆ ಬಿಸಿಲು, ಇತಿಹಾಸದಲ್ಲೇ ಅತಿ ಹೆಚ್ಚು 3ನೇ ಬಿಸಿ ದಿನ !

ಕರ್ನಾಟಕ ಸಿಇಟಿ ಗೊಂದಲ; ಮರುಪರೀಕ್ಷೆ ಇಲ್ಲ, ಪಠ್ಯೇತರ ಪ್ರಶ್ನೆ ಬಿಟ್ಟು ಉಳಿದವುಗಳ ಮೌಲ್ಯಮಾಪನಕ್ಕೆ ತೀರ್ಮಾನ

SSLC Results 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸದ್ಯವೇ ಪ್ರಕಟ, ದಿನಾಂಕ ನಿಗದಿಯಾಗಿಲ್ಲ ಎಂದ ಮಂಡಳಿ

ಅವರು ಇಂದು ಬೆಳಗಾವಿ ಜಿಲ್ಲೆಯ ರಾಯಬಾಗನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸರ್ಕಾರ ಆಯಾ ಜನಾಂಗದ ಕುಲಕಸುಬಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ಕುರಿಗಾಹಿಗಳಿಗೆ ಕುರಿದೊಡ್ಡಿ ಜೊತೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಪ್ರತಿ ಮನೆಗೂ ಹಕ್ಕುಪತ್ರ ನೀಡಲು ತೀರ್ಮಾನಿಸಲಾಗಿದೆ. 50 ಸಾವಿರ ತಾಂಡಗಳನ್ನು ಕಂದಾಯಗ್ರಾಮಗಳನ್ನಾಗಿ ಮಾಡುವ ಕ್ರಾಂತಿಕಾರಿ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವ ದಿಟ್ಡ ನಿರ್ಧಾರ ವನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದರು.

ದುಡಿಯುವ ವರ್ಗಕ್ಕೆ ಶಕ್ತಿಯನ್ನು ತುಂಬಲಾಗುತ್ತಿದೆ

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಈ ಭಾಗದಲ್ಲಿ ಪ್ರಹಾವ ಬಂದಾಗ 5 ಲಕ್ಷ ರೂ..ಪರಿಹಾರ ನೀಡಿದರು‌ .‌ ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಬೆಳೆಪರಿಹಾರವನ್ನು ದುಪ್ಪಟ್ಟು ಮಾಡಲಾಯಿತು. ದುಪ್ಪಟ್ಟು ಪರಿಹಾರ ಯಾವ ರಾಜ್ಯದಲ್ಲಿಯೂ ಕೊಡವುದಿಲ್ಲ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದೆ. 10 ಲಕ್ಷ ರೈತ ಕುಟುಂಬಗಳಿಗೆ ಹಾಗೂ 6 ಲಕ್ಷ ಕೂಲಿ ಕಾರ್ಮಿಕರ ಮಕ್ಕಳಿಗೆ, ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ಜಾರಿಗೆ ತರಲಾಗಿದೆ. ದುಡಿಯುವ ವರ್ಗಕ್ಕೆ ಶಕ್ತಿಯನ್ನು ತುಂಬಲಾಗುತ್ತಿದೆ ಎಂದರು.

ಮಹಿಳೆಯರಿಗೆ ಮತ್ತು ಯುವಕರಿಗೆ ಸ್ವಯಂ ಉದ್ಯೋಗ

ಸ್ತ್ರೀಸಾಮರ್ಥ್ಯ ಯೋಜನೆಯಡಿ ಪ್ರತಿ ಹಳ್ಳಿಯಲ್ಲಿ ಎರಡು ಮಹಿಳಾ ಸಂಘ‌ಗಳಿಗೆ ಆರ್ಥಿಕ ಸಹಾಯ ನೀಡಿ, ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ. ಯುವಕರಿಗಾಗಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಯುವಕ ಸಂಘಗಳ 5 ಲಕ್ಷ ಯುವಕರಿಗೆ ಸ್ವಯಂಉದ್ಯೋಗ ಕಲ್ಪಿಸಲಾಗುತ್ತಿದೆ. ಈ ಭಾಗದ ಅಭಿವೃದ್ದಿಗೆ ಕಂಕಣ ಬದ್ದರಾಗಿದ್ದೇವೆ . ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಒಟ್ಟು 800 ಕೋಟಿ ರೂ.ಗಳನ್ನು ನೀಡಲಾಗಿದೆ. ನಮ್ಮ ಸರ್ಕಾರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವನ್ನು ಸಮತೋಲಿತವಾಗಿ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ, ಶಶಿಕಲಾ ಜೊಲ್ಲೆ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ದುರ್ಯೋಧನ ಐಹೊಳೆ, ಪಿ. ರಾಜೀವ, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ರವಿಕುಮಾರ್, ಮಾಜಿ ಸಂಸದರಾದ ರಮೇಶ್ ಕತ್ತಿ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಮತ್ತಿತರರು ಹಾಜರಿದ್ದರು.

    ಹಂಚಿಕೊಳ್ಳಲು ಲೇಖನಗಳು